ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಆಫರ್

ಯಮಹಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಪ್ರಮುಖ ದ್ವಿಚಕ್ರ ವಾಹನಗಳ ಮಾರಾಟ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕೋವಿಡ್ ಪರಿಣಾಮ ಏರಿಳಿತವಾಗುವ ಹೊಸ ವಾಹನಗಳ ಮಾರಾಟ ಸ್ಥಿರತೆಗಾಗಿ ಗ್ರಾಹಕರನ್ನು ಸೆಳೆಯಲು ಪ್ರಮುಖ ಆಫರ್‌ಗಳನ್ನು ಘೋಷಣೆ ಮಾಡಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಅಗಸ್ಟ್‌ನಲ್ಲಿ ಫ್ಯಾಸಿನೋ 125 ಮತ್ತು ರೇ ಜೆಡ್ಆರ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿರುವ ಯಮಹಾ ಕಂಪನಿಯು ಲಕ್ಕಿ ಡ್ರಾ ಮೂಲಕ ರೂ. 1 ಲಕ್ಷ ಗೆಲ್ಲುವ ಅವಕಾಶ ನೀಡಿದ್ದು, ಅಗಸ್ಟ್‌ನಲ್ಲಿ ಸ್ಕೂಟರ್ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ರೂ.2,999 ಮೌಲ್ಯದ ಖಚಿತ ಉಡುಗೊರೆ ಪ್ರಕಟಿಸಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ನಿಗದಿತ ಅವಧಿಯಲ್ಲಿ ಫ್ಯಾಸಿನೋ ಮತ್ತು ರೇ ಜೆಡ್ಆರ್ ಖರೀದಿಸುವ ಗ್ರಾಹಕರಿಗೆ ರೂ. 20 ಸಾವಿರದಿಂದ ರೂ. 1 ಲಕ್ಷ ಮೌಲ್ಯದ ಲಕ್ಕಿ ಡ್ರಾ ಉಡುಗೊರೆ ದೊರಲಿಯಲಿದ್ದು, ಕುಸಿರುವುದು ವಾಹನ ಮಾರಾಟ ಸುಧಾರಣೆಗಾಗಿ ಯಮಹಾ ಕಂಪನಿಯು ಅತ್ಯುತ್ತಮ ಆಫರ್ ನೀಡುತ್ತಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಸ್ಥಾನ ಪಡೆದಿರುವ ಫ್ಯಾಸಿನೋ 125 ಮತ್ತು ರೇ ಜೆಡ್ಆರ್ 125 ಮಾದರಿಗಳು ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಸ್ಕೂಟರ್ ಮಾದರಿಗಳಾಗಿದ್ದು, ಯಮಹಾ ಹೊಸ ಸ್ಕೂಟರ್ ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

125ಸಿಸಿ ಸ್ಕೂಟರ್‌ಗಳ ವಿಭಾಗದಲ್ಲಿ ಯಮಹಾ ಸ್ಕೂಟರ್‌ಗಳು ಕೂಡಾ ಮುಂಚೂಣಿಯಲ್ಲಿದ್ದು, ಕಂಪನಿಯು ಇತ್ತೀಚೆಗೆ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಹೊಸ ಆಫರ್‌ಗಳಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಮಾದರಿಗಳ ಮೇಲೆ ಆಫರ್ ಘೋಷಣೆ ಮಾಡಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಫ್ಯಾಸಿನೋ ಹೈಬ್ರಿಡ್ ಮಾದರಿಯ ಬಿಡುಗಡೆಯ ನಂತರ ಶೀಘ್ರದಲ್ಲೇ ಯಮಹಾದ ಇನ್ನುಳಿದ ಸ್ಕೂಟರ್‌ಗಳು ಸಹ ಹೈಬ್ರಿಡ್ ತಂತ್ರಜ್ಞಾನ ಹೊಂದಿವೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

