ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಪಿಯಾಜಿಯೊ ಕಂಪನಿಯು ತನ್ನ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಪಿಯಾಜಿಯೊದಿಂದ ಬ್ಯಾಟರಿ ಚಾಲಿತ ಈ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಆರಂಭದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿತ್ತು.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ವಿಶೇಷವೆಂದರೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಟಿಕ್ ಟಾಕ್‌ನಲ್ಲಿ ಅನಾವರಣಗೊಳಿಸಲಾಯಿತು. ಒನ್ ಎಲೆಕ್ಟ್ರಿಕ್ ಸ್ಕೂಟರ್ ಒಂದು ಕಾಂಪ್ಯಾಕ್ಟ್ ಸ್ಕೂಟರ್ ಆಗಿದ್ದರೂ ಸಹ ಒಂದು ಆರಾಮದಾಯಕ ಸವಾರಿಯನ್ನು ನೀಡಲು ಸಮತಟ್ಟಾದ ಮತ್ತು ವಿಶಾಲವಾದ ಫುಟ್‌ರೆಸ್ಟ್ ಅನ್ನು ಪಡೆಯುತ್ತದೆ ಎಂದು ವಾಹನ ತಯಾರಕರು ಹೇಳುತ್ತಾರೆ. ಅಲ್ಲದೆ, ಇದು ಪ್ರಯಾಣಿಕರಿಗೆ ತೆಗೆಯಬಹುದಾದ ಫುಟ್‌ಬೋರ್ಡ್‌ಗಳನ್ನು ಒಳಗೊಂಡಿದೆ. ಒಂದು ವಿಭಾಗದಲ್ಲಿ ಜೆಟ್ ಹೆಲ್ಮೆಟ್ ಅನ್ನು ಸಂಗ್ರಹಿಸಲು ಸಾಕಷ್ಟು ದೊಡ್ಡ ಕಂಪಾರ್ಟ್ಮೆಂಟ್ ಹೊಂದಿರುವ ಏಕೈಕ ಸ್ಕೂಟರ್ ಎಂದು ಹೇಳಲಾಗಿದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಒಳಭಾಗದಲ್ಲಿ, ಇದು ತೆಗೆಯಬಹುದಾದ ಬ್ಯಾಟರಿಗಳು ಮತ್ತು ಮೀಸಲಾದ ಚಾರ್ಜಿಂಗ್ ಸಿಸ್ಟಮ್‌ನೊಂದಿಗೆ ಸಂಪೂರ್ಣ ವಿದ್ಯುತ್ ಪವರ್‌ಟ್ರೇನ್ ಅನ್ನು ಪಡೆಯುತ್ತದೆ. ಇದನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಪಿಯಾಜಿಯೊ ಒನ್ ಮತ್ತು ಒನ್ ಆಕ್ಟಿವ್ ಎಂಬ ರೂಪಾಂತರಗಲಾಗಿದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಒನ್ ರೂಪಾಂತರವು 48 ವೋಲ್ಟ್ 1.8 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ 1.2 ಕಿ.ವ್ಯಾಟ್ ಮೋಟರ್ ಅನ್ನು ಪಡೆಯುತ್ತದೆ.ಇದು ಒಟ್ಟು 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಬೇಸ್ ಸ್ಪೆಕ್ ಒನ್ ಸ್ಕೂಟರ್ 45 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ರೂಪಾಂತರವನ್ನು ಪೂರ್ತಿಯಾಗಿ ಚಾರ್ಚ್ ಮಾಡಿದರೆ 55 ಕಿ.ಮೀ ಚಲಿಸುತ್ತದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಹೈಯರ್-ಸ್ಪೆಕ್ ಪಿಯಾಜಿಯೊ ಒನ್ ಆಕ್ಟಿವ್ ಒಂದು ಸ್ಕೂಟರ್-ಸಮಾನ ಮಾದರಿಯಾಗಿದ್ದು, ಟಾಪ್-ಸ್ಪೆಕ್ ಒನ್ ಆಕ್ಟಿವ್ 2.6 ಬಿಹೆಚ್‍ಪಿ ಮೋಟಾರ್ ಅನ್ನು ಹೊಂದಿದ್ದು, ಇದು 41 ಮೈಲ್ ಗಿಂತ ಹೆಚ್ಚು ರೇಂಜ್ ಅನ್ನು ನೀಡುತ್ತದೆ. ಸರಿಸುಮಾರು 65 ಕಿ.ಮೀಗಿಂತಲೂ ಹೆಚ್ಚಿನ ರೇಂಜ್ ಅನ್ನು ಒದಗಿಸುತ್ತದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್‌ನ ಎರಡೂ ಟ್ರಿಮ್‌ಗಳು ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಮ್ (ಕೆಇಆರ್‌ಎಸ್) ಅನ್ನು ಪಡೆಯುತ್ತವೆ, ಇದು ಪಿಯಾಜಿಯೊನ ಪುನರುತ್ಪಾದಕ ಬ್ರೇಕಿಂಗ್ ಆವೃತ್ತಿಯಾಗಿದೆ. ಎಲ್ಲಾ ರೂಪಾಂತರಗಳು ಪೂರ್ತಿಯಾಗಿ ಚಾರ್ಜ್ ಆಗಲು 6 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಹೊಸ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಹಲವಾರು ಪೀಚರ್ಸ್ ಮತ್ತು ತಂತ್ರಜ್ಞಾನದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ, ಇವುಗಳಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸುತ್ತಲೂ ಎಲ್ಇಡಿ ಲ್ಯಾಂಪ್ ಗಳು, ಕೀ ಲೆಸ್ ಎಂಟ್ರಿ ಮತ್ತು ವಿಶಾಲವಾದ ಅಂಡರ್-ಸೀಟ್ ಸ್ಟೋರೆಂಜ್ ಸೇಸ್ ಅನ್ನು ಒಳಗೊಂಡಿರುತ್ತದೆ,

