ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಸ್ಕೂಟರ್‌ ಬಗ್ಗೆ ಬಿಗ್ ಅಪ್ಡೇಟ್: ಭಾರತದಲ್ಲಿ ರೇಟ್ ಎಷ್ಟಿರುತ್ತೆ?

ದೇಶೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಕೂಟರ್‌ಗಳಿಗೆ ತುಂಬಾ ಬೇಡಿಕೆಯಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ವಿವಿಧ ಕಂಪನಿ ಸ್ಕೂಟರ್‌ಗಳನ್ನು ಖರೀದಿ ಮಾಡುತ್ತಾರೆ. ಸುಜುಕಿಯು 'ಬರ್ಗ್‌ಮ್ಯಾನ್ ಸ್ಟ್ರೀಟ್' ಸ್ಕೂಟರ್‌ನ ಮುಂಬರುವ ನವೀಕರಣದ ಕುರಿತಂತೆ ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಹೊಸ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಸುಜುಕಿ ಈಗ ಬರ್ಗ್‌ಮ್ಯಾನ್ ಸ್ಟ್ರೀಟ್‌ನ ಹೊಸ ಮಾದರಿಯೊಂದಿಗೆ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಹೊಸ ಸ್ಕೂಟರ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಸುಜುಕಿ ರೈಡ್ ಕನೆಕ್ಟ್ ರೂಪಾಂತರವು ಈಗಾಗಲೇ ತನ್ನ ಫೀಚರ್ ಮತ್ತು ಕಾರ್ಯಕ್ಷಮತೆಯೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬರ್ಗ್‌ಮ್ಯಾನ್ ಅನ್ನು ಸಾಮಾನ್ಯವಾಗಿ ಬೀಫಿ ಪ್ರೊಫೈಲ್‌ನೊಂದಿಗೆ ಮ್ಯಾಕ್ಸಿ ಶೈಲಿಯ ಸ್ಕೂಟರ್ ಎಂದು ಹೇಳಬಹುದು. ಸದ್ಯ ಮಾರುಕಟ್ಟೆಗೆ ತನ್ನ ನೋಟ ಮತ್ತು ಫೀಲ್ ನಲ್ಲಿ ಹೊಸತನದೊಂದಿಗೆ ಬರುತ್ತಿರುವ ಈ ಸ್ಕೂಟರ್ ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದೆ.

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮ್ಯಾಕ್ಸಿ-ಸ್ಕೂಟರ್‌ನ ಹೊಸ ಮಾದರಿಯು 12-ಇಂಚಿನ ಅಲಾಯ್ ವೀಲ್ ಗಳ ದೊಡ್ಡ ಸೆಟ್ ಮತ್ತು ಯಾಂತ್ರಿಕ ನವೀಕರಣಗಳೊಂದಿಗೆ ಪರಿಣಾಮಕಾರಿಯಾದ ಪವರ್‌ಟ್ರೇನ್ ಅನ್ನು ಹೊಂದಿದೆ. ಹೊಸ ಆಟೋ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್ ಮತ್ತು ಪವರ್‌ಟ್ರೇನ್ ಅನ್ನು ಹೆಚ್ಚು ಪರಿಷ್ಕರಿಸಲು ಎಂಜಿನ್‌ಗೆ ಇನ್ನೂ ಕೆಲವು ನವೀಕರಣಗಳನ್ನು ಸುಜುಕಿ ಕಂಪನಿ ಮಾಡಿದೆ ಎಂದು ಹೇಳಲಾಗಿದ್ದು, ಇದು ಈ ಸ್ಕೂಟರ್‌ ಅನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಿದೆ.

ಅಲ್ಲದೆ, ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮ್ಯಾಕ್ಸಿ-ಸ್ಕೂಟರ್‌ನ ಮುಂಬರುವ ಟಾಪ್-ಸ್ಪೆಕ್ ಮಾದರಿಯು ರೈಡ್ ಕನೆಕ್ಟ್ ರೂಪಾಂತರದಲ್ಲಿ ಕಂಡುಬರುವ ವಿವಿಧ ವೈಶಿಷ್ಟ್ಯಗಳನ್ನು ಸಹ ಹೊಂದಿದೆ ಎಂದು ಹೇಳಬಹುದು. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಷನ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಭಾರತದನಂತ ದೇಶದಲ್ಲಿ ಜಪಾನ್ ವಾಹನ ತಯಾರಕ ಕಂಪನಿ ಸುಜುಕಿಗೆ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಇದರಿಂದ ಸಹಕಾರಿಯಾಗಲಿದೆ.

