ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಸ್ಟಾರ್ಟ್‌ಅಪ್ ಕಂಪನಿಗಳು ವಿವಿಧ ಇವಿ ವಾಹನಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ದುಬಾರಿ ಇಂಧನಗಳ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ನಮ್ಮ ಬೆಂಗಳೂರಿನ ಆಲ್ಟ್ರಾವಯೊಲೆಟ್(Ultraviolette) ಆಟೋ ಕಂಪನಿಯು ಸಹ ಕಳೆದ ವರ್ಷ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಫ್77(F77) ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್‌ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದು, ನಮ್ಮ ಬೆಂಗಳೂರಿನಲ್ಲೇ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೂ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ 70 ಸಾವಿರ ಚದರ ಅಡಿಯಲ್ಲಿ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಆರಂಭಿಕವಾಗಿ 500 ಉದ್ಯೋಗಿಗಳೊಂದಿಗೆ ಮೊದಲ ವರ್ಷ 15 ಸಾವಿರ ಯುನಿಟ್ ಉತ್ಪಾದನಾ ಗುರಿಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಹೊಸ ಎಫ್77 ಸ್ಪೋರ್ಟಿ ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿತರಣೆ ಆರಂಭಿಸಲಿದ್ದು, ಹೊಸ ಬೈಕ್ ವಿತರಣೆ ಆರಂಭದ ನಂತರ ಉತ್ಪಾದನಾ ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಳ ಮಾಡಲು ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಆಲ್ಟ್ರಾವಯೊಲೆಟ್ ಕಂಪನಿಯ ಹೊಸ ಯೋಜನೆಯ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ವಾಹನ ಉತ್ಪಾದನಾ ಪ್ರಮಾಣವನ್ನು 15 ಸಾವಿರ ಯುನಿಟ್‌ನಿಂದ 1.20 ಲಕ್ಷ ಯುನಿಟ್ ಉತ್ಪಾದನೆ ಮಾಡುವ ಗುರಿಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಹೊಸ ಎಫ್77 ಹೈ ಪರ್ಫಾಮೆನ್ಸ್ ಬೈಕ್ ಬಿಡುಗಡೆಯ ನಂತರ ಆಲ್ಟ್ರಾವಯೊಲೆಟ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಶೇ.90ರಷ್ಟು ಸ್ವದೇಶಿ ಕಂಪನಿಗಳ ಬಿಡಿಭಾಗಗಳೊಂದಿಗೆ ಹೊಸ ಬೈಕ್ ಅಭಿವೃದ್ದಿಪಡಿಸುವ ಗುರಿ ತಲುಪಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಆಲ್ಟ್ರಾವಯೊಲೆಟ್ ಕಂಪನಿಯ ಸದ್ಯ ಅನಾವರಣಗೊಳಿಸಿರುವ ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಜನಪ್ರಿಯ ಜೆಟ್ ಫೈಟರ್ ಎಫ್77 ವಿನ್ಯಾಸದ ಪ್ರೇರಣೆಯೊಂದಿಗೆ ಎಫ್77 ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಗೊಳಿಸಿರುವ ಆಲ್ಟ್ರಾವಯೊಲೆಟ್ ಕಂಪನಿಯು ಬೆಲೆಗೆ ತಕ್ಕಂತೆ ಹೊಸ ಬೈಕಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಹೊಸ ಬೈಕಿನಲ್ಲಿ ಆ್ಯಂಗುಲರ್ ಬಾಡಿ ಪ್ಯಾನೆಲ್, ಶಾರ್ಪ್ ಫ್ರಂಟ್ ಫ್ಯಾಸಿಯಾ ಮತ್ತು ಫುಲ್ ಎಲ್ಇಡಿ ಹೆಡ್‌ಲೈಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಕ್ಲಿಪ್ ಹ್ಯಾಂಡ್ ಬಾರ್ ಮತ್ತು ಹಿಂಬದಿಯಲ್ಲಿರುವ ಫುಟ್ ಪೆಗ್ ಸೌಲಭ್ಯವು ಪರ್ಫಾಮೆನ್ಸ್ ಬೈಕ್ ರೈಡಿಂಗ್ ಶೈಲಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತವೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಹೊಸ ಬೈಕಿನಲ್ಲಿ ಇಕೋ, ಸ್ಪೋರ್ಟ್ ಮತ್ತು ಇನ್‌ಸೆನ್ ಎನ್ನುವ ಮೂರು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, 25ಕಿಲೋ ವ್ಯಾಟ್ ಬಿಎಲ್‌ಡಿಸಿ ಮೋಟಾರ್ ಪ್ರೇರಣೆಯೊಂದಿಗೆ 33.5-ಬಿಎಚ್‌ಪಿ ಮೂಲಕ 147ಕಿ.ಮಿ ಟಾಪ್ ಸ್ಪೀಡ್ ಗುರಿಹೊಂದಬಲ್ಲ ಬಲಿಷ್ಠ ಎಲೆಕ್ಟ್ರಿಕ್ ಬೈಕ್ ಮಾದರಿಯಾಗಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಕೇವಲ 50 ನಿಮಿಷಗಳಲ್ಲಿ ಶೇ.80 ಬ್ಯಾಟರಿ ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಹೊಂದಿರುವ ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ ಕನಿಷ್ಠ 140ಕಿ.ಮಿನಿಂದ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಅನಾವರಣದ ಸಂದರ್ಭದಲ್ಲಿನ ಕೆಲವು ತಾಂತ್ರಿಕ ಸೌಲಭ್ಯಗಳು ಉತ್ಪಾದನಾ ಮಾದರಿಯ ಬಿಡುಗಡೆಯ ಹೊತ್ತಿಗೆ ಬದಲಾಗುವ ಸಾಧ್ಯತೆಗಳಿದ್ದು, ಬ್ಯಾಟರಿ ರೇಂಜ್ ಸಹ ಇನ್ನಷ್ಟು ಹೆಚ್ಚಳವಾಗಬಹುದಾಗಿದೆ.

ನಮ್ಮ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ Ultraviolette ಇವಿ ಬೈಕ್ ಉತ್ಪಾದನೆಗೆ ಚಾಲನೆ

ಇತ್ತೀಚೆಗೆ ಬಿಡುಗಡೆಯಾಗಲಿರುವ ಹೊಸ ಇವಿ ವಾಹನಗಳ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆಲ್ಟ್ರಾವಯೊಲೆಟ್ ಕಂಪನಿಯು ಹೊಸ ಬೈಕಿನ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡುತ್ತಿದ್ದು, 2022ರ ಆರಂಭದಲ್ಲಿ ವಿತರಣೆ ಆರಂಭವಾಗಲಿರುವ ಹೊಸ ಬೈಕಿನ ಅಂತಿಮ ಹಂತದ ಉತ್ಪಾದನಾ ಆವೃತ್ತಿಯನ್ನು ಸಿದ್ದಗೊಳಿಸಲಾಗುತ್ತಿದೆ.

Most Read Articles

Kannada
English summary
Ultraviolette announces its new manufacturing facility in namma bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X