ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಆಸ್ಟ್ರೀಯಾದ ಬೈಕ್ ತಯಾರಕ ಕಂಪನಿಯಾಗಿರುವ ಕೆಟಿಎಂ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಬೈಕ್ ಮಾದರಿಗಳ 2022ರ ಆವೃತ್ತಿಗಳ ನವೀಕರಣಕ್ಕೆ ಚಾಲನೆ ನೀಡಿದ್ದು, ಕಂಪನಿಯು ಮೊದಲ ಹಂತದಲ್ಲಿ ತನ್ನ ಜನಪ್ರಿಯ 250 ಅಡ್ವೆಂಚರ್‌ ಆವೃತ್ತಿಯ ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

2022ರ ಕೆಟಿಎಂ 250 ಅಡ್ವೆಂಚರ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.35 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಹೊಸ ಬೈಕ್ ಮಾದರಿಯು ಕಳೆದ ವರ್ಷದ ಮಾದರಿಯಲ್ಲಿ ಎಂಜಿನ್ ಆಯ್ಕೆಯನ್ನೇ ಹೊಂದಿದ್ದರೂ ಹೊಸ ಮಾದರಿಗೆ ಕೆಟಿಎಂ ಕಂಪನಿಯು ಆಕರ್ಷಕ ಗ್ರಾಫಿಕ್ಸ್ ಮತ್ತು ಎರಡು ಹೊಸ ಬಣ್ಣಗಳ ಆಯ್ಕೆ ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಯ ಬೆಲೆ ಘೋಷಣೆಯೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ಬೈಕ್ ಖರೀದಿಗಾಗಿ ಕಂಪನಿಯು ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಹೊಸ 250 ಅಡ್ವೆಂಚರ್ ಬೈಕ್ ಖರೀದಿದಾಗಿ ವಿಶೇಷ ಹಣಕಾಸು ಸೌಲಭ್ಯವನ್ನು ಸಹ ಒದಗಿಸಲಾಗುತ್ತಿದ್ದು, ಗರಿಷ್ಠ ಸಾಲ ಸೌಲಭ್ಯದೊಂದಿಗೆ ಹೊಸ ಬೈಕ್ ಖರೀದಿಗಾಗಿ ಪ್ರತಿ ತಿಂಗಳು ರೂ. 6,300 ಇಎಂಐ ಆಯ್ಕೆ ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಹೊಸ ಬೈಕ್ ಮಾದರಿಯಲ್ಲಿ ಗ್ರಾಹಕರ ಆಕರ್ಷಣೆಗಾಗಿ ಮೇಲೆ ಹೇಳಿದಂತೆ ಸ್ಪೋರ್ಟಿ ಗ್ರಾಫಿಕ್ಸ್‌ನೊಂದಿಗೆ ಎರಡು ಹೊಸ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಗ್ರಾಹಕರು ಎಲೆಕ್ಟ್ರಾನಿಕ್ ಆರೇಂಜ್ ಮತ್ತು ಫ್ಯಾಕ್ಟರಿ ರೇಸಿಂಗ್ ಬ್ಲ್ಯೂ ಬಣ್ಣದ ಆಯ್ಕೆ ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