2020ರಲ್ಲಿ ಫ್ಯಾಸಿನೋ ಮಾದರಿಯನ್ನು 125ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ 2021ರ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರಿನ ಡ್ರಮ್ ವೆರಿಯೆಂಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 70 ಸಾವಿರಕ್ಕೆ ಮತ್ತು ಡಿಸ್ಕ್ ವೆರಿಯೆಂಟ್ ಬೆಲೆಯನ್ನು ರೂ. 76,530 ಗಳಿಗೆ ನಿಗದಿಪಡಿಸಲಾಗಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಹೊಸ ಫ್ಯಾಸಿನೋ 125 ಹೈಬ್ರಿಡ್ ಮಾದರಿಯಲ್ಲಿ ಜೋಡಣೆ ಮಾಡಲಾಗಿರುವ 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್‌ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ತಂತ್ರಜ್ಞಾನದ ಮೂಲಕ 8.2 ಬಿಎಚ್‌ಪಿ ಮತ್ತು 10.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಇದರಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಸ್ಕೂಟರ್ ನಿಲುಗಡೆಯಾಗಿ ಸ್ಟಾರ್ಟ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಪವರ್ ಅಸಿಸ್ಟ್ ಆಗಿ ಸಹಕರಿಸುವ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಆರಂಭದಲ್ಲಿನ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಎಂಜಿನ್ ಸ್ಟಾರ್ಟ್ ಮಾಡಿದ ನಂತರ ಕೆಲವು ಸೆಕೆಂಡುಗಳ ಕಾಲ ಕಾರ್ಯನಿರ್ವಹಿಸಿ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುವ ಹೈಬ್ರಿಡ್ ತಂತ್ರಜ್ಞಾನವು ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಪದೇ ಪದೇ ಎಂಜಿನ್ ಆನ್ ಆಫ್ ಮಾಡಿದಾಗ ಆಗುವ ಇಂಧನ ವ್ಯರ್ಥವನ್ನು ತಡೆದು ಇಂಧನ ದಕ್ಷತೆಯನ್ನು(ಪ್ರತಿ ಲೀಟರ್‌ಗೆ 55-60) ಕಿ.ಮೀ ಗೆ ಹೆಚ್ಚಿಸುತ್ತದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಮೂಲಕ ನಿಮಗೆ ಸೂಚಿಸಲಿದ್ದು, ಕೆಲವು ಸೆಕೆಂಡುಗಳ ನಂತರ ಹೈಬ್ರಿಡ್ ಎಂಜಿನ್ ಇಂಡಿಕೇಟರ್ ಲೈಟ್ ಆಫ್ ಆಗುತ್ತದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಇನ್ನು 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆ ಫ್ಯಾಸಿನೋ 125 ಮಾದರಿಗೆ ಸಲ್ಲಲಿದ್ದು, ಜೊತೆಗೆ ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ ಎಂಜಿನ್ ಕಟ್ ಆಫ್ ಸ್ವಿಚ್ ತಂತ್ರಜ್ಞಾನವು ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಸ್ಕೂಟರ್ ಚಾಲನೆ ಮಾಡಲು ಸಾಧ್ಯವಿಲ್ಲರುವುದು ಪ್ರಮುಖ ಫೀಚರ್ ಎನ್ನಬಹುದು.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಹಾಗೆಯೇ 2021ರ ಫ್ಯಾಸಿನೋ 125 ಮಾದರಿಯಲ್ಲಿ ಯಮಹಾ ಕಂಪನಿಯು ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಜೋಡಣೆ ಮಾಡಿದ್ದು, 190 ಎಂಎಂ ಯುಬಿಎಸ್ ಫ್ರಂಟ್ ಡಿಸ್ಕ್ ಬ್ರೇಕ್ ಸಿಸ್ಟಂ, 110 ಎಂಎಂ ಟೈರ್ ಜೋಡಣೆ ಮಾಡಲಾಗಿದೆ.

ಯಮಹಾ ಫ್ಯಾಸಿನೋ ಮತ್ತು ರೇ ಜೆಡ್ಆರ್ 125 ಸ್ಕೂಟರ್ ಮೇಲೆ ಆಫರ್

ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಯಮಹಾ ಮೋಟಾರ್‌ಸೈಕಲ್ ಕಂಪನಿಯು ಕನೆಕ್ಟ್ ಎಕ್ಸ್ ಕನೆಕ್ಟ್ ಫೀಚರ್ಸ್ ನೀಡಿದ್ದು, ಹೊಸ ಕನೆಕ್ಟ್ ಫೀಚರ್ಸ್‌ನಲ್ಲಿ ಬೈಕ್ ಸವಾರರು ಕಂಪನಿಯೊಂದಿಗೆ ತುರ್ತು ಸೇವೆಗಳಿಗಾಗಿ ಸಂಪರ್ಕಿಸಿ ವೆಹಿಕಲ್ ಲೋಕೆಟ್, ರೈಡಿಂಗ್ ಹಿಸ್ಟರಿ, ಪಾರ್ಕಿಂಗ್ ರೆಕಾರ್ಡ್ ಸೇರಿದಂತೆ ಹಲವಾರು ಸ್ಮಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

Most Read Articles

Kannada
Read more on ಯಮಹಾ yamaha
English summary
Yamaha announces special festive offers on fascino ray zr 125 details.
Story first published: Saturday, August 14, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X