ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ ಏರಿಕೆಯು ವಾಹನ ಸವಾರರನ್ನು ಪರದಾಡುವಂತೆ ಮಾಡಿದೆ. ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ವಾಹನ ಸವಾರರ ನಾಡಿ ಮಿಡಿತವನ್ನು ಅರಿತಿರುವ ವಾಹನ ತಯಾರಕ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಬಿಡುಗಡೆಯಾಗಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲಿ ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್'ಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

Vmoto ಸೊಕೊ ಗ್ರೂಪ್ ಪರ್ತ್ ಮೂಲದ Vmoto ಹಾಗೂ ಚೀನಾ ಮೂಲದ ಸೂಪರ್ ಸೊಕೊದ ಅಂಗಸಂಸ್ಥೆಯಾಗಿದೆ. ಸಂಸ್ಥೆಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಜಗತ್ತಿನಾದ್ಯಂತ ಬಿಡುಗಡೆಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. EICMA 2021ರಲ್ಲಿ, ಕಂಪನಿಯು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರಾಥಮಿಕವಾಗಿ B2B ವಿಭಾಗದಲ್ಲಿ ಬಿಡುಗಡೆಯಾಗಲಿದೆ. Vmoto ಈಗಾಗಲೇ ತನ್ನ ಸರಣಿಯಲ್ಲಿ ಹಲವಾರು B2B ಕೇಂದ್ರಿತ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹೊಂದಿದೆ. ಇದರಲ್ಲಿ VS1 ಎಲೆಕ್ಟ್ರಿಕ್ ಸ್ಕೂಟರ್, VS2 ಲೈಟ್ ವೆಹಿಕಲ್ ಹಾಗೂ VS3 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಸೇರಿವೆ. ವಿನ್ಯಾಸವನ್ನು ಗಮನಿಸಿದಾಗ Vmoto ಫ್ಲೀಟ್ ಕಾನ್ಸೆಪ್ಟ್ F01 ಅನ್ನು ವಿಶೇಷವಾಗಿ B2B ಸಾರಿಗೆ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಕನಿಷ್ಠ ವಿನ್ಯಾಸವನ್ನು ಹೊಂದಿದ್ದು, ನ್ಯಾಯಯುತ ಪ್ರಮಾಣದ ಲೋಡ್ ಅನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಫ್ಲಾಟ್ ಫ್ಲೋರ್ಬೋರ್ಡ್ ವಿವಿಧ ರೀತಿಯ ಸರಕುಗಳನ್ನು ಹಿಡಿದಿಡಲು ಸೂಕ್ತವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ರಾಕ್ ನಂತಹ ವಿಶೇಷ ಪರಿಕರಗಳ ಬಳಕೆಯೊಂದಿಗೆ ಸ್ಕೂಟರ್ ಹಿಂಭಾಗದಲ್ಲಿ ಸರಕುಗಳನ್ನು ಸಂಗ್ರಹಿಸಬಹುದು.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಇತರ ಪ್ರಮುಖ ಫೀಚರ್ ಗಳ ಬಗ್ಗೆ ಹೇಳುವುದಾದರೆ, Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್ 16 ಇಂಚಿನ ಮುಂಭಾಗದ ಚಕ್ರ ಹಾಗೂ 14 ಇಂಚಿನ ಹಿಂಭಾಗದ ವ್ಹೀಲ್ ಗಳನ್ನು ಹೊಂದಿದೆ. ಇವುಗಳಿಂದ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ವಿವಿಧ ರೀತಿಯ ನಗರ ಭೂಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಾಗುತ್ತದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ಖಚಿತಪಡಿಸಿಕೊಳ್ಳಲು ಸೀಟಿನ ಎತ್ತರವನ್ನು ಉದ್ದೇಶಪೂರ್ವಕವಾಗಿ 785 ಎಂ.