ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಭಾರತದಲ್ಲಿ ಇವಿ ವಾಹನ ಮಾರಾಟವು ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ವಾಹನ ಉತ್ಪಾದನಾ ಕಂಪನಿಗಳು ಇವಿ ವಾಹನ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಿವಿಧ ಮಾದರಿಯ ಇವಿ ವಾಹನಗಳನ್ನು ಉತ್ಪಾದನೆ ಕೈಗೊಳ್ಳುತ್ತಿವೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಆಟೋ ಮಾರುಕಟ್ಟೆಯಲ್ಲಿ ಹಲವಾರು ಇವಿ ವಾಹನ ಮಾದರಿಗಳು ಬೆಲೆ ಆಧರಿಸಿ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ. ಪ್ರೀಮಿಯಂ ಮಾದರಿಗಳು ಹೆಚ್ಚಿನ ಮೈಲೇಜ್ ಜೊತೆ ತುಸು ದುಬಾರಿಯಾಗಿರಲಿದ್ದರೆ ಬಜೆಟ್ ಬೆಲೆಯ ಇವಿ ವಾಹನಗಳು ಕೂಡಾ ಬೆಲೆ ಆಧರಿಸಿ ಉತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಇವಿ ಸ್ಕೂಟರ್ ವಿಭಾಗದಲ್ಲಿ ಸದ್ಯ ಪ್ರೀಮಿಯಂ ಮತ್ತು ಬಜೆಟ್ ಎರಡು ಮಾದರಿಯ ಹಲವಾರು ಮಾದರಿಗಳು ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಲ್ಲಿರುವ ಮುಂಚೂಣಿ ಬಜೆಟ್ ಇವಿ ಸ್ಕೂಟರ್‌ಗಳ ಬೆಲೆ ಮತ್ತು ಬ್ಯಾಟರಿ ಪ್ಯಾಕ್ ಮಾಹಿತಿ ಇಲ್ಲಿದೆ ನೋಡಿ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

1. ಅವಾನ್ ಇ ಸ್ಕೂಟರ್

ಅವಾನ್ ಎಲೆಕ್ಟ್ರಿಕ್ ನಿರ್ಮಾಣದ ಅವಾನ್-ಇ ಎಲೆಕ್ಟ್ರಿಕ್ ಸ್ಕೂಟರ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 45,000 ಬೆಲೆ ಹೊಂದಿದ್ದು, ಈ ಸ್ಕೂಟರ್ 215ವೊಲ್ಟ್ BLDC ಮೋಟಾರ್ ಹೊಂದಿದೆ. ಹಾಗೆಯೇ ಈ ಎಲೆಕ್ಟ್ರಿಕ್ ಸ್ಕೂಟರ್ 48V/20Ah ಬ್ಯಾಟರಿ ಜೋಡಿಸಲಾಗಿದ್ದು, ಈ ಬ್ಯಾಟರಿಯನ್ನು ಚಾರ್ಜ್ ಮಾಡಲು 6-8 ಗಂಟೆ ತೆಗೆದುಕೊಳ್ಳುತ್ತದೆ

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಚಾರ್ಜ್‌ಗೆ ಗರಿಷ್ಠ 65 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಗಂಟೆಗೆ ಗರಿಷ್ಠ 24 ಕಿಮೀ ವೇಗವನ್ನು ಸಾಧಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಹೀಗಾಗಿ ಇದು ದೂರದ ಪ್ರಯಾಣಕ್ಕೆ ಅನುಕೂಲಕವಲ್ಲವಾದರೂ ನಗರಪ್ರದೇಶದೊಳಗಿನ ಸಂಚಾರಕ್ಕೆ ಸೂಕ್ತವಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

2. ಬೌನ್ಸ್ ಇನ್ಪಿನಿಟಿ ಇ1

ನಮ್ಮ ಬೆಂಗಳೂರಿನ ಬೌನ್ಸ್ ಕಂಪನಿಯು ಹೊಸ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಬೌನ್ಸ್ ಇನ್ಫಿನಿಟಿ E1 ಬ್ಯಾಟರಿ ಪ್ಯಾಕ್ ಇಲ್ಲದೆಯೂ ಖರೀದಿಗೆ ಲಭ್ಯವಿದ್ದು, ಇದರ ಬೆಲೆ ದೆಹಲಿ ಎಕ್ಸ್‌ಶೋರೂ ಪ್ರಕಾರ ರೂ. 45,099 ಗಳಾಗುತ್ತದೆ. ಹಾಗೆಯೇ ಇನ್ಫಿನಿಟಿ ಇ1 ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿರುವ ಮಾದರಿಯು ರೂ. 68,999 ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಈ ಇ-ಸ್ಕೂಟರ್‌ನಲ್ಲಿ 1500ವೊಲ್ಟ್ BLDC ಎಲೆಕ್ಟ್ರಿಕ್ ಮೋಟರ್ ಜೋಡಿಸಲಾಗಿದ್ದು, 48V/39Ah ಬ್ಯಾಟರಿಯನ್ನು ರೀಚಾರ್ಜ್ ಮಾಡಲು ಸುಮಾರು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ಫಿನಿಟಿ E1 ನಲ್ಲಿನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಮೊಬೈಲ್ ಸಂಪರ್ಕ ಮತ್ತು ಕಾಂಬಿ ಬ್ರೇಕ್ ಸಿಸ್ಟಮ್ ಹೊಂದಿದ್ದು, ಬ್ಯಾಟರಿ ರಹಿತ ಮಾದರಿಯನ್ನು ಖರೀದಿಸುವ ಗ್ರಾಹಕರು ಬೌನ್ಸ್ ಬ್ಯಾಟರಿ ವಿನಿಯಮ ಕೇಂದ್ರಗಳಲ್ಲಿ ಚಂದಾದಾರಿಕೆ ಮೂಲಕ ಬ್ಯಾಟರಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

3. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್

ಬಜೆಟ್ ಇವಿ ಸ್ಕೂಟರ್‌ಗಳಲ್ಲಿ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಕೂಡಾ ಒಂದಾಗಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 46,640 ರಿಂದ ರೂ. 59,640 ತನಕ ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಫ್ಲ್ಯಾಶ್ ಇ-ಸ್ಕೂಟರ್ LX VRLA ಮತ್ತು Flash LX ಎನ್ನುವ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಫ್ಲ್ಯಾಶ್ ಇವಿ ಸ್ಕೂಟರ್ ಗಂಟೆಗೆ 25 ಕಿ.ಮೀ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 85 ಕಿ. ಮೀ ಮೈಲೇಜ್ ವ್ಯಾಪ್ತಿಯನ್ನು ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

4. ಅವನ್ ಟ್ರೆಂಡ್

ಅವನ್ ಮೋಟಾರ್ಸ್ ಕಂಪನಿಯು ಟ್ರೆಂಡ್ ಇ ಇವಿ ಸ್ಕೂಟರ್ ಮಾದರಿಯನ್ನು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಸ್ಕೂಟರ್ ಆರಂಭಿಕವಾಗಿ ರೂ. 56,900 ರಿಂದ ಟಾಪ್ ಎಂಡ್ ಮಾದರಿಯು ರೂ. 81,269 ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಹೊಸ ಸ್ಕೂಟರ್ ಸಿಂಗಲ್-ಬ್ಯಾಟರಿ ಪ್ಯಾಕ್ ಮತ್ತು ಡಬಲ್-ಬ್ಯಾಟರಿ ಪ್ಯಾಕ್ ಎಂಬ ಎರಡು ರೂಪಾಂತರಗಳನ್ನು ಹೊಂದಿದ್ದು, ಸಿಂಗಲ್-ಬ್ಯಾಟರಿ ಚಾಲಿತ ರೂಪಾಂತರವು ಪ್ರತಿ ಚಾರ್ಜ್‌ಗೆ 60 ಕಿಮೀ ವ್ಯಾಪ್ತಿಯನ್ನು ನೀಡಿದರೆ ಡಬಲ್-ಬ್ಯಾಟರಿ ಚಾಲಿತ ರೂಪಾಂತರವು 110 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಎರಡೂ ರೂಪಾಂತರಗಳ ಗರಿಷ್ಠ ವೇಗ ಗಂಟೆಗೆ 45 ಕಿಮೀ ಗಳಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

5. ಇವೆ ಅಹವಾ

ಇವೆ(EeVe) ಕಂಪನಿಯು ಅಹವಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೇವಲ ಒಂದೇ ಒಂದು ರೂಪಾಂತರದಲ್ಲಿ ಲಭ್ಯವಿದ್ದು, ಇದರ ಬೆಲೆ ಎಕ್ಸ್‌ಶೋರೂಂ ಪ್ರಕಾರ ರೂ. 62,499 ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಇ-ಸ್ಕೂಟರ್‌ನಲ್ಲಿ ಸ್ಮಾರ್ಟ್‌ಫೋನ್ ಸಂಪರ್ಕ, ಎಲ್‌ಇಡಿ ಲೈಟಿಂಗ್, ಜಿಯೋ-ಟ್ರ್ಯಾಕಿಂಗ್ ಮತ್ತು ಜಿಯೋ ಫೆನ್ಸಿಂಗ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದ್ದು, ಹೊಸ ಸ್ಕೂಟರ್‌ನಲ್ಲಿ 60V/27 Ah ಬ್ಯಾಟರಿಯನ್ನು ಚಾರ್ಜ್ ಮಾಡಲು 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Most Read Articles

Kannada
English summary
Affordable electric scooters in india price features details
Story first published: Friday, March 11, 2022, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X