ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಪ್ರಮುಖ ಹೆಲ್ಮೆಟ್ ತಯಾರಕ ಕಂಪನಿಯಾದ ಸ್ಟಡ್ಸ್ ಭಾರತದಲ್ಲಿ ಹೊಸ ಹೆಲ್ಮೆಟ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಜೇಡ್ ಡಿ 3 ಡೆಕೋರ್ ಎಂಬ ಹೊಸ ಹೆಲ್ಮೆಟ್ ಅನ್ನು ಬಿಡುಗಡೆಗೊಳಿಸಿದೆ.

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಈ ಜೀವ ರಕ್ಷಕ ಹೆಲ್ಮೆಟ್ ಬೆಲೆ ರೂ.1,195ಗಳಾಗಿದೆ. ಈ ಹೆಲ್ಮೆಟ್ ಗ್ಲಾಸ್ ಹಾಗೂ ಮ್ಯಾಟ್ ಎಂಬ ಎರಡು ಕೋಟಿಂಗ್'ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.ಇದರ ಜೊತೆಗೆ ಈ ಹೆಲ್ಮೆಟ್ ಅನ್ನು ಒಟ್ಟು ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ವೈಟ್ ಎನ್ 2, ಬ್ಲ್ಯಾಕ್ ಎನ್ 4, ಮ್ಯಾಟ್ ಬ್ಲ್ಯಾಕ್ ಎನ್ 1, ಮ್ಯಾಟ್ ಬ್ಲ್ಯಾಕ್ ಎನ್ 2, ಮ್ಯಾಟ್ ಬ್ಲ್ಯಾಕ್ ಎನ್ 4 ಹಾಗೂ ಮ್ಯಾಟ್ ಬ್ಲ್ಯಾಕ್ ಎನ್ 12 ಬಣ್ಣಗಳಲ್ಲಿ ಈ ಹೆಲ್ಮೆಟ್ ಮಾರಾಟವಾಗಲಿದೆ. ಈ ಎಲ್ಲಾ ಬಣ್ಣಗಳು ಯುವಿ ನಿರೋಧಕ ಬಣ್ಣಗಳಾಗಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಈ ಬಣ್ಣಗಳು ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ತಡೆಯುತ್ತವೆ. ಈ ಕಾರಣಕ್ಕಾಗಿಯೇ ಇವುಗಳನ್ನು ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳೆಂದು ಹೇಳಲಾಗಿದೆ.

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಇದರ ಜೊತೆಗೆ, ಕಂಪನಿಯು ಈ ಹೆಲ್ಮೆಟ್‌ನಲ್ಲಿ ರೆಗ್ಯುಲೇಟೆಡ್ ಇಪಿಎಸ್ ಸಾಂದ್ರತೆ, ಅಲರ್ಜಿ ಉಂಟಾಗದ ಉಡುಪು ಹಾಗೂ ಕ್ವಿಕ್ ವೇರ್ ಸ್ಟ್ರಾಪ್'ಗಳಂತಹ ಹಲವು ಹೆಚ್ಚುವರಿ ಫೀಚರ್'ಗಳನ್ನು ಸೇರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಹೆಲ್ಮೆಟ್'ನ ಸ್ಥಿರತೆಗಾಗಿ ಉತ್ತಮ ಗುಣಮಟ್ಟದ ಥರ್ಮೋಪ್ಲಾಸ್ಟಿಕ್ ಘಟಕಗಳನ್ನು ಬಳಸಲಾಗಿದೆ. ಇದು ಅನಿರೀಕ್ಷಿತ ಅಪಘಾತಗಳಿಂದ ತಲೆಗೆ ಪೆಟ್ಟಾಗದಂತೆ ರಕ್ಷಣೆನೀಡುತ್ತದೆ. ಇದರಿಂದ ಈ ಹೆಲ್ಮೆಟ್ ಮೂಲಕ ಸುರಕ್ಷಿತ ಪ್ರಯಾಣವನ್ನು ಪಡೆಯಬಹುದು.

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಯುವಿ ಗುಣಮಟ್ಟದ ಬಣ್ಣವು ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲ. ಆದರೆ ಸಾಮಾನ್ಯ ಬಣ್ಣಗಳಂತೆ ಈ ಬಣ್ಣವು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲವೆಂದು ಸ್ಟಡ್ಸ್ ಕಂಪನಿಯು ಭರವಸೆ ನೀಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಈ ಹೆಲ್ಮೆಟ್ ಅನ್ನು ಮಧ್ಯಮ (570 ಎಂಎಂ), ದೊಡ್ಡ ಗಾತ್ರ (580 ಎಂಎಂ) ಹಾಗೂ ಹೆಚ್ಚು ದೊಡ್ಡ ಗಾತ್ರ (600 ಎಂಎಂ) ಎಂಬ ಮೂರು ಗಾತ್ರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ದ್ವಿಚಕ್ರ ವಾಹನಗಳಿಗೆ ಹೊಂದಿಕೊಳ್ಳುವ ಈ ಹೆಲ್ಮೆಟ್'ನ ಬೆಲೆಯನ್ನು ರೂ.1,195ಗಳೆಂದು ನಿಗದಿಪಡಿಸಲಾಗಿದೆ.

ಬೇಸಿಗೆಗೆ ಸೂಕ್ತವಾದ ಹೆಲ್ಮೆಟ್'ಗಳನ್ನು ಬಿಡುಗಡೆಗೊಳಿಸಿದ ಸ್ಟಡ್ಸ್

ಸ್ಟಡ್ಸ್ ಕಂಪನಿಯು ಬಿಡುಗಡೆಗೊಳಿಸಿರುವ ವಿಶೇಷ ಲಕ್ಷಣಗಳಿರುವ ಈ ಹೆಲ್ಮೆಟ್ ಧರಿಸಿ ಹೆಚ್ಚು ದೂರ ಪ್ರಯಾಣಿಸುವುದರಿಂದ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲವೆಂದು ಹೇಳಲಾಗಿದೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Studds launches Jade D3 Decor helmet suitable for summer. Read in Kannada.
Story first published: Tuesday, February 2, 2021, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X