ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ತನ್ನ ಇವಿ ಸ್ಕೂಟರ್ ಮಾದರಿಗಳಾದ ಎಸ್1 ಮತ್ತು ಎಸ್1 ಪ್ರೊ ವಿತರಣೆಯನ್ನು ದೇಶಾದ್ಯಂತ ಪ್ರಮುಖ ಅಧಿಕೃತ ಚಾಲನೆ ನೀಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಪ್ರಮುಖ ಫೀಚರ್ಸ್‌ಗಳನ್ನು ಕೈಬಿಟ್ಟಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಸಂದರ್ಭದಲ್ಲಿ ಹಲವಾರು ಹೊಸ ಫೀಚರ್ಸ್‌ಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಓಲಾ ಕಂಪನಿಯು ಇದೀಗ ಸ್ಕೂಟರ್ ವಿತರಣೆ ಆರಂಭಿಸಿದ್ದು, ಹೊಸ ಸ್ಕೂಟರ್ ವಿತರಣೆ ಪಡೆದುಕೊಂಡ ಗ್ರಾಹಕರಲ್ಲಿ ಸ್ಕೂಟರ್ ಪಡೆದುಕೊಂಡ ಖುಷಿ ಒಂದು ಕಡೆಯಾದರೆ ಮತ್ತೊಂದು ಕಡೆ ಕಂಪನಿಯ ನಡೆ ಅಸಮಾಧಾನ ತಂದಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಓಲಾ ಕಂಪನಿಯು ಸ್ಕೂಟರ್ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೊಂಡಂತೆ ಹೊಸ ಸ್ಕೂಟರ್‌ಗಳಲ್ಲಿ ಪ್ರಮುಖ ಫೀಚರ್ಸ್‌ಗಳು ಇಲ್ಲದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಗ್ರಾಹಕರ ಅಸಮಾಧಾನವನ್ನು ಕಂಪನಿಯೇ ಬಹಿರಂಗಪಡಿಸಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಬಿಡುಗಡೆಯ ಸಂದರ್ಭದಲ್ಲಿ ಇವಿ ಸ್ಕೂಟರ್‌ಗಳಲ್ಲಿ ಬಜೆಟ್ ಬೆಲೆಗೆ ಕ್ರೂಸ್ ಕಂಟ್ರೊಲ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಹಿಲ್ ಹೋಲ್ಡ್‌ನಂತಹ ವೈಶಿಷ್ಟ್ಯತೆಗಳನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದ್ದ ಓಲಾ ಕಂಪನಿಯು ಇದೀಗ ಸ್ಕೂಟರ್‌ಗಳಲ್ಲಿ ಅಂತಹ ಯಾವುದೇ ಫೀಚರ್ಸ್‌ ನೀಡದಿರುವುದು ಗ್ರಾಹಕರು ಸಾಮಾಜಿಕ ಜಾಣತಾಣಗಳಲ್ಲಿ ಕಂಪನಿಯ ವಿರುದ್ದ ಆಕ್ರೋಶಕ್ಕೆ ವ್ಯಕ್ತಪಡಿಸುತ್ತಿದ್ದಾರೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಗ್ರಾಹಕರ ಅಸಮಾಧಾನದ ಕುರಿತು ಮಾತನಾಡಿರುವ ಓಲಾ ಎಲೆಕ್ಟ್ರಿಕ್‌ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿ ವರುಣ್ ದುಬೆ ಅವರು ಮುಂಬರುವ ಕೆಲ ತಿಂಗಳಿನಲ್ಲಿ ಓವರ್-ದಿ-ಏರ್ (OTA) ನವೀಕರಣಗಳ ಮೂಲಕ ಸಕ್ರಿಯಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

OTA ನವೀಕರಣವು ಗ್ರಾಹಕರನ್ನು ತಲುಪಲು ಮುಂದಿನ ಮೂರರಿಂದ ಆರು ತಿಂಗಳವರೆಗೆ ತೆಗೆದುಕೊಳ್ಳುತ್ತದೆ ಎಂಬ ಮಾಹಿತಿ ಹಂಚಿಕೊಳ್ಳಲಾಗಿದ್ದು, ಕ್ರೂಸ್ ಕಂಟ್ರೊಲ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಹಿಲ್ ಹೋಲ್ಡ್‌ ಸೇರಿದಂತೆ ಪ್ರಮುಖ ಫೀಚರ್ಸ್‌ಗಳನ್ನು ಅಪಡೇಟ್ ಮಾಡುವುದಾಗಿ ತಿಳಿಸಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಸದ್ಯ ಸಾಮಾನ್ಯ ಫೀಚರ್ಸ್ ಹೊಂದಿರುವ ಎಸ್1 ಮತ್ತು ಎಸ್1 ಪ್ರೊ ವಿತರಣೆ ಮಾಡುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕೆಲವು ವಿಚಾರಗಳಲ್ಲಿ ಮೊದಲಿನಿಂದಲೂ ವಿವಾದಗಳಿಗೆ ತುತ್ತಾಗುತ್ತಿದೆ. ಅಸಮರ್ಪಕ ಮಾಹಿತಿ, ಸುಳ್ಳು ಭರವಸೆ, ಸರಿಯಾದ ಸಮಯಕ್ಕೆ ಸ್ಕೂಟರ್ ವಿತರಣೆ ಮಾಡದಿರುವುದು, ಸ್ಕೂಟರ್ ಫೀಚರ್ಸ್‌ಗಳಲ್ಲೂ ಅಸಮರ್ಪಕ ಮಾಹಿತಿ, ನಿಧಾನಗತಿಯ ವಿತರಣೆ ಸೇರಿದಂತೆ ಹಲವು ಕಾರಣಗಳಿಗೆ ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಇನ್ನು ಓಲಾ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಹೊಸ ಎಸ್1 ಮತ್ತು ಎಸ್1 ಪ್ರೊ ಸ್ಕೂಟರ್‌ಗಳ ಖರೀದಿಗಾಗಿ ಇದುವರೆಗೆ 1 ಲಕ್ಷ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಬೇಡಿಕೆಗೆ ತಕ್ಕಂತೆ ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ತೀವ್ರಗೊಳಿಸಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರವೇ ಟೆಸ್ಟ್ ರೈಡ್ ಒದಗಿಸುವ ಮೂಲಕ ಸ್ಕೂಟರ್ ವಿತರಣೆ ಆರಂಭಿಸಿದ್ದು, ಇವಿ ಸ್ಕೂಟರ್‌ಗಳ ಬುಕ್ಕಿಂಗ್ ಮತ್ತು ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡಲಾಗಿದೆ.

ಕನಿಷ್ಠ ಆರು ತಿಂಗಳು ತೆಗೆದುಕೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿನ OTA ನವೀಕರಣ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡಿರುವುದರಿಂದ ಗ್ರಾಹಕರ ಸೇವೆಗಳನ್ನು ಮನೆ ಬಾಲಿಗೆಗೆ ತಲುಪಿಸುವುದಾಗಿ ಓಲಾ ಕಂಪನಿಯು ತನ್ನ ಗ್ರಾಹಕರಿಗೆ ಭರವಸೆ ನೀಡಿದ್ದು, ಎಲೆಕ್ಟ್ರಿಕ್ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Ola electric ota update delayed by upto 6 months details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X