ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಖ್ಯಾತ ಎಲೆಕ್ಟ್ರಿಕ್ ಬೈಕ್ ತಯಾರಕ ಕಂಪನಿಯಾದ ರಿವೋಲ್ಟ್ ಮೋಟಾರ್ಸ್ (Revolt Motors) ತನ್ನ ಹೊಸ ಮಳಿಗೆಯನ್ನು ತಮಿಳುನಾಡಿನ ಮಧುರೈನಲ್ಲಿ ತೆರೆಯುವುದರೊಂದಿಗೆ ದಕ್ಷಿಣ ಭಾರತದಲ್ಲಿ ತನ್ನ ರಿಟೇಲ್ ಮಾರಾಟವನ್ನು ವಿಸ್ತರಿಸಿದೆ. ಈ ಹೊಸ ಮಳಿಗೆಯು ಮಧುರೈ ನಗರದಲ್ಲಿ ಕಂಪನಿಯ ಮೊದಲ ರಿಟೇಲ್ ಶೋರೂಂ ಆಗಿದ್ದು, ದೇಶಾದ್ಯಂತ ಕಂಪನಿಯ 17 ನೇ ಶೋರೂಂ ಆಗಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಕೊಯಮತ್ತೂರು ಹಾಗೂ ವಿಜಯವಾಡದಲ್ಲಿ ಕ್ರಮವಾಗಿ ಡಿಸೆಂಬರ್ 8 ಹಾಗೂ ಡಿಸೆಂಬರ್ 13 ರಂದು ಇನ್ನೂ ಎರಡು ರಿಟೇಲ್ ಮಳಿಗೆಗಳನ್ನು ತೆರೆಯುತ್ತಿದೆ. ತಮಿಳುನಾಡು ಸರ್ಕಾರವು ವಾಹನ ಮಾರಾಟದ ಮೇಲೆ ಪಾವತಿಸುವ ರಾಜ್ಯ ಜಿ‌ಎಸ್‌ಟಿಯಲ್ಲಿ ಇವಿ ಉತ್ಪಾದನಾ ಉತ್ಪಾದನಾ ಘಟಕಗಳಿಗೆ ವಿದ್ಯುತ್ ತೆರಿಗೆಯಿಂದ ವಿನಾಯಿತಿ ಹಾಗೂ ಭೂಮಿ ವೆಚ್ಚದಲ್ಲಿ 15% ನಿಂದ 20% ರಷ್ಟು ಸಹಾಯಧನವನ್ನು ನೀಡುತ್ತದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

