ಶೂಟಿಂಗ್ ವೇಳೆ ದುಬಾರಿ ಬೈಕ್ ಸಿಕ್ಕರೆ ಹೀಗಾ ಮಾಡೋದು...ನಟ ಪವನ್ ಕಲ್ಯಾಣ್ ಹಿಂದೆ ಬಿದ್ದ ಅಭಿಮಾನಿಗಳು

ತೆಲುಗು ಸಿನಿಮಾ ರಂಗದಲ್ಲಿ ಪವರ್‌ ಸ್ಟಾರ್ ಎಂದು ಖ್ಯಾತಿ ಗಳಿಸಿರುವ 'ಪವನ್ ಕಲ್ಯಾಣ್' ಅವರಿಗೆ ತಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಹಲವೆಡೆ ಅಭಿಮಾನಿಗಳಿದ್ದಾರೆ. ಇನ್ನು ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರೆಂಬುದು ಎಲ್ಲರಿಗೂ ಗೊತ್ತು. ಹಾಗೆಯೇ ಜನಸೇನಾ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಅವರು, ಇತ್ತೀಚೆಗೆ ಭೀಮ್ಲಾ ನಾಯಕ್ ಚಿತ್ರದ ಯಶಸ್ಸಿನ ನಂತರ ಹರಿಹರ ವೀರಮಲ್ಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ ದುಬಾರಿ ಬೈಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರಲ್ಲಿ ಬಿಎಂಡಬ್ಲ್ಯು ಕಂಪನಿಯ ದುಬಾರಿ ಬೆಲೆಯ ಆರ್ 1250 ಜಿಎಸ್ ಮಾದರಿಯ ಬೈಕ್ ಅನ್ನು ಪವನ್ ಓಡಿಸಿದ್ದಾರೆ.

ವಾಸ್ತವವಾಗಿ, ಪವನ್ ಕಲ್ಯಾಣ್ ಗನ್ ಮತ್ತು ಬೈಕ್‌ಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಈ ಹಿಂದೆಯೂ ಶೂಟಿಂಗ್ ಸ್ಪಾಟ್‌ಗಳಲ್ಲಿ ಬೈಕ್ ಸಿಕ್ಕರೆ ರೌಂಡ್‌ ಹಾಕುತ್ತಾರೆ. ಅಂತಯೇ ಅವರಿಗೆ ಇದೀಗ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಸಿಕ್ಕಿದೆ. ಇದರ ಬೆಲೆ ರೂ. 24 ಲಕ್ಷ (ಎಕ್ಸ್‌ ಶೋರೂಂ). ಇದು ನೋಡಲು ತುಂಬಾ ಐಷಾರಾಮಿಯಾಗಿದೆ. ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಉತ್ತಮ ವಿನ್ಯಾಸವು ಬೈಕ್ ಸವಾರರಿಗೆ ಐಷಾರಾಮಿ ಸವಾರಿ ಅನುಭವವನ್ನು ನೀಡುತ್ತದೆ.

