ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಇವಿ ವಾಹನ ಉದ್ಯಮದಲ್ಲಿ ಇತ್ತೀಚೆಗೆ ನಡೆದ ಅಗ್ನಿ ಅವಘಡ ಪ್ರಕರಣಗಳು ಇವಿ ವಾಹನ ಮಾರಾಟದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತಿದ್ದು, ಇವಿ ವಾಹನಗಳ ಕುರಿತಾಗಿ ಗ್ರಾಹಕರಲ್ಲಿ ಹೆಚ್ಚುತ್ತಿರುವ ಗೊಂದಲವನ್ನು ತೊಡೆದುಹಾಕಲು ಕೊಮಾಕಿ ಕಂಪನಿಯು ವಿಶ್ವಾಸರ್ಹಮತ್ತು ಸುರಕ್ಷಿತ ಇವಿ ಬ್ಯಾಟರಿ ಸಿದ್ದಪಡಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಇವಿ ದ್ವಿಚಕ್ರವಾಹನಗಳಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳನ್ನು ತಪ್ಪಿಸಲು ಉತ್ಪಾದನಾ ಕಂಪನಿಗಳಿಗೆ ಕೇಂದ್ರ ಸರ್ಕಾರವು ಹಲವಾರು ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸುತ್ತಿದ್ದು, ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ನೀಡುವ ಉದ್ದೇಶದಿಂದ ಕೊಮಾಕಿ ಕಂಪನಿಯು ಅಗ್ನಿ ನಿರೋಧಕ ವೈಶಿಷ್ಟ್ಯತೆ ಹೊಂದಿರುವ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್ ಪರಿಚಯಿಸುತ್ತಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಸಾಮಾನ್ಯ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತಲೂ ಉತ್ತಮವಾಗಿರುವ ಲಿಥಿಯಂ-ಐಯಾನ್ ಫೆರೋ ಫಾಸ್ಫೇಟ್Lithium-Ion Ferro Phosphate (LiFePO4) ಇವಿ ಬ್ಯಾಟರಿ ಪ್ಯಾಕ್ ತೀವ್ರ ತಾಪಮಾನದಲ್ಲೂ ಉತ್ತಮ ಕಾರ್ಯನಿರ್ವಹಣೆ ಹೊಂದಿವೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

LiFePO4 ಬ್ಯಾಟರಿಗಳಲ್ಲಿ ಹೆಚ್ಚಿನ ಪ್ರಮಾಣ ಕಬ್ಬಿಣದ ಅಂಶಗಳನ್ನು ನೀಡಲಾಗಿರುವುದರಿಂದ ಬ್ಯಾಟರಿ ಪ್ಯಾಕ್‌ನೊಳಗೆ ನೇರವಾಗಿ ಉತ್ಪತ್ತಿಯಾಗುವ ಸಂಚಿತ ಶಾಖವನ್ನು ತಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದ್ದು, ಬ್ಯಾಟರಿ ಕೋಶಗಳನ್ನು ಸಕ್ರಿಯವಾಗಿ ಸಮತೋಲನಗೊಳಿಸುತ್ತದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಇದರ ಜೊತಗೆ ಹೊಸ ಬ್ಯಾಟರಿ ಪ್ಯಾಕ್ 2,500-3,000 ಬಾರಿ ರೀಚಾರ್ಜ್ ಸೌಲಭ್ಯದೊಂದಿಗೆ ದೀರ್ಘಾವಧಿಯ ಅವಧಿಯನ್ನು ಹೊಂದಿರಲಿದ್ದು, ಉತ್ತಮ ಬ್ಯಾಟರಿ ಕಾರ್ಯಕ್ಷಮತೆಯನ್ನು ಸಹ ಖಾತ್ರಿಪಡಿಸುತ್ತದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

