Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಇವಿ ಸ್ಕೂಟರ್ ಬ್ಯಾಟರಿ ಸ್ಫೋಟ- ಚಾರ್ಜಿಂಗ್ ಸಮಯದಲ್ಲಿ ನಡೆದ ದುರಂತಕ್ಕೆ ಓರ್ವ ಬಲಿ!
ದುಬಾರಿ ಇಂಧನಗಳ ಪರಿಣಾಮ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇವಿ ವಾಹನಗಳ ಮಾರಾಟದಲ್ಲಿ ಮೊದಲ ಬಾರಿಗೆ ಗಮನಾರ್ಹವಾದ ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿಯೇ ಇವಿ ವಾಹನಗಳಿಂದಾಗುತ್ತಿರುವ ಅನಾಹುತಗಳು ಭವಿಷ್ಯದಲ್ಲಿ ಮತ್ತಷ್ಟು ಹಾನಿ ಉಂಟುಮಾಡುವ ಆತಂಕ ಸೃಷ್ಠಿಸಿವೆ.

ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇವಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಣಾಮ ಕಳೆದ 2 ವರ್ಷಗಳ ಅಂತರದಲ್ಲಿ ಹಲವಾರು ಇವಿ ಸ್ಟಾರ್ಟ್ಅಪ್ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇವಿ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್‌ಗಳ ಮಾರಾಟವು ಅಗ್ರಸ್ಥಾನ ಹೊಂದಿವೆ. ಆದರೆ ಇವಿ ಸ್ಕೂಟರ್‌ಗಳಿಂದಾಗುತ್ತಿರುವ ಅನಾಹುತಗಳು ಇವಿ ವಾಹನ ಬಳಕೆದಾರರನ್ನು ಆತಂಕಕ್ಕೀಡು ಮಾಡಿದ್ದು, ದೇಶದ ವಿವಿಧಡೆ ದಿನಕ್ಕೊಂದು ಬ್ಯಾಟರಿ ಸ್ಪೋಟ ಪ್ರಕಟಗಳು ದಾಖಲಾಗುತ್ತಿವೆ.

ಇತ್ತೀಚೆಗೆ ದಾಖಲಾಗಿರುವ ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ ಪ್ರಕರಣದಲ್ಲಿ 40 ವರ್ಷದ ಓರ್ವ ಬಲಿಯಾಗಿದ್ದು, ಬ್ಯಾಟರಿ ಚಾರ್ಜಿಂಗ್ ಸಂದರ್ಭದಲ್ಲಿಯೇ ಈ ದುರಂತ ನಡೆದಿದೆ ಎನ್ನಲಾಗಿದೆ.

ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ ಪ್ರಕರಣವು ಆಂಧ್ರಪ್ರದೇಶದ ವಿಜಯವಾಡದಲ್ಲಿ ದಾಖಲಾಗಿದ್ದು, ಸ್ಪೋಟದ ರಭಸಕ್ಕೆ ಪಕ್ಕದಲ್ಲಿಯೇ ಇದ್ದ ಶಿವಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಆತನ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಂಭೀರ ಗಾಯಗಳಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಶಿವಕುಮಾರ್ ಕಳೆದ ವಾರವಷ್ಟೇ ಪ್ಯೂರ್ ಕಂಪನಿಯ ಇವಿ ಸ್ಕೂಟರ್ ಖರೀದಿ ಮಾಡಿದ್ದರು. ಹೊಸ ಸ್ಕೂಟರ್‌ನಲ್ಲಿ ತೆಗೆದು ಹಾಕಬಹುದಾದ ಬ್ಯಾಟರಿ ಪ್ಯಾಕ್ ಸೌಲಭ್ಯವಿದ್ದ ಹಿನ್ನಲೆ ರಾತ್ರಿ ಸಮಯದಲ್ಲಿ ಬ್ಯಾಟರಿ ಹೊರತೆಗೆದು ಮನೆ ಒಳಗೆ ಚಾರ್ಜ್ ಮಾಡುತ್ತಿದ್ದರು.

ಕಳೆದ ಒಂದು ವಾರದಿಂದ ಸರಿಯಾದ ಸಮಯಕ್ಕೆ ನಿಗದಿಪಡಿಸಿದ ಮಾರ್ಗಸೂಚಿಯೊಂದಿಗೆ ಚಾರ್ಜಿಂಗ್ ಮಾಡುತ್ತಿದ್ದರಂತೆ. ಆದರೆ ಕಳೆದ ರಾತ್ರಿ ಚಾರ್ಜ್‌ಗೆ ಹಾಕಿದ ಕೆಲವು ಗಂಟೆಗಳ ನಂತರ ಬ್ಯಾಟರಿ ತೀವ್ರವಾಗಿ ಸ್ಪೋಟಗೊಂಡಿದ್ದು, ಬ್ಯಾಟರಿ ಸ್ಪೋಟದಿಂದ ಉಂಟಾದ ಹೊಗೆ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಿಖರವಾದ ಕಾರಣ ಪತ್ತೆಹಚ್ಚುತ್ತಿರುವ ವಿಜಯವಾಡ ಪೋಲಿಸರು ಸಮಗ್ರವಾದ ತನಿಖೆ ಕೈಗೊಂಡಿದ್ದು, ಘಟನೆ ನಡೆಯುತ್ತಿದ್ದಂತೆ ಪ್ಯೂರ್ ಕಂಪನಿಯು ಇತ್ತೀಚೆಗೆ ವಿತರಣೆ ಮಾಡಲಾಗಿದ್ದ ಸುಮಾರು 2 ಸಾವಿರ ಇವಿ ಸ್ಕೂಟರ್‌ಗಳ ಹಿಂಪಡೆಯುತ್ತಿರುವುದಾಗಿ ಘೋಷಣೆ ಮಾಡಿದೆ.

