ಮಧ್ಯಮ ವರ್ಗದ ಫೇವರೆಟ್ ಬಜಾಜ್ ಪಲ್ಸರ್ P150 ಖರೀದಿಸುವ ಮುನ್ನ ಈ ವಿಷಯಗಳು ನೆನಪಿರಲಿ

ಬಜಾಜ್ ಆಟೋ ಅಂತಿಮವಾಗಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೊಸ ಪಲ್ಸರ್ P150 ಅನ್ನು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಈ ಹೊಸ ಬೈಕನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು ಖರೀದಿಗೂ ಮುನ್ನ ಇದರ ಪರ್ಫಾಮೆನ್ಸ್, ವೈಶಿಷ್ಟ್ಯಗಳು, ಪವರ್, ವಿನ್ಯಾಸ ಸೇರಿದಂತೆ ಪ್ರಮುಖ 5 ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ಮುಖ್ಯಾಂಶಗಳು ಬೈಕನ್ನು ಖರೀದಿಸಬಹುದೇ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆಯನ್ನು ನೀಡುತ್ತದೆ.

ಮಧ್ಯಮ ವರ್ಗದ ಫೇವರೆಟ್ ಬಜಾಜ್ ಪಲ್ಸರ್ P150 ಖರೀದಿಸುವ ಮುನ್ನ ಈ ವಿಷಯಗಳು ನೆನಪಿರಲಿ

ಬೆಲೆ ಮತ್ತು ರೂಪಾಂತರಗಳು
ಬಜಾಜ್ ತನ್ನ ಮೋಟಾರ್‌ಸೈಕಲ್‌ಗಳನ್ನು ಯಾವಾಗಲೂ ತನ್ನ ಪ್ರತಿಸ್ಪರ್ಧಿಗಳಿಗೆ ಆಯಾ ವಿಭಾಗದಲ್ಲಿ ಆಕ್ರಮಣಕಾರಿ ಬೆಲೆಯೊಂದಿಗೆ ಪರಿಚಯಿಸುತ್ತದೆ. ಇದೀಗ ಬಜಾಜ್ ಪಲ್ಸರ್ P150 ವಿಷಯದಲ್ಲೂ ಅದನ್ನೇ ನೋಡಬಹುದು. ಸದ್ಯ ಕಂಪನಿಯು ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಮೂಲ ರೂಪಾಂತರ ಮಾದರಿಯು ಕೇವಲ ಮುಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ ಹಾಗೂ ಸಿಂಗಲ್-ಪೀಸ್ ಸೀಟ್‌ನೊಂದಿಗೆ ಬರುತ್ತದೆ. ಬಜಾಜ್ ಪಲ್ಸರ್ P150 ನ ಈ ರೂಪಾಂತರವು ರೂ. 1.17 ಲಕ್ಷ (ಎಕ್ಸ್ ಶೋ ರೂಂ, ಭಾರತ)ರೂ.ಗೆ ಖರೀದಿಗೆ ಲಭ್ಯವಿದೆ.

ಮತ್ತೊಂದೆಡೆ ರೂ. 1.20 ಲಕ್ಷ (ಎಕ್ಸ್ ಶೋರೂಂ, ಭಾರತ)ಬೆಲೆಯಲ್ಲಿ ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್‌ನ ಟಾಪ್-ಸ್ಪೆಕ್ ರೂಪಾಂತರವು ಖರೀದಿಗೆ ಲಭ್ಯವಿದೆ. ಇದನ್ನು ಉತ್ತಮ ನಿಲುಗಡೆ ಶಕ್ತಿಗಾಗಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇದರಲ್ಲಿ ಸ್ಪ್ಲಿಟ್ ಸೀಟ್ ಸೆಟಪ್ ಕೂಡ ನೀಡಲಾಗಿದೆ. ಈ ಬೆಲೆಗಳು ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಕ್ಕಿರುವ 150ಸಿಸಿ ಬೈಕ್‌ಗಳಿಗೆ ಉತ್ತಮ ಪೈಪೋಟಿಯಾಗಲಿವೆ. ಬಜಾಜ್ ತನ್ನ ಈ ಎರಡೂ ರೂಪಾಂತರಗಳು ಕ್ಲಿಕ್ ಆಗುವ ನಿರೀಕ್ಷೆಯಲ್ಲಿದೆ.

ಮಧ್ಯಮ ವರ್ಗದ ಫೇವರೆಟ್ ಬಜಾಜ್ ಪಲ್ಸರ್ P150 ಖರೀದಿಸುವ ಮುನ್ನ ಈ ವಿಷಯಗಳು ನೆನಪಿರಲಿ

ಎಂಜಿನ್ ಮತ್ತು ಗೇರ್ ಬಾಕ್ಸ್
ಹೊಸದಾಗಿ ಬಿಡುಗಡೆಯಾದ ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್ 149.68cc, ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ ಪವರ್ ಮಾಡಲಾಗಿದೆ. ಈ ಎಂಜಿನ್ 8,500rpm ನಲ್ಲಿ 14.5bhp ಗರಿಷ್ಠ ಶಕ್ತಿಯನ್ನು ಮತ್ತು 6,000rpm ನಲ್ಲಿ 13.5Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ರೈಡಿಂಗ್ ವೇಳೆ ಗೇರ್ ಶಿಫ್ಟಿಂಗ್ ಮಾಡುವಾಗ ಉತ್ತಮ ರೈಡಿಂಗ್ ಅನುಭವ ನೀಡುತ್ತದೆ.

