15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಒಬೆನ್ ಎಲೆಕ್ಟ್ರಿಕ್(Oben Electric) ಕಂಪನಿಯು ರೊರ್(RORR) ಇವಿ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕ್ ಮಾದರಿಗಾಗಿ ಒಬೆನ್ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ರೊರ್ ಇವಿ ಬೈಕ್ ಮಾದರಿಗಾಗಿ ರೂ. 999 ಮುಂಗಡದೊಂದಿಗೆ ಬುಕಿಂಗ್ ಸ್ವಿಕರಿಸುತ್ತಿರುವ ಒಬೆನ್ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ ಸುಮಾರು 15 ಸಾವಿರ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಕಂಪನಿಯು ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಟೆಸ್ಟ್ ರೈಡ್ ಆಯೋಜಿಸುತ್ತಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಬೆಂಗಳೂರಿನಲ್ಲಿ ಟೆಸ್ಟ್ ರೈಡ್ ಪೂರ್ಣಗೊಂಡ ನಂತರವಷ್ಟೇ ಇತರೆ ಪ್ರಮುಖ ನಗರಗಳಲ್ಲಿ ಟೆಸ್ಟ್ ರೈಡ್ ನಡೆಸುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಬುಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರ ಪರೀಕ್ಷಾರ್ಥ ಚಾಲನೆಗೆ ಅವಕಾಶ ನೀಡಲಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಒಬೆನ್ ರೊರ್ ಇವಿ ಬೈಕ್ ಟೆಸ್ಟ್ ರೈಡ್ ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದಾಗಿದ್ದು, ಟೆಸ್ಟ್ ರೈಡ್ ಮುಕ್ತಾಯಗೊಂಡ ನಂತರವಷ್ಟೇ ಗ್ರಾಹಕರಿಗೆ ಖರೀದಿ ವಿಂಡೋ ಆರಂಭಿಸಲಿದೆ. ಹೊಸ ಬೈಕ್ ಮಾದರಿಯು ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗಿದ್ದು, ಹೊಸ ಬೈಕ್ ಮಾದರಿಯನ್ನು ಕಂಪನಿಯು ಸಂಪೂರ್ಣವಾಗಿ ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಳಿಸಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಹೊಸ ಇವಿ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದ್ದು, ಹೊಸ ಬೈಕ್ ಬೆಲೆಯು ವಿವಿಧ ರಾಜ್ಯಗಳಲ್ಲಿನ ಸಬ್ಸಡಿ ಆಧರಿಸಿ ಏರಿಳಿತವಾಗುತ್ತಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳ ಸಬ್ಸಡಿಯಿಂದಾಗಿ ಒಬೆನ್ ರೊರ್ ಇವಿ ಬೈಕ್ ಬೆಲೆಯು ಮಾಹಾರಾಷ್ಟ್ರದಲ್ಲಿ ರೂ. 99,999 ಬೆಲೆ ಹೊಂದಿದ್ದರೆ ದೆಹಲಿಯಲ್ಲಿ ರೂ. 1,02,999, ಗುಜರಾತ್‌ನಲ್ಲಿ ರೂ. 1,04,999, ರಾಜಸ್ತಾನದಲ್ಲಿ ರೂ. 1,14,999, ಕರ್ನಾಟಕದಲ್ಲಿ ರೂ. 1,24,999, ತಮಿಳುನಾಡಿನಲ್ಲಿ ರೂ. 1,24,999 ಮತ್ತು ತೆಲಂಗಾಣದಲ್ಲಿ ರೂ. 1,24,999 ಬೆಲೆ ಹೊಂದಿರುತ್ತದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಒಬೆನ್ ಎಲೆಕ್ಟ್ರಿಕ್ ಕಂಪನಿಯು ಮೊದಲ ಹಂತದಲ್ಲಿ ದೇಶದ ಪ್ರಮುಖ 7 ರಾಜ್ಯಗಳ 9 ನಗರಗಳಲ್ಲಿ ಉದ್ಯಮ ವ್ಯವಹಾರವನ್ನು ಆರಂಭಿಸುತ್ತಿದ್ದು, ಹೊಸ ಇವಿ ಬೈಕ್ ಉತ್ಪಾದನೆಗಾಗಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ವಾರ್ಷಿಕವಾಗಿ 3 ಲಕ್ಷ ಯುನಿಟ್ ಉತ್ಪಾದನಾ ಘಟಕವನ್ನು ತೆರೆದಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಇವಿ ಬೈಕ್ ಟೆಸ್ಟ್ ರೈಡ್ ಪ್ರಕ್ರಿಯೆಯನ್ನು