ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಹೆಚ್ಚುತ್ತಿರುವ ಕೋವಿಡ್ ವೈರಸ್‌ ಪರಿಣಾಮ ಆಟೋ ಉದ್ಯಮ ಸಾಕಷ್ಟು ನಷ್ಟ ಎದುರಿಸುತ್ತಿದ್ದು, ವಾಹನ ಮಾರಾಟದಲ್ಲಿ ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೀಗ ಕೋವಿಡ್ ವೈರಸ್ ತಗ್ಗಿರುವ ಪರಿಣಾಮ ಆರ್ಥಿಕ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗುತ್ತಿದ್ದು, ವಾಹನ ಕಂಪನಿಗಳು ತಮ್ಮ ವ್ಯಾಪಾರ ವಹಿವಾಟವನ್ನು ಸುಧಾರಿಸುವ ಯೋಜನೆಯಲ್ಲಿವೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಕೋವಿಡ್ ಎರಡನೇ ಅಲೆಯಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಆಟೋ ಉದ್ಯಮವು ಸಹ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಕಳೆದ ವರ್ಷದ ಕೋವಿಡ್ ಮೊದಲ ಅಲೆ ಸಂದರ್ಭದಲ್ಲೂ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಕಳೆದ ವರ್ಷದ ಅಂತ್ಯದಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ತುಸು ಸುಧಾರಣೆ ಕಂಡಿದ್ದಾದರೂ ಇದೀಗ ವೈರಸ್ ಭೀತಿಯು ಮತ್ತೆ ನಷ್ಟದ ಸುಳಿಯಲ್ಲಿ ಸಿಲುಕಿಸಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಕೋವಿಡ್ ಸೋಂಕು ತಗ್ಗುತ್ತಿರುವ ಹಿನ್ನಲೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೀಗ ಹಂತ-ಹಂತವಾಗಿ ಶೋರೂಂಗಳಲ್ಲೂ ವಾಹನ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿವೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಲಾಕ್‌ಡೌನ್ ಸಂದರ್ಭದಲ್ಲಿ ನಿಗದಿತ ಅವಧಿಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ವಾಹನಗಳನ್ನು ವಿತರಣೆ ಮಾಡಿರುವ ವಾಹನ ಉತ್ಪಾದನಾ ಕಂಪನಿಗಳು ಇದೀಗ ಸುರಕ್ಷಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶೋರೂಂಗಳಲ್ಲೂ ಸಹ ವಾಹನ ಮಾರಟ ಪ್ರಕ್ರಿಯೆಗೆ ಸಿದ್ದವಾಗಿ ಪಿಯಾಜಿಯೊ ಕಂಪನಿಯು ತನ್ನ ಪ್ರಮುಖ ಬ್ರಾಂಡ್‌ಗಳಾದ ವೆಸ್ಪಾ ಮತ್ತು ಎಪ್ರಿಲಿಯಾ ದ್ವಿಚಕ್ರ ವಾಹನಗಳ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಇನ್ನು ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಇದರ ನಡುವೆ ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದು ಆಟೋ ಕಂಪನಿಗಳಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ವರವಾಗುತ್ತಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಹೌದು, ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಾಕಷ್ಟು ಪ್ರಯೋಜಕಾರಿಯಾಗಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಎರಡು ತಿಂಗಳು ನಂತರ ಶೋರೂಂಗಳ ಬಾಗಿಲು ತೆರೆದ ಪಿಯಾಜಿಯೊ ಕಂಪನಿ

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ವಿವಿಧ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಸಹ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದೆ.

Most Read Articles

Kannada
English summary
Piaggio Announced Vespa and Aprilia Showrooms Reopen Across India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X