Just In
- 56 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 59 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Sports
ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ನಮ್ಮ ಬೆಂಗಳೂರಿನಲ್ಲಿ ಪ್ರೀಮಿಯಂ ಇವಿ ಸ್ಕೂಟರ್ ಶೋರೂಂ ಆರಂಭಿಸಿದ ಇವಿಯಮ್
ದೇಶಾದ್ಯಂತ ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಇವಿಯಮ್ ಕೂಡಾ ಇದೀಗ ಪ್ರಮುಖ ಇವಿ ಸ್ಕೂಟರ್ ಮಾದರಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವ್ಯಾಪಕವಾದ ಪ್ರೀಮಿಯಂ ಇವಿ ಸ್ಕೂಟರ್ ಶ್ರೇಣಿ ಹೊಂದಿರುವ ಇವಿಯಮ್ ಕಂಪನಿಯು ದೇಶದ ಮೂರನೇ ಮತ್ತು ಕರ್ನಾಟಕದ ಮೊದಲ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರಂಭಿಸಿದೆ. ಡಿಪಿಎಸ್ ಬ್ಯುಸಿನೆಸ್ ಅಸೋಸಿಯೇಟ್ಸ್ ಜೊತೆಗೆ ಆರಂಭಗೊಂಡಿರುವ ಇವಿಯಮ್ ಹೊಸ ಮೊಟೊ ಏಸ್ ಮಾರಾಟ ಮಳಿಗೆಯು ಹಲವಾರು ಹೊಸ ಸೌಲಭ್ಯಗಳೊಂದಿಗೆ ಗ್ರಾಹಕರ ಸ್ನೇಹಿ ಸೌಲಭ್ಯಗಳೊಂದಿಗೆ ಅತ್ಯುತ್ತಮ ಖರೀದಿ ಅನುಭವ ನೀಡುತ್ತದೆ.

ಇವಿಯಮ್ ಕಂಪನಿಯ ಹೊಸ ಮೊಟೊ ಏಸ್ ಮಾರಾಟ ಮಳಿಗೆಯು ಬೆಂಗಳೂರಿನ ಇಂದಿರಾನಗರದ ಹೆಚ್ಎಎಲ್ 2ನೇ ಹಂತದ 16ನೇ ಮುಖ್ಯ ರಸ್ತೆಯಲ್ಲಿ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನ ಮತ್ತೆರಡು ಪ್ರಮುಖ ಕಡೆಗಳಲ್ಲಿ ಇವಿಯಮ್ ಶೋರೂಂಗಳು ಆರಂಭವಾಗಲಿವೆ.

ಹೊಸ ಮಾರಾಟ ಮಳಿಗೆ ಕುರಿತಾಗಿ ಪ್ರತಿಕ್ರಿಯೆಸಿದ ಇವಿಯಮ್‌ನ ಸಹ-ಸಂಸ್ಥಾಪಕ ಮತ್ತು ಪಾಲುದಾರರಾಗಿರುವ ಸಮೀರ್ ಮೊಯ್ದಿನ್ ಅವರು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಆದ್ಯತೆಯಿದ್ದು, ಹೊಸ ಉತ್ಪನ್ನಗಳೊಂದಿಗೆ ಗ್ರಾಹಕರನ್ನು ತಲುಪಲು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರೆ ನಗರಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿರುವ ಬಗೆಗೆ ಮಾಹಿತಿ ಹಂಚಿಕೊಂಡ ಸಮೀರ್ ಮೊಯ್ದಿನ್ ಅವರು ನಮ್ಮ ಬೆಂಗಳೂರಿನ ನಂತರ ಇತರೆ ನಗರಗಳಿಗೂ ನಮ್ಮ ಹೆಜ್ಜೆಗುರುತಗಳನ್ನು ವಿಸ್ತರಿಸುವುದಾಗಿ ಭರವಸೆ ನೀಡಿದ್ದು, ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯೊಂದಿಗೆ ಹೊಸ ಉತ್ಪನ್ನಗಳಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಇವಿಯಮ್ ಕಂಪನಿಯು ಕಾಸ್ಮೊ, ಕಾಮೆಟ್ ಮತ್ತು ಝಾರ್ ಹೆಸರಿನಲ್ಲಿ ಮೂರು ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡಗಡೆ ಮಾಡಿದೆ.

ಕಾಸ್ಮೊ, ಕಾಮೆಟ್ ಮತ್ತು ಝಾರ್ ಇವಿ ಸ್ಕೂಟರ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 1,39,200 ಮಧ್ಯಮ ಕ್ರಮಾಂಕದ ಮಾದರಿಯು ರೂ. 1,84,900 ಮತ್ತು ಹೈ ಎಂಡ್ ಮಾದರಿಯು ರೂ. 2,07,700 ಲಕ್ಷ ಬೆಲೆ ಹೊಂದಿವೆ.
ಹೊಸ ಕಾಸ್ಮೊ, ಕಾಮೆಟ್ ಮತ್ತು ಝಾರ್ ಇವಿ ಸ್ಕೂಟರ್‌ಗಳ ಖರೀದಿಗಾಗಿ ಆಸಕ್ತ ಗ್ರಾಹಕರು ರೂ. 999 ಮುಂಗಡ ಮೊತ್ತದೊಂದಿಗೆ ಶೋರೂಂನಲ್ಲಿ ಇಲ್ಲವೆ ಇವಿಯಮ್ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಬಹುದಾಗಿದ್ದು, ಸ್ಕೂಟರ್ ಬೆಲೆಗಳು ವಿವಿಧ ರಾಜ್ಯಗಳಲ್ಲಿ ಸಬ್ಸಡಿ ಯೋಜನೆಗೆ ಅನುಗುಣವಾಗಿ ಏರಿಳಿತವಾಗಲಿವೆ.