ಎಂಗಳಷ್ಟು ಕಡಿಮೆ ಇರಿಸಲಾಗಿದೆ. ಸೀಟುಗಳ ಎತ್ತರವು ಸ್ಕೂಟರ್ ಅನ್ನು ಸರಕುಗಳೊಂದಿಗೆ ಲೋಡ್ ಮಾಡಿದಾಗಲೂ ಸಹ ಸವಾರರು ಅದರ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು ನೆರವು ನೀಡುತ್ತದೆ. ಇದರಿಂದ ಕುಳ್ಳಗಿರುವ ವ್ಯಕ್ತಿಗಳು ಸಹ ಸ್ಕೂಟರ್ ಬಳಸುವಾಗ ತಮ್ಮ ಪಾದಗಳನ್ನು ನೆಲದ ಮೇಲೆ ದೃಢವಾಗಿ ಇಡಲು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 2000 ವ್ಯಾ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟರ್ ನಗರ ಪ್ರದೇಶಗಳ ಸಂಚಾರಕ್ಕೆ ಸಾಕಾಗುತ್ತದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ 90 ಕಿ.ಮೀಗಳವರೆಗೆ ಚಲಿಸುತ್ತದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಗರಿಷ್ಠ ವೇಗವನ್ನು 45 ಕಿ.ಮೀಗಳಿಗೆ ಸೀಮಿತಗೊಳಿಸಿದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಸಸ್ಪೆಂಷನ್ ಗಳಿಗಾಗಿ ಈ ಸ್ಕೂಟರಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಸ್ವಿಂಗರ್ಮ್ ಗಳನ್ನು ನೀಡಲಾಗಿದೆ. ಈ ಸ್ಕೂಟರ್‌ನಲ್ಲಿ ಕಂಬೈನ್ದ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಅಳವಡಿಸಲಾಗಿದೆ. ಲೋಡ್ ಮಾಡಲಾದ ವಾಹಕವಾಗಿದ್ದರೂ ಸಹ, Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ಆಕರ್ಷಕವಾಗಿದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅತ್ಯಾಧುನಿಕ ನೋಟ ಹಾಗೂ ಅನುಭವವನ್ನು ನೀಡುವ ನಯವಾದ, ಏರೋಡೈನಾಮಿಕ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್'ನಲ್ಲಿ ಸ್ಲೀಕ್ ಆದ ಹೆಡ್‌ಲ್ಯಾಂಪ್‌, ವಿಶಿಷ್ಟವಾದ ಯು ಶೇಪಿನ ಡಿ‌ಆರ್‌ಎಲ್, ಆಕರ್ಷಕವಾದ ಹ್ಯಾಂಡಲ್‌ಬಾರ್‌, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಗಳನ್ನು ನೀಡಲಾಗಿದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಬರ್ಡ್ ಗ್ರೂಪ್‌ನ ಬರ್ಡ್ ಎಲೆಕ್ಟ್ರಿಕ್ ಮೊಬಿಲಿಟಿ ಭಾಗದ ಸಹಯೋಗದ ಭಾಗವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಮರುಬ್ರಾಂಡ್ ಮಾಡಲಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಬಿಡುಗಡೆಯಾಗಬಹುದಾದ ಮೊದಲ Vmoto ಎಲೆಕ್ಟ್ರಿಕ್ ವಾಹನವು SuperSoco CUx ಆಗಿರಬಹುದು. ಇದನ್ನು ಬರ್ಡ್ ES1+ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ವಾಹನದ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 50,000 ಗಳಾಗಿರಲಿದೆ.

ಅನಾವರಣವಾಯ್ತು Vmoto ಫ್ಲೀಟ್ ಕಾನ್ಸೆಪ್ಟ್ F01 ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುತ್ತಿವೆ. ಕೇಂದ್ರ ಸರ್ಕಾರವು ತನ್ನ ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತದೆ. ದೆಹಲಿ ಹಾಗೂ ಗುಜರಾತ್ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಾಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತವೆ.

Most Read Articles

Kannada
English summary
Vmoto unveils f01 concept electric scooter details
Story first published: Wednesday, December 8, 2021, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X