2022ರ ಮಾದರಿಯಾಗಿ ಗುರುತಿಸಲು ಬಣ್ಣದ ಆಯ್ಕೆಯಲ್ಲಿ ಹೊಸ ಗ್ರಾಫಿಕ್ಸ್ ವಿನ್ಯಾಸವನ್ನು ನೀಡಲಾಗಿದ್ದು, ಕಂಪನಿಯ ಎಂಟ್ರಿ ಲೆವಲ್ ಅಡ್ವೆಂಚರ್ ಮಾದರಿಯಾಗಿರುವ 250 ಎವಿಡಿ ಮಾದರಿಯಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಎಂಜಿನ್ ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಹೊಸ ಎಮಿಷನ್‌ಗೆ ಅನುಗುಣವಾಗಿ ಅಭಿವೃದ್ದಿಗೊಂಡಿರುವ 248 ಸಿಸಿ ಎಂಜಿನ್ ಮಾದರಿಯು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಆರು ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿದ್ದು, ಇದು 29.6 ಬಿಎಚ್‌ಪಿ ಮತ್ತು 24 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಕೆಟಿಎಂ ಕಂಪನಿಯು 250 ಅಡ್ವೆಂಚರ್ ಮೋಟಾರ್‌ಸೈಕಲ್ ಮಾದರಿಯನ್ನು ಸ್ಟೀಲ್-ಟ್ರೆಲ್ಲಿಸ್ ಫ್ರೇಮ್ ಮೂಲಕ ಅಭಿವೃದ್ದಿಪಡಿಸಿದ್ದು, ಇದು ಸಬ್‌ಫ್ರೇಮ್ ಮತ್ತು ಮಿಶ್ರಲೋಹದ ಚಕ್ರಗಳನ್ನು 390 ಅಡ್ವೆಂಚರ್ ಮಾದರಿಯಿಂದ ಎರವಲು ಪಡೆದಿದ್ದು, ಕಂಪನಿಯ ಪ್ರಕಾರ 250 ಎವಿಡಿ ಮತ್ತು 390 ಎವಿಡಿಯ ಫ್ರೇಮ್‌ಗಳು 450 ಡಕಾರ್ ರ‍್ಯಾಲಿ ಬೈಕ್‌ಗಳಿಂದ ಸ್ಫೂರ್ತಿ ಪಡೆದುಕೊಂಡಿವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಹೊಸ ಮೋಟಾರ್‌ಸೈಕಲ್‌ನಲ್ಲಿನ ಸಸ್ಷೆಷನ್‌ಗಳು ಕೂಡಾ ಉತ್ತಮವಾಗಿದ್ದು, 43ಎಂಎಂ ಡಬ್ಲ್ಯುಪಿ ಅಪೆಕ್ಸ್ ಫ್ರಂಟ್ ಫೋರ್ಕ್‌ನೊಂದಿಗೆ 170ಎಂಎಂ ಟ್ರಾವೆಲ್ ಸಸ್ಷೆಷನ್ ಹೊಂದಿದ್ದು, ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ-ಶಾಕ್ ಸೆಟಪ್‌ನೊಂದಿಗೆ ಹೊಂದಾಣಿಕೆ ಮಾಡಬಹುದಾದ 177ಎಂಎಂ ಟ್ರಾವೆಲ್ ಸಸ್ಫೆಷನ್ ಪಡೆದುಕೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ದಿನಬಳಕೆಯ ಜೊತೆಗೆ ಅಡ್ವೆಂಚರ್ ಚಾಲನೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಹೊಸ ಬೈಕ್ ಮಾದರಿಯು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು 230 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಹಾಗೆಯೇ ಹೊಸ ಬೈಕಿನಲ್ಲಿ ಮತ್ತು ಕಾರ್ಯಕ್ಷಮತೆಗಾಗಿ ಸ್ವಿಚ್ ಮಾಡಬಹುದಾದ ಆಫ್ ರೋಡ್ ಮೋಡ್ ನೀಡಲಾಗಿದ್ದು, ಹೊಸ ಬೈಕ್ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೆಟ್ಅಪ್ ಪಡೆದುಕೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಇನ್ನು ಹೊಸ ಬೈಕಿನಲ್ಲಿ ಕಂಪನಿಯು ಆಫ್ ರೋಡ್‌ಗಳಲ್ಲಿ ಉತ್ತಮ ಹಿಡಿತಕ್ಕಾಗಿ 19 ಇಂಚಿನ 100/19 ಸೆಕ್ಷೆನ್ ಅಲಾಯ್ ವ್ಹೀಲ್ ನೀಡಲಾಗಿದ್ದು, ಮುಂಭಾಗದಲ್ಲಿ 100/90 ಮಾದರಿಯ 17 ಇಂಚಿನ ಅಲಾಯ್ ವ್ಹೀಲ್‌ ಅನ್ನು ಮುಂಭಾಗದಲ್ಲಿ ನೀಡಲಾಗಿದೆ. ಹೊಸ ಬೈಕಿನಲ್ಲಿ ಎರಡು ಟೈರ್ ಮಾದರಿಗಳು ಎಂಆರ್‌ಎಫ್ ನಿರ್ಮಾಣದ ಮೊಗ್ರಿಪ್ ಮಿಟಿಯೊರ್ ಎಫ್ಎಂ2 ಉತ್ಪನ್ನಗಳಾಗಿದ್ದು, ಎಂಜಿನ್ ಹೊರತುಪಡಿಸಿ ಹೊಸ ಬೈಕ್ 390 ಅಡ್ವೆಂಚರ್ ಮಾದರಿಯೆಂತೆ ಹೊರನೋಟ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಕೆಟಿಎಂ 250 ಅಡ್ವೆಂಚರ್ ಬೈಕ್

ಜೊತೆಗೆ ಹೊಸ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, 14.5-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌, ದೂರದ ಪ್ರಯಾಣಕ್ಕೆ ಅನುಕೂಲಕರವಾಗಿರುವ ಆಸನ ಸೌಲಭ್ಯ, ಹಿಂಬದಿಯ ಸವಾರರಿಗೂ ಹೆಚ್ಚಿನ ಸ್ಥಳಾವಕಾಶ, ಎಲ್ಇಡಿ ಲೈಟಿಂಗ್ ನೀಡಲಾಗಿದ್ದು, ರೈಡರ್‌ಗಳಿಗೆ ಒಂದೇ ಸೂರಿನಡಿ ವಿವಿಧ ಮಾಹಿತಿ ಒದಗಿಸುವ ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗಾಗಿ TFT ಡಿಸ್ಪ್ಲೇ ಸಹ ನೀಡಲಾಗಿದೆ.

Most Read Articles

Kannada
Read more on ಕೆಟಿಎಂ ktm
English summary
Ktm new 250 adventure launched in india at rs 2 35 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X