ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ಅಪಾಚೆ ಆರ್‌ಟಿ‌ಆರ್ 160 4 ವಿ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.07 ಲಕ್ಷಗಳಾಗಿದೆ.

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಹೊಸ ಬೈಕಿನಲ್ಲಿರುವ ಎಂಜಿನ್ ಅನ್ನು ಬದಲಿಸಿರುವುದರಿಂದ ಈ ಬೈಕ್ ಈ ಸೆಗ್'ಮೆಂಟಿನಲ್ಲಿರುವ ಶಕ್ತಿಶಾಲಿ ಬೈಕ್ ಆಗಿ ಹೊರ ಹೊಮ್ಮಿದೆ. 2021ರ ಹೊಸ ಅಪಾಚೆ ಆರ್‌ಟಿಆರ್ 160 4 ವಿ ಬೈಕಿನಲ್ಲಿ 159.7 ಸಿಸಿ, ಸಿಂಗಲ್ ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಈ ಎಂಜಿನ್ 9250 ಆರ್‌ಪಿಎಂನಲ್ಲಿ 17.63 ಬಿಹೆಚ್‌ಪಿ ಪವರ್ ಹಾಗೂ 7250 ಆರ್‌ಪಿಎಂನಲ್ಲಿ 14.73 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಹೊಸ ಬೈಕಿನಲ್ಲಿ ಕಾರ್ಬನ್ ಫೈಬರ್ ಹೊಂದಿರುವ ಹೊಸ ಡ್ಯುಯಲ್ ಟೋನ್ ಸೀಟ್ ಅನ್ನು ನೀಡಲಾಗಿದೆ. ಕ್ಲಾ ಸ್ಟೈಲ್ ಪೊಸಿಷನ್ ಲ್ಯಾಂಪ್‌ಗಳನ್ನು ಹೊಂದಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಈ ಬೈಕಿಗೆ ಪ್ರೀಮಿಯಂ ಲುಕ್ ನೀಡುತ್ತವೆ.

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಹೊಸ ಅಪ್‌ಡೇಟ್‌ಗಳಿಂದಾಗಿ ಈ ಬೈಕ್ ಎರಡು ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಡಿಸ್ಕ್ ಮಾದರಿಯು 147 ಕೆಜಿ ತೂಕವನ್ನು ಹೊಂದಿದ್ದರೆ, ಡ್ರಮ್ ಮಾದರಿಯು 145 ಕೆ.ಜಿ ತೂಕವನ್ನು ಹೊಂದಿದೆ. ಹೊಸ ಅಪಾಚೆ ಆರ್‌ಟಿ‌ಆರ್ 160 4 ವಿ ಬೈಕ್ ಅನ್ನು ರೇಸಿಂಗ್ ರೆಡ್, ನೈಟ್ ಬ್ಲ್ಯಾಕ್ ಹಾಗೂ ಮೆಟಾಲಿಕ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಈ ಬೈಕ್ ಆಕರ್ಷಕ ಗ್ರಾಫಿಕ್ಸ್, ಸ್ಪೋರ್ಟಿ ಎಂಜಿನ್ ಕೌಲ್, ಗ್ಲೈಡ್ ಥ್ರೂ ಟೆಕ್ನಾಲಜಿ, ಸಿಂಗಲ್ ಚಾನೆಲ್ ಸೂಪರ್-ಮೋಟೋ ಎಬಿಎಸ್'ಗಳನ್ನು ಹೊಂದಿದೆ. ಇವುಗಳ ಜೊತೆಗೆ ಎಲ್ಇಡಿ ಟೇಲ್ ಲೈಟ್, ಲ್ಯಾಪ್ ಟೈಮರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್'ಗಳನ್ನು ಸಹ ಹೊಂದಿದೆ.

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ಆರ್‌ಟಿಆರ್ ಸರಣಿಯ ಎಲ್ಲಾ ಮಾದರಿಗಳ ಬೆಲೆಯನ್ನು ಜನವರಿ ತಿಂಗಳಿನಲ್ಲಿಯೇ ಹೆಚ್ಚಿಸಿದೆ. ಬೆಲೆ ಹೆಚ್ಚಳದ ನಂತರ 160 4 ವಿ ಡ್ರಮ್ ಮಾದರಿ ಬೆಲೆ ರೂ.1.02 ಲಕ್ಷಗಳಾದರೆ, ಡಿಸ್ಕ್ ಮಾದರಿ ಬೆಲೆ ರೂ.1.05 ಲಕ್ಷಗಳಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಈ ಎರಡೂ ಮಾದರಿಗಳ ಬೆಲೆಯನ್ನು ರೂ.5,000 ಗಳವರೆಗೆ ಹೆಚ್ಚಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಈ ಬೈಕಿನ ಬೆಲೆ ರೂ.8,000ಗಳಷ್ಟು ಹೆಚ್ಚಾಗಿದೆ.ಅಪಾಚೆ ಬೈಕುಗಳು ಟಿವಿಎಸ್‌ನ ಒಟ್ಟು ಮಾರಾಟದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.

ಅಪಾಚೆ ಆರ್‌ಟಿ‌ಆರ್ ಸರಣಿಯ ಹೊಸ ಬೈಕ್ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಗ್ರಾಹಕರು ಈ ಬೆಲೆ ಏರಿಕೆಯನ್ನು ಹಾಗೂ 2021ರ ಹೊಸ ಅಪಾಚೆ ಆರ್‌ಟಿಆರ್ 160 4 ವಿ ಬೈಕುಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
TVS Motor launches new Apache RTR 160 4V bike. Read in Kannada.
Story first published: Wednesday, March 10, 2021, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X