Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- News
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಹೀರೋ ಮೋಟೊಕಾರ್ಪ್
ಭಾರತದಲ್ಲಿ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ -10 ದ್ವಿಚಕ್ರ ವಾಹನ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮತ್ತೊಮ್ಮೆ ಹೀರೋ ಮೊಟೊಕಾರ್ಪ್ ಕಂಪನಿಯ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದೆ.

ಹೀರೋ ಮೊಟೊಕಾರ್ಪ್ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರೆಸಿದ್ದು, ತಿಂಗಳಿಗೆ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ. 2021ರ ಜನವರಿ ತಿಂಗಳಲ್ಲಿ ಹೀರೋ ಮೊಟೊಕಾರ್ಪ್ ಕಂಪನಿಯು 4.67 ಲಕ್ಷ ಯುನಿಟ್ ಗಳನ್ನು ಮಾರಾಟಗೊಳಿಸಿವೆ ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟಕ್ಕೆ ಹೋಲಿಸಿದರೆ ಶೇ 4.2 ರಷ್ಟು ಕುಸಿತವಾಗಿದೆ.

ಟಾಪ್ -10 ದ್ವಿಚಕ್ರ ವಾಹನ ಕಂಪನಿಯ ಪಟ್ಟಿಯಲ್ಲಿ ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಎಂದಿನಂತೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ಸ್ ವಾರ್ಷಿಕ ಮಾರಾಟದಲ್ಲಿ ಶೇ.11.2 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಟಿವಿಎಸ್ ಮೋಟಾರ್ ಕಂಪನಿಯು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹೊಸೂರು ಮೂಲದ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ 2.05 ಲಕ್ಷ ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2020ರ ಅದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಶೇ.26 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಕಳೆದ ತಿಂಗಳು 1.57 ಲಕ್ಷ ಯುನಿಟ್ ಗಳನ್ನು ಮಾರಾಟಗೊಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಬಜಾಜ್ ಆಟೋ ಪಡೆದುಕೊಂಡಿದೆ. ಇದು ವಾರ್ಷಿಕ ಹೋಲಿಕೆಯ ಸಮಯದಲ್ಲಿ ಅದರ ಮಾರಾಟಕ್ಕೆ ಬಹುತೇಕ ಹೋಲುತ್ತದೆ, ಕೆಲವೇ ನೂರು ಯುನಿಟ್ ಗಳ ವ್ಯತ್ಯಾಸವಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ರಾಯಲ್ ಎನ್‌ಫೀಲ್ಡ್ ಒಟ್ಟಾರೆ ಮಾರಾಟದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಂಪನಿಯು ಕಳೆದ ತಿಂಗಳು 64,372 ಯುನಿಟ್ ಗಳನ್ನು ಮಾರಾಟಗೊಳಿಸಿ,ದೆ. ಇದು 2020ರ ಜನವರಿಯಲ್ಲಿ ನೋಂದಾಯಿತ 61,292 ಯುನಿಟ್‌ಗಳಿಗೆ ಹೋಲಿಸಿದರೆ ಶೇ.5 ಬೆಳವಣಿಗೆಯಾಗಿದೆ.

2021ರ ಜನವರಿ ತಿಂಗಳಲ್ಲಿ ಸುಜುಕಿ ಕಂಪನಿಯು ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಕಳೆದ ಜನವರಿಯಲ್ಲಿ ದಾಖಲಾದ 56,012 ಯುನಿಟ್ ಮಾರಾಟದಿಂದ ಶೇಕಡಾ 1.8 ರಷ್ಟು ಅಲ್ಪ ಬೆಳವಣಿಗೆಯನ್ನು ಕಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

2021ರ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ -10 ದ್ವಿಚಕ್ರ ವಾಹನ ಕಂಪನಿಗಳ ಪಟ್ಟಿಯಲ್ಲಿ ಯಮಹಾ ಕಂಪನಿಯು ಏಳನೇ ಸ್ಥಾನವನ್ನು ಪಡೆದಿದೆ. 2020ರ ಅದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಶೇ.53.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಪಿಯಾಜಿಯೊ, ಕವಾಸಕಿ ಮತ್ತು ಟ್ರಯಂಫ್ ಕ್ರಮವಾಗಿ ಎಂಟನೇ, ಒಂಬತ್ತನೇ ಮತ್ತು ಹತ್ತನೇ ಸ್ಥಾನವನ್ನು ಪಡೆದಿವೆ. ಪಿಯಾಜಿಯೊ 6,040 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದರೆ, ಕವಾಸಕಿ 161 ಯುನಿಟ್‌ಗಳನ್ನು ಮತ್ತು ಟ್ರಯಂಫ್ ಮಾರಾಟವು 62 ಯುನಿಟ್‌ಗಳನ್ನು ಮಾರಾಟಗೊಳಿಸಿವೆ

ಅತಿ ಹೆಚ್ಚು ಮಾರಾಟವಾದ ಟಾಪ್ -10 ದ್ವಿಚಕ್ರ ವಾಹನ ಕಂಪನಿಗಳ ಪಟ್ಟಿಯು ಡಿಸೆಂಬರ್ 2020 ರಿಂದ ಬದಲಾಗದೆ ಉಳಿದಿದೆ. ಹೆಚ್ಚಿನ ದ್ವಿಚಕ್ರ ವಾಹನಗಳ ತಯಾರಕರು ಮಾಸಿಕ ಮತ್ತು ವಾರ್ಷಿಕ ಹೋಲಿಕೆಗಳಲ್ಲಿ ಗಮನಾರ್ಹ ಮಾರಾಟ ಸುಧಾರಣೆಗಳನ್ನು ಕಂಡಿದ್ದಾರೆ.