ಬ್ಯಾಟರಿ ಪ್ಯಾಕ್‌ನಲ್ಲಿ ದೋಷ ಸಾಬೀತಾದರೆ ಹೊಸದಾಗಿ ವಿತರಣೆ ಮಾಡಲಾದ ಸ್ಕೂಟರ್‌ಗಳಲ್ಲಿನ ಬ್ಯಾಟರಿ ಪ್ಯಾಕ್‌ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದು, ಬ್ಯಾಟರಿ ಪ್ಯಾಕ್ ಸ್ಪೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಗ್ರಾಹಕರ ಸುರಕ್ಷತೆಯನ್ನು ಕಡೆಗಣಿಸುವ ಇವಿ ಸ್ಕೂಟರ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇವಿ ಸ್ಕೂಟರ್ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಇವಿ ಸ್ಕೂಟರ್ ಮಾದರಿಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಆದರೆ ಇವಿ ಸ್ಕೂಟರ್ ಬೇಡಿಕೆ ಹೆಚ್ಚುತ್ತಿದ್ದರೂ ಭವಿಷ್ಯದ ವಾಹನಗಳ ಕುರಿತಾಗಿ ಗ್ರಾಹಕರಲ್ಲಿ ಇನ್ನು ಕೂಡಾ ಹಲವಾರು ಅನುಮಾನ ಮತ್ತು ಗೊಂದಲಗಳಿದ್ದು, ಅದು ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡ ಪ್ರಕರಣಗಳು ಗ್ರಾಹಕರಲ್ಲಿ ಇನ್ನಷ್ಟು ಗೊಂದಲವನ್ನು ಸೃಷ್ಠಿಸುತ್ತಿವೆ.

ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವುದು, ಬಿಡಿಭಾಗಗಳು ಬಹುಬೇಗನೆ ಹಾಳಾಗುತ್ತಿರುವ ಪ್ರಕರಣಗಳು ಗ್ರಾಹಕರಲ್ಲಿ ಇವಿ ವಾಹನಗಳ ಬಗೆಗೆ ವಿಶ್ವಾಸ ಮೂಡಿಸುವ ಬದಲಾಗಿ ಅನುಮಾನಗಳನ್ನು ಹುಟ್ಟುಹಾಕುತ್ತಿವೆ.

ಹೊಸ ಇವಿ ವಾಹನಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಸಂಶೋಧನೆ, ಪರೀಕ್ಷಾರ್ಥ ಮಾದರಿಗಳನ್ನು ನಿರಂತರವಾಗಿ ಬದಲಾವಣೆಗೊಳಿಸುವ ಪ್ರಕ್ರಿಯೆಯಲ್ಲಿ ಅವಸರದ ನೀತಿ ಅನುಸರಿಸುತ್ತಿರುವುದೇ ಭವಿಷ್ಯ ವಾಹನಗಳ ಬಗೆಗೆ ಗೊಂದಲಗಳು ಸೃಷ್ಠಿಯಾಗುತ್ತಿದ್ದು, ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಕಠಿಣ ಕ್ರಮಕೈಗೊಳ್ಳುವುತ್ತಿರುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇವಿ ವಾಹನ ಕಂಪನಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತುರ್ತಾಗಿ ತಮ್ಮತ್ತ ಸೆಳೆಯುವ ಉದ್ದೇಶದಿಂದ ಯಾವುದೇ ದೀರ್ಘಾವಧಿಯ ಸಂಶೋಧನೆಗಳನ್ನು ಮಾಡದೆ, ವಿವಿಧ ಹಂತದ ಕಾರ್ಯಕ್ಷಮತೆಯ ಪರೀಕ್ಷಾರ್ಥ ಮಾದರಿಗಳನ್ನು ಬಳಸದೆ ನೇರವಾಗಿ ವಾಹನ ಉತ್ಪಾದನೆ ಮಾಡುವುದು ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಗಳು ಭವಿಷ್ಯದಲ್ಲಿ ಬಹುದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡುತ್ತಿವೆ.

ಅದರಲ್ಲೂ ಓಲಾ, ಪ್ಯೂರ್, ಒಕಿನವಾದಂತಹ ಬೃಹತ್ ಇವಿ ಸ್ಕೂಟರ್ ಉತ್ಪಾದನಾ ಕಂಪನಿಗಳ ಇವಿ ಸ್ಕೂಟರ್ ಮಾದರಿಗಳೇ ಹೆಚ್ಚಿನ ಅವಘಡಗಳಿಗೆ ಕಾರಣವಾಗುತ್ತಿದ್ದು, ಇದು ಭವಿಷ್ಯ ವಾಹನಗಳ ಮೇಲೆ ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.

ಹೀಗಾಗಿ ಇವಿ ಸ್ಕೂಟರ್‌ಗಳಲ್ಲಿನ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಅವಘಡ ಪ್ರಕರಣಗಳು ತಂತ್ರಜ್ಞಾನ ಅಭಿವೃದ್ದಿಯಲ್ಲಿ ಇನ್ನಷ್ಟು ಸುಧಾರಿಸುವ ಅವಶ್ಯಕತೆ ಸ್ಪಷ್ಟವಾಗಿಸಿದ್ದು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.