Just In
- 1 hr ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್‌ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 1 hr ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 1 hr ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Sports
ನಿವೃತ್ತಿಯ ಚಿಂತನೆಯಲ್ಲಿ ಇಂಗ್ಲೆಂಡ್ ಕಂಡ ಶ್ರೇಷ್ಠ ನಾಯಕ!: ವಾರದೊಳಗೆ ನಿವೃತ್ತಿ ಘೋಷಿಸಲಿರುವ ಕ್ರಿಕೆಟಿಗ ಯಾರು?
- Finance
ರಷ್ಯಾದಿಂದ ಹಳದಿ ಲೋಹ ಆಮದಿಗೆ ಜಿ7 ನಿರ್ಬಂಧ ಹೇರಿಕೆ: ಚಿನ್ನದ ದರ ಏರಿಕೆ
- Movies
ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ: ಸಾಲು ಸಾಲು ಸಿನಿಮಾ ರಿಲೀಸ್!
- News
ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
- Lifestyle
ಆರೋಗ್ಯಕರ ಮಗುವನ್ನು ಪಡೆಯಲು ಪುರುಷರಿಗೆ ಸರಿಯಾದ ವಯಸ್ಸು ಯಾವುದು?
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಅತಿ ಹೆಚ್ಚು ಮೈಲೇಜ್ ಜೊತೆ ಬಜೆಟ್ ಬೆಲೆಯ ಒಬೆನ್ ರೊರ್ ಇವಿ ಬೈಕ್ ಬಿಡುಗಡೆ
ನಮ್ಮ ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್(Oben Electric) ಕಂಪನಿಯು ಇವಿ ವಾಹನ ಉದ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದು, ಮೊದಲ ಹಂತದಲ್ಲಿಯೇ ಕಂಪನಿಯು ಇವಿ ವಾಹನ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವಂತಹ ತನ್ನ ಹೊಸ ಇವಿ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡಿದೆ.

ಒಬೆನ್ ಇವಿ ಕಂಪನಿಯು ಬಜೆಟ್ ಬೆಲೆ, ಹೆಚ್ಚಿನ ಮಟ್ಟದ ಮೈಲೇಜ್, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವಂತಹ ಹೊಸ ರೊರ್(RORR) ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99,999 ಬೆಲೆ ಹೊಂದಿದೆ.

ಹೊಸ ಬೈಕ್ ಮಾದರಿಯು ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗಿದ್ದು, ಸಬ್ಸಡಿ ಯೋಜನೆಯ ಜೊತೆ ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಇವಿ ನೀತಿ ಅಡಿಯಲ್ಲೂ ಸಬ್ಸಡಿ ಪಡೆದುಕೊಂಡಿದೆ.

ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳ ಸಬ್ಸಡಿಯಿಂದಾಗಿ ಒಬೆನ್ ರೊರ್ ಇವಿ ಬೈಕ್ ಬೆಲೆಯು ಮಾಹಾರಾಷ್ಟ್ರದಲ್ಲಿ ರೂ. 99,999 ಬೆಲೆ ಹೊಂದಿದ್ದರೆ ದೆಹಲಿಯಲ್ಲಿ ರೂ. 1,02,999, ಗುಜರಾತ್‌ನಲ್ಲಿ ರೂ. 1,04,999, ರಾಜಸ್ತಾನದಲ್ಲಿ ರೂ. 1,14,999, ಕರ್ನಾಟಕದಲ್ಲಿ ರೂ. 1,24,999, ತಮಿಳುನಾಡಿನಲ್ಲಿ ರೂ. 1,24,999 ಮತ್ತು ತೆಲಂಗಾಣದಲ್ಲಿ ರೂ. 1,24,999 ಬೆಲೆ ಹೊಂದಿರಲಿದೆ.

ಒಬೆನ್ ಇವಿ ಕಂಪನಿಯು ಹೊಸ ರೊರ್ ಇವಿ ಬೈಕ್ ಮಾದರಿಯನ್ನು ಮೊದಲ ಹಂತದಲ್ಲಿ ದೇಶದ ಪ್ರಮುಖ 7 ರಾಜ್ಯಗಳ 9 ನಗರಗಳಲ್ಲಿ ಉದ್ಯಮ ವ್ಯವಹಾರ ಆರಂಭಿಸುತ್ತಿದ್ದು, ಇದೇ ತಿಂಗಳು ಮಾರ್ಚ್ 18ರಿಂದ ಆಸಕ್ತ ಗ್ರಾಹಕರು ಒಬೆನ್ ಇವಿ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ.999 ಮುಂಗಡದೊಂದಿಗೆ ಬುಕಿಂಗ್ ಸಲ್ಲಿಸಬಹುದಾಗಿದೆ.

