ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ವಾಹನ ತಯಾರಕರು ಎಲ್ಲಾ ವೈಶಿಷ್ಟ್ಯಗಳನ್ನು ಡಿಜಿಟಲ್ ಆಗಿ ನೀಡುತ್ತಿರುವುದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಪ್ರಸ್ತುತ ಭಾರತದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಹಾಗೂ ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಟಾಪ್ 5 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಇಲ್ಲಿವೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸಲು ಯೋಜಿಸುವವರಿಗೆ ಈ ಲೇಖನ ಉಪಯುಕ್ತವಾಗಬಹುದು. ಪ್ರಸ್ತುತ ದೇಶದಲ್ಲಿ ಮಾರಾಟಕ್ಕೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಫೀಚರ್ಸ್ ಹಾಗೂ ಬೆಲೆಯನ್ನು ಸಹ ನೀಡಲಾಗಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಥರ್ 450ಎಕ್ಸ್

ಎಥರ್ 450ಎಕ್ಸ್ ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಈ ಸ್ಕೂಟರ್ 7 ಇಂಚಿನ ಟಿಎಫ್‌ಟಿ ಟಚ್ ಸ್ಕ್ರೀನ್ ಹೊಂದಿದ್ದು, ನ್ಯಾವಿಗೇಶನ್ ಡೇಟಾ ಮತ್ತು ಓವರ್-ದಿ-ಟಾಪ್ ನವೀಕರಣಗಳನ್ನು ಪಡೆಯಲು ಈ ಸ್ಕ್ರೀನ್ ನಿಮಗೆ ಸಹಕರಿಸುತ್ತದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಈ ಸ್ಕ್ರೀನ್ ನಿಮಗೆ ರೈಡ್ ಅಂಕಿಅಂಶಗಳನ್ನು ನೀಡುವುದರ ಜೊತೆಗೆ ಚಾರ್ಜ್ ಸ್ಥಿತಿಯನ್ನು ಪರಿಶೀಲಿಸಿ ನಿಮ್ಮ ಬಳಿಯಿರುವ ಎಥರ್ ಗ್ರಿಡ್ ಪಾಯಿಂಟ್‌ಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ. 450 ಎಕ್ಸ್ ಸೆಲ್ಫ್-ಕ್ಯಾನ್ಸಲ್ ಮಾಡುವ ಇಂಡಿಕೇಟರ್‌ಗಳು ಮತ್ತು ಸೈಡ್-ಸ್ಟ್ಯಾಂಡ್ ಸೆನ್ಸರ್ನೊಂದಿಗೆ ಬರುತ್ತದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಹೆಚ್ಚುವರಿ ತಾಂತ್ರಿಕ ವೈಶಿಷ್ಟ್ಯಗಳಲ್ಲಿ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಲೂಟೂತ್ ಸಂಪರ್ಕ, ಫೈಂಡ್‌ ಮೈ ವೆಹಿಕಲ್, ಕಂಟ್ರೋಲ್ ಫೋನ್ ಕಾಲ್ಸ್, ಮ್ಯೂಸಿಕ್, ವಾಯಿಸ್ ಕಮಾಂಡ್, ವೈ-ಫೈ ಕನೆಕ್ಟಿವಿಟಿಯಂತಹ ಆಧುನಿಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ 4 ಜಿ ಇಂಟರ್ನೆಟ್ ಸೌಲಭ್ಯವನ್ನು ಇ-ಸಿಮ್ ಮೂಲಕ ಇದಕ್ಕೆ ಇನ್ಸರ್ಟ್ ಮಾಡಿ ಬಳಕೆ ಮಾಡಬಹುದ. ಇಷ್ಟು ಅಧುನಿಕ ಸೌಲಭ್ಯಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಎಥರ್ 450ಎಕ್ಸ್ ಸ್ಕೂಟರ್ ಬೆಲೆಯು ರೂ. 1.52 ಲಕ್ಷ (ಎಕ್ಸ್ ಶೋರೂಂ) ಇದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಟಿವಿಎಸ್ ಐ-ಕ್ಯೂಬ್

