ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಡುಕಾಟಿ ಇಂಡಿಯಾ ಶೀಘ್ರದಲ್ಲೇ ಅರ್ಬನ್ ಮೋಟಾರ್ಡ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಬಹುದು. ವರದಿಯ ಪ್ರಕಾರ, ಕಂಪನಿಯು ತನ್ನ ಸ್ಕ್ರಾಂಬ್ಲರ್ ಬೈಕ್ ಅನ್ನು ಈ ತಿಂಗಳು ಬಿಡುಗಡೆ ಮಾಡಲು ಯೋಜಿಸಿರಿವುದಾಗಿ ತಿಳಿದುಬಂದಿದೆ. ಆದರೆ ಬಿಡುಗಡೆ ದಿನದ ಬಗ್ಗೆ ನಿಖರವಾದ ಮಾಹಿತಿಯನ್ನು ಕಂಪನಿಯು ಹಂಚಿಕೊಂಡಿಲ್ಲ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಈ ಬೈಕ್ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಸ್ಕ್ರಾಂಬ್ಲರ್ ವಿನ್ಯಾಸವನ್ನು ನೀಡಿರುವುದರಿಂದ, ಈ ಬೈಕ್ ಎತ್ತರದ ಮುಂಭಾಗದ ಮಡ್‌ಗಾರ್ಡ್, ಎತ್ತರದ ಹ್ಯಾಂಡಲ್ ಬಾರ್, ಕಾಂಪ್ಯಾಕ್ಟ್ ಸಿಂಗಲ್ ಸೀಟ್, ಸೈಡ್ ಮೌಂಟೆಡ್ ನಂಬರ್ ಪ್ಲೇಟ್, 17-ಇಂಚಿನ ಸ್ಪೋಕ್ ವೀಲ್‌ಗಳು ಮತ್ತು ಪಿರೆಲ್ಲಿ ರೊಸ್ಸೊ ಟೈರ್‌ಗಳನ್ನು ಪಡೆದುಕೊಂಡಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಈ ಬೈಕ್ ಪ್ರಸ್ತುತ ಕೇವಲ ಒಂದು ಬಣ್ಣದ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ, ಇದು ಬಿಳಿ, ಆರೆಂಜ್ ಮಿಕ್ಸ್ಡ್‌ ಬಣ್ಣದಲ್ಲಿ ಬರುತ್ತದೆ. ಎಂಜಿನ್ ಕುರಿತು ಮಾತನಾಡುವುದಾದರೆ, ಇದು 803cc ಲಿಕ್ವಿಡ್ ಕೂಲ್ಡ್ L-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು ಗರಿಷ್ಠ 73bhp ಮತ್ತು 66.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಬೈಕ್‌ನ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ಕಾರ್ನರ್ ಎಬಿಎಸ್, ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ಯುಎಸ್‌ಬಿ ಸಾಕೆಟ್ ಸೇರಿವೆ. ಬೈಕ್ ಕಪ್ಪು ಕೊಳವೆಯಾಕಾರದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಇದು ಮುಂಭಾಗದಲ್ಲಿ ತಲೆಕೆಳಗಾದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಹೊಂದಿದೆ. ಬ್ರೇಕಿಂಗ್ ಅನ್ನು ಸುಧಾರಿಸಲು, ಬೈಕ್‌ಗೆ ಮುಂಭಾಗದಲ್ಲಿ 330 ಎಂಎಂ ಮತ್ತು ಹಿಂಭಾಗದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಬೆಲೆಯ ಕುರಿತು ಮಾತನಾಡುವುದಾದರೆ, ಡುಕಾಟಿ ಅರ್ಬನ್ ಮೋಟಾರ್ಡ್ ಅನ್ನು 10 ಲಕ್ಷದಿಂದ 12 ಲಕ್ಷದವರೆಗೆ ಬೆಲೆಯನ್ನು ನಿಗಧಿ ಮಾಡಬಹುದು.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಕಳೆದ ತಿಂಗಳು ಡುಕಾಟಿ ಭಾರತದಲ್ಲಿ ಮಲ್ಟಿಸ್ಟ್ರಾಡಾ ವಿ2 ಮತ್ತು ಮಲ್ಟಿಸ್ಟ್ರಾಡಾ ವಿ2 ಎಸ್ ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳನ್ನು ಕ್ರಮವಾಗಿ 14.65 ಲಕ್ಷ ಮತ್ತು 16.65 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ Multistrada V2 ಎಲ್ಲಾ ರೀತಿಯ ಸವಾರಿಗಾಗಿ ಪರಿಪೂರ್ಣ ಬೈಕ್ ಆಗಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಹೊಸ ಮಲ್ಟಿಸ್ಟ್ರಾಡಾ ವಿ2 ಬೈಕ್ ಸ್ಟೈಲಿಶ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಮಲ್ಟಿಸ್ಟ್ರಾಡಾ ಶ್ರೇಣಿಯ ಇತರ ಬೈಕ್‌ಗಳಂತೆಯೇ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಬೈಕ್ ದೂರದ ಪ್ರಯಾಣಕ್ಕೆ ಅತ್ಯಂತ ಆರಾಮದಾಯಕವಾಗಿದೆ ಮತ್ತು ಒರಟು ರಸ್ತೆಗಳಲ್ಲಿಯೂ ಉತ್ತಮ ಸಮತೋಲನವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಹೊಸ ಮಲ್ಟಿಸ್ಟ್ರಾಡಾ V2 ಗೆ ಸೆಮಿ-ಫೇರ್ಡ್ ವಿನ್ಯಾಸವನ್ನು ನೀಡಲಾಗಿದೆ. ಬೈಕ್ ಫೇರಿಂಗ್ ಸ್ಲಿಮ್ ಡ್ಯುಯಲ್ LED ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ದೊಡ್ಡ ಪಾರದರ್ಶಕ ವಿಂಡ್‌ಸ್ಕ್ರೀನ್, ಹ್ಯಾಂಡಲ್‌ಬಾರ್‌ನಲ್ಲಿ ಟರ್ನ್ ಇಂಡಿಕೇಟರ್‌ಗಳು ಮತ್ತು ಬಾಡಿ ಬಣ್ಣದ ORVM ಗಳನ್ನು ಪಡೆದುಕೊಂಡು ಹೆಚ್ಚು ಸ್ಟೈಲಿಷ್ ಲುಕ್‌ನಲ್ಲಿ ಕಾಣುತ್ತದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಬೈಕ್ ಕ್ರೋಮ್ ಟಿಪ್ ಮ್ಯಾಟ್ ಬ್ಲ್ಯಾಕ್ ಎಕ್ಸಾಸ್ಟ್ ಮತ್ತು ಸ್ಲಿಮ್ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಇದರ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಲು, ಕಪ್ಪು ಬಣ್ಣದ ರೂಪಾಂತರದಲ್ಲಿ ಕೆಂಪು ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಇದಲ್ಲದೆ, ಎಂಜಿನ್‌ಗೆ ಬೂದು ಮತ್ತು ಕಪ್ಪು ಬಣ್ಣವನ್ನು ನೀಡಲಾಗಿದ್ದು, ಡ್ರೈವಿಂಗ್ ವೇಳೆ ಆಕರ್ಷಣೀಯವಾಗಿ ಕಾಣುತ್ತದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಮಲ್ಟಿಸ್ಟ್ರಾಡಾ V2 ತನ್ನ ಪವರ್ ಅನ್ನು 937 cc ಡುಕಾಟಿ ಟೆಸ್ಟಾಸ್ಟ್ರೆಟ್ಟಾ ಟ್ವಿನ್-ಸಿಲಿಂಡರ್ ಎಂಜಿನ್‌ನಿಂದ ಪಡೆಯುತ್ತದೆ. ಇದು ವಾಟರ್ ಕೂಲ್ಡ್ ಎಂಜಿನ್ ಆಗಿದ್ದು 113 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಎಂಜಿನ್‌ನ ನಿರ್ವಹಣೆಯ ಮಧ್ಯಂತರವನ್ನು ವಿಸ್ತರಿಸಲಾಗಿದೆ ಎಂದು ಡುಕಾಟಿ ಹೇಳಿದೆ. ಪ್ರತಿ 15,000 ಕಿ.ಮೀ.ಗೆ ಒಮ್ಮೆ ಎಂಜಿನ್ ಆಯಿಲ್ ಬದಲಾವಣೆ ಮತ್ತು ಪ್ರತಿ 30,000 ಕಿ.ಮೀಗೆ ಒಮ್ಮೆ ವಾಲ್ವ್ ಚೆಕ್ ಮಾಡಬೇಕಾಗುತ್ತದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಇನ್ನು ಈಗಾಗಲೇ ಬಿಡುಗಡೆಯಾಗಿರುವ ಮಲ್ಟಿಸ್ಟ್ರಾಡಾ ವಿ2 ಬೈಕ್ ಸ್ಟ್ಯಾಂಡರ್ಡ್ ಮತ್ತು ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಅಡ್ವೆಂಚರ್ ಬೈಕ್ ಹಲವು ನವೀಕರಣಗಳೊಂದಿಗೆ, 5 ಕೆ.ಜಿ ತೂಕದ ಕಡಿತ ಸೇರಿದಂತೆ, ಡುಕಾಟಿ ಸ್ಕೈಹೂಕ್ ಅನ್ನು ಒಳಗೊಂಡಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಇದು ದೊಡ್ಡ ಮಲ್ಟಿಸ್ಟ್ರಾಡಾ 1260 ನಿಂದ ಸ್ಫೂರ್ತಿ ಪಡೆದ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ ಫ್ಲೇರ್ಡ್ ಏರ್-ಇಂಟೇಕ್ ಮತ್ತು ಸ್ಪ್ಲಿಟ್, ಫುಲ್-ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಇನ್ನು ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಫ್ಯೂಯಲ್ ಟ್ಯಾಂಕ್ ಜೊತೆಗೆ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ.