300 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್

ಕೊಮಾಕಿ ನಿರ್ಮಾಣದ ಹೊಸ ಬ್ಯಾಟರಿ ಪ್ಯಾಕ್‌ಗಳು ಒಂದೇ ಚಾರ್ಜ್‌ನಲ್ಲಿ 300 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತವೆ ಎಂದು ಹೇಳಲಾಗಿದ್ದು, ಹೊಸ ಬ್ಯಾಟರಿ ಪ್ಯಾಕ್ ಕಾರ್ಯನಿರ್ವಹಣೆಯ ಹೇಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಪನಿಯು ಇದವರೆಗೂ ಸ್ಪಷ್ಟಪಡಿಸಿಲ್ಲ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಹೊಸ ಬ್ಯಾಟರಿ ಪ್ಯಾಕ್ ಅನ್ನು ಕೊಮಾಕಿ ಕಂಪನಿಯು ತನ್ನ ಮುಂಬರುವ ಇವಿ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಯಲ್ಲಿ ಪರಿಚಯಸುವ ಸಿದ್ದತೆಯಲ್ಲಿದ್ದು, ಹೊಸ ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಮಾದರಿಗಳು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟಕಟ್ಟೆ ಪ್ರವೇಶಿಸಿವೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಇದರೊಂದಿಗೆ ಕಂಪನಿಯು ರಿಯಲ್ ಟೈಮ್ ಡೇಟಾ ಸುಲಭಗೊಳಿಸಲು ಅಪ್ಲಿಕೇಶನ್ ಆಧಾರಿತ ಸೇವೆಯನ್ನು ಸಹ ಪರಿಚಯಿಸಿದ್ದು, ಬ್ಯಾಟರಿಗಳ ಅನಗತ್ಯ ಚಾರ್ಜ್ ಮತ್ತು ಡಿಸ್ಚಾರ್ಜ್ ಅನ್ನು ತಪ್ಪಿಸುವುದರ ಜೊತೆಗೆ ಬ್ಯಾಟರಿಗೆ ಹಾನಿಯಾಗದಂತೆ ತಡೆಯುತ್ತದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಇನ್ನು ಗುರುಗ್ರಾಮ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಕೊಮಾಕಿ ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಕಂಪನಿಯು ಇತ್ತೀಚೆಗೆ ವೆನಿಸ್ ಇವಿ ಸ್ಕೂಟರ್ ಮತ್ತು ರೇಂಜರ್ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ವೆನಿಸ್ ಇವಿ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯಾಗಿರುವ ವೆನಿಸ್ ಆವೃತ್ತಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಕೊಮಾಕಿ ಕಂಪನಿಯು ಹೊಸ ವೆನಿಸ್ ಮಾದರಿಯೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಇವಿ ಸ್ಕೂಟರ್‌ಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಗರಿಷ್ಠ 120 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ವೆನಿಸ್ ಇವಿ ಸ್ಕೂಟರ್‌ನಲ್ಲೂ ವಿವಿಧ ರೈಡ್ ಮೋಡ್‌ಗಳಿದ್ದು, ಇಕೋ ಮೋಡ್‌ನಲ್ಲಿ ಹೆಚ್ಚು ಮೈಲೇಜ್ ಒದಗಿಸಲಿದ್ದರೆ ಹೈ ಸ್ಪೀಡ್ ಮೋಡ್‌ನಲ್ಲಿ ಸ್ಕೂಟರ್ ಮೈಲೇಜ್‌ನಲ್ಲಿ ತುಸು ಕಡಿಮೆಯಾಗಬಹುದಾಗಿದೆ

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಕೊಮಾಕಿ ಕಂಪನಿಯು ಸದ್ಯ ಲೋ-ಸ್ಪೀಡ್ ಮಾದರಿಗಳಲ್ಲಿ ಎಕ್ಸ್‌ಜಿಟಿ ಸರಣಿಗಳನ್ನು ಮತ್ತು ಹೈ ಸ್ಪೀಡ್ ಮಾದರಿಗಳಲ್ಲಿ ಟಿಎನ್ 95, ಎಂ-5, ಎಸ್ಇ ಮತ್ತು ಹೊಸದಾಗಿ ಬಿಡುಗಡೆ ವೆನಿಸ್ ಹಾಗೂ ರೇಂಜರ್ ಕ್ರೂಸರ್ ಬೈಕ್ ಮಾದರಿಗಳ ಮಾರಾಟ ಆರಂಭಿಸಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಹೊಸ ವೆನಿಸ್ ಮಾದರಿಯು ವಿವಿಧ ಹತ್ತು ಬಣ್ಣಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಹೊಸ ಸ್ಕೂಟರ್ ಮಾದರಿಯಲ್ಲಿ ಕಂಪನಿಯು 2.9 kWh ಬ್ಯಾಟರಿ ಪ್ಯಾಕ್ ಜೊತೆಗೆ 4 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದೆ.

ಅಗ್ನಿ ನಿರೋಧಕ ತಂತ್ರಜ್ಞಾನ ಪ್ರೇರಿತ ಹೊಸ ಇವಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದ ಕೊಮಾಕಿ

ಜೊತೆಗೆ ಹೊಸ ಸ್ಕೂಟರ್ ಮಾದರಿಯು ಸಾಮಾನ್ಯ ಇವಿ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಸೆಲ್ಪ್ ಡೈಗ್ನೊಸಿಸ್ ಸಿಸ್ಟಂ, ಮೊಬೈಲ್ ಚಾರ್ಜಿಂಗ್ ಪೋರ್ಟ್, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್ ಮತ್ತು ರಿವರ್ಸಿಂಗ್ ಅಸಿಸ್ಟ್ ಸೌಲಭ್ಯಗಳಿವೆ.

Most Read Articles

Kannada
Read more on ಕೊಮಾಕಿ komaki
English summary
Komaki launches fire proof batteries for upcoming evs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X