ಟಿವಿಎಸ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಐ-ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ನವೀಕರಿಸಿದ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು ಸ್ಟ್ಯಾಂಡರ್ಡ್, ಎಸ್ ಮತ್ತು ಎಸ್‌ಟಿ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇವುಗಳಲ್ಲಿ, ಹೈ-ಎಂಡ್ ರೂಪಾಂತರವಾದ ಎಸ್‌ಡಿ ಬೆಲೆಯನ್ನು ಇನ್ನೂ ಘೋಷಿಸಿಲ್ಲ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಇದು ಹೈ-ಎಂಡ್ ಆಯ್ಕೆಯಾಗಿರುವುದರಿಂದ, ಈ ರೂಪಾಂತರವು 7-ಇಂಚಿನ ಟಿಎಫ್‌ಟಿ ಸ್ಕ್ರೀನ್‌ನೊಂದಿಗೆ ಲಭ್ಯವಿದೆ. ಇದು ಟಚ್ ಸ್ಕ್ರೀನ್ ಅನ್ನು ಸಹ ಹೊಂದಿದ್ದು, ಉಳಿದವುಗಳಿಗೆ (ಸ್ಟ್ಯಾಂಡರ್ಡ್ ಮತ್ತು ಎಸ್) ಕೇವಲ ಐದು ಇಂಚಿನ ಸ್ಕ್ರೀನ್ ಮಾತ್ರ ನೀಡಲಾಗಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಈ ಎಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್ ಫೋನ್ ಸಂಪರ್ಕ, ನ್ಯಾವಿಗೇಶನ್ ಅಸಿಸ್ಟೆನ್ಸ್, ಜಿಯೋ-ಫೆನ್ಸಿಂಗ್, ಚಾರ್ಜ್ ಸ್ಟೇಟಸ್, ರೈಡ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಓವರ್-ಸ್ಪೀಡ್ ಅಲರ್ಟ್ ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಈ ಸ್ಕೂಟರ್‌ನಲ್ಲಿ ಟಿವಿಎಸ್‌ ಸ್ಮಾರ್ಟ್ ಎಕ್ಸ್ಪೋನೆಕ್ಟ್ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ. ಇದರ ಆರಂಭಿಕ ಬೆಲೆಯು ರೂ. 1.14 (ಎಕ್ಸ್ ಶೋರೂಂ) ಲಕ್ಷವಿದೆ ಬೆಲೆಯಾಗಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಓಲಾ ಎಸ್ 1 ಪ್ರೊ

ಓಲಾ ಎಸ್ 1 ಪ್ರೊ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದೆ. ಈ ವಾಹನವು 7-ಇಂಚಿನ ಟಿಎಫ್‌ಟಿ ಸ್ಕ್ರೀನ್ ಹೊಂದಿದೆ. ವಾಯ್ಸ್ ಕಮಾಂಡ್, ಕಾಲ್‌ ಮತ್ತು ಟೆಕ್ಸ್ಟ್ ಮೆಸೇಜ್‌ಗಳನ್ನು ನಿರ್ವಹಿಸುವ ಸೌಲಭ್ಯ, ಜಿಯೋ-ಫೆನ್ಸಿಂಗ್ ಅಲರ್ಟ್ ಸೇರಿದಂತೆ ಹಲವು ಡಿಜಿಟಲ್ ವೈಶಿಷ್ಟ್ಯಗಳೊಂದಿಗೆ ಈ ಸ್ಕ್ರೀನ್ ಬರುತ್ತದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೀ ಇಲ್ಲದೆ ಬಳಸುವ ಸೌಲಭ್ಯ, ಸೈಡ್-ಸ್ಟ್ಯಾಂಡ್ ಅಲರ್ಟ್ ಮತ್ತು ಅನೇಕ ಬಳಕೆದಾರರ ಪ್ರೊಫೈಲ್ ಅನ್ನು ರಚಿಸುವ ಸೌಲಭ್ಯದೊಂದಿಗೆ ಬರುತ್ತದೆ. ಪ್ರಸ್ತುತ ಓಲಾ ತನ್ನ ವಾಹನದ ಸಾಫ್ಟ್‌ವೇರ್ ಅನ್ನು ನವೀಕರಿಸುವ ಪ್ರಕ್ರಿಯೆಯಲ್ಲಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಮೂವ್ ಒಎಸ್ 2.0 ಎಂದು ಕರೆಯಲ್ಪಡುವ ನವೀಕರಿಸಿದ ಸಾಫ್ಟ್‌ವೇರ್ ಅನ್ನು ಹೆಚ್ಚಿನ ಶ್ರೇಣಿ ಮತ್ತು ಉತ್ತಮ ಅಪ್ಲಿಕೇಶನ್ ನೊಂದಿಗೆ ನೀಡಲಾಗುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ 1,39,999 ರೂ.ಗೆ ಮಾರಾಟಕ್ಕೆ ಲಭ್ಯವಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಟಾರ್ಕ್ ಕ್ರಾಟೋಸ್

