ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಪೆಟ್ರೋಲ್ ಬೆಲೆಗಳ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಜನರು ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ತ್ಯಜಿಸಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಕೂಡ ಪ್ರತಿ ತಿಂಗಳು ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗುತ್ತಿದೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ಸ್ಕೂಟರ್ ಅನ್ನು ಬುಕ್ ಮಾಡಿದರೆ ಕಂಪನಿಯು ಸಾಮಾನ್ಯ ಡೀಲರ್ ಸಿಸ್ಟಮ್‌ಗಿಂತ ಹೆಚ್ಚಾಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದೆ. ಕಂಪನಿಗೆ ಅದೊಂದು ವಿಭಿನ್ನ ಪ್ರಯತ್ನವಾಗಿದ್ದು ಗ್ರಾಹಕರಿಗೂ ಓಲಾ ಎಂದರೆ ಎಥೇಚ್ಚ ನಂಬಿಕೆ ಏರ್ಪಟ್ಟಿದೆ. ಇದೇ ಕಾರಣಕ್ಕೆ ಬೇಡಿಕೆ ಹೆಚ್ಚಾಗಿ ಮಾರಟದಲ್ಲಿ ಇತರೆ ಇವಿ ಕಂಪನಿಗಳಿಗಿಂತ ಹೆಚ್ಚಾಗಿ ಗುರ್ತಿಸಿಕೊಂಡಿದೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಆದರೆ ಮಾರ್ಚ್‌ನಿಂದ, ಭಾರತದ ವಿವಿಧ ಭಾಗಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದು ಕಂಪನಿಯ ಅಷ್ಟೂ ಹೆಸರನ್ನು ಒಂದೇ ಸಮನೆ ಕೆಳಕ್ಕಿಳಿಸಿದೆ. ಸದ್ಯ ಈ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಇನ್ನೂ ಹಲವೆಡೆ ಆಗಾಗ ಕಾಣಿಸಿಕೊಳ್ಳುತ್ತಿವೆ. ಈ ಸುದ್ದಿ ವೇಗವಾಗಿ ಹರಡುತ್ತಿದ್ದಂತೆ, ಕೆಲವರು ಓಲಾ ಸ್ಕೂಟರ್‌ಗಳನ್ನು ಖರೀದಿಸಲು ಹಿಂಜರಿಯುತ್ತಿದ್ದರು.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಇಷ್ಟೇ ಅಲ್ಲ, ಸ್ಕೂಟರ್ ಖರೀದಿಸಿದ ಕೆಲವು ಜನರು ಸ್ಕೂಟರ್‌ನಲ್ಲಿ ಅನೇಕ ಸಮಸ್ಯೆಗಳಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್‌ಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ವೈದ್ಯರೊಬ್ಬರು ಆಗಾಗ ಸ್ಕೂಟರ್‌ನಲ್ಲಿನ ಕಂಡುಬರುತ್ತಿದ್ದ ಸಮಸ್ಯೆಗಳಿಗೆ ಬೇಸತ್ತು ಸ್ಕೂಟರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿ ಕಂಪನಿಗೆ ಕೆಟ್ಟ ಹೆಸರನ್ನು ತಂದಿತ್ತು. ಇದಕ್ಕೆ ನೆಟ್ಟಿಗರು ಕೂಡ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದ್ದರು. ಇದೊಂದೆ ಅಲ್ಲದೇ ಕೆಲವು ದಿನಗಳ ಹಿಂದೆ ಓಲಾ ಸ್ಕೂಟರ್‌ನಲ್ಲಿ ರಿವರ್ಸ್‌ ಮೋಡ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ 61 ವರ್ಷದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದರು.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ಸುದ್ದಿ ದೇಶಾದ್ಯಂತ ಚರ್ಚೆಯಾಗಿತ್ತು ಪ್ರಮಾಣಿತವಲ್ಲದಿದ್ದಾಗ ಇಂತಹ ವೈಶಿಷ್ಟ್ಯಗಳನ್ನು ಏಕೆ ನೀಡಬೇಕು ಎಂದು ಗ್ರಾಹಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇದೀಗ ಹಾರ್ಡ್‌ವೇರ್ ಸಮಸ್ಯೆ ಕಂಪನಿಗೆ ಕಂಠಕವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಓಲಾ ಸ್ಕೂಟರ್‌ನ ಮತ್ತೊಂದು ಸಮಸ್ಯೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಇದು ಈಗ ಕಂಪನಿಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಕಸಿದುಕೊಂಡಿದೆ. ಇದು ಸಾಲದೆಂಬಂತೆ ಇದೀಗ ವಾಹನದ ಹಾರ್ಡ್‌ವೇರ್ ಸಮಸ್ಯೆ ಕೂಡ ಕಂಪನಿಗೆ ದೊಡ್ಡ ಕಂಠಕವಾಗಿ ಪರಿಣಮಿಸಿದೆ. ಶ್ರೀನಾಥ್ ಮೆನನ್ ಎಂಬ ವ್ಯಕ್ತಿಯು ತನ್ನ ಟ್ವಿಟ್ಟರ್ ಪುಟದಲ್ಲಿ ಓಲಾ ಎಸ್ 1 ಪ್ರೊ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್ ದುರ್ಬಲವಾಗಿದೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಕಡಿಮೆ ವೇಗದಲ್ಲಿ ಪ್ರಯಾಣಿಸುವಾಗ ಕೆಟ್ಟುಹೋಗಿ ಮುರಿದುಬಿದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಓಲಾ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್ ಮುರಿದಿರುವ ಮತ್ತು ಸ್ಕೂಟರ್ ರಸ್ತೆಯಲ್ಲಿ ಬಿದ್ದಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಫೋಟೋದಲ್ಲಿ, ಓಲಾ ಸ್ಕೂಟರ್‌ನ ಮುಂಭಾಗದ ಚಕ್ರವು ಸ್ಕೂಟರ್ನಿಂದ ಸಂಪೂರ್ಣವಾಗಿ ಮುರಿದು ಪಕ್ಕಕ್ಕೆ ಬಿದ್ದಿದೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಟ್ವೀಟ್‌ನಲ್ಲಿ ಸಂತ್ರಸ್ತ ಗ್ರಾಹಕ ಓಲಾ ಮತ್ತು ಅದರ ಸಿಇಒ ಭವಿಶ್ ಅಗರ್ವಾಲ್ ಅವರನ್ನು ಟ್ಯಾಗ್ ಮಾಡಿದ್ದರೆ. ಓಲಾ ತನ್ನ ಸ್ಕೂಟರ್‌ನ ವಿನ್ಯಾಸವನ್ನು ಬದಲಾಯಿಸಬೇಕು, ಇದರಿಂದ ಸ್ಕೂಟರ್ ಬಳಕೆದಾರರ ಜೀವಗಳನ್ನು ಉಳಿಸಬಹುದು ಎಂದು ಅವರು ಉಲ್ಲೇಖಿಸಿದ್ದರು.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ಟ್ವೀಟ್‌ನಲ್ಲಿ, ಇನ್ನೂ ಕೆಲವರು ಇದೇ ಅನುಭವ ತಮಗೂ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಒಬ್ಬರು ತಮ್ಮ ಕೆಂಪು ಓಲಾ ಸ್ಕೂಟರ್‌ನ ಮುಂಭಾಗದ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅಂತೆಯೇ, ಓಲಾದ ಗ್ರಾಹಕ ಸೇವಾ ಕೇಂದ್ರವು ಗ್ರಾಹಕರ ದೂರುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅನೇಕರು ದೂರುತ್ತಿದ್ದಾರೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ಹೊಸ ಸಮಸ್ಯೆಯು ಓಲಾಗೆ ದೊಡ್ಡ ತಲೆನೋವನ್ನು ಉಂಟುಮಾಡಿದೆ. ಓಲಾ ಸ್ಕೂಟರ್ ಪ್ರಸ್ತುತ ಸ್ಕೂಟರ್ ನ ಬ್ಯಾಟರಿಗೆ ಬೆಂಕಿ ತಗುಲುವುದು, ಬೈಕ್ ರಿವರ್ಸ್ ಮೋಡ್ ಸಮಸ್ಯೆ, ಸಾಫ್ಟ್ ವೇರ್ ನಲ್ಲಿ ತಾಂತ್ರಿಕ ತೊಂದರೆಗಳು ಮುಂತಾದ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಇದೀಗ ಸಸ್ಪೆನ್ಷನ್ ಸಮಸ್ಯೆ ಎದುರಾಗಿರುವುದು ನೋಡಿದರೆ ಸಂಪೂರ್ಣ ವಾಹನೇ ಸರಿಯಿಲ್ಲ ಎಂದು ಜನರು ಕಾಮೆಂಟ್ ಮಾಡುತ್ತದ್ದಾರೆ.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಈ ನಡುವೆ ಓಲಾ ಸ್ಕೂಟರ್ ಫುಲ್ ಚಾರ್ಜ್ ನಲ್ಲಿ 200 ಕಿ.ಮೀ ಕ್ರಮಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಪೋಸ್ಟ್ ಮಾಡಿದ್ದಾರೆ. ಓಲಾ ಕಂಪನಿಯ ಸಿಇಒ ಅವರಿಗೆ ಹೊಸ ಸ್ಕೂಟರ್ ಉಡುಗೊರೆ ನೀಡಿದ್ದರು.

 ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್

ಪೂರ್ಣ ಚಾರ್ಜ್‌ನಲ್ಲಿ 200 ಕಿ.ಮೀ ಓಡಿಸುವವರಿಗೆ ಓಲಾ ಎಸ್1 ಪ್ರೊ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಓಲಾ ಸಿಇಒ ತಿಳಿಸಿದ್ದರು. ಓಲಾ ಸ್ಕೂಟರ್ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ.

Most Read Articles

Kannada
Read more on ಓಲಾ ola
English summary
Ola scooter suspension broke in middle of the road new issue on quality
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X