ಕಾರಣಾಂತರಗಳಿಂದ ಮುಂದೂಡಿಕೆ ಮಾಡುತ್ತಿರುವ ಒಬೆನ್ ಕಂಪನಿಯು ಇದೀಗ ಅಂತಿಮವಾಗಿ ಟೆಸ್ಟ್ ರೈಡ್ ಆಯೋಜಿಸಲು ನಿರ್ಧರಿಸಿದ್ದು, ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಹೊಸ ಬೈಕ್ ವಿತರಣೆ ಮಾಡುವ ಸುಳಿವು ನೀಡಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಹೊಸ ಒಬೆನ್ ರೊರ್ ಇವಿ ಬೈಕ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 2 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಹೊಸ ಬೈಕ್ 100 ಕಿ.ಮೀ ಟಾಪ್ ಸ್ಪೀಡ್ ಮೂಲಕ ಮೈಲೇಜ್ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಗಮನಸೆಳೆಯುತ್ತದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಹೊಸ ಬೈಕ್ ಮಾದರಿಯ ಬಿಡುಗಡೆಗೂ ಮುನ್ನ ಸಾವಿರಾರು ಕಿ.ಮೀ ಟೆಸ್ಟಿಂಗ್ ನಡೆಸಿರುವ ಒಬೆನ್ ಕಂಪನಿಯು ಹೊಸ ಬೈಕಿನ 10kW ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆ ಬಗೆಗೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದು, ಇದು ಬೆಲ್ಟ್ ಡ್ರೈವ್ ಸಿಸ್ಟಂ ಮೂಲಕ ಸಾಕಷ್ಟು ಮೃದವಾದ ಚಾಲನಾ ಅನುಭವ ನೀಡಲಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಭಾರವಾಗಿರುವ ಬ್ಯಾಟರಿ ಪ್ಯಾಕ್ ಜೋಡಣೆ ನಡುವೆಯೂ ಹೊಸ ಬೈಕ್ 130 ಕೆ.ಜಿ ತೂಕದೊಂದಿಗೆ ಉತ್ತಮ ಮೈಲೇಜ್ ಖಾತ್ರಿಪಡಿಸಿದ್ದು, ಹೊಸ ಬೈಕ್ ಮಾದರಿಯು 780 ಎಂಎಂ ಸೀಟ್ ಹೈಟ್ ಮೂಲಕ ದೀರ್ಘ ಸಮಯದವರೆಗೂ ಸವಾರಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಹಾಗೆಯೇ ಹೊಸ ಬೈಕಿನಲ್ಲಿ ಬೈಕ್ ಸವಾರಿಯನ್ನು ಮತ್ತಷ್ಟು ಅತ್ಯುತ್ತಮಗೊಳಿಸಲು ಕಂಪನಿಯು ಹ್ವಾಕ್, ಸಿಟಿ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಪರ್ಫಾಮೆನ್ಸ್ ಮೋಡ್‌ನಲ್ಲೂ ಕನಿಷ್ಠ 100 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಜೊತೆಗೆ ಹೊಸ ಬೈಕಿನಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಒಬೆನ್ ಕನೆಕ್ಟೆಡ್ ಫೀಚರ್ಸ್‌ಗಳೊಂದಿಗೆ ಡ್ರೈವರ್ ಅಲರ್ಟ್ ಸಿಸ್ಟಂ, ಥೆಪ್ಟ್ ಪ್ರೊಕೆಕ್ಷನ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಆಧುನಿಕ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳಿವೆ.

15 ಸಾವಿರ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ

ಹೊಸ ಬೈಕ್ ಮೇಲೆ ಕಂಪನಿಯು ಗರಿಷ್ಠ ವಾರಂಟಿ ಸಹ ಘೋಷಣೆ ಮಾಡಿದ್ದು, ರೊರ್ ಇವಿ ಬೈಕಿನ ಮೋಟಾರ್ ಮೇಲೆ 3 ವರ್ಷಗಳ ವಾರಂಟಿ ಸಿಗಲಿದ್ದರೆ ಬ್ಯಾಟರಿ ಮೇಲೆ 3 ವರ್ಷ ಅಥವಾ 80 ಸಾವಿರ ಕಿ.ಮೀ ಚಾಲನೆ ಆಧರಿಸಿ ವಾರಂಟಿ ಮತ್ತು ವಾಹನ ಇತರೆ ತಾಂತ್ರಿಕ ಅಂಶಗಳ ಮೇಲೆ ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿ ದೊರೆಯಲಿದೆ.

Most Read Articles

Kannada
English summary
Oben rorr electric bike gets more than 15 000 unit bookings details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X