ವೈಶಿಷ್ಟ್ಯಗಳ ಗೊಂಚಲನ್ನೇ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಟಾರ್ಕ್ ಕ್ರಾಟೋಸ್ ಮೊದಲ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಆಗಿದೆ. ಈ ವಾಹನವನ್ನು ಸಂಪೂರ್ಣ ಡಿಜಿಟಲ್ ಸೌಲಭ್ಯದೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮಲ್ಟಿ-ಡ್ರೈವಿಂಗ್ ಮೋಡ್‌ಗಳೊಂದಿಗೆ ನೀಡಲಾಗುತ್ತದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಈ ಬೈಕ್ ರೀ-ಜನರೇಟಿವ್ ಬ್ರೇಕಿಂಗ್, ರಿವರ್ಸ್ ಮೋಡ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ನ್ಯಾವಿಗೇಶನ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಜಿಯೋ-ಫೆನ್ಸಿಂಗ್ ತಂತ್ರಜ್ಞಾನದೊಂದಿಗೆ ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಲೋ ಬ್ಯಾಟರಿ ಇಂಡಿಕೇಟರ್, ಡೇಂಜರ್ ಲೈಟ್ಸ್, ಟೈಮ್ ಮತ್ತು ಎಲ್ಇಡಿ ಲೈಟ್‌ಗಳನ್ನು ಸಹ ಟಾರ್ಕ್ ಕ್ರಾಟೋಸ್‌ನಲ್ಲಿ ನೀಡಲಾಗಿದೆ. ಇದರ ಬೆಲೆಯು ರೂ. 1.22 ಲಕ್ಷದಿಂದ ಪ್ರಾರಂಭವಾಗಿ 1.37 ಲಕ್ಷ ರೂ.ಗಳವರೆಗೆ ಮಾರಾಟಕ್ಕೆ ಲಭ್ಯವಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಓಕಿನಾವಾ ಓಕಿ90

ಮೇಲಿನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆಯೇ ಈ ವಾಹನವು ಹಲವಾರು ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. Okinawa Oki 90 ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕನ್ಸೋಲ್, USB ಚಾರ್ಜಿಂಗ್ ಪಾಯಿಂಟ್, ಸ್ಕೂಟರ್ ಟ್ರ್ಯಾಕಿಂಗ್, ಆಂಟಿ-ಥೆಫ್ಟ್ ಅಲಾರ್ಮ್, ಸ್ಕೂಟರ್-ಆನ್-ಟರ್ನಿಂಗ್ ಸೌಲಭ್ಯ ಮತ್ತು ಮೀಸಲಾದ ಪಾರ್ಕಿಂಗ್ ಮೋಡ್ ಅನ್ನು ಹೊಂದಿದೆ. ಇದರ ಬೆಲೆ ರೂ. 1.21 (ಎಕ್ಸ್ ಶೋ ರೂಂ) ಲಕ್ಷವಿದೆ.

ಹಲವು ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಹೆಚ್ಚು ಬೇಡಿಕೆಯಿಡಿರುವ ಟಾಪ್ 5 ಇವಿ ಸ್ಕೂಟರ್‌ಗಳಿವು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಭಾರತದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲೀನ್ಯದಿಂದ ಹುಟ್ಟಿಕೊಂಡಿರುವ ಇವಿ ವಾಹನಗಳು ಪರಿಸರವನ್ನು ಆರೋಗ್ಯವಾಗಿಡಲು ಉತ್ತಮ ಆಯ್ಕೆಯಾಗಿವೆ. ಮೇಲಿನ ಲೇಖನದಲ್ಲಿ ತಿಳಿಸಲಾಗಿರುವ ವಾಹನಗಳು ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಎಲೆಕ್ಟ್ರಿಕ್ ವಾಹನ ಕೊಳ್ಳಲು ಯೋಜಿಸುತ್ತಿರುವ ಗ್ರಾಹಕರು ಮೇಲಿನ ಸ್ಕೂಟರ್‌ಗಳನ್ನು ಪರಿಶೀಲಿಸಿ ತಮ್ಮ ಬಜೆಟ್ ಅನುಗುಣವಾಗಿ ವಾಹನವನ್ನು ಖರೀದಿಸಬಹುದು.

Most Read Articles

Kannada
English summary
Here are the top 5 best selling EV scooters in India with a host of features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X