ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸುರಕ್ಷಿತ ಬೈಕ್ ಚಾಲನೆಯನ್ನು ಖಾತ್ರಿಪಡಿಸಲು ಗುಣಮಟ್ಟದ ಹೆಲ್ಮೆಟ್ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಹೆಲ್ಮೆಟ್ ಉತ್ಪಾದನಾ ಕಂಪನಿಯಾಗಿರುವ ಸ್ಟಡ್ಸ್ ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕೃತಗೊಂಡಿರುವ ಹೊಸ ಹೆಲ್ಮೆಟ್ ಮಾದರಿಯೊಂದನ್ನು ಬಿಡುಗಡೆ ಮಾಡಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಹಲವಾರು ಹೆಲ್ಮೆಟ್ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಗುಣಮಟ್ಟ ಮತ್ತು ಬ್ರಾಂಡ್ ನೆಮ್ ಆಧರಿಸಿ ಕನಿಷ್ಠ ರೂ. 1 ಸಾವಿರದಿಂದ ರೂ. 50 ಸಾವಿರ ತನಕವು ಬೆಲೆ ಹೊಂದಿವೆ. ಆದರೆ ಎಲ್ಲಾ ವರ್ಗದ ಗ್ರಾಹಕರಿಗೂ ದುಬಾರಿ ಬೆಲೆಯ ಹೆಲ್ಮೆಟ್ ಖರೀದಿ ಸಾಧ್ಯವಿಲ್ಲವಾದರೂ ಸುರಕ್ಷಿತ ಬೈಕ್ ಪ್ರಯಾಣಕ್ಕೆ ಕನಿಷ್ಠ ಬೆಲೆಯಲ್ಲಿಯಾದರೂ ಒಂದು ಗುಣಮಟ್ಟದ ಹೆಲ್ಮೆಟ್ ಬಳಕೆಯು ಅತ್ಯಅವಶ್ಯವಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಈ ನಿಟ್ಟಿನಲ್ಲಿ ಮಾರುಕಟ್ಟೆಯ ಅಧ್ಯಯನ ನಡೆಸಿದ ಸ್ಟಡ್ಸ್ ಹೆಲ್ಮೆಟ್ ಉತ್ಪಾದನಾ ಕಂಪನಿಯು ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಕ್ರೆಸ್ಟ್ ಎನ್ನುವ ಹೆಲ್ಮೆಟ್ ಬಿಡುಗಡೆ ಮಾಡಿದ್ದು, ಹೊಸ ಹೆಲ್ಮೆಟ್ ಮಾದರಿಯು ಆರಂಭಿಕವಾಗಿ ರೂ. 995 ಬೆಲೆ ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಫುಲ್ ಫೇಸ್ ಹೆಲ್ಮೆಟ್ ಮಾದರಿಯಾಗಿರುವ ಕ್ರೆಸ್ಟ್ ಹೆಲ್ಮೆಟ್ ಉತ್ಪನ್ನವು ಗುಣಮಟ್ಟದ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಏರೋಡೈನಾಮಿಕ್ ಶೈಲಿಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ ವಿವಿಧ ಗಾತ್ರಗಳಲ್ಲಿ ಖರೀದಿಗೆ ಲಭ್ಯವಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸ್ಟಡ್ಸ್ ಕಂಪನಿಯು ಕ್ರೆಸ್ಟ್ ಹೆಲ್ಮೆಟ್ ಮಾದರಿಯನ್ನು ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟಾ ಲಾರ್ಜ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೀಡಿಯಂ(570-ಎಂಎಂ), ಲಾರ್ಜ್(580-ಎಂಎಂ) ಮತ್ತು ಎಕ್ಸ್ಟಾ ಲಾರ್ಜ್(600-ಎಂಎಂ) ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಹೊಸ ಹೆಲ್ಮೆಟ್ ಅನ್ನು ಬೈಕ್ ಸವಾರಿಗೆ ಬಳಕೆಗೆ ಸೂಕ್ತವಾಗುವಂತೆ ಒಳಭಾಗದಲ್ಲಿ ಪ್ರೀಮಿಯಂ ಫ್ರ್ಯಾಬಿಕ್ ಬಟ್ಟೆಯನ್ನು ಬಳಕೆ ಮಾಡಲಾಗಿದ್ದು, ಬೇಸಿಗೆ ಮತ್ತು ಮಳೆಗಾಲದ ಸಂದರ್ಭದಲ್ಲೂ ಯಾವುದೇ ಕಿರಿಕಿರಿಯಿಲ್ಲದೆ ಈ ಹೆಲ್ಮೆಟ್ ಅನ್ನು ಬಳಕೆ ಮಾಡಬಹುದಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಾನದಂಡಗಳಿಗೆ ಅನುಗುಣವಾಗಿ ಹೆಲ್ಮೆಟ್ ಒಳಭಾಗದಲ್ಲೂ ಉತ್ತಮ ಕುಷನ್ ನೀಡಲಾಗಿದ್ದು, ಎಂಜಿನಿಯರಿಂಗ್ ಥರ್ಮೋಪ್ಲಾಸ್ಟಿಕ್‌ನೊಂದಿಗೆ ಕ್ವಿಕ್ ರೀಲಿಸ್ ಮಾಡಬಹುದಾದ ಸಿಲಿಕಾನ್ ಕೊಟೆಡ್ ವಿಸರ್, ತೆಗೆದುಹಾಕಬಹುದಾದ ಚಿಕ್ ಪ್ಯಾಡ್, ಏರ್ ವೆಂಟ್ಸ್, ಏರ್ ಎಕ್ಸಾಸ್ಟ್ ಮತ್ತು ರಾತ್ರಿ ವೇಳೆ ಬೈಕ್ ಚಾಲನೆಯನ್ನು ಸುರಕ್ಷಿತಗೊಳಿಸಲು ಹೆಲ್ಮೆಟ್ ಅಂಚುಗಳಲ್ಲಿ ರಿಫ್ಲೆಕ್ಟರ್ ನೀಡಲಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಈ ಮೂಲಕ ಗುಣಮಟ್ಟ, ವಿಶ್ವಾಸಾರ್ಹತೆಯೊಂದಿಗೆ ಮತ್ತೊಮ್ಮೆ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸಲು ಸಿದ್ದವಾಗಿರುವ ಸ್ಟಡ್ಸ್ ಕಂಪನಿಯು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಹೊಸ ಕ್ರೆಸ್ಟ್ ಹೆಲ್ಮೆಟ್ ಅಭಿವೃದ್ದಿಪಡಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸ್ಟಡ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ಮಾದರಿಯ ಹೆಲ್ಮೆಟ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಸೂಚಿಸಿರುವ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ನ್ಯೂ ಜನರೇಷನ್ ಹೆಲ್ಮೆಟ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ.

Most Read Articles

Kannada
English summary
Studds Introduced New Budget Helmet Crest, Features, Price, Design Details Here. Read in Kannada.
Story first published: Friday, March 5, 2021, 21:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X