ಶಕ್ತಿಶಾಲಿ ಎಂಜಿನ್‌, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ ಡುಕಾಟಿ ಅರ್ಬನ್ ಮೋಟಾರ್ಡ್

ಮೊದಲೇ ಹೇಳಿದಂತೆ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಎಸ್ ವೇರಿಯಂಟ್, ಡುಕಾಟಿ ಸ್ಕೈಹೂಕ್ ಸಸ್ಪೆಂಕ್ಷನ್ ಇವಿಒ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸಿಸ್ಟಮ್, ಡುಕಾಟಿ ಕಾರ್ನಿಂಗ್ ಲೈಟ್ಸ್, ಡುಕಾಟಿ ಕ್ವಿಕ್ ಶಿಫ್ಟ್ ಅಪ್ & ಡೌನ್, ಐದು ಇಂಚಿನ ಬಣ್ಣದ ಟಿಎಫ್‌ಟಿ ಡಿಸ್‌ಪ್ಲೇ ಮತ್ತು ಬ್ಯಾಕ್‌ಲಿಟ್ ಹ್ಯಾಂಡಲ್‌ಬಾರ್ ಕಂಟ್ರೋಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

Most Read Articles

Kannada
Read more on ಡುಕಾಟಿ ducati
English summary
Ducati urban motard india launch in june details
Story first published: Saturday, June 4, 2022, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X