ಹೊಸ ಸರಣಿಯ ಬ್ರಾಟ್ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್
ಸ್ಟೀಲ್ ಬರ್ಡ್ ವಿಶ್ವದ ಪ್ರಮುಖ ಹೆಲ್ಮೆಟ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ಸ್ಟೀಲ್ ಬರ್ಡ್ ಕಂಪನಿಯು ತನ್ನ ಕೆಲವು ಹೆಲ್ಮೆಟ್‌ಗಳನ್ನು ಭಾರತದಲ್ಲಿಯೂ ಮಾರಾಟ ಮಾಡುತ್ತದೆ.

ಈ ಸೆಗ್'ಮೆಂಟಿನಲ್ಲಿ ಬ್ರಾಟ್ ಲೈನ್ ಹೆಲ್ಮೆಟ್‌ಗಳನ್ನು ವಿನ್ಯಾಸಗೊಳಿಸಲು ಹಾಗೂ ಮಾರಾಟ ಮಾಡಲು ಸ್ಟೀಲ್ ಬರ್ಡ್ ಕಂಪನಿಯು ಅಮೆರಿಕಾದ ಫ್ಲೇವರ್ ಕಂಪನಿಯೊಂದಿಗೆ ಕೈಜೋಡಿಸಿದೆ. ಫ್ಲೇವರ್ ಕಂಪನಿಯು ಹೆಚ್ಚು ಪರಿಣಾಮಕಾರಿಯಾದ, ಸುರಕ್ಷಿತವಾದ ಹೆಲ್ಮೆಟ್‌ಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.

ಈ ಸಹಭಾಗಿತ್ವದಿಂದಾಗಿ ಅಮೆರಿಕಾದ ಫ್ಲೇವರ್ ಹೆಲ್ಮೆಟ್‌ಗಳು ಭಾರತಕ್ಕೂ ಕಾಲಿಡುವ ನಿರೀಕ್ಷೆಗಳಿವೆ. ಸದ್ಯಕ್ಕೆ ಮಾರಾಟವಾಗುತ್ತಿರುವ ಸ್ಟೀಲ್ ಬರ್ಡ್ ಬ್ರಾಟ್ ಹೆಲ್ಮೆಟ್‌ಗಳು ಯುರೋಪಿಯನ್ ಹಾಗೂ ಐಎಸ್‌ಐ ಗುಣಮಟ್ಟವನ್ನು ಹೊಂದಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಹೊಸ ಸ್ಟೀಲ್ ಬರ್ಡ್ ಹೆಲ್ಮೆಟ್‌ಗೆ 4151 ರೇಟಿಂಗ್ ನೀಡಲಾಗಿದೆ. ಈ ಬ್ರಾಟ್ ಹೆಲ್ಮೆಟ್‌ಗಳನ್ನು ಥರ್ಮೋಪ್ಲ್ಯಾಸ್ಟ್‌ನಿಂದ ತಯಾರಿಸಲಾಗಿದೆ. ಈ ಕಾರಣಕ್ಕೆ ಇವುಗಳು ಹಗುರವಾಗಿದ್ದು, ಬಲವಾಗಿರುತ್ತವೆ.

ಈ ಹೆಲ್ಮೆಟ್‌ನ ಬೆಲೆಗಳು ರೂ.5,149ಗಳಿಂದ ಆರಂಭವಾಗುತ್ತವೆ. ಹೊಸ ಹೆಲ್ಮೆಟ್ ಬಿಡುಗಡೆ ಕುರಿತು ಮಾತನಾಡಿದ ಸ್ಟೀಲ್‌ಫೋರ್ಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್ ಈ ಹೆಲ್ಮೆಟ್ ಆರಾಮದಾಯಕವಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸುರಕ್ಷಿತ ಹೆಲ್ಮೆಟ್ ಬಯಸುವ ಪ್ರತಿಯೊಬ್ಬರಿಗೂ ಈ ಹೆಲ್ಮೆಟ್‌ಗಳು ಸೂಕ್ತವೆಂದು ಹೇಳಿದರು. ಆರಾಮದಾಯಕ ಅನುಭವಕ್ಕಾಗಿ ಈ ಹೆಲ್ಮೆಟ್‌ಗಳಲ್ಲಿ ಗುಣಮಟ್ಟದ ಫ್ಯಾಬ್ರಿಕ್ ಬಳಸಲಾಗುತ್ತದೆ.

ಸ್ಟೀಲ್ ಬರ್ಡ್ ಕಂಪನಿಯು ಬ್ರಾಟ್ ಹೆಲ್ಮೆಟ್‌ಗಳನ್ನು ವೈಟ್ ಬ್ಲಾಕ್, ಇಂಡಿಗೊ ಬ್ಲೂ ಬ್ಲಾಕ್, ಗ್ರೇ ಬ್ಲಾಕ್, ಬ್ಲಾಕ್ ವೈಟ್, ಬ್ಲಾಕ್ ಯಲ್ಲೋ, ಬ್ಲಾಕ್ ಟಿಟಾನಿಯಂ, ಬ್ಲಾಕ್ ರೆಡ್ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇನ್ನು ಬ್ರಾಟ್ ಹೆಲ್ಮೆಟ್‌ಗಳು ಎಕ್ಸ್‌ಎಕ್ಸ್‌ಎಸ್ ಗಾತ್ರದಿಂದ ಎಕ್ಸ್‌ಎಲ್ ಗಾತ್ರಗಳಲ್ಲಿ ಲಭ್ಯವಿರಲಿವೆ. ಈ ಮೊದಲೇ ತಿಳಿಸಿದಂತೆ ಬ್ರಾಟ್ ಹೆಲ್ಮೆಟ್‌ಗಳ ಬೆಲೆ ರೂ.5,149ಗಳಿಂದ ಆರಂಭವಾಗುತ್ತದೆ.
ಗಮನಿಸಿ: ಮೊದಲ ಚಿತ್ರವನ್ನು ಹೊರತುಪಡಿಸಿ ಉಳಿದ ಸ್ಟೀಲ್ ಬರ್ಡ್ ಹೆಲ್ಮೆಟ್ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications








