ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಬಹುನಿರೀಕ್ಷಿತ ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.47 ಲಕ್ಷವಾಗಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

2020ರಲ್ಲಿ ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ಅನ್ನು ನಡೆಸಿದ್ದರು. ಈಗ ಸುಮಾರು ಎರಡು ವರ್ಷಗಳ ನಂತರ, ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಡಬ್ಲ್ಯು175 ಚಿಕ್ಕ ಸಾಮರ್ಥ್ಯದ ರೆಟ್ರೋ-ಥೀಮ್ ಕವಾಸಕಿ ಬೈಕು, ಹೊಸ ಕವಾಸಕಿ ಡಬ್ಲ್ಯು175 ಬೈಕ್ ರೆಟ್ರೊ-ಶೈಲಿಯ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಎಬೊನಿ ಪೇಂಟ್ ಅನ್ನು ಒಳಗೊಂಡಿರುವ ಬೇಸ್ ರೂಪಾಂತರ ಮತ್ತು ಕ್ಯಾಂಡಿ ಪರ್ಸಿಮನ್ ರೆಡ್ ಬಣ್ಣವನ್ನು ಹೊಂದಿರುವ ಪ್ರೀಮಿಯಂ ರೂಪಾಂತರವನ್ನು ಹೊಂದಿದೆ. ಎರಡು ಆಯ್ಕೆಗಳ ನಡುವಿನ ವ್ಯತ್ಯಾಸವು ಪೇಂಟ್ ಥೀಮ್‌ಗಳಿಗೆ ಸೀಮಿತವಾಗಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಕವಾಸಕಿ ಡಬ್ಲ್ಯು175 ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಮೆಕ್ಸಿಕೋ, ಉರುಗ್ವೆ ಮತ್ತು ಬೊಲಿವಿಯಾದಂತಹ ಲ್ಯಾಟಿನ್ ಅಮೇರಿಕನ್ ದೇಶಗಳಿಗೂ ಇದನ್ನು ರಫ್ತು ಮಾಡಲಾಗುತ್ತದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ 177ಸಿಸಿ, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಡಬಲ್-ಕ್ರೇಡಲ್ ಚಾಸಿಸ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ರಿಯರ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಒಂದೇ 270 ಎಂಎಂ ಪೆಟಲ್-ಟೈಪ್ ರೋಟರ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಕವಾಸಕಿ ಡಬ್ಲ್ಯು800 ಬೈಕ್ ನಿಂದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿದೆ. ಕವಾಸಕಿ W ಸರಣಿಯು 50 ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವನ್ನು ಹೊಂದಿದೆ. ಈ ಸರಣಿಯ ಮೊದಲ ಬೈಕ್ W1 ಅನ್ನು 1966 ರಲ್ಲಿ ಬಿಡುಗಡೆ ಮಾಡಲಾಯಿತು.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಹೊಸ ಕವಾಸಕಿ ಡಬ್ಲ್ಯು800 ಬೈಕ್ ರೌಂಡ್ ಹೆಡ್‌ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್‌ಗಳು, ಫೋರ್ಕ್ ಗೇಟರ್‌ಗಳು, ಟಿಯರ್ ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ಕ್ವಿಲ್ಟೆಡ್ ಸಿಂಗಲ್ ಟ್ಯಾಂಕ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಹಳೆಯ-ಸ್ಕೂಲ್ ಪ್ರೊಫೈಲ್ ಅನ್ನು ಆಕರ್ಷಕವಾಗಿ ಹೊಂದಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಹೊಸ ಕವಾಸಕಿ ಡಬ್ಲ್ಯು175 