ಈಗಾಗಲೇ ಯುಕೆಯಲ್ಲಿ ಬಿಡುಗಡೆಯಾಗಿರುವ ಮಾದರಿಯನ್ನು 'ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125EX' ಎಂದು ಕರೆಯಲಾಗುತ್ತದೆ. ಈ ಮಾದರಿಯು 56km/l ಇಂಧನ ದಕ್ಷತೆಯನ್ನು ಹೊಂದಿದೆ. ಸುಜುಕಿ ಬರ್ಗ್‌ಮ್ಯಾನ್ ಮ್ಯಾಕ್ಸಿ-ಸ್ಕೂಟರ್‌ನ ಮುಂಬರುವ ಟಾಪ್-ಸ್ಪೆಕ್ ರೂಪಾಂತರದ ಬೆಲೆ ಭಾರತದ ಮಾರುಕಟ್ಟೆಯಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದ್ದು, ಸುಮಾರು 1 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯನ್ನು ನಿರೀಕ್ಷಿಸಲಾಗಿದೆ. ಸುಜುಕಿ ರೈಡ್ ಕನೆಕ್ಟ್ ಸ್ಕೂಟರ್ ಬೆಲೆ 93,300 ರೂ.ಇದೆ.

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಕುರಿತು ಎಂಜಿನ್ ಕಾರ್ಯಕ್ಷಮತೆಯ ಕುರಿತು ಹೇಳುವುದಾದರೆ ಇದು ಸುಜುಕಿ ಆಕ್ಸೆಸ್ 125 ಅನ್ನು ಆಧರಿಸಿದ್ದು, ಅದೇ ಪೆಪ್ಪಿ 124 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 6,750 rpmನಲ್ಲಿ 8.6 bhp ಗರಿಷ್ಠ ಪವರ್ 5,500 rpmನಲ್ಲಿ 10Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. ಇದಲ್ಲದೆ, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಕೊಂಚ ಬಲಾಢ್ಯ ದೇಹವನ್ನು ಹೊಂದಿರುವ ಜನರಿಗೆ ರೈಡ್ ಮಾಡುವಾಗ ತುಂಬಾ ಸೊಗಸಾದ ಅನುಭವ ನೀಡುತ್ತದೆ ಎಂದು ಹೇಳಬಹುದು.

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಉತ್ತಮವಾದ ಕಾರ್ಯಕ್ಷಮತೆ ಹೊಂದಿರುವ ಸ್ಕೂಟರ್ ಆಗಿದೆ. ಹೊಸ ರೂಪಾಂತರದ ಪರಿಚಯವು ಬಹಳಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಿ, ಕಂಪನಿಯು ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ನೆರವಾಗುತ್ತದೆ ಎಂದು ಹೇಳಬಹುದು. ಭಾರತದಲ್ಲಿ ಮುಂಬರುವ ಆಟೋ ಶೋನಲ್ಲಿ ಈ ಮಾದರಿಯನ್ನು ಬಿಡುಗಡೆಯಾಗಲಿದ್ದು, ಹೊಂಡಾ ಗ್ರಾಸಿಯಾ, ಹೀರೊ ಮಾಸ್‌ಟ್ರೋ 125, ಟಿವಿಎಸ್ ಎನ್‌ಟೊರ್ಕ್ 125, ಹೊಂಡಾ ಆಕ್ಟಿವಾ 125, ಯಮಹಾ ಫ್ಯಾಸಿನೊ 125ಗಳಿಗೆ ಬರ್ಗ್‌ಮಾನ್ ಸ್ಟ್ರೀಟ್ ತೀವ್ರ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಹೋಂಡಾ ಆಕ್ಟಿವಾ 6G ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಇದು ಸ್ಟ್ಯಾಂಡರ್ಡ್ ಟ್ರಿಮ್, ಡಿಎಲ್ಎಕ್ಸ್ ಹಾಗೂ ಪ್ರೀಮಿಯಂ ಎಡಿಷನ್ ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, ಆರಂಭಿಕ ಬೆಲೆ 73,086 ರೂ. ಇದೆ. ಸುಜುಕಿ ಆಕ್ಸೆಸ್ 125 ಸಹ ಖರೀದಿದಾರರು ಇಷ್ಟಪಡುವ ಪ್ರಮುಖ ಸ್ಕೂಟರ್‌ ಆಗಿದ್ದು, 77,600 ರೂ. ಪ್ರಾರಂಭಿಕ ಬೆಲೆ ಇದೆ. ಯಮಹಾ ರೇಜರ್ 125 ಇದರ ಲುಕ್ ಹೆಚ್ಚು ಯುವ ಜನರನ್ನು ಸೆಳೆಯಲಿದ್ದು, ಎಕ್ಸ್ ಶೋರೂಂ ಪ್ರಕಾರ, 80,730 ರೂ. ಆರಂಭಿಕ ದರವಿದೆ.

Most Read Articles

Kannada
English summary
Big update on suzuki bergman street scooter how much will it be rated in India
Story first published: Wednesday, December 7, 2022, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X