ಬಜಾಜ್ ಪಲ್ಸರ್ P150 Vs ಬಜಾಜ್ ಪಲ್ಸರ್ N160:ಯಾವುದು ಬೆಸ್ಟ್?

ಯುವ ಜನರಿಗೆ ಬೈಕ್‌ಗಳೆಂದರೆ ತುಂಬಾ ಕ್ರೇಜ್. ಅದರಲ್ಲೂ ಬಜಾಜ್ ಕಂಪನಿ ವಾಹನಗಳೆಂದರೆ ಭಾರತೀಯರಿಗೆ ತುಂಬಾ ಅಚ್ಚುಮೆಚ್ಚು. 150ಸಿಸಿ ಹಾಗೂ 160ಸಿಸಿ ಪಲ್ಸರ್ ಬೈಕ್‌ಗಳು ಅವುಗಳ ಕಾರ್ಯಕ್ಷಮತೆಯಿಂದ ಯಾವಾಗಲು ಇಷ್ಟವಾಗುತ್ತವೆ.

'ಬಜಾಜ್' ತನ್ನ ಬೈಕ್‌ಗಳ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಅನೇಕ ಫೀಚರ್ ಒಳಗೊಂಡಂತೆ ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ನೀಡುತ್ತಿದ್ದು, ಭಾರತದಲ್ಲಿ 150ಸಿಸಿ, 160ಸಿಸಿ ವಿಭಾಗದ ಪಲ್ಸರ್ ಬೈಕ್‌ಗಳಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಇಲ್ಲಿ ಪಲ್ಸರ್ P150, ಪಲ್ಸರ್ N160ರಲ್ಲಿ ಯಾವುದು ಬೆಸ್ಟ್ ತಿಳಿಯೋಣ.

ಬಜಾಜ್ ಪಲ್ಸರ್ P150 Vs ಬಜಾಜ್ ಪಲ್ಸರ್ N160:ಯಾವುದು ಬೆಸ್ಟ್?

ಡಿಸೈನ್

ಪ್ರತಿಯೊಂದು ಬೈಕ್ ತನ್ನದೇ ಡಿಸೈನ್ ಮೂಲಕ ಸವಾರರನ್ನು ಆಕರ್ಷಿಸುತ್ತದೆ. ಬಜಾಜ್ ಪಲ್ಸರ್ P150 ಮತ್ತು ಪಲ್ಸರ್ N160 ಎರಡು ಬೈಕ್‌ಗಳನ್ನು ಆತ್ಯಾಧುನಿಕವಾಗಿ ವಿನ್ಯಾಸ ಮಾಡಲಾಗಿದೆ. ಪಲ್ಸರ್ P150 ಅದರ ಶಾರ್ಪ್ ಸ್ಟೈಲಿಂಗ್, ಅಂಡರ್-ಬೆಲ್ಲಿ ಎಕ್ಸಾಸ್ಟ್, ಮೊನೊ-ಶಾಕ್ ರಿಯರ್ ಸಸ್ಪೆನ್ಶನ್‌ನೊಂದಿಗೆ ಸಾಕಷ್ಟು ಇಂಟ್ರೆಸ್ಟಿಂಗ್ ಹಾಗೂ ಸ್ಪೋರ್ಟಿಯಾಗಿ ಕಾಣುತ್ತದೆ. ಅಲ್ಲದೆ, ಹಲವಾರು ಈ ಬೈಕ್ ಅನ್ನೇ ಹೆಚ್ಚು ಲೈಕ್ ಮಾಡುತ್ತಾರೆ. ಇದು ಪಲ್ಸರ್ N160 ಅನ್ನು ರೀತಿ ಕಾಣುತ್ತದೆ. ಆದರೆ, ಸ್ವಲ್ಪ ಸ್ಪೋರ್ಟಿಯರ್ ಆಗಿದೆ.

ಗ್ರಾಹಕರು, 150ಸಿಸಿ, 160ಸಿಸಿಯ ಯಾವ ಬೈಕ್ ಖರೀದಿಸಬೇಕೆಂಬುದನ್ನು ಅದರ ವೈಶಿಷ್ಟ್ಯಗಳ ಮೇಲೆ ನಿರ್ಧರಿಸಬಹುದು. ಪಲ್ಸರ್ N160ನಲ್ಲಿ ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿರುತ್ತದೆ. ಆದರೆ, ಇದು ಆಯ್ಕೆ ಮಾತ್ರ. ಈ ಬೈಕಿನಲ್ಲಿ ಅಂಡರ್‌ಬೆಲ್ಲಿ ಎಕ್ಸಾಸ್ಟ್, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸ್ಪ್ಲಿಟ್ ಸೀಟ್‌ಗಳು, ಗೇರ್ ಪೊಸಿಷನ್ ಇಂಡಿಕೇಟರ್, ಕ್ಲಾಕ್, ಫ್ಯುಯೆಲ್ ಎಕಾನಮಿ ಮೀಟರ್, ಡಿಸ್ಟೆನ್ಸ್ ಟು ಎಂಪ್ಟಿ ಇರುತ್ತದೆ. ಹೊಸ ಬೈಕ್ ಆಗಿದ್ದರೂ ಪಲ್ಸರ್ P150ಯಲ್ಲಿ ಡ್ಯುಯಲ್-ಚಾನೆಲ್ ABS ಹೊರತುಪಡಿಸಿ, ಪಲ್ಸರ್ N160 ನೀಡುವ ಎಲ್ಲ ಆಯ್ಕೆಗಳನ್ನು ಹೊಂದಿರುತ್ತದೆ.