ಈ ಹೊಸ ಪವರ್‌ಟ್ರೇನ್‌ನ ಕುತೂಹಲಕಾರಿ ಅಂಶವೆಂದರೆ ಕಂಪನಿಯು ಬಳಸಬಹುದಾದ ರೇವ್ ಶ್ರೇಣಿಯೊಳಗೆ ಶೇ 90 ರಷ್ಟು ಟಾರ್ಕ್ ಅನ್ನು ತಲುಪಿಸಲು ಬಜಾಜ್ ಕಂಪನಿಯು ಎಂಜಿನ್ ಅನ್ನು ಟ್ಯೂನ್ ಮಾಡಿದೆ. ಇದು ಹೊಸ ಪಲ್ಸರ್ P150 ಮೋಟಾರ್‌ಸೈಕಲ್ ವಿಶೇಷವಾಗಿ ಟ್ರಾಫಿಕ್‌ನಲ್ಲಿ ಹೆಚ್ಚು ಉತ್ಸುಕತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಥ್ರಾಟಲ್ ಹೆಚ್ಚಿಸಿದ ವೇಳೆ ಎಂಜಿನ್ ಪವರ್ ಬೂಸ್ಟ್ ಆದಾಗ ನಮಗೆ ಉತ್ತಮ ರೈಡಿಂಗ್ ಅನುಭವ ನೀಡುತ್ತದೆ.

ಸಸ್ಪೆನ್ಷನ್, ಟೈರ್ ಮತ್ತು ಬ್ರೇಕ್‌
ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್ ಅನ್ನು ಮುಂಭಾಗದಲ್ಲಿ 31 ಎಂಎಂ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್‌ ಸಸ್ಪೆನ್ಷನ್ ನೀಡಲಾಗಿದೆ. ಟೈರ್‌ಗಳನ್ನು ನೋಡುವುದಾದರೆ, ಹೊಸದಾಗಿ ಬಿಡುಗಡೆಯಾದ ಬಜಾಜ್ ಪಲ್ಸರ್ p150 ಮೋಟಾರ್‌ಸೈಕಲ್ ಎರಡೂ ತುದಿಗಳಲ್ಲಿ 17-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಈ ಅಲಾಯ್ ವೀಲ್‌ಗಳು ಮುಂಭಾಗದಲ್ಲಿ 90/90-17 ಟೈರ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಅಗಲವಾದ 110/80-17 ಟೈರ್‌ಗಳನ್ನು ಹೊಂದುವ ಮೂಲಕ ಸ್ಟೈಲಿಷ್ ಆಗಿ ಕಾಣುತ್ತದೆ.

ವೈಶಿಷ್ಟ್ಯಗಳು
ಹೊಸ ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್ ಬೈ-ಫಂಕ್ಷನಲ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಪೈಲಟ್ ಲ್ಯಾಂಪ್, LED ಟೈಲ್‌ಲೈಟ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು (ಸ್ಪ್ಲಿಟ್ ಸೀಟ್ ವೇರಿಯಂಟ್), USB ಚಾರ್ಜರ್, ಡಿಜಿಟಲ್-ಅನಾಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, DTE ರೀಡ್-ಔಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಗೇರ್ ಶಿಫ್ಟ್ ಇಂಡಿಕೇಟರ್, ಸಿಂಗಲ್-ಚಾನೆಲ್ ABS ಸೇರಿದಂತೆ ಈ ಹಿಂದಿನ ಪಲ್ಸರ್ ಮಾದರಿಗಳಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡು ಹೊಸ ಬಜಾಜ್ ಪಲ್ಸರ್ P150 ಬಿಡುಗಡೆಯಾಗಿದೆ.

ಹೊಸದಾಗಿ ಬಿಡುಗಡೆಯಾದ ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್ 5 ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ರೇಸಿಂಗ್ ರೆಡ್, ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್ ರೆಡ್, ಎಬೊನಿ ಬ್ಲ್ಯಾಕ್ ಬ್ಲೂ ಮತ್ತು ಎಬೊನಿ ಬ್ಲ್ಯಾಕ್ ವೈಟ್‌ನಂತಹ ಶೇಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಕೆಲವು ಹೊಸ ಬಣ್ಣಗಳಾಗಿರುವುದರಿಂದ ಬೈಕ್‌ಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಜೊತೆಗೆ ಈಗಾಗಲೇ ಮಾರಾಟದಲ್ಲಿರುವ ಹಳೆಯ 150 ಸಿಸಿ ಬೈಕಿಗೂ ಉತ್ತಮ ಬೇಡಿಕೆಯಿದೆ. ಹಾಗಾಗಿ ಹೊಸ ಬೈಕ್‌ಗಳಿಗೂ ಉತ್ತಮ ಬೇಡಿಕೆ ಬರಲಿದೆ ಎಂದು ಕಂಪನಿ ಆಶಿಸಿದೆ.

ಬಜಾಜ್ ಕಂನಿಯು ಪಲ್ಸರ್ ಆವೃತ್ತಿಯನ್ನು ಆರಂಭಿಸಿದಾಗ 150 ಸಿಸಿ ಮಾದರಿಗಳಿಂದಲೇ ಹೆಚ್ಚು ಜನಪ್ರಿಯವಾದ ಕಾರಣ ಕಂಪನಿಯು ಈ ಆವೃತ್ತಿಯನ್ನು ನವೀಕರಣಗಳ ಮೂಲಕ ಇಂದಿಗೂ ಖರೀದಿಗೆ ಲಭ್ಯವಾಗಿಸಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲದ್ದರೇ ಕೂಡಲೇ ನಿಮ್ಮ ನೆಚ್ಚಿನ ಆಟೋ ಸುದ್ದಿಗಳನ್ನು ಪಡಿಯಬಹುದು.

Most Read Articles

Kannada
English summary
Keep these things in mind before buying the middle class favorite Bajaj Pulsar P 150
Story first published: Wednesday, November 23, 2022, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X