Just In
Don't Miss!
- News
ಲಾಲು ಹಿರಿಯ ಪುತ್ರ, ಸೊಸೆ ವಿಚ್ಛೇದನ ಸಮಾಲೋಚನೆಗೆ ಹಾಜರ್
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಇವಿ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಿಸಿದ ಹಾಪ್ ಎಲೆಕ್ಟ್ರಿಕ್ ಕಂಪನಿ
ದೇಶಾದ್ಯಂತ ಇವಿ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವಿ ದ್ವಿಚಕ್ರ ವಾಹನ ಮಾರಾಟವು ಕಳೆದ ಕೆಲ ತಿಂಗಳಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಇವಿ ವಾಹನ ಉತ್ಪಾದನಾ ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದ್ದು, ಹಾಪ್ ಎಲೆಕ್ಟ್ರಿಕ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಕೆಲವು ವಿಶೇಷ ಆಫರ್ ಘೋಷಣೆ ಮಾಡಿದೆ.

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಕಳೆದ ಕೆಲ ತಿಂಗಳಿನಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆಗಳು ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಕಳೆದ ಕೆಲ ಅವಧಿಯಲ್ಲಿ ಹಲವಾರು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ಜೈಪುರ್ ಮೂಲದ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಎರಡು ಹೊಸ ಇವಿ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹಾಪ್ ಎಲೆಕ್ಟ್ರಿಕ್ ಕಂಪನಿಯು ಇದೀಗ ಸೀಮಿತ ಅವಧಿಯಲ್ಲಿ ತನ್ನ ಇವಿ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಆಫರ್ ನೀಡುತ್ತಿದೆ.

ಹಾಪ್ ಎಲೆಕ್ಟ್ರಿಕ್ ಕಂಪನಿಯು ಫೆಬ್ರವರಿ 1ರಂದೇ ಹೊಸ ಆಫರ್ ಘೋಷಣೆ ಮಾಡಿದ್ದು, ಮಾರ್ಚ್ 31ರ ತನಕ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಪ್ರಮುಖ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುವುದಾಗಿ ಘೋಷಣೆ ಮಾಡಿದೆ.

ಲಿಯೋ ಮತ್ತು ಲೈಫ್ ಇ-ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹಾಪ್ ಎಲೆಕ್ಟ್ರಿಕ್ ಕಂಪನಿಯು ಸುಮಾರು ರೂ. 5 ಸಾವಿರ ಮೌಲ್ಯದ ವಿವಿಧ ಆಕ್ಸೆಸರಿಸ್‌ಗಳನ್ನು ಉಚಿತವಾಗಿ ನೀಡಲಿದ್ದು, ಹೊಸ ಆಫರ್ ನಿಗದಿತ ಅವಧಿಯಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.

ಇನ್ನು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾರ ವಿವಿಧ ಬ್ಯಾಟರಿ ರೇಂಜ್ ಹೊಂದಿರುವ ಲಿಯೋ ಮತ್ತು ಲೈಫ್ ಎನ್ನುವ ಎರಡು ಇವಿ ಸ್ಕೂಟರ್ ಪರಿಚಯಿಸಿದ್ದು, ಹೊಸ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ. 65,500 ರಿಂದ ಪ್ರಾರಂಭಗೊಳ್ಳುತ್ತದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಎಕ್ಸ್ಟೆಂಡ್ ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಎಕ್ಸ್ಟೆಂಡ್ ವೆರಿಯೆಂಟ್ ಮಾದರಿಗಳೇ ಹಾಪ್ ಇವಿ ಸ್ಕೂಟರ್‌ಗಳ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿವೆ.

ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.7kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಲೈಫ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.0kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 50 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಈ ಮೂಲಕ ಎರಡು ಸ್ಕೂಟರ್‌ಗಳಲ್ಲಿ ಎಕ್ಸ್ಟೆಂಡ್ ಮಾದರಿಗಳು ಡ್ಯುಯಲ್ ಲೀ-ಅಯಾನ್ ಬ್ಯಾಟರಿ ಬ್ಯಾಕ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 125 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

ಹೊಸ ಸ್ಕೂಟರ್ ಪ್ರತಿ ಮಾದರಿಯು 72ವಿ ಆರ್ಕಿಟೆಕ್ಚರ್ ಬಾಡಿ ತಂತ್ರಜ್ಞಾನ ಹೊಂದಿದ್ದು, ಗರಿಷ್ಠು 180 ಕೆ.ಜಿ ಲೋಡಿಂಗ್ ಸಾಮಾರ್ಥ್ಯದೊಂದಿಗೆ 19.5-ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಪಡೆದುಕೊಂಡಿದೆ.

ಜೊತೆಗೆ ಹೊಸ ಇವಿ ಸ್ಕೂಟರ್‌ಗಳಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಡ್ಯುಯಲ್ ಟೋನ್ ಗ್ರಾಫಿಕ್ಸ್, ಜಿಪಿಎಸ್ ಕನೆಕ್ಟಿವಿಟಿ, ಸೈಡ್ ಸ್ಟ್ಯಾಂಡ್ ಸೆನ್ಸಾರ್, ವಿವಿಧ ರೈಡ್ ಮೋಡ್, ಎಲ್ಇಡಿ ಕನ್ಸೋಲ್, ರಿಮೋಟ್ ಕೀ, ಆ್ಯಂಟಿ ಥೇಫ್ಟ್ ಅಲಾರಾಂ, ವೀಲ್ಹ್ ಲಾಕ್ ಸಿಸ್ಟಂ ಸೌಲಭ್ಯಗಳಿವೆ.

ಈ ಮೂಲಕ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಕಿ.ಮೀ ಗೆ 20 ಪೈಸೆಗಿಂತಲೂ ಕಡಿಮೆ ರನ್ನೀಂಗ್ ಕಾಸ್ಟ್ ಹೊಂದಿದ್ದು, ಸದ್ಯಕ್ಕೆ ಕೆಲವೇ ನಗರಗಳಲ್ಲಿ ಮಾರಾಟ ಹೊಂದಿರುವ ಹಾಪ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ವಿವಿಧ ನಗರಗಳಲ್ಲಿ ಮಾರಾಟ ಆರಂಭಿಸುತ್ತಿದೆ.