ಬೈಕ್ ಎಬೊನಿ ಮತ್ತು ಸ್ಪೆಷಲ್ ಎಡಿಷನ್ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಿವೆ. ಮೊದಲನೆಯದು ಮೂಲಭೂತವಾಗಿ ಸಂಪೂರ್ಣ ಕಪ್ಪು ಥೀಮ್ ಆಗಿದ್ದರೆ, ಎರಡನೆಯದು ಕೆಂಪು ಮತ್ತು ಕಪ್ಪು ಬಣ್ಣದ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಾಗಿದೆ. ಎರಡರಲ್ಲೂ, ಮುಂಭಾಗದ ಸಸ್ಪೆಕ್ಷನ್, ಹೆಡ್‌ಲೈಟ್ ಕೇಸಿಂಗ್, ಇಂಜಿನ್, ಸ್ವಿಂಗರ್ಮ್ ಮತ್ತು ಎಕ್ಸಾಸ್ಟ್ ಪೈಪ್‌ನಂತಹ ಹೆಚ್ಚಿನ ಯುನಿಟ್ ಗಳು ಕಪ್ಪು ಬಣ್ಣದಲ್ಲಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಈ ಹೊಸ ಬೈಕ್ ಅನಲಾಗ್ ಶೈಲಿಯ ಸ್ಪೀಡೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್ ಮತ್ತು ಟರ್ನ್ ಸಿಗ್ನಲ್‌ಗಳೊಂದಿಗೆ ಇನ್ಸ್ ಟ್ರೂಮೆಂಟ್ ಸರಳವಾಗಿದೆ. ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಕೆಳಗಿನ ವಿಭಾಗದಲ್ಲಿ ಸಿಗ್ನೇಚರ್ W ಬ್ರ್ಯಾಂಡಿಂಗ್ ಅನ್ನು ಕಾಣಬಹುದು. ಬೈಕಿನ ಇಂಧನ ಟ್ಯಾಂಕ್ ವ್ಯತಿರಿಕ್ತ ಕೆಂಪು ಬಣ್ಣದ W ಬ್ರ್ಯಾಂಡಿಂಗ್ ಅನ್ನು ಸಹ ಹೊಂದಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಇನ್ನು ಕವಾಸಕಿ ಪ್ರಸ್ತುತ ಭಾರತದಲ್ಲಿ ಡ್ಯುಯಲ್-ಸಿಲಿಂಡರ್ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದ್ದರೂ, ಬಜಾಜ್ ಜೊತೆಗೆ ಭಾರತದಲ್ಲಿ ಬಾಕ್ಸರ್‌ನಂತಹ ಬಜೆಟ್ ಬೈಕ್‌ಗಳನ್ನು ಮಾರಾಟ ಮಾಡಿರುವ ಇತಿಹಾಸ ಕೂಡ ಹೊಂದಿದೆ. ಇನ್ನು ಕವಾಸಕಿ, ಇತ್ತೀಚಿಗೆ ತಾನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿ ಸುದ್ದಿಯಲ್ಲಿದೆ. ಜಪಾನ್ ಮೂಲದ ಈ ಕಂಪನಿಯು 2035ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಆಧಾರಿತ ವಾಹನಗಳನ್ನು ಹೊಂದಲು ಯೋಜಿಸಿದೆ. ಇದರ ಭಾಗವಾಗಿ, ಕವಾಸಕಿ ಇತ್ತೀಚೆಗೆ ಝಡ್250 ಪ್ರೀಮಿಯಂ ಮಾದರಿಯನ್ನು ಹೋಲುವ ಸಂಪೂರ್ಣ ಎಲೆಕ್ಟ್ರಿಕ್ ಮೂಲಮಾದರಿಯನ್ನು ಮತ್ತು ನಿಂಜಾ 250 ಆವೃತ್ತಿಯನ್ನು ಹೋಲುವ ಹೈಬ್ರಿಡ್ ಮಾದರಿಯನ್ನು ಪ್ರದರ್ಶಿಸಿದೆ.

ಭಾರತದಲ್ಲಿ ಕವಾಸಕಿಯ ಅತಿ ಕಡಿಮೆ ಬೆಲೆಯ ಡಬ್ಲ್ಯು175 ಬೈಕ್ ಬಿಡುಗಡೆ

ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಏಕೆಂದರೆ ಭಾರತದಲ್ಲಿ ಮಾರಾಟವಾಗುವ ರೆಟ್ರೊ-ಶೈಲಿಯ ಬೈಕ್‌ಗಳು 250 ಸಿಸಿಗಿಂತ ಹೆಚ್ಚಾಗಿರುತ್ತದೆ. ಆದರೆ ಬೆಲೆಯ ಆಧಾರದ ಮೇಲೆ ಕವಾಸಕಿ ಡಬ್ಲ್ಯು 175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಎಫ್‌ಜೆಡ್-ಎಕ್ಸ್ ಮತ್ತು ಟಿವಿಎಸ್ ರೋನಿನ್ 225 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New kawasaki w175 motorcycle launched prices lakh specs features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X