2022 ರ ವೇಳೆಗೆ ಇವಿಗಳಿಗೆ ಮೋಟಾರು ವಾಹನ ತೆರಿಗೆಗಳಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. ಜೊತೆಗೆ ಪ್ರಮುಖ ವಾಹನ ಉತ್ಪಾದನಾ ಕೇಂದ್ರಗಳು ಹಾಗೂ ಸ್ಥಳಗಳಲ್ಲಿ ಇವಿ ಪಾರ್ಕ್‌ಗಳನ್ನು ರಚಿಸಲಾಗುತ್ತದೆ. ವಿಶೇಷವೆಂದರೆ ತಮಿಳುನಾಡು ಕೂಡ ದೇಶದ ಅತ್ಯುತ್ತಮ ಬೈಕ್ ಮಾರ್ಗಗಳನ್ನು ನೀಡುತ್ತದೆ. ಈ ಮೂಲಕ ಗ್ರಾಹಕರು ಇನ್ನು ಮುಂದೆ ತಮ್ಮ ಸ್ವಂತ ರಿವೋಲ್ಟ್ ಬೈಕಿನಲ್ಲಿ ಪರ್ವತ ಶ್ರೇಣಿ ಹಾಗೂ ಕಡಲ ತೀರದ ವೀಕ್ಷಣೆಗಳನ್ನು ಆನಂದಿಸಬಹುದು.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಹಾಗೂ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ ಖರೀದಿಸುವ ಎಲೆಕ್ಟ್ರಿಕ್ ವಾಹನಗಳಿಗೆ 100% ರಸ್ತೆ ತೆರಿಗೆ ವಿನಾಯಿತಿ ಸೇರಿದಂತೆ ರಾಜ್ಯ ಸರ್ಕಾರವು ಗ್ರಾಹಕರಿಗೆ ವಿವಿಧ ಸಬ್ಸಿಡಿಗಳನ್ನು ನೀಡುತ್ತದೆ. ಆಂಧ್ರಪ್ರದೇಶ ಇವಿ ನೀತಿಯು ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರತಿಯೊಂದು ಅಂಶವನ್ನು ಬೆಂಬಲಿಸುತ್ತದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಇಷ್ಟೇ ಅಲ್ಲದೇ ಆಂಧ್ರಪ್ರದೇಶದ ಇವಿ ನೀತಿಯು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಗಮನ ಹರಿಸುತ್ತದೆ. ರಿವೋಲ್ಟ್ ಮೋಟಾರ್ಸ್ ಕಂಪನಿಯು ತನ್ನ ಮಾರಾಟ ವಿಸ್ತರಣೆಯ ಬಗ್ಗೆ ಉತ್ಸುಕವಾಗಿದ್ದು, ಈ ರಾಜ್ಯಗಳಲ್ಲಿ ಇವಿ ಖರೀದಿದಾರರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಎದುರು ನೋಡುತ್ತಿದೆ. ಈ ಅತ್ಯಾಧುನಿಕ ರಿಟೇಲ್ ಮಳಿಗೆಯನ್ನು ಆರಂಭಿಸುವುದರಿಂದ ಗ್ರಾಹಕರು ಈಗ ತಮ್ಮ ಸವಾರಿಯ ಕನಸುಗಳನ್ನು ಪೂರೈಸಿ ಕೊಳ್ಳಲು ಸಾಧ್ಯವಾಗಲಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಜೊತೆಗೆ ಅವರ ಸ್ವಾತಂತ್ರ್ಯದ ಪ್ರಜ್ಞೆಯನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ. ಗ್ರಾಹಕರಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ರಿವೋಲ್ಟ್ ಮೋಟಾರ್ಸ್ ಕಂಪನಿ ಹೇಳಿದೆ. ಗ್ರಾಹಕರ ಬೇಡಿಕೆಯನ್ನು ಪೂರೈಸಲು, ಕಂಪನಿಯು ತನ್ನ ಮಾರಾಟ ಜಾಲವನ್ನು ವಿಸ್ತರಿಸಲು ಹಾಗೂ 2022 ರ ಆರಂಭದಲ್ಲಿ ಚಂಡೀಗಢ, ಲಕ್ನೋ ಹಾಗೂ ಎನ್‌ಸಿ‌ಆರ್ ಸೇರಿದಂತೆ ಭಾರತದಲ್ಲಿ 50 ಹೊಸ ನಗರಗಳನ್ನು ಪ್ರವೇಶಿಸುವ ಮೂಲಕ ತನ್ನ ರಿಟೇಲ್ ಮಾರಾಟವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ರಿವೋಲ್ಟ್ ಮೋಟಾರ್ಸ್ ತನ್ನ ಮೊದಲ ರಿಟೇಲ್ ಮಳಿಗೆಯನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ತೆರೆಯಿತು. ಎಲ್ಲಾ ಹೊಸ ಮಳಿಗೆಗಳನ್ನು ಪ್ರಮುಖ ನಗರಗಳಲ್ಲಿ ತೆರೆಯಲಾಗಿದೆ. ರಿವೋಲ್ಟ್ಸ್ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಕಂಪನಿಯು ಸಾಕಷ್ಟು ಉತ್ಸುಕವಾಗಿದೆ. ಹೊಸ ಮಳಿಗೆಗಳು ಭಾರತ ಕೇಂದ್ರಿತ, ಹೊಂದಿಕೊಳ್ಳುವ ಹಾಗೂ ವೆಚ್ಚ ಪರಿಣಾಮಕಾರಿ ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸುತ್ತವೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಇವು ಭಾರತವನ್ನು ಸ್ವಾವಲಂಬಿಯಾಗಿಸುವಾಗ ಎಲೆಕ್ಟ್ರಿಕ್ ಮೊಬಿಲಿಟಿ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಹೊಸ ಕೇಂದ್ರಗಳು ಕಂಪನಿಯ ಮಾರಾಟದ ಕೇಂದ್ರವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ, ಗ್ರಾಹಕರು ಇವಿಗಳ ಪ್ರಮುಖ ವಿವರಗಳನ್ನು ಅನ್ವೇಷಿಸಬಹುದು ಹಾಗೂ ಕಲಿಯಬಹುದು. ವಾಹನದ ಅನುಭವವನ್ನು ಪಡೆಯಲು ಹಾಗೂ ವಿನ್ಯಾಸ, ಚಾರ್ಜಿಂಗ್ ಪ್ರಕ್ರಿಯೆ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೇಗೆ ಹೊಂದಿಸಲಾಗಿದೆ ಎಂಬುದರ ಕುರಿತು ಕಲಿಯುವ ಅವಕಾಶವನ್ನು ಪಡೆಯಬಹುದು.