ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಭವಿಷ್ಯ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಅಗ್ನಿ ಅಪಘಡ ಪ್ರಕರಣಗಳು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿದ್ದು, ಹೆಚ್ಚುತ್ತಿರುವ ಅಗ್ನಿ ಅವಘಡ ಪ್ರಕರಣಗಳಿಗೆ ನಿಖರ ಕಾರಣ ಪತ್ತೆಹಚ್ಚಲು ಕೇಂದ್ರ ಸಾರಿಗೆ ಇಲಾಖೆಯು ಇತ್ತೀಚೆಗೆ ತನಿಖಾ ಸಮಿತಿಯೊಂದನ್ನು ರಚಿಸಿ ವರದಿ ಸಲ್ಲಿಸುವಂತೆ ಆದೇಶಿಸುತ್ತಿತ್ತು.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಅಗ್ನಿ ಅವಘಡಗಳ ಕುರಿತು ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಂಡಿದ್ದ ತನಿಖಾ ಸಮಿತಿಯು ಇದೀಗ ಪ್ರಾಥಮಿಕ ವರದಿ ಸಲ್ಲಿಸಿದ್ದು, ವರದಿಯಲ್ಲಿ ತನಿಖಾ ಸಮಿತಿಯು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಕಂಡುಬರುತ್ತಿರುವ ಅಗ್ನಿ ಅವಘಡಗಳಿಗೆ ಬ್ಯಾಟರಿ ವಿಭಾಗದಲ್ಲಿನ ಕೂಲಿಂಗ್ ತಂತ್ರಜ್ಞಾನದ ಕೊರತೆಯೇ ಘಟನೆಗಳಿಗೆ ಮುಖ್ಯ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ದೀರ್ಘಕಾಲಿಕ ಪ್ರಯಾಣದ ನಂತರ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಮಟ್ಟದ ಶಾಖ ಉತ್ಪತ್ತಿಯಾಗಲಿದ್ದು, ಇದರಿಂದ ಬ್ಯಾಟರಿಗಳಲ್ಲಿನ ಶೆಲ್‌ಗಳಲ್ಲಿ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.

