ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಹೊಸ ಪ್ಲಾಟಿನಾ 110 ಎಬಿಎಸ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ಆವೃತ್ತಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 72,224 ಆಗಿದೆ.

ಎಂಟ್ರಿ ಲೆವೆಲ್ ಪ್ರಯಾಣಿಕ ಮೋಟಾರ್‌ಸೈಕಲ್ ಆದ ಬಜಾಜ್ ಪ್ಲಾಟಿನಾ 110 ಈಗ ಮೊದಲಿಗಿಂತ ಸುರಕ್ಷಿತವಾಗಿದೆ. ಪ್ಲಾಟಿನಾ ತನ್ನ ವಿಭಾಗದಲ್ಲಿ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರ್ಪಡೆಯನ್ನು ಪಡೆದ ಮೊದಲ ಮೋಟಾರ್‌ಸೈಕಲ್ ಆಗಿದೆ. ಚಕನ್ ಮೂಲದ ಬಜಾಜ್ ಆಟೋ ತನ್ನ ಪ್ಲಾಟಿನಾ 110 ಎಬಿಎಸ್ ಅನ್ನು ಸಿಂಗಲ್-ಚಾನೆಲ್ ಎಬಿಎಸ್ ಯುನಿಟ್ ನೊಂದಿಗೆ ಪರಿಚಯಿಸಿದ್ದಾರೆ. ಎಬಿಎಸ್‌ಗೆ ಸೂಚನೆಯೊಂದಿಗೆ ಗೇರ್ ಸ್ಥಾನ ಸೂಚಕ ಮತ್ತು ಗೇರ್ ಮಾರ್ಗದರ್ಶನದೊಂದಿಗೆ ಮೋಟಾರ್‌ಸೈಕಲ್ ಡಿಜಿಟಲ್ ಸ್ಪೀಡೋ ಕನ್ಸೋಲ್ ಅನ್ನು ಪಡೆಯುವುದರಿಂದ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಬಜಾಜ್ ಪ್ಲಾಟಿನಾ 110 ಎಬಿಎಸ್ ಬೈಕ್ ಎಬೊನಿ ಬ್ಲ್ಯಾಕ್, ಗ್ಲೋಸ್ ಪ್ಯೂಟರ್ ಗ್ರೇ, ಕಾಕ್‌ಟೈಲ್ ವೈನ್ ರೆಡ್ ಮತ್ತು ಸ್ಯಾಫೈರ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ಬೈಕಿನಲ್ಲಿ 115.45 ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.44 ಬಿಹೆಚ್‍ಪಿ ಪವರ್ ಮತ್ತು 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಬಜಾಜ್ ಪ್ಲಾಟಿನಾ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್, ಹೋಂಡಾ ಸಿಡಿ 110 ಡ್ರೀಮ್ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಪ್ಲಾಟಿನಾ ಬ್ರ್ಯಾಂಡ್‌ಗೆ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ . 2021 ರಲ್ಲಿ ಅನುಗುಣವಾದ ಅವಧಿಯಲ್ಲಿ ಶೇ.44.4 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿತು. ಈಗಲೂ ಈ ಬಜಾಜ್ ಪ್ಲಾಟಿನಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಈ ಬಜಾಜ್ ಪ್ಲಾಟಿನಾ 110 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್ ರಿಯರ್ ಶಾಕ್ ಅಬ್ಸಾರ್ಬರ್‌ಗಳಲ್ಲಿ ನೈಟ್ರಾಕ್ಸ್‌ನೊಂದಿಗೆ ಬರುತ್ತಿದೆ. ಇನ್ನು ಈ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ 17 ಇಂಚಿನ ವ್ಹೀಲ್ ಗಳನ್ನು ನೀಡಲಾಗಿದೆ. ಈ ಬೈಕಿನಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ನೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಯುನಿಟ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 11 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಸಹ ಪಡೆಯುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಫೇವರೆಟ್ ಮತ್ತು ಕನಸಿನ ಬೈಕ್ ಆಗಿತ್ತು. ಆದರೆ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳು ಲಗ್ಗೆ ಇಟ್ಟ ಬಳಿಕ ಬಜಾಜ್ ಪಲ್ಸರ್ ಬೈಕ್‌ಗಳ ಬೇಡಿಕೆಯು ಕುಸಿಯತೊಡಗಿತು. ಇತ್ತೀಚೆಗೆ ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಳೆಯದಾದ ಬಜಾಜ್ ಪಲ್ಸರ್ 150 ಬೈಕ್ ಅನ್ನು ಸ್ಥಗಿತಗೊಳಿಸಿದೆ.

ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್‌ನ ಸ್ಥಾನವನ್ನು ಹೊಸದಾಗಿ ಬಿಡುಗಡೆ ಮಾಡಲಾದ ಪಲ್ಸರ್ ಪಿ150 ಮೋಟಾರ್‌ಸೈಕಲ್ ಆಗಿದೆ. ಬಜಾಜ್ ಇತ್ತೀಚೆಗೆ 2021ರ ಆಗಸ್ಟ್ ತಿಂಗಳಿನಲ್ಲಿ ಪಲ್ಸರ್ 180 ಮೋಟಾರ್‌ಸೈಕಲ್ ಅನ್ನು ಸ್ಥಗಿತಗೊಳಿಸಿರುವುದನ್ನು ಪರಿಗಣಿಸಿ ಇದು ಆಶ್ಚರ್ಯವೇನಿಲ್ಲ. ಬಜಾಜ್ ಪಲ್ಸರ್ ಇನ್ನೂ ಬಜಾಜ್‌ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಬಜಾಜ್ ಪಲ್ಸರ್ 150 ಬೈಕ್ ಪಲ್ಸರ್ 150 ನಿಯಾನ್, ಪಲ್ಸರ್ 150 ಎಸ್‌ಡಿ (ಸಿಂಗಲ್ ಡಿಸ್ಕ್), ಮತ್ತು ಬಜಾಜ್ ಪಲ್ಸರ್ 150 ಟಿಡಿ (ಟ್ವಿನ್ ಡಿಸ್ಕ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಈ ಬಜಾಜ್ ಪಲ್ಸರ್ 150 ಬೈಕಿನ ಮೂರು ರೂಪಾಂತರಗಳಲ್ಲಿ, ನಿಯಾನ್ ರೂಪಾಂತರವು ಅತ್ಯಂತ ಕೈಗೆಟುಕುವ ಬೆಲೆಯಾಗಿದೆ. ಬಜಾಜ್ ಪಲ್ಸರ್ 150 ನಿಯಾನ್ ರೂಪಾಂತರದ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.04 ಲಕ್ಷವಾಗಿದೆ. ಆದರೆ ಬಜಾಜ್ ಪಲ್ಸರ್ 150 ಎಸ್‌ಡಿ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.11 ಲಕ್ಷವಾಗಿದೆ. ಮತ್ತೊಂದೆಡೆ, ಟಾಪ್-ಸ್ಪೆಕ್ ಬಜಾಜ್ ಪಲ್ಸರ್ 150 TD ರೂಪಾಂತರದ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.14 ಲಕ್ಷವಾಗಿದೆ.

Most Read Articles

Kannada
English summary
New bajaj platina 110 abs launched Price details
Story first published: Tuesday, December 20, 2022, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X