ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜಾವಾ ಮೋಟಾರ್‌ಸೈಕಲ್‌ ತನ್ನ 2021ರ ಜಾವಾ 42 ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಮತ್ತೊಂದು ಹೊಸ ಬೈಕನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಹೊಸ ಜಾವಾ ರೆಟ್ರೊ-ಕ್ಲಾಸಿಕ್ ಸ್ಕ್ರ್ಯಾಂಬ್ಲರ್ ಬೈಕ್ ಸಂಪೂರ್ಣವಾಗಿ ಮರೆಮಾಚಿ ಪುಣೆಯ ಬಳಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದರ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಚಿತ್ರಗಳಲ್ಲಿ ನೋಡಿದಂತೆ, ಇದು ಇನ್ನು ಉತ್ಪಾದನೆಗೆ ಸಿದ್ದವಾಗಿಲ್ಲ ಎಂದು ತಿಳಿಯುತ್ತದೆ. ಈ ಹೊಸ ಬೈಕ್ ಅಭಿವೃದ್ದಿಯ ಹಂತದಲ್ಲಿರಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಸ್ಪೈ ಚಿತ್ರಗಳಲ್ಲಿ ಹೊಸ ಬೈಕಿನ ವಿನ್ಯಾಸದ ಬಗ್ಗೆ ಕೆಲವು ಮಾಹಿತಿಗಳು ಬಹಿರಂಗವಾಗಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಹೊಸ ಜಾವಾ ಬೈಕ್ ಡಿಆರ್ಎಲ್, ಎಲ್ಇಡಿ ಟೈಲೈಟ್, ಡ್ಯುಯಲ್-ಚಾನೆಲ್ ಎಬಿಎಸ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ತ್ತು ಇನ್ನೂ ಅನೇಕ ಫೀಚರ್ ಗಳೊಂದಿಗೆ ಎಲ್ಇಡಿ ಹೆಡ್ ಲೈಟ್ ಅನ್ನು ಕೂಡ ಹೊಂದಿರಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಚಿತ್ರಗಳಲ್ಲಿ ನೋಡಿದಂತೆ, ಎಕ್ಸಾಸ್ಟ್ ಪೈಪಿಂಗ್ ಇನ್ನು ಟೆಸ್ಟಿಂಗ್ ಹಂತದಲ್ಲಿದೆ. ಈ ಹೊಸ ಬೈಕಿನಲ್ಲಿ ಹೈ ಮೌಂಟಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಪಡೆಯಬಹುದು. ಇನ್ನು ಈ ಬೈಕಿನ ಯಾಂತ್ರಿಕ ಅಂಶಗಳ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಆದರೆ ಈ ಹೊಸ ಜಾವಾ ಬೈಕಿನಲ್ಲಿ 300ಸಿಸಿ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 26 ರಿಂದ 29 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಇನ್ನು ಮಹೀಂದ್ರಾ ಕಂಪನಿಯ ಭಾಗವಾದ ಕ್ಲಾಸಿಕ್ ಲೆಜೆಂಡ್ಸ್ ಐಕಾನಿಕ್ ಯೆಜ್ಡಿ ಬೈಕನ್ನು ನವೀಕರಿಸಿ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಿದೆ. ಕೆಲವು ವರದಿಗಳ ಪ್ರಕಾರ ಇದು ಯೆಜ್ಡಿ ಬೈಕ್ ಆಗಿರಬಹುದು ಎಂದು ಎನ್ನಲಾಗುತ್ತಿದೆ. ಆದರೆ ಇದು ಜಾವಾ 42 ಆಧಾರಿತ ಸ್ಕ್ರ್ಯಾಂಬ್ಲರ್ ಬೈಕ್ ಆಗಿರುವುದಕ್ಕೆ ಹೆಚ್ಚಿನ ಸಾಧ್ಯತೆಗಳಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಜಾವಾ 42 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು. ಸ್ಟ್ಯಾಂಡರ್ಡ್ ಜಾವಾ ಬೈಕ್ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ಇದು ಸ್ಪೋರ್ಟಿಯರ್ ಲುಕ್ ನೀಡಿತು ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಕೂಡ ಸೇರಿಸಿತು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಇನ್ನು ಜಾವಾ ಮೋಟಾರ್‌ಸೈಕಲ್‌ ಕಂಪನಿಯ ಜಾವಾ ಮತ್ತು ಜಾವಾ 42 ಬೈಕುಗಳನ್ನು ಈ ತಿಂಗಳು ಖರೀದಿಸಿದ ಗ್ರಾಹಕರು ಟ್ಯೂಬ್‌ಲೆಸ್ ಟೈರ್‌ಗಳಲ್ಲಿ ಸುತ್ತಿದ ಒಂದು ಜೋಡಿ ಅಲಾಯ್ ವ್ಹೀಲ್ ಗಳನ್ನು ಮತ್ತು ಒಂದು ಬಾರ್-ಎಂಡ್ ಮೀರರ್ ಅನ್ನು ಪಡೆಯಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಹೊಸ ಅಲಾಯ್ ವ್ಹೀಲ್ ಗಳು ಮತ್ತು ಬಾರ್ ಎಂಡ್ ಮೀರರ್ ಗಳು ಜಾವಾ ಗೋಲ್ಡನ್ ಸ್ಕೀಮ್ ಅಡಿಯಲ್ಲಿ ರೂ.7,999 ವರೆಗಿನ ರಿಯಾಯಿತಿ ದರದಲ್ಲಿ ಲಭ್ಯವಿದೆ. ಎರಡೂ ಭಾಗಗಳ ಮೂಲ ಬೆಲೆ ರೂ.14,498 ಗಳಾಗಿದೆ. ಇನ್ನು ಗೋಲ್ಡನ್ ಸ್ಕೀಮ್ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಹೊಸ ಅಕ್ಸೆಸರೀಸ್ ಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಇನ್ನು ಎರಡು ಜಾವಾ ಬೈಕುಗಳಲ್ಲಿ 93 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 26.5 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಇನ್ನು ಬಿಡುಗಡೆಯಾಗಲಿರುವ ಹೊಸ ಜಾವಾ ಸ್ಕ್ರ್ಯಾಂಬ್ಲರ್ ಬೈಕನ್ನು ಜಾವಾ 42 ಮತ್ತು ಜಾವಾ 300 ಬೈಕಿನ ನಡುವೆ ಇರಿಸಲಾಗುತ್ತದೆ. ಹೊಸ ಜಾವಾ ಸ್ಕ್ರ್ಯಾಂಬ್ಲರ್ ಬೈಕ್ ಹೆಚ್ಚು ಪ್ರೀಮಿಯಮ್ ಮಾದರಿಯಾಗಿರುತ್ತದೆ, ಇದರಿಂದ ಬೆಲೆಯು ತುಸು ದುಬಾರಿಯಾಗಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ ಬೈಕ್

ಜಾವಾ 42 ಆಧಾರಿತ ಸ್ಕ್ರ್ಯಾಂಬ್ಲರ್ ಬೈಕಿನ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಹೊಸ ಜಾವಾ ಬೈಕ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

Most Read Articles

Kannada
English summary
Upcoming Jawa Or Yezdi Scrambler Spotted Testing. Read In Kannada.
Story first published: Wednesday, March 24, 2021, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X