ಹೀಗಾಗಿ ಬ್ಯಾಟರಿ ವಿಭಾಗದಲ್ಲಿ ಸೂಕ್ತವಾದ ಕೂಲಿಂಗ್ ತಂತ್ರಜ್ಞಾನ ಅಳವಡಿಸದ ಹೊರತು ಇಂತಹ ಘಟನೆಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸುವ ಎಚ್ಚರಿಕೆ ನೀಡಲಾಗಿದ್ದು, ಬ್ಯಾಟರಿಗಳಲ್ಲಿ ಕೂಲಿಂಗ್ ತಂತ್ರಜ್ಞಾನವನ್ನು ಈಗಾಗಲೇ ವಿವಿಧ ಇವಿ ಕಾರುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಆದರೆ ಬಜೆಟ್ ಬೆಲೆ ಇವಿ ಸ್ಕೂಟರ್‌ಗಳಲ್ಲಿ ತಂತ್ರಜ್ಞಾನ ಕೊರತೆ ಹೆಚ್ಚಿದ್ದು, ಇದೇ ಕಾರಣಕ್ಕೆ ಸ್ಕೂಟರ್‌ಗಳು ಚಾಲನೆಯಿರುವಾಗಲೇ ಕೆಲವೊಮ್ಮೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಸದ್ಯಕ್ಕೆ ಇವಿ ವಾಹನಗಳಲ್ಲಿನ ಅಗ್ನಿ ಅವಘಡ ಕುರಿತಾಗಿ ಇದು ತನಿಖೆಯ ಪ್ರಾಥಮಿಕ ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತನಿಖಾ ತಂಡವು ಸ್ಪಷ್ಟನೆ ನೀಡಿದೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ತನಿಖಾ ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹಂಚಿಕೊಳ್ಳಲಾಗಿದ್ದು, ಬಜೆಟ್ ಬೆಲೆಗಾಗಿ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವ ವಾಹನ ತಯಾರಕ ಕಂಪನಿಗಳ ವಿರುದ್ದ ಏಕೆ ಕಾನೂನು ಕ್ರಮಕೈಗೊಳ್ಳಬಾರದೆಂದು ಪ್ರಶ್ನಿಸಿದೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಹೀಗಾಗಿ ಮುಂಬರುವ ದಿನಗಳಲ್ಲಿ ಕಂಪನಿಯು ಇವಿ ವಾಹನಗಳ ಉತ್ಪಾದನೆಗಾಗಿ ಮತ್ತು ಬ್ಯಾಟರಿ ಪ್ಯಾಕ್ ಸುರಕ್ಷತೆಗಾಗಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲು ಸಜ್ಜಾಗುತ್ತಿದ್ದು, ಮುಂಬರುವ ಅಗಸ್ಟ್ ಹೊತ್ತಿಗೆ ಇವಿ ವಾಹನಗಳ ಹೊಸ ಮಾರ್ಗಸೂಚಿವು ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಹೊಸ ಉತ್ಪಾದನಾ ಮಾರ್ಗಸೂಚಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟ, ಬ್ಯಾಟರಿ ಸುರಕ್ಷತೆ ಸೇರಿದಂತೆ ವಿವಿಧ ಹಂತಗಳಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಪದೇ ಪದೇ ಅಗ್ನಿ ಅವಘಡ ಪ್ರಕರಣಗಳು ಕಂಡು ಬಂದರೆ ಅಂತಹ ಕಂಪನಿಗಳಿಗೆ ಭಾರಿ ದಂಡ ವಿಧಿಸಲಾಗುವುದು ಮತ್ತು ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು ಎಂದು ಕೇಂದ್ರ ಸಾರಿಗೆ ಇಲಾಖೆಯು ಕಳೆದ ತಿಂಗಳ ಹಿಂದಷ್ಟೇ ಖಡಕ್ ಸೂಚನೆ ನೀಡಿತ್ತು.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ದೇಶದ ವಿವಿಧ ಭಾಗಗಳಲ್ಲಿ ಪ್ಯೂರ್ ಇವಿ, ಓಲಾ ಇ-ಸ್ಕೂಟರ್‌ಗಳು, ಓಕಿನಾವಾ ಮತ್ತು ಜಿತೇಂದ್ರ ಇ-ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಅಗ್ನಿ ಅವಘಡ ಪ್ರಕರಣಗಳು ವರದಿಯಾಗಿದ್ದು, ಹಲವು ಇವಿ ತಯಾರಕರು ಅಗ್ನಿ ಅವಘಡಕ್ಕೆ ಸಿಲುಕಿದ ಸ್ಕೂಟರ್‌ಗಳ ಸಂಪೂರ್ಣ ಬ್ಯಾಚ್‌ಗಳನ್ನು ಹಿಂಪಡೆದಿದ್ದಾರೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ದುಬಾರಿ ಇಂಧನಗಳ ಪರಿಣಾಮ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇವಿ ವಾಹನಗಳ ಮಾರಾಟದಲ್ಲಿ ಮೊದಲ ಬಾರಿಗೆ ಗಮನಾರ್ಹವಾದ ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿಯೇ ಇವಿ ವಾಹನಗಳಿಂದಾಗುತ್ತಿರುವ ಅನಾಹುತಗಳು ಭವಿಷ್ಯದಲ್ಲಿ ಮತ್ತಷ್ಟು ಹಾನಿ ಉಂಟುಮಾಡುವ ಆತಂಕ ಸೃಷ್ಠಿಸಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇವಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಣಾಮ ಕಳೆದ 2 ವರ್ಷಗಳ ಅಂತರದಲ್ಲಿ ಹಲವಾರು ಇವಿ ಸ್ಟಾರ್ಟ್ಅಪ್ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇವಿ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್‌ಗಳ ಮಾರಾಟವು ಅಗ್ರಸ್ಥಾನ ಹೊಂದಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಆದರೆ ಇವಿ ಸ್ಕೂಟರ್‌ಗಳಿಂದಾಗುತ್ತಿರುವ ಅನಾಹುತಗಳು ಇವಿ ವಾಹನ ಬಳಕೆದಾರರನ್ನು ಆತಂಕಕ್ಕೀಡು ಮಾಡಿದ್ದು, ದೇಶದ ವಿವಿಧಡೆ ದಿನಕ್ಕೊಂದು ಬ್ಯಾಟರಿ ಸ್ಪೋಟ ಪ್ರಕಟಗಳು ದಾಖಲಾಗುತ್ತಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಇತ್ತೀಚೆಗೆ ದಾಖಲಾಗಿದ್ದ ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ ಪ್ರಕರಣದಲ್ಲಿ 40 ವರ್ಷದ ಓರ್ವ ಬಲಿಯಾಗಿದ್ದು, ಬ್ಯಾಟರಿ ಚಾರ್ಜಿಂಗ್ ಸಂದರ್ಭದಲ್ಲಿಯೇ ಈ ದುರಂತ ನಡೆದಿತ್ತು. ಸ್ಪೋಟದ ರಭಸಕ್ಕೆ ಪಕ್ಕದಲ್ಲಿಯೇ ಇದ್ದ ವಿಜಯವಾಡ ಮೂಲದ ಶಿವಕುಮಾರ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಆತನ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಂಭೀರ ಗಾಯಗಳಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಇವಿ ಸ್ಕೂಟರ್ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಇವಿ ಸ್ಕೂಟರ್ ಮಾದರಿಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಆದರೆ ಇವಿ ಸ್ಕೂಟರ್ ಬೇಡಿಕೆ ಹೆಚ್ಚುತ್ತಿದ್ದರೂ ಭವಿಷ್ಯದ ವಾಹನಗಳ ಕುರಿತಾಗಿ ಗ್ರಾಹಕರಲ್ಲಿ ಇನ್ನು ಕೂಡಾ ಹಲವಾರು ಅನುಮಾನ ಮತ್ತು ಗೊಂದಲಗಳಿದ್ದು, ಅದು ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡ ಪ್ರಕರಣಗಳು ಗ್ರಾಹಕರಲ್ಲಿ ಇನ್ನಷ್ಟು ಗೊಂದಲ ಮೂಡಿಸುತ್ತಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವುದು, ಬಿಡಿಭಾಗಗಳು ಬಹುಬೇಗನೆ ಹಾಳಾಗುತ್ತಿರುವ ಪ್ರಕರಣಗಳು ಗ್ರಾಹಕರಲ್ಲಿ ಇವಿ ವಾಹನಗಳ ಬಗೆಗೆ ವಿಶ್ವಾಸ ಮೂಡಿಸುವ ಬದಲಾಗಿ ಅನುಮಾನಗಳನ್ನು ಹುಟ್ಟುಹಾಕುತ್ತಿವೆ.

ಇವಿ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ

ಹೀಗಾಗಿ ಇವಿ ಸ್ಕೂಟರ್‌ಗಳಲ್ಲಿನ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಅವಘಡ ಪ್ರಕರಣಗಳನ್ನು ತಗ್ಗಿಸಲು ತಂತ್ರಜ್ಞಾನ ಅಭಿವೃದ್ದಿಯಲ್ಲಿ ಇನ್ನಷ್ಟು ಸುಧಾರಿಸುವ ಅವಶ್ಯಕತೆ ಸ್ಪಷ್ಟವಾಗಿಸಿದ್ದು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ವಾಹನ ತಯಾಕರಕ ಕಂಪನಿಗಳು ಎಚ್ಚರವಹಿಸಬೇಕಿದೆ.

More from DriveSpark

Article Published On: Thursday, June 30, 2022, 12:55 [IST]
English summary
Inefficient battery cooling system leads to fire in ev scooter details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+