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಈ ಪಿಯಾಜಿಯೊ ಒನ್ ಸ್ಕೂಟರ್ 770 ಎಂಎಂ ಸೀಟ್ ಎತ್ತರವನ್ನು ಹೊಂದಿದ್ದು, ಆರಾಮವಾಗಿರುವ ರೈಡಿಂಗ್ ಅನುಭ್ವವನ್ನು ನೀಡುತ್ತದೆ, ಈ ಒನ್ ಸ್ಕೂಟರ್ ನಲ್ಲಿ ಹೈಡ್ರಾಲಿಕ್ ಸಸ್ಪೆನ್ಷನ್ ಅನ್ನು ನೀಡಲಾಗಿದೆ, ಇನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಬ್ರೇಕ್ ನೀಡುತ್ತದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಈ ಪಿಯಾಜಿಯೊ ಒನ್ ಸ್ಕೂಟರ್ ನಲ್ಲಿ 5.5-ಇಂಚಿನ ಕಲರ್ ಡಿಸ್‌ಪ್ಲೇಯೊಂದಿಗೆ ಸೆನ್ಸರ್‌ನೊಂದಿಗೆ ಹಿನ್ನಲೆಯಲ್ಲಿ ಬೆಳಕಿನ ಸ್ಥಿತಿಗೆ ಅನುಗುಣವಾಗಿ ಬಣ್ಣ ಮತ್ತು ಹಿನ್ನೆಲೆಯನ್ನು ಅಳವಡಿಸಿಕೊಳ್ಳಲು ಬರುತ್ತದೆ. ಇನ್ನು ಇದರಲ್ಲಿ ಇಕೋ ಮತ್ತು ಸ್ಪೋರ್ಟ್.ಎಂಬ ರೈಡಿಮ್ಘ್ ಮೋಡ್ ಗಳನ್ನು ನೋಡಬಹುದು. ಡಿಸ್‌ಪ್ಲೇಯಲ್ಲಿ ವೇಗ, ಬ್ಯಾಟರಿ ಮಟ್ಟ ಮತ್ತು ರೇಂಜ್ ಸೇರಿದಂತೆ ಹೆಚ್ಚಿನ ಸಾಮಾನ್ಯ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಪಿಯಾಜಿಯೊ ಕಂಪನಿಯು ತನ್ನ ಜನಪ್ರಿಯ ಬೆವಿರ್ಲಿ ಸ್ಕೂಟರ್ ಅನ್ನು ನವೀಕರಿಸಲಾಗಿದೆ. ಈ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಅನ್ನು ಹೊಸ ಸ್ಟೈಲಿಂಗ್, ಹೆಚ್ಚು ಟೆಕ್ ಮತ್ತು ಪರಿಷ್ಕೃತ ಚಾಸಿಸ್ ಭಾಗಗಳೊಂದಿಗೆ ನವೀಕರಿಸಲಾಗಿದೆ.2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ 300ಸಿಸಿ ಮತ್ತು 400ಸಿಸಿ ನಾಲ್ಕು-ವಾಲ್ವ್ ಸಿಂಗಲ್-ಸಿಲಿಂಡರ್ ಎಂಜಿನ್ ಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಸ್ಟಾಂಡರ್ಡ್ ಮತ್ತು ಸ್ಪೋರ್ಟಿಯರ್ ಬೆವಿರ್ಲಿ ಎಸ್ ಎಮ್ಬ ಎರಡೂ ಮಾದರಿಗಳ ಲಭ್ಯವಿರಲಿದೆ. ಈ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ನಲ್ಲಿ 300 ಸಿಸಿ, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 25.5 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ, ಇದು ಹಿಂದಿನ ಮಾದರಿಗೆ ಹೋಲಿಸಿದರೆ ಶೇ.23 ರಷ್ಟು ಬಿಹೆಚ್‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾದ ಆಕರ್ಷಕ ವಿನ್ಯಾಸದ Piaggio One ಎಲೆಕ್ಟ್ರಿಕ್ ಸ್ಕೂಟರ್

ಈ ತಿಂಗಳಲ್ಲಿ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಉಳಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಂತರದ ಹಂತದಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಭಾರತದಲ್ಲಿ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Piaggio ready to launch the new one electric scooter in international market details
Story first published: Saturday, September 11, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X