Just In
- 21 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಜುಲೈ 2ರಿಂದ ಆರಂಭವಾಗಲಿದೆ ಪ್ರತಿ ಚಾರ್ಜ್‌ಗೆ 200ಕಿ.ಮೀ ಮೈಲೇಜ್ ನೀಡುವ ಒಬೆನ್ ರೊರ್ ಬೈಕ್ ಟೆಸ್ಟ್ ರೈಡ್
ಒಬೆನ್ ಎಲೆಕ್ಟ್ರಿಕ್(Oben Electric) ಕಂಪನಿಯು ತನ್ನ ಬಹುನೀರಿಕ್ಷಿತ ರೊರ್(RORR) ಇವಿ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಹೊಸ ಬೈಕ್ ವಿತರಣೆ ಆರಂಭಕ್ಕೂ ಮುನ್ನ ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಆಯೋಜಿಸಿದೆ.

ಹೊಸ ರೊರ್ ಇವಿ ಬೈಕ್ ಮಾದರಿಗಾಗಿ ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಒಬೆನ್ ಕಂಪನಿಯು ಜುಲೈ 2ರಿಂದ ಟೆಸ್ಟ್ ರೈಡ್ ಆರಂಭಿಸುತ್ತಿರುವುದಾಗಿ ಘೋಷಣೆ ಮಾಡಿದ್ದು, ಮೊದಲ ಹಂತದಲ್ಲಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಟೆಸ್ಟ್ ರೈಡ್ ನಡೆಸಲಿದೆ. ಬೆಂಗಳೂರಿನಲ್ಲಿ ಟೆಸ್ಟ್ ರೈಡ್ ಪೂರ್ಣಗೊಂಡ ನಂತರವಷ್ಟೇ ಇತರೆ ಪ್ರಮುಖ ನಗರಗಳಲ್ಲಿ ಟೆಸ್ಟ್ ರೈಡ್ ನಡೆಸುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಬುಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರ ಪರೀಕ್ಷಾರ್ಥ ಚಾಲನೆಗೆ ಅವಕಾಶ ನೀಡಲಿದೆ.

ಇವಿ ಬೈಕ್ ಟೆಸ್ಟ್ ರೈಡ್ ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ರೂ. 999 ಮುಂಗಡದೊಂದಿಗೆ ಬುಕಿಂಗ್ ಮಾಡಬಹುದಾಗಿದ್ದು, ಟೆಸ್ಟ್ ರೈಡ್ ನಂತರವಷ್ಟೇ ಗ್ರಾಹಕರಿಗೆ ಖರೀದಿ ವಿಂಡೋ ಆರಂಭಿಸಲಿದೆ.

ಹೊಸ ಬೈಕ್ ಮಾದರಿಯು ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗಿದ್ದು, ಹೊಸ ಬೈಕ್ ಮಾದರಿಯನ್ನು ಕಂಪನಿಯು ಸಂಪೂರ್ಣವಾಗಿ ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಳಿಸಿದೆ. ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದ್ದು, ಹೊಸ ಬೈಕ್ ಬೆಲೆಯು ವಿವಿಧ ರಾಜ್ಯಗಳಲ್ಲಿನ ಸಬ್ಸಡಿ ಆಧರಿಸಿ ನಿರ್ಧಾರಗೊಳ್ಳುತ್ತದೆ.

ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳ ಸಬ್ಸಡಿಯಿಂದಾಗಿ ಒಬೆನ್ ರೊರ್ ಇವಿ ಬೈಕ್ ಬೆಲೆಯು ಮಾಹಾರಾಷ್ಟ್ರದಲ್ಲಿ ರೂ. 99,999 ಬೆಲೆ ಹೊಂದಿದ್ದರೆ ದೆಹಲಿಯಲ್ಲಿ ರೂ. 1,02,999, ಗುಜರಾತ್‌ನಲ್ಲಿ ರೂ. 1,04,999, ರಾಜಸ್ತಾನದಲ್ಲಿ ರೂ. 1,14,999, ಕರ್ನಾಟಕದಲ್ಲಿ ರೂ. 1,24,999, ತಮಿಳುನಾಡಿನಲ್ಲಿ ರೂ. 1,24,999 ಮತ್ತು ತೆಲಂಗಾಣದಲ್ಲಿ ರೂ. 1,24,999 ಬೆಲೆ ಹೊಂದಿರುತ್ತದೆ.

ಒಬೆನ್ ಎಲೆಕ್ಟ್ರಿಕ್ ಕಂಪನಿಯು ಮೊದಲ ಹಂತದಲ್ಲಿ ದೇಶದ ಪ್ರಮುಖ 7 ರಾಜ್ಯಗಳ 9 ನಗರಗಳಲ್ಲಿ ಉದ್ಯಮ ವ್ಯವಹಾರವನ್ನು ಆರಂಭಿಸುತ್ತಿದ್ದು, ಹೊಸ ಇವಿ ಬೈಕ್ ಉತ್ಪಾದನೆಗಾಗಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ವಾರ್ಷಿಕವಾಗಿ 3 ಲಕ್ಷ ಯುನಿಟ್ ಉತ್ಪಾದನಾ ಘಟಕವನ್ನು ತೆರೆದಿದೆ.