ರಾಮೋಜಿ ಫಿಲಂ ಸಿಟಿಯಲ್ಲಿ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ಕ್ರಿಶ್ ನಿರ್ದೇಶನದಲ್ಲಿ ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. 2023ರ ಮಾರ್ಚ್ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ವರದಿಗಳು ತಿಳಿಸಿವೆ. 900 ಕಲಾವಿದರಿರುವ ಈ ಸಿನಿಮಾದ ಶೂಟಿಂಗ್ ಕೂಡ ಅತ್ಯಂತ ವೇಗವಾಗಿ ನಡೆಯುತ್ತಿದೆಯಂತೆ. ಒಂದೆಡೆ ಸಿನಿಮಾ ಮಾಡುತ್ತಲೇ ಮತ್ತೊಂದೆಡೆ ರಾಜಕೀಯದಲ್ಲಿ ಪವನ್ ಕಲ್ಯಾಣ್ ತೊಡಗಿಸಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಸವಾರಿ ಮಾಡಿದ BMW R 1250 GS ಗೆ ಸಂಬಂಧಿಸಿದಂತೆ, ಇದು 1,254 cc ಎರಡು ಸಿಲಿಂಡರ್, ಬಾಕ್ಸರ್ ಎಂಜಿನ್ ಅನ್ನು ಪಡೆಯುತ್ತದೆ. ಇದು 7,750 rpm ನಲ್ಲಿ 134 bhp ಪವರ್ ಮತ್ತು 6,250 rpm ನಲ್ಲಿ 143 Nm ಟಾರ್ಕ್ ಅನ್ನು ಹೊರ ಹಾಕುತ್ತದೆ. ಇದರ ಇಂಧನ ಟ್ಯಾಂಕ್ ಸಾಮರ್ಥ್ಯವು 20 ಲೀಟರ್ ವರೆಗೆ ಇರುತ್ತದೆ. ಆದ್ದರಿಂದ ದೂರದ ಪ್ರಯಾಣಕ್ಕೂ ಇದು ತುಂಬಾ ಸೂಕ್ತವಾಗಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ, ಇದು ಅಸ್ಸಿಮೆಟ್ರಿಕ್ ಹೆಡ್‌ಲೈಟ್, ಹೊಂದಾಣಿಕೆಯ ವಿಂಡ್‌ಸ್ಕ್ರೀನ್, ಕೀಲೆಸ್ ರೈಡ್, ಬ್ಲೂಟೂತ್ ಸಕ್ರಿಯಗೊಳಿಸಿದ TFT ಕಲರ್ ಡಿಸ್ಪ್ಲೇ, 12 ವೋಲ್ಟ್ ಸಾಕೆಟ್ ಮತ್ತು USB ಚಾರ್ಜಿಂಗ್ ಇಂಟರ್ಫೇಸ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದು ಇಕೋ, ರೋಡ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಆದ್ದರಿಂದ ಈ ಬೈಕ್ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಇನ್ನು ಆಂಧ್ರಪ್ರದೇಶದಲ್ಲಿ ರಾಜಕೀಯವು ಕಾವೇರತೊಡಗಿದೆ. ಚುನಾವಣೆಗೆ ಇನ್ನು 18 ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ತೆಲುಗುದೇಶಂ, ಜನಸೇನಾ, ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿವೆ. ಆದರೆ ಜನಸೇನೆಯ ಪ್ರಯತ್ನಗಳು ಹೆಚ್ಚು ತೀವ್ರವಾಗಿವೆ. ಪವನ್ ಕಲ್ಯಾಣ್ ಅವರ ಪ್ರಚಾರಕ್ಕಾಗಿ ಪ್ರಚಾರ ರಥವೂ ಸಿದ್ಧವಾಗುತ್ತಿದೆ. ಈ ವಾಹನದಲ್ಲಿ ಪವನ್ ಕಲ್ಯಾಣ್ ಪ್ರಚಾರ ಆರಂಭಿಸಲಿದ್ದಾರೆ. ಇದಕ್ಕೂ ಮುನ್ನ ತಮ್ಮ ಸಿನಿಮಾಗಳನ್ನು ಮಾಡಿ ಮುಗಿಸುವ ಪ್ರಯತ್ನದಲ್ಲಿದ್ದಾರೆ.

ಇತ್ತೀಚೆಗಷ್ಟೇ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಗುಂಟೂರು ಜಿಲ್ಲೆಯ ಇಪ್ಪತಂ ಗ್ರಾಮಕ್ಕೆ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಪವನ್ ಕಲ್ಯಾಣ್ ಗ್ರಾಮಕ್ಕೆ ಬರುತ್ತಿರುವುದನ್ನು ಮೊದಲೇ ತಿಳಿದ ಪೊಲೀಸರು ಅವರು ಪ್ರಯಾಣಿಸುತ್ತಿದ್ದ ಕಾರುಗಳನ್ನು ತಡೆದಿದ್ದಾರೆ. ಪವನ್ ಕಲ್ಯಾಣ್ ಭೇಟಿಗೆ ಅವಕಾಶ ನೀಡಲಿಲ್ಲ. ಪೊಲೀಸರು ಪವನ್‌ ಅವರನ್ನು ಅಲ್ಲಿಂದ ತೆರಳುವಂತೆ ಕೇಳಿಕೊಂಡರು. ಆದರೂ ಪವನ್ ಕಲ್ಯಾಣ್ ಅವರ ಕಾರುಗಳನ್ನು ಅಲ್ಲಿಯೇ ಬಿಟ್ಟು ಕಾಲ್ನಡಿಗೆಯಲ್ಲೇ ತೆರಳಿದ್ದರು.

Most Read Articles

Kannada
English summary
Actor pawan kalyan rides on a bike while shooting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X