ಹೊಸ ಇವಿ ಸ್ಕೂಟರ್‌ಗಳಲ್ಲಿ ಕಾಸ್ಮೊ ಮಾದರಿಯು ಆರಂಭಿಕ ಆವೃತ್ತಿಯಾಗಿದ್ದು, ಇದರಲ್ಲಿ 30Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 2000 ವೋಲ್ಟ್ ಮೋಟಾರ್ ಅನ್ನು ಬಳಸಲಾಗಿದೆ. ಈ ಸ್ಕೂಟರ್ 65 ಕಿಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 80 ಕಿಮೀ ವ್ಯಾಪ್ತಿಯನ್ನು ಕ್ರಮಿಸಬಲ್ಲದು.

30Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದೆಂದು ಕಂಪನಿಯು ಮಾಹಿತಿ ನೀಡಿದ್ದು, ಇದರಲ್ಲಿ ಬ್ರೈಟ್ ಬ್ಲಾಕ್, ಚೆರ್ರಿ ರೆಡ್, ಲೆಮನ್ ಯೆಲ್ಲೋ, ವೈಟ್, ಬ್ಲೂ ಮತ್ತು ಗ್ರೇ ಸೇರಿದಂತೆ ಐದು ಬಣ್ಣಗಳ ಆಯ್ಕೆ ನೀಡಲಾಗಿದೆ.

ಮಧ್ಯಮ ಕ್ರಮಾಂಕದಲ್ಲಿರುವ ಕಾಮೆಟ್ ಇವಿ ಸ್ಕೂಟರ್ ಬಗೆಗೆ ಹೇಳುವುದಾದರೇ ಈ ಮಾದರಿಯು 3000 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಜೊತೆ 50Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

50Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಕಂಪನಿಯು ಕಾಮೆಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಟ್ಟು ಆರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಿದ್ದು, ಶೈನಿ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್, ವೈನ್ ರೆಡ್, ರಾಯಲ್ ಬ್ಲೂ, ಬೀಜ್ ಮತ್ತು ವೈಟ್ ಬಣ್ಣಗಳನ್ನು ಹೊಂದಿದೆ.

ಹೈ ಎಂಡ್ ಮಾದರಿಯಾದ ಝಾರ್ ಮಾದರಿಯು ಮೊದಲೆರಡು ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಇದರಲ್ಲಿ 4000 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಜೊತೆ 42Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಝಾರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮೋಟಾರ್ ಶಕ್ತಿ ಹೆಚ್ಚಿಸಿದ್ದರೂ ಬ್ಯಾಟರಿ ಆಯ್ಕೆಯಲ್ಲಿ ಕಾಮೆಟ್ ಮಾದರಿಗಿಂತಲೂ ತುಸು ಇಳಿಕೆ ಮಾಡಲಾಗಿದೆ. ಆದರೂ ಕೂಡಾ ಝಾರ್ ಮಾದರಿಯು ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

42Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದ್ದು, ಒಟ್ಟು ಆರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಬ್ಲಾಕ್, ಮ್ಯಾಟೆ ಬ್ಲಾಕ್, ರೆಡ್, ಲೈಟ್ ಬ್ಲ್ಯೂ, ಮಿಂಟ್ ಗ್ರೀನ್ ಮತ್ತು ವೈಟ್‌ನಲ್ಲಿ ಲಭ್ಯವಿವೆ.

ಎಲ್ಲಾ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿಯು ವಿವಿಧ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್, ಕೀಲೆಸ್ ಸ್ಟಾರ್ಟ್, ರೀಜನರೇಟಿವ್ ಬ್ರೇಕಿಂಗ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಎಲ್‌ಸಿಡಿ ಡಿಸ್ಪ್ಲೇ, ಜಿಯೋ-ಫೆನ್ಸಿಂಗ್ ಮತ್ತು ಓವರ್-ಸ್ಪೀಡಿಂಗ್ ಅಲರ್ಟ್ ಸೌಲಭ್ಯ ಹೊಂದಿವೆ.

ಹಾಗೆಯೇ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ರಿವರ್ಸ್ ಗೇರ್ ವೈಶಿಷ್ಟ್ಯವನ್ನು ಸಹ ನೀಡಲಾಗಿದ್ದು, ಬೆಲೆಗೆ ಅನುಗುಣವಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಮಾದರಿಗಳಿಗೆ ಅನುಗುಣವಾಗಿ ತುಸು ಬದಲಾವಣೆ ಹೊಂದಿವೆ.