ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಿದ ನಂತರ ಕೊಮಾಕಿ ಕಂಪನಿಯು ಇದುವರೆಗೆ 30 ಸಾವಿರಕ್ಕೂ ಯುನಿಟ್ ಇವಿ ಸ್ಕೂಟರ್ ಮಾರಾಟ ಮಾಡಿದ್ದು, ಹೊಸ ಉತ್ಪನ್ನಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಹೈ ಸ್ಪೀಡ್ ಸ್ಕೂಟರ್ ಜೊತೆಗೆ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಈಗಾಗಲೇ ಫೇಮ್ 2 ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಜೊತಗೆ ರಾಜ್ಯ ಸರ್ಕಾರಗಳು ಸಹ ಇವಿ ವಾಹನ ಬಳಕೆ ಹೆಚ್ಚಳಕ್ಕೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರನ್ನು ಉತ್ತೇಜಿಸಲು ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕ ಮನ್ನಾದಂತಹ ಯೋಜನೆಗಳನ್ನು ಪ್ರಕಟಿಸಿ ಇವಿ ವಾಹನ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ವಿವಿಧ ಸ್ಟಾರ್ಟ್ಅಪ್ ಕಂಪನಿಗಳು ಹೊಸ ಮಾದರಿಯ ಇವಿ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ದೆಹಲಿ ಮೂಲದ ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದ್ದು, ಕ್ರೂಸರ್ ಇವಿ ಬೈಕ್ ಮಾದರಿಯು ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸುವ ನೀರಿಕ್ಷೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ರೇಂಜರ್ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಕೊಮಾಕಿ ಇವಿ ಕ್ರೂಸರ್ ಬೈಕ್ ಮಾದರಿಯು 4kWh ಲೀಥಿಯಂ ಬ್ಯಾಟರಿ ಜೊತೆಗೆ 5,000 ವ್ಯಾಟ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಇದು ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ 200 ಕಿ.ಮೀ ನಿಂದ 250 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎನ್ನಲಾಗಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಆದರೆ ನೈಜ ರಸ್ತೆ ಚಾಲನೆಯಲ್ಲಿ ನೀಡುವ ಮೈಲೇಜ್ ಆಧರಿಸಿ ನಿಖರ ಮಾಹಿತಿ ನೀಡಬಹುದಾಗಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಬೈಕ್ ಅಧಿಕೃತವಾಗಿ ರಸ್ತೆಗಿಳಿಯಲಿದೆ ಎನ್ನಲಾಗಿದೆ. ರೇಂಜರ್ ಕ್ರೂಸರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಕಂಪನಿಯು ಕ್ರೂಸ್ ಕಂಟ್ರೋಲ್, ರಿಪೇರಿ ಸ್ವಿಚ್, ರಿವರ್ಸ್ ಸ್ವಿಚ್, ಬ್ಲೂಟೂತ್ ಮತ್ತು ಸುಧಾರಿತ ಬ್ರೇಕಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಸಹ ನೀಡಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಮೊದಲ ನೋಟದಲ್ಲಿ ಇದು ಬಜಾಜ್ ಕ್ರೂಸರ್ ಬೈಕ್ ಮಾದರಿಯ ವಿನ್ಯಾಸವನ್ನೇ ಸ್ವಲ್ಪ ಮಾರ್ಪಡಿಸಿದ ಆವೃತ್ತಿಯಂತೆ ಕಂಡರೂ ವಿಭಿನ್ನವಾದ ವಿನ್ಯಾಸದ ಅಂಶಗಳು ಸುಲಭವಾಗಿ ಗೋಚರಿಸಲಿದ್ದು, ಕ್ರೋಮ್ ಟ್ರಿಮ್‌ನೊಂದಿಗೆ ರೆಟ್ರೊ-ಥೀಮ್ ರೌಂಡ್ ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಹೆಡ್‌ಲ್ಯಾಂಪ್‌ಗಾಗಿ ರೆಟ್ರೊ ಮಾದರಿಯ ಸೈಡ್ ಇಂಡಿಕೇಟರ್‌ಗಳು ಸಹ ಬೈಕಿ ಅಂದವನ್ನು ಹೆಚ್ಚಿಸಿದ್ದು, ಬಜಾಜ್ ಕ್ರೂಸರ್‌ಗೆ ಹೋಲುವ ಕೆಲವು ವಿನ್ಯಾಸ ಅಂಶಗಳು ರ್ಯಾಕ್ಡ್ ವೈಡ್ ಹ್ಯಾಂಡಲ್‌ಬಾರ್‌ಗಳು, ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಹೊಳೆಯುವ ಕ್ರೋಮ್-ಟ್ರೀಟೆಡ್ ಡಿಸ್ಪ್ಲೇ ಗ್ರಾಹಕರನ್ನು ಸೆಳೆಯುತ್ತವೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಇದರೊಂದಿಗೆ ವೃತ್ತಾಕಾರದ ಟೈಲ್‌ ಲೈಟ್, ಲೆಗ್ ಗಾರ್ಡ್‌ಗಳು, ಫಾಕ್ಸ್ ಎಕ್ಸಾಸ್ಟ್ ಮತ್ತು ಕಪ್ಪು ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದ್ದು, ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ ಯಾವುದೇ ಎಲೆಕ್ಟ್ರಿಕ್ ಕ್ರೂಸರ್ ಇಲ್ಲದಿರುವುದು ಇಲ್ಲಿ ಬ್ರ್ಯಾಂಡ್‌ನ ಪ್ರಾಬಲ್ಯ ಹೆಚ್ಚುವ ನೀರಿಕ್ಷೆಗಳಿವೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಈ ಮೂಲಕ ಕೊಮಾಕಿ ಕಂಪನಿಯ ಹೊಸ ಬೈಕ್ ಮಾದರಿಯನ್ನು ಅತ್ಯುತ್ತಮ ಮೈಲೇಜ್ ಆಕರ್ಷಕ ಹೊರನೋಟ ಮತ್ತು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದು, ಬ್ಯಾಟರಿ ಪ್ಯಾಕ್ ಆಧರಿಸಿ ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.20 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಕೊಮಾಕಿ ಕಂಪನಿಯು ಸದ್ಯ ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಲೋ-ಸ್ಪೀಡ್ ಮಾದರಿಗಳಲ್ಲಿ ಎಕ್ಸ್‌ಜಿಟಿ ಸರಣಿಗಳನ್ನು ಮತ್ತು ಹೈ ಸ್ಪೀಡ್ ಮಾದರಿಗಳಲ್ಲಿ ಟಿಎನ್ 95, ಎಂ-5, ಎಸ್ಇ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಲೋ ಸ್ಪೀಡ್ ಸ್ಕೂಟರ್‌ಗಳಲ್ಲಿ ಎಕ್ಸ್‌ಜಿಟಿ ಸರಣಿಯ ಎಕ್ಸ್ ಒನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾಲ್ ಬ್ಯಾಟರಿ ಆಯ್ಕೆ ಹೊಂದಿರುವ ಈ ಸ್ಕೂಟರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ಮೈಲೇಜ್ ನೀಡುವ ರೇಂಜರ್ ಇವಿ ಕ್ರೂಸರ್ ಬೈಕ್ ಬಿಡುಗಡೆ ಮಾಡಲಿದೆ ಕೊಮಾಕಿ

ಕೊಮಾಕಿ ಕಂಪನಿಯು ವಿವಿಧ ಮಾದರಿಯೊಂದಿಗೆ ಮೂರು ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಟಿಎನ್95 ಸ್ಕೂಟರ್, ಕೊಮಾಕಿ ಎಂ5 ಬೈಕ್ ಮತ್ತು ಕೊಮಾಕಿ ಎಸ್ಇ ಸ್ಕೂಟರ್ ಮಾದರಿಗಳನ್ನು ಮಾರಾಟದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.

Most Read Articles

Kannada
Read more on ಕೊಮಾಕಿ komaki
English summary
Komaki electric cruiser motorcycle revealed ahead of launch
Story first published: Wednesday, January 19, 2022, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X