ಬುಕಿಂಗ್ ಸಲ್ಲಿಸಿದ ಗ್ರಾಹಕರಿಗೆ ಮೇ ಆರಂಭದಲ್ಲಿ ಟೆಸ್ಟ್ ರೈಡ್ ಆರಂಭಿಸುವುದಾಗಿ ಹೇಳಿಕೊಂಡಿರುವ ಒಬೆನ್ ಇವಿ ಕಂಪನಿಯು ಯಾವುದೇ ರೀತಿ ವಿಳಂಬ ಮಾಡದೆ ಜೂನ್ ಆರಂಭದಲ್ಲಿ ವಿತರಣೆಯ ಭರವಸೆ ನೀಡಿದ್ದು, ಹೊಸ ಇವಿ ಬೈಕ್ ಉತ್ಪಾದನೆಗಾಗಿ ನಮ್ಮ ಬೆಂಗಳೂರಿನಲ್ಲಿ ವಾರ್ಷಿಕವಾಗಿ 3 ಲಕ್ಷ ಯುನಿಟ್ ಉತ್ಪಾದನಾ ಘಟಕವನ್ನು ತೆರೆದಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವೃತ್ತಿ ಅನುಭವ ಹಿನ್ನಲೆ ಹೊಂದಿರುವ ದಿನಕರ್ ಅಗರ್‌ವಾಲ್ ಮತ್ತು ಮಧುಮತಿ ಅಗರವಾಲ್ ದಂಪತಿಯೇ ಒಬೆನ್ ಎಲೆಕ್ಟ್ರಿಕ್ ಕಂಪನಿಯನ್ನು ಹುಟ್ಟುಹಾಕಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಹೊಸ ಇವಿ ಬೈಕ್ ಮಾದರಿಯನ್ನು ಅಭಿವೃದ್ದಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಒಬೆನ್ ರೊರ್ ಇವಿ ಬೈಕ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 2 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಹೊಸ ಬೈಕ್ 100 ಕಿ.ಮೀ ಟಾಪ್ ಸ್ಪೀಡ್ ಮೂಲಕ ಮೈಲೇಜ್ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಗಮನಸೆಳೆಯುತ್ತದೆ.

ಹೊಸ ಬೈಕ್ ಮಾದರಿಯ ಬಿಡುಗಡೆಗೂ ಮುನ್ನ ಸಾವಿರಾರು ಕಿ.ಮೀ ಟೆಸ್ಟಿಂಗ್ ನಡೆಸಿರುವ ಒಬೆನ್ ಕಂಪನಿಯು ಹೊಸ ಬೈಕಿನ 10kW ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆ ಬಗೆಗೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದು, ಇದು ಬೆಲ್ಟ್ ಡ್ರೈವ್ ಸಿಸ್ಟಂ ಮೂಲಕ ಸಾಕಷ್ಟು ಮೃದವಾದ ಚಾಲನ ಅನುಭವ ನೀಡಲಿದೆ.

ಭಾರವಾಗಿರುವ ಬ್ಯಾಟರಿ ಪ್ಯಾಕ್ ಜೋಡಣೆ ನಡುವೆಯೂ ಹೊಸ ಬೈಕ್ 130 ಕೆ.ಜಿ ತೂಕದೊಂದಿಗೆ ಉತ್ತಮ ಮೈಲೇಜ್ ಖಾತ್ರಿಪಡಿಸಿದ್ದು, ಹೊಸ ಬೈಕ್ ಮಾದರಿಯು 780 ಎಂಎಂ ಸೀಟ್ ಹೈಟ್ ಮೂಲಕ ದೀರ್ಘ ಸಮಯದವರೆಗೂ ಸವಾರಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಬೈಕ್ ಸವಾರಿಯನ್ನು ಮತ್ತಷ್ಟು ಅತ್ಯುತ್ತಮಗೊಳಿಸಲು ಕಂಪನಿಯು ಹ್ವಾಕ್, ಸಿಟಿ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಪರ್ಫಾಮೆನ್ಸ್ ಮೋಡ್‌ನಲ್ಲೂ ಕನಿಷ್ಠ 100 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಜೊತೆಗೆ ಹೊಸ ಬೈಕಿನಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಒಬೆನ್ ಕನೆಕ್ಟೆಡ್ ಫೀಚರ್ಸ್‌ಗಳೊಂದಿಗೆ ಡ್ರೈವರ್ ಅಲರ್ಟ್ ಸಿಸ್ಟಂ, ಥೆಪ್ಟ್ ಪ್ರೊಕೆಕ್ಷನ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಆಧುನಿಕ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳಿವೆ.

ಹೊಸ ಬೈಕ್ ಮೇಲೆ ಕಂಪನಿಯು ಗರಿಷ್ಠ ವಾರಂಟಿ ಸಹ ಘೋಷಣೆ ಮಾಡಿದ್ದು, ರೊರ್ ಇವಿ ಬೈಕಿನ ಮೋಟಾರ್ ಮೇಲೆ 3 ವರ್ಷಗಳ ವಾರಂಟಿ ಸಿಗಲಿದ್ದರೆ ಬ್ಯಾಟರಿ ಮೇಲೆ 3 ವರ್ಷ ಅಥವಾ 80 ಸಾವಿರ ಕಿ.ಮೀ ಚಾಲನೆ ಆಧರಿಸಿ ವಾರಂಟಿ ಮತ್ತು ವಾಹನ ಇತರೆ ತಾಂತ್ರಿಕ ಅಂಶಗಳ ಮೇಲೆ ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿ ದೊರೆಯಲಿದೆ.