ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ದ್ವಿಚಕ್ರ ವಾಹನ ತಯಾರಕರು ತಮ್ಮ ಜನಪ್ರಿಯ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಿಧದ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದೆ, ಇದರಿಂದ ಗ್ರಾಹಕರು ತಮ್ಮ ಆದ್ಯತೆಯ ಮೇರೆಗೆ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ತಯಾರಕರು ಅನೇಕ ಗಮನಾರ್ಹ ಸ್ಕೂಟರ್‌ಗಳನ್ನು ಪರಿಚಯಿಸಿದ್ದರು. ಇದರಲ್ಲಿ ಹೆಚ್ಚಾಗಿ 125 ಸಿಸಿ ವಿಭಾಗದ ಸ್ಕೂಟರ್‌ಗಳಾಗಿವೆ. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಹೆಚ್ಚಿನ ನಿರ್ಬಹಣ ವೆಚ್ಚದಿಂದಾಗಿ. ಆನೇಕ ಬ್ರ್ಯಾಂಡ್‌ಗಳು ಹೈಬ್ರಿಡ್ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಹೊಸ ಸ್ಟಾರ್ಟ್‌ಅಪ್‌ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಬಲವಾದ ಪರಿಣಾಮವನ್ನು ಬೀರಿವೆ. ಇದರ ನಡುವೆ 2021 ರಲ್ಲಿ ಬಿಡುಗಡೆಯಾದ ಟಾಪ್ ಐದು ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ,

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಯಮಹಾ ಏರೋಕ್ಸ್ 155

ಯಮಹಾ ಮೋಟಾರ್ ಇಂಡಿಯಾ ಹೊಸ ಬಣ್ಣದ ಆಯ್ಕೆಯಲ್ಲಿ ಏರೋಕ್ಸ್ 155( Aerox 155) ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಹೊಸ ಮೆಟಾಲಿಕ್ ಬ್ಲ್ಯಾಕ್ ಎಂಬ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಈ ಯಮಹಾ ಏರೋಕ್ಸ್ ಮ್ಯಾಕ್ಸಿ ಸ್ಕೂಟರ್ ಅನ್ನು ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಎಂಬ ಬಣ್ಣಗಳಲ್ಲಿಯು ಲಭ್ಯವಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಈ ಯಮಹಾ ಏರೋಕ್ಸ್ 155 ಸ್ಕೂಟರ್ ಬೆಲೆಯು ರೂ.1.29 ಲಕ್ಷಗಳಾದರೆ, ಇದರ ಮೋಟೋ ಜಿಪಿ ಎಡಿಷನ್ ಮಾದರಿಗೆ ರೂ.1.30 ಲಕ್ಷಗಳಾಗಿದೆ. ಇನ್ನು ಹೊಸ ಮೆಟಾಲಿಕ್ ಬ್ಲ್ಯಾಕ್ ಬಣ್ಣದ ಮಾದರಿಯ ಬೆಲೆಯು ರೂ,1.29 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಏರಾಕ್ಸ್ 155 ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ. ಒಟ್ಟು ವಾಹನದ ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಏರಾಕ್ಸ್ 155 ಸ್ಕೂಟರ್ ಮಿಡ್-ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಟಿವಿಎಸ್ ಜೂಪಿಟರ್

ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಜನಪ್ರಿಯ ಜೂಪಿಟರ್ ಸ್ಕೂಟರ್ ಮಾದರಿಯನ್ನು 125 ಸಿಸಿ ಸೆಗ್ಮೆಂಟ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಲಾಯಿತು. ಈ ಜೂಪಿಟರ್ ಸ್ಕೂಟರ್ ಮಾದರಿಯು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಮಾದರಿಯಾಗಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಜೂಪಿಟರ್ ಸ್ಕೂಟರ್ ಮಾದರಿಯು 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಟಿವಿಎಸ್‌ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಟ್ಟಿದ್ದು, ಟಿವಿಎಸ್ ಕಂಪನಿಯು ಇದುವರೆಗೆ ಸುಮಾರು 45 ಲಕ್ಷ ಜೂಪಿಟರ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ

ಟಿವಿಎಸ್ ಮೋಟರ್ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಎನ್‌ಟಾರ್ಕ್ 125 ಮಾದರಿಯಲ್ಲಿ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಎನ್‌ಟಾರ್ಕ್ 125 ಸ್ಕೂಟರಿನ ಎರಡನೇ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್ ಮತ್ತು ಸೂಪರ್ ಸ್ಕ್ವಾಡ್ ಎಡಿಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಎನ್‌ಟಾರ್ಕ್ 125 ರೇಸ್ ಎಕ್ಸ್‌ಪಿ ಎಡಿಷನ್ ಪರಿಚಯಿಸಲಾಗಿದೆ. ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಗ್ರಾಫಿಕ್ಸ್ ಮತ್ತು ಪವರ್‌ಫುಲ್ ಎಂಜಿನ್ ಟೋನ್‌ನೊಂದಿಗೆ ಸ್ಪೋರ್ಟಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಮಾದರಿಯಲ್ಲಿ ಸ್ಮಾರ್ಟ್‌ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಓಲಾ ಎಸ್1 ಪ್ರೊ