ಪವರ್‌ಟ್ರೇನ್

ಬಜಾಜ್ ಪಲ್ಸರ್ N160 ಸ್ಪೋರ್ಟಿಯರ್ ಬೈಕ್ ಆಗಿದೆ. ಅದು 164.82ಸಿಸಿ, ಸಿಂಗಲ್-ಸಿಲಿಂಡರ್, SOHC ಎಂಜಿನ್ ಹೊಂದಿದ್ದು, 8,750rpmನಲ್ಲಿ 15.7bhp ಪವರ್ ಮತ್ತು 6,750rpmನಲ್ಲಿ 14.6Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ತನ್ನ ಶಕ್ತಿಯನ್ನು 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಹಿಂದಿನ ಚಕ್ರಗಳಿಗೆ ಕಳುಹಿಸುತ್ತದೆ. ಬಜಾಜ್ ಪಲ್ಸರ್ P150 ಸಹ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಇದರಲ್ಲಿರುವ 149.68ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ 8,500rpmನಲ್ಲಿ 14.3bhp ಪವರ್ ಮತ್ತು 6,000rpmನಲ್ಲಿ 13.5Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಬ್ರೇಕ್‌ಗಳು

ಬಜಾಜ್ N160 ಡ್ಯುಯಲ್-ಚಾನೆಲ್ ABS ರೂಪಾಂತರದಲ್ಲಿ ದೊಡ್ಡದಾದ 300ಎಂಎಂ ಫ್ರಂಟ್ ಡಿಸ್ಕ್ ಅನ್ನು ಹೊಂದಿದೆ. ಆದರೆ, ಸಿಂಗಲ್-ಚಾನೆಲ್ ABS ರೂಪಾಂತರವು ಚಿಕ್ಕದಾದ 280ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್‌ನೊಂದಿಗೆ ಸಿಗಲಿದೆ. ಎರಡು ರೂಪಾಂತರಗಳಲ್ಲಿನ ಹಿಂಬದಿಯ ಡಿಸ್ಕ್ ಬ್ರೇಕ್‌ಗಳು ​(230ಎಂಎಂ) ​ಒಂದೇ ರೀತಿಯಾಗಿವೆ. ಹೊಸದಾಗಿ ಬಿಡುಗಡೆಯಾಗಿರುವ ಪಲ್ಸರ್ P150 ಮುಂಭಾಗದಲ್ಲಿ ಚಿಕ್ಕದಾದ 260ಎಂಎಂ ಡಿಸ್ಕ್ ಬ್ರೇಕ್‌ ಇದೆ. ಆದರೆ, ಹಿಂಭಾಗವು 230ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. P150 ಬೈಕ್ ಮೂಲ ಮಾದರಿ 130ಎಂಎಂ ಡ್ರಮ್ ಬ್ರೇಕ್ ಸೆಟಪ್ ಹೊಂದಿದೆ.

ಬೆಲೆ

ಬೆಲೆ ವಿಚಾರಕ್ಕೆ ಬಂದರೆ ಬಜಾಜ್ ಬೈಕ್ ಗ್ರಾಹಕರಿಗೆ ಕೈಗೆಟುಕುತ್ತವೆ ಎಂದೇ ಹೇಳಬಹುದು. ಭಾರತೀಯ ಎಕ್ಸ್ ಶೋರೂಂ ಪ್ರಕಾರ, ಹೊಸ ಬಜಾಜ್ ಪಲ್ಸರ್ P150 ಬೆಲೆ 1.17 ಲಕ್ಷ ರೂಪಾಯಿ ಆರಂಭಿಕ ಬೆಲೆಯೊಂದಿಗೆ ಹೆಚ್ಚು ಕೈಗೆಟುಕುವ ಬೈಕ್ ಆಗಿದೆ. ಆಗಿದೆ. ಮತ್ತೊಂದೆಡೆ, ಇಷ್ಟೇ ಆಕರ್ಷಕ ಲುಕ್ ಹೊಂದಿರುವ ಬಜಾಜ್ ಪಲ್ಸರ್ N160 ಬೈಕ್ ಬೆಲೆಗಳು 1.23 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತವೆ. ನಿಮ್ಮ ಆಯ್ಕೆಯ ಬೈಕ್ ಅನ್ನು ಅದರ ವೈಶಿಷ್ಟಗಳ ಆಧಾರದ ಮೇಲೆ ಖರೀದಿ ಮಾಡಬಹುದಾಗಿದೆ.

ಬಜಾಜ್ ಪಲ್ಸರ್ P150 ಮತ್ತು ಪಲ್ಸರ್ N160 ಬಗ್ಗೆ ಎರಡು ಆಕರ್ಷಕವಾಗಿ ಕಾಣುವ ಬೈಕ್‌ಗಳಾಗಿವೆ. ಆದಾಗ್ಯೂ, N160 ಸ್ಪೋರ್ಟಿಯರ್ ರೈಡರ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಆದರೆ, ಹೊಸದಾಗಿ ಬಿಡುಗಡೆಯಾಗಿರುವ ಪಲ್ಸರ್ P150 ಹೆಚ್ಚು ಪ್ರಬುದ್ಧ ರೈಡರ್‌ಗಳನ್ನು ಆಕರ್ಷಿಸುತ್ತದೆ. ಇದಲ್ಲದೆ, ಹೊಸ ಬಜಾಜ್ ಪಲ್ಸರ್ P150 ಅನ್ನು ಮುಂಬರುವ ದಿನಗಳಲ್ಲಿ ಕೆಲವು ಬದಲಾವಣೆ ಮಾಡಿ ಮಾರುಕಟ್ಟೆಗೆ ಲಾಂಚ್ ಮಾಡುವ ಸಾಧ್ಯತೆ ಇದೆ.

Most Read Articles

Kannada
English summary
Bajaj pulsar p 150 vs bajaj pulsar n 160
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X