ಕಾಲಕಾಲಕ್ಕೆ ನವೀಕರಣ...ಹೊಸ ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ಹೊಸ ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ಗ್ರಾಹಕರು ಈ ಹೊಸ ಕಾರ್ಬನ್ ಆವೃತ್ತಿಯ ಮಾದರಿಯನ್ನು ಎರಡು ರೂಪಾಂತರಗಳಲ್ಲಿ ಸಿಂಗಲ್ ಸೀಟ್ ಮತ್ತು ಸ್ಪ್ಲಿಟ್ ಸೀಟ್ ಆಯ್ಕೆಯಗಳಲ್ಲಿ ಪಡೆಯಬಹುದು. ಹಾಗೆಯೇ ಈ ಹೊಸ ಆವೃತ್ತಿಯು ನೀಲಿ ಮತ್ತು ಕೆಂಪು ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಕಾಲಕಾಲಕ್ಕೆ ನವೀಕರಣ...ಹೊಸ ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿ ಬಿಡುಗಡೆ

ಬಜಾಜ್ ಪಲ್ಸರ್ 125 ಕಾರ್ಬನ್ ಆವೃತ್ತಿಯು ಸಿಂಗಲ್-ಸೀಟ್ ರೂಪಾಂತರಕ್ಕೆ ರೂ 89,254 ಮತ್ತು ಸ್ಪ್ಲಿಟ್-ಸೀಟ್ ರೂಪಾಂತರಕ್ಕೆ ರೂ 91,642, ಎಕ್ಸ್ ಶೋ ರೂಂ ಬೆಲಯಲ್ಲಿ ಲಭ್ಯವಿದೆ. ಕಂಪನಿಯು ಕಪ್ಪು ಬಣ್ಣವನ್ನು ಮೂಲ ಬಣ್ಣವಾಗಿ ಬಳಸಿದೆ, ಇದು ಎರಡೂ ಬಣ್ಣದ ಆಯ್ಕೆಗಳಲ್ಲಿ ಸಾಮಾನ್ಯವಾಗಿದೆ.

ಹೆಡ್‌ಲೈಟ್ ಕೌಲ್, ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್, ರಿಯರ್ ಪ್ಯಾನೆಲ್ ಮತ್ತು ಅಲಾಯ್ ವೀಲ್ ಸ್ಟ್ರಿಪ್‌ಗಳ ಮೇಲಿನ ಗ್ರಾಫಿಕ್ಸ್ ಕೂಡ ಸ್ಟೈಲಿಷ್ ಆಗಿರುತ್ತದೆ. ಇದಲ್ಲದೆ, ಕಂಪನಿಯು ಬಜಾಜ್ ಪಲ್ಸರ್ 125 ಕಾರ್ಬನ್ ಆವೃತ್ತಿಯ ಬೆಲ್ಲಿ ಪ್ಯಾನ್, ಫ್ರಂಟ್ ಫೆಂಡರ್, ಟ್ಯಾಂಕ್ ಮತ್ತು ರಿಯರ್ ಕೌಲ್‌ನಲ್ಲಿ ಕಾರ್ಬನ್ ಫೈಬರ್ ಗ್ರಾಫಿಕ್ಸ್ ಅನ್ನು ಸೇರಿಸಿದೆ.

ಇದು ಸ್ಟ್ರೈಕಿಂಗ್ 3D ಲೋಗೊಗಳು, ನಿಯಾನ್ ಹೆಡ್‌ಲೈಟ್‌ಗಳು ಮತ್ತು ಕಪ್ಪು ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ. ಟ್ವಿನ್ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಸಿಂಗಲ್ ಪಾಡ್ ಹೆಡ್‌ಲ್ಯಾಂಪ್ ಯೂನಿಟ್, ಮಸ್ಕುಲರ್ ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್-ಸ್ಲಂಗ್ ಎಕ್ಸಾಸ್ಟ್ ಕೂಡ ಹೊಸ ಬಜಾಜ್ ಪಲ್ಸರ್ 125 ಮಾದರಿಯ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಕಾಲಕಾಲಕ್ಕೆ ನವೀಕರಣ...ಹೊಸ ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿ ಬಿಡುಗಡೆ

ಬೈಕ್‌ನ ಇತರ ಪ್ರಮುಖ ಹೈಲೈಟ್‌ಗಳೆಂದರೆ ಸ್ಪ್ಲಿಟ್-ಟೈಪ್ ಗ್ರಾಬ್ ರೈಲ್ಸ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಾಗಿವೆ. ಹೊಸ ಬಜಾಜ್ ಪಲ್ಸರ್ 125 ಕಾರ್ಬನ್ ಆವೃತ್ತಿಯು ಅದೇ 124.4 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 8,500 ಆರ್‌ಪಿಎಂನಲ್ಲಿ 11.64 ಬಿಹೆಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 10.80 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಮೋಟಾರ್‌ಸೈಕಲ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಗ್ಯಾಸ್ ಚಾರ್ಜ್ಡ್ ಟ್ವಿನ್ ರಿಯರ್ ಸ್ಪ್ರಿಂಗ್‌ಗಳನ್ನು ಸಸ್ಪೆನ್ಶನ್ ಸೆಟಪ್‌ಗಾಗಿ ಅಳವಡಿಸಲಾಗಿದೆ. ಬ್ರೇಕಿಂಗ್‌ಗಾಗಿ, ಪಲ್ಸರ್ 125 ಕಾರ್ಬನ್ ಆವೃತ್ತಿಯು ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ. ಪಲ್ಸರ್ 125 ಮಾದರಿಯು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹಾಗಯೇ 142 ಕೆ.ಜಿ ತೂಕವನ್ನು ಹೊಂದಿದೆ.

ಕಾಲಕಾಲಕ್ಕೆ ನವೀಕರಣ...ಹೊಸ ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿ ಬಿಡುಗಡೆ

ಬಜಾಜ್‌ನ ಇತ್ತೀಚಿನ ಬಿಡುಗಡೆಯೊಂದಿಗೆ, ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರ್ಯಾಂಡ್ ವರ್ಷದ ಅಂತ್ಯದ ಮೊದಲು ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ವಿಶ್ವಾಸ ಹೊಂದಿದೆ. ಕಳೆದ ತಿಂಗಳು 3,95,238 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಬಜಾಜ್ ಆಟೋ ಒಟ್ಟಾರೆ ಮಾರಾಟದಲ್ಲಿ ಶೇಕಡಾ 10 ರಷ್ಟು ಕುಸಿತ ದಾಖಲಿಸಿದೆ.

ಆದರೂ ದ್ವಿಚಕ್ರ ವಾಹನಗಳ ಮಾರಾಟವು 2022 ರ ಅಕ್ಟೋಬರ್‌ನಲ್ಲಿ 2,06,131 ಯುನಿಟ್‌ಗಳ ಮಾರಾಟದೊಂದಿಗೆ ತಿಂಗಳ ಮಾರಾಟದಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಿದೆ, ಇದು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಮಾರಾಟವಾದ 1,98,738 ಯುನಿಟ್‌ಗಳಿಗೆ ಹೋಲಿಸಿದರೆ ಬಜಾಜ್‌ಗೆ ಸಮಾಧಾನ ತಂದಿದೆ.

Most Read Articles

Kannada
English summary
New pulsar 125 carbon fiber edition launched
Story first published: Tuesday, November 15, 2022, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X