ಈ ಮೊದಲು ಬೈಕ್ ಬಿಡುಗಡೆಯ ಸಂದರ್ಭದಲ್ಲಿ ಹೇಳಿದಂತೆ ಮೇ ನಲ್ಲಿ ಟೆಸ್ಟ್ ರೈಡ್ ಆರಂಭಿಸಿ ಜೂನ್ ಆರಂಭದಲ್ಲಿ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದ ಒಬೆನ್ ಕಂಪನಿಯು ಕಾರಣಾಂತರಗಳಿಂದ ಇದೀಗ ಟೆಸ್ಟ್ ರೈಡ್ ಆರಂಭಿಸುತ್ತಿದ್ದು, ಮುಂಬರುವ ಅಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಹೊಸ ಬೈಕ್ ವಿತರಣೆ ಮಾಡುವ ಸುಳಿವು ನೀಡಿದೆ.

ಹೊಸ ಒಬೆನ್ ರೊರ್ ಇವಿ ಬೈಕ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 2 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಹೊಸ ಬೈಕ್ 100 ಕಿ.ಮೀ ಟಾಪ್ ಸ್ಪೀಡ್ ಮೂಲಕ ಮೈಲೇಜ್ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಗಮನಸೆಳೆಯುತ್ತದೆ.

ಹೊಸ ಬೈಕ್ ಮಾದರಿಯ ಬಿಡುಗಡೆಗೂ ಮುನ್ನ ಸಾವಿರಾರು ಕಿ.ಮೀ ಟೆಸ್ಟಿಂಗ್ ನಡೆಸಿರುವ ಒಬೆನ್ ಕಂಪನಿಯು ಹೊಸ ಬೈಕಿನ 10kW ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆ ಬಗೆಗೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದು, ಇದು ಬೆಲ್ಟ್ ಡ್ರೈವ್ ಸಿಸ್ಟಂ ಮೂಲಕ ಸಾಕಷ್ಟು ಮೃದವಾದ ಚಾಲನಾ ಅನುಭವ ನೀಡಲಿದೆ.

ಭಾರವಾಗಿರುವ ಬ್ಯಾಟರಿ ಪ್ಯಾಕ್ ಜೋಡಣೆ ನಡುವೆಯೂ ಹೊಸ ಬೈಕ್ 130 ಕೆ.ಜಿ ತೂಕದೊಂದಿಗೆ ಉತ್ತಮ ಮೈಲೇಜ್ ಖಾತ್ರಿಪಡಿಸಿದ್ದು, ಹೊಸ ಬೈಕ್ ಮಾದರಿಯು 780 ಎಂಎಂ ಸೀಟ್ ಹೈಟ್ ಮೂಲಕ ದೀರ್ಘ ಸಮಯದವರೆಗೂ ಸವಾರಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಬೈಕ್ ಸವಾರಿಯನ್ನು ಮತ್ತಷ್ಟು ಅತ್ಯುತ್ತಮಗೊಳಿಸಲು ಕಂಪನಿಯು ಹ್ವಾಕ್, ಸಿಟಿ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಪರ್ಫಾಮೆನ್ಸ್ ಮೋಡ್‌ನಲ್ಲೂ ಕನಿಷ್ಠ 100 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಜೊತೆಗೆ ಹೊಸ ಬೈಕಿನಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಒಬೆನ್ ಕನೆಕ್ಟೆಡ್ ಫೀಚರ್ಸ್‌ಗಳೊಂದಿಗೆ ಡ್ರೈವರ್ ಅಲರ್ಟ್ ಸಿಸ್ಟಂ, ಥೆಪ್ಟ್ ಪ್ರೊಕೆಕ್ಷನ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಆಧುನಿಕ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳಿವೆ.

ಹೊಸ ಬೈಕ್ ಮೇಲೆ ಕಂಪನಿಯು ಗರಿಷ್ಠ ವಾರಂಟಿ ಸಹ ಘೋಷಣೆ ಮಾಡಿದ್ದು, ರೊರ್ ಇವಿ ಬೈಕಿನ ಮೋಟಾರ್ ಮೇಲೆ 3 ವರ್ಷಗಳ ವಾರಂಟಿ ಸಿಗಲಿದ್ದರೆ ಬ್ಯಾಟರಿ ಮೇಲೆ 3 ವರ್ಷ ಅಥವಾ 80 ಸಾವಿರ ಕಿ.ಮೀ ಚಾಲನೆ ಆಧರಿಸಿ ವಾರಂಟಿ ಮತ್ತು ವಾಹನ ಇತರೆ ತಾಂತ್ರಿಕ ಅಂಶಗಳ ಮೇಲೆ ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿ ದೊರೆಯಲಿದೆ.