ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಕೋವಿಡ್ ಸೋಂಕಿತರ ಚಿಕಿತ್ಸೆ ನೆರವಾಗುತ್ತಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಕೋವಿಡ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ. ಕೈ ತಪ್ಪಿರುವ ಕರೋನಾ ನಿಯಂತ್ರಣವನ್ನು ಹತೋಟಿ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈದ್ಯಕೀಯ ಸೇವೆಗಳನ್ನು ತೀವ್ರಗೊಳಿಸುತ್ತಿದ್ದು, ಸರ್ಕಾರದ ಪ್ರಯತ್ನಕ್ಕೆ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಕೈಜೋಡಿಸಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ವಾಹನ ಉತ್ಪಾದನೆ ಸ್ಥಗಿತವಾಗಿರುವುದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಬಾಡಿಗೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಯುಲು ಕೂಡಾ ಸೋಂಕಿತರ ಚಿಕಿತ್ಸೆ ನೆರವು ನೀಡಲು ಹೊಸ ಯೋಜನೆ ಜಾರಿಗೊಳಿಸಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸರ್ಕಾರಗಳ ಪ್ರಯತ್ನಕ್ಕೆ ಪೂರಕವಾಗಿ ಯುಲು ಮತ್ತು ಪೂಮಾ ಇಂಡಿಯಾ ಕಂಪನಿಗಳು ಜೊತೆಗೂಡಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳು ಆಕ್ಸಿಜನ್ ಸಿಲಿಂಡರ್‌ಗೆ ಪರ್ಯಾಯವಾದ ಸಾಧನವಾಗಿದ್ದು, ದುಬಾರಿ ಬೆಲೆಯ ಸಾಧನಗಳನ್ನು ಸಂಗ್ರಹ ಮಾಡಿಕೊಂಡಿರುವ ಯುಲು ಮತ್ತು ಪೂಮಾ ಇಂಡಿಯಾ ಕಂಪನಿಯು ಅಗತ್ಯವಿರುವ ಸೋಂಕಿತರ ಮನೆ ಬಾಗಿಲಿಗೆ ಬಂದು ಸೇವೆ ನೀಡಲು ನಿರ್ಧರಿಸಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಯುಲು ಮತ್ತು ಪೂಮಾ ಇಂಡಿಯಾ ಕಂಪನಿಗಳು 100 ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳ ಸಂಗ್ರಹ ಹೊಂದಿದ್ದು, ಯುಲು ಕಂಪನಿಯ ಅಧಿಕೃತ ವೆಬ್‌ಸೈಟ್ 'ಪ್ರಾಣವಾಯು' ಮೂಲಕ ನೋಂದಣಿ ಮಾಡಿಕೊಂಡಲ್ಲಿ ಯುಲು ಕಂಪನಿಯ ಕರೋನಾ ವಾರಿರ್ಯಸ್‌ಗಳಿಗೆ ಅಗತ್ಯವಿರುವ ಕಡೆಗಳಲ್ಲಿ ಒದಗಿಸಲಿದ್ದಾರೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಯುಲು ಕಂಪನಿಯು ಕೋವಿಡ್ ಪರಿಹಾರ ಕ್ರಮವನ್ನು ಆರಂಭಿಕ ಹಂತವಾಗಿ ಬೆಂಗಳೂರು ಮತ್ತು ಮುಂಬೈನಲ್ಲಿ ಆರಂಭಿಸಿದ್ದು, ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಅವಶ್ಯವಿರುವಾಗ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಬುಕ್ ಮಾಡಬಹುದಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಸದ್ಯ ಮಾರುಕಟ್ಟೆಯಲ್ಲಿ ರೂ.80 ಸಾವಿರದಿಂದ ರೂ.1 ಲಕ್ಷದ ತನಕ ಮಾರಾಟವಾಗುತ್ತಿರುವ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಎಲ್ಲಿರಿಗೂ ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಿರುವಾಗ ಯುಲು ಕಂಪನಿಯು ಹೊಸ ಯೋಜನೆ ಆರಂಭಿಸಿರುವುದು ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳ ಸೇವೆಗೆ 'ಪ್ರಾಣವಾಯು' ಮೂಲಕ ನೋಂದಣಿ ಮಾಡಿಕೊಳ್ಳಬೇಕಿದ್ದು, ಬಳಕೆದಾರರಿಂದ ಸುರಕ್ಷತೆಯ ದೃಷ್ಠಿಯಿಂದ ಕಂಪನಿಯು ರೂ. 5 ಸಾವಿರ ಮುಂಗಡ ಪಾವತಿ ನಿಗದಿಪಡಿಸಿದೆ. ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರದ ಸೇವೆ ಮುಗಿದ ನಂತರ ಮರಳಿ ನೀಡುವಾಗ ಮುಂಗಡ ಪಾವತಿ ವಾಪಸ್ ನೀಡಲಿದ್ದು, ಅಗತ್ಯವಿರುವ ಬೆಂಗಳೂರಿನ ಯಾವುದೇ ಸ್ಥಳದಿಂದಲೂ ಬುಕ್ಕಿಂಗ್ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ಒದಗಿಸಲಿದೆ ಯುಲು

ಇನ್ನು ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕವಾಗಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

Most Read Articles

Kannada
English summary
Yulu To Provide Free Oxygen Concentrators For Covid-19 Patients In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X