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಟೆಸ್ಟ್ ರೈಡ್ ನಂತರ, ಗ್ರಾಹಕರು ತಮ್ಮ ರೈಡಿಂಗ್ ಪ್ಯಾಟರ್ನ್ ಬಗ್ಗೆಯೂ ತಿಳಿದುಕೊಳ್ಳಬಹುದು. ರಿವೋಲ್ಟ್ ಮೋಟಾರ್ಸ್ ತನ್ನ ಪ್ರಮುಖ ಆರ್‌ವಿ 400 ಬೈಕಿಗಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಈ ಬೈಕ್ ಪ್ರತಿ ಬಾರಿ ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿದೆ. ರಿವೋಲ್ಟ್ ಕಂಪನಿಯು ತನ್ನ ರಿವೋಲ್ಟ್ ಆರ್‌ವಿ 400 ಎಲೆಕ್ಟ್ರಿಕ್ ಬೈಕಿಗಾಗಿ ಎರಡನೇ ಸುತ್ತಿನ ಬುಕ್ಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಯುನಿಟ್'ಗಳು ಮಾರಾಟವಾಗಿವೆ ಎಂದು ಕಂಪನಿ ಪ್ರಕಟಿಸಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಈ ಸುತ್ತಿನ ಬುಕ್ಕಿಂಗ್‌ನಲ್ಲಿ ಕಂಪನಿಯು ಎಲ್ಲಾ ಯುನಿಟ್'ಗಳನ್ನು 2 ಗಂಟೆಗಳಲ್ಲಿ ಮಾರಾಟ ಮಾಡಿದೆ. ಆದರೆ ಈ ಬೈಕಿನ ಎಷ್ಟು ಯುನಿಟ್'ಗಳನ್ನು ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಕಂಪನಿಯು ಮಾಹಿತಿ ನೀಡಿಲ್ಲ. ರಿವೋಲ್ಟ್ ಆರ್‌ವಿ 400 ಬೈಕ್ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ರಿವೋಲ್ಟ್ ಕಂಪನಿಯು ಆನ್‌ಲೈನ್‌ ಮೂಲಕ ಈ ಬೈಕ್‌ ಅನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಸದ್ಯಕ್ಕೆ ಆರ್‌ವಿ 400 ಬೈಕ್ ಅನ್ನು ದೆಹಲಿ, ಮುಂಬೈ, ಪುಣೆ, ಚೆನ್ನೈ, ಅಹಮದಾಬಾದ್ ಹಾಗೂ ಹೈದರಾಬಾದ್ ಸೇರಿದಂತೆ ಒಟ್ಟು ಆರು ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ರಿವೋಲ್ಟ್ ಬೈಕ್ ಬುಕ್ಕಿಂಗ್ ಮಾಡುವ ಗ್ರಾಹಕರು ಈ ಬೈಕಿನ ವಿತರಣೆ ಪಡೆಯಲು ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಬೈಕಿನ ಕಾಯುವ ಸಮಯವನ್ನು ಕಡಿಮೆ ಮಾಡಲು ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು ಒತ್ತು ನೀಡುತ್ತಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಭಾರತೀಯ ಮೂಲದ ರಿವೋಲ್ಟ್ ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕುಗಳನ್ನು 2019ರಲ್ಲಿ ಬಿಡುಗಡೆಗೊಳಿಸಿತು. ಕಂಪನಿಯು ಆರ್‌ವಿ 400 ಹಾಗೂ ಆರ್‌ವಿ 300 ಎಲೆಕ್ಟ್ರಿಕ್ ಬೈಕುಗಳನ್ನು ಮಾರಾಟ ಮಾಡುತ್ತದೆ. ರಿವೋಲ್ಟ್ ಆರ್‌ವಿ 400 ಕಂಪನಿಯ ಪ್ರಮುಖ ಬೈಕ್ ಆಗಿದೆ. ಭಾರೀ ಬೇಡಿಕೆ ಹೊಂದಿರುವ ಕಾರಣಕ್ಕೆ ಈ ಬೈಕ್ ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಪೂರ್ತಿಯಾಗಿ ಮಾರಾಟವಾಗಿದೆ.

ಮಧುರೈನಲ್ಲಿ ಹೊಸ ಮಾರಾಟ ಮಳಿಗೆ ತೆರೆದ Revolt Motors

ಈ ಬೈಕಿನ ಮೂಲಕ ರೂ.50 ಕೋಟಿ ವಹಿವಾಟು ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಮಾತಿಗೆ ರಿವೋಲ್ಟ್ ಆರ್‌ವಿ 400 ಬೈಕಿನ ಬುಕ್ಕಿಂಗ್ ಪುಷ್ಟಿ ನೀಡಿದೆ.

Most Read Articles

Kannada
English summary
Revolt motors opens new show room in madurai details
Story first published: Tuesday, December 7, 2021, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X