ಈ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.22 ಲಕ್ಷವಾಗಿದೆ. ಈ ಓಲಾ ಎಸ್1 ಪ್ರೊ ಮಾದರಿಯಲ್ಲಿ ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಹೊಂದಿದೆ. ಈ ಬ್ಯಾಟರಿ 8.5 ಕಿ.ವ್ಯಾ ಗರಿಷ್ಠ ವಿದ್ಯುತ್ ಉತ್ಪಾದನೆ ಹಾಗೂ 5.5 ಕಿ.ವ್ಯಾನಲ್ಲಿ ರೇಟ್ ಮಾಡಲಾದ ವಿದ್ಯುತ್ ಉತ್ಪಾದನೆಯನ್ನು ಹೊಂದಿದೆ. ಶಾಫ್ಟ್‌ನಲ್ಲಿ ಈ ಮೋಟರ್ 58 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಓಲಾ ಕಂಪನಿಯ ಪ್ರಕಾರ ಈ ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಹೋಮ್ ಚಾರ್ಜರ್ ಮೂಲಕ 6 ಗಂಟೆ 30 ನಿಮಿಷಗಳಲ್ಲಿ 0 - 100% ವರೆಗೆ ಚಾರ್ಜ್ ಮಾಡಬಹುದು. Ola ದೇಶಾದ್ಯಂತ ವೇಗದ ಚಾರ್ಜರ್‌ಗಳನ್ನು ಸ್ಥಾಪಿಸಲಿದೆ. ಈ ಹೈಪರ್‌ ಚಾರ್ಜರ್‌ಗಳು ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡುತ್ತವೆ. ಈ ಚಾರ್ಜರ್ ಗಳು ಕೇವಲ 18 ನಿಮಿಷಗಳಲ್ಲಿ 75 ಕಿ.ಮೀ ಚಲಿಸುವಷ್ಟು ಚಾರ್ಜ್ ಮಾಡುತ್ತವೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಓಲಾ ಹೇಳುವಂತೆ ಎಸ್1 ಪ್ರೊ ಕೇವಲ 3 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಿದರೆ, 60 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಾರ್ಮಲ್, ಸ್ಪೋರ್ಟ್ಸ್ ಹಾಗೂ ಹೈಪರ್ ಎಂಬ 3 ರೈಡ್ ಮೋಡ್‌ಗಳನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ರಿವರ್ಸ್ ಮೋಡ್ ಸಹ ನೀಡಲಾಗಿದೆ. ಈ ಮೋಡ್‌ ಅನ್ನು ಬಟನ್‌ ಅಥವಾ ಸ್ವಿಚ್‌ಗಿಯರ್ ಮೂಲಕ ಬಳಸಬಹುದು.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ಇಂಡಿಯಾ ಹೊಸ ಮತ್ತು ನವೀಕರಿಸಿದ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬೆಲೆಯು ರೂ. 1.07 ಲಕ್ಷಗಳಾದರೆ, ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಬೆಲೆಯು ರೂ.1.17 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಪುಣೆಯ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಸಾಕಷ್ಟು ಸ್ಟೈಲಿಂಗ್ ನವೀಕರಣಗಳನ್ನು ಪಡೆಯುತ್ತವೆ ಆದರೆ ಒಟ್ಟಾರೆ ವಿನ್ಯಾಸವು ಸಾಕಷ್ಟು ಹೋಲುತ್ತದೆ. ಪ್ರಿ-ಫೇಸ್‌ಲಿಫ್ಟ್ ಮಾದರಿಯಂತೆ, ಹೊಸ ಎಪ್ರಿಲಿಯಾ ಎಸ್ಆರ್ 160ಸ್ಟ್ಯಾಂಡರ್ಡ್, ಕಾರ್ಬನ್ ಮತ್ತು ರೇಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್-5 ಸ್ಕೂಟರ್‌ಗಳಿವು..

ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ವಿನ್ಯಾಸವು RSV4 ಸೂಪರ್‌ಬೈಕ್‌ನಿಂದ ಪ್ರೇರಿತವಾಗಿದೆ. ಸ್ಕೂಟರ್‌ಗಳ 'ರೇಸ್' ಟ್ರಿಮ್ ಆರ್‌ಎಸ್-ಜಿಪಿ-ಪ್ರೇರಿತ ಬಾಡಿ ಗ್ರಾಫಿಕ್ಸ್ ಮತ್ತು ಹ್ಯಾಂಡ್ ಗಾರ್ಡ್‌ಗಳನ್ನು ಹೊಂದಿದೆ. ಈ ಎರಡೂ ಎರಡೂ ಮಾದರಿಗಳು ಹೊಸ ವಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ನಂತಹ ಅಂಶಗಳೊಂದಿಗೆ ಅಗ್ರೇಸಿವ್ ಆಗಿ ಕಾಣುತ್ತವೆ.

Most Read Articles

Kannada
English summary
Top best scooters launched in 2021 read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X