ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಪಿಯಾಜಿಯೊ ತನ್ನ ಅತ್ಯಂತ ಜನಪ್ರಿಯ ವೆಸ್ಪಾ ಸ್ಕೂಟರ್‌ನ ಹೊಸ ವಿಶೇಷ ಆವೃತ್ತಿಯನ್ನು ಬಹಿರಂಗಪಡಿಸಿದೆ. ಈ ವಿಶೇಷ ಆವೃತ್ತಿಯ ವೆಸ್ಪಾ ಸ್ಕೂಟರ್ ಅನ್ನು ಕೆನಡಾದ ಪಾಪ್ ಸಿಂಗರ್ ಮತ್ತು ಮ್ಯೂಸಿಕ್ ಐಕಾನ್ ಜಸ್ಟಿನ್ ಬೈಬರ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಆವೃತ್ತಿಗೆ 'ಜಸ್ಟಿನ್ ಬೈಬರ್ ಎಕ್ಸ್ ವೆಸ್ಪಾ' ಎಂದು ಹೆಸರಿಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

"ಬೇಬಿ" ಮೂಲಕ ಹೆಚ್ಚು ಜನಪ್ರಿಯವಾದ ಗಾಯಕ ಜಸ್ಟಿನ್ ಬೈಬರ್ ವೆಸ್ಪಾ ಸ್ಕೂಟರ್‌ಗಳ ಅಭಿಮಾನಿಯಾಗಿದ್ದಾರೆ. ಈ ವಿಶೇಷ ಆವೃತ್ತಿಯನ್ನು ಅವರ ಸೃಜನಶೀಲತೆಯನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನು ಜಸ್ಟಿನ್ ಬೈಬರ್ ಅವರ ಇಷ್ಟದಂತೆ ಕಂಪನಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ತನ್ನ ಬಿಡುಗಡೆಯಲ್ಲಿ ತಿಳಿಸಿದೆ. ವೆಸ್ಪಾ ಸ್ಕೂಟರ್‌ಗಳಿಗೆ ವಿಶೇಷ ವಿನ್ಯಾಸದ ಸ್ಪರ್ಶ ನೀಡಿದ ಜಾರ್ಜಿಯೊ ಅರ್ಮಾನಿ, ಕ್ರಿಶ್ಚಿಯನ್ ಡಿಯರ್ ಮತ್ತು ಸೀನ್ ವೋಥರ್ಸ್ಪೂನ್ ಸೇರಿದಂತೆ ಹಲವು ಸೆಲಬ್ರಿಟಿಗಳ ಪಟ್ಟಿಗೆ ಇದೀಗ ಜಸ್ಟಿನ್‌ ಕೂಡ ಸೇರಿದ್ದಾರೆ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಸ್ಕೂಟರ್‌ನ ವಿಶೇಷತೆ

ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯು ಬಿಳಿ ಬಣ್ಣದಲ್ಲಿ ಲಭ್ಯವಿದೆ. ಸ್ಕೂಟರ್‌ನ ಮುಂಭಾಗದ ಏಪ್ರನ್, ಸೈಡ್ ಪ್ಯಾನೆಲ್‌ಗಳು ಮತ್ತು ಅಲಾಯ್‌ ವ್ಹೀಲ್‌ಗಳಿಗೆ ಬಿಳಿ ಬಣ್ಣವನ್ನು ನೀಡಲಾಗಿದೆ. ಸ್ಕೂಟರ್‌ನ ಸೈಲೆನ್ಸರ್‌ಗೆ ಬಿಳಿ ಮಫ್ಲರ್ ಮತ್ತು ಹಿಂಭಾಗದ ವೀವ್ ಮಿರರ್‌ಗಳನ್ನು ಸಹ ಬಿಳಿ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಜಸ್ಟಿನ್ ಬೈಬರ್ ಆವೃತ್ತಿಯ ವೆಸ್ಪಾವನ್ನು 50cc, 125cc ಮತ್ತು 150cc ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಿದೆ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಈ ವೆಸ್ಪಾ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಬದಲಾಗಿ ಇದು ತನ್ನ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಉಳಿದಿದೆ. ಇದು ಎಲ್ಇಡಿ ಹೆಡ್ಲೈಟ್, TFT ಡಿಸ್ಪ್ಲೇ, ಸ್ಮಾರ್ಟ್ಫೋನ್ ಸಂಪರ್ಕ ಮತ್ತು 12-ಇಂಚಿನ ಅಲಾಯ್‌ ವ್ಹೀಲ್‌ಗಳನ್ನು ಪಡೆದುಕೊಂಡಿದೆ. ವೆಸ್ಪಾ 125cc ಮಾದರಿಯು 7,500 rpm ನಲ್ಲಿ 9.93 hp ಮತ್ತು 5,500 rpm ನಲ್ಲಿ 9.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ದೊಡ್ಡ ಸಾಮರ್ಥ್ಯದ 150 cc ಸ್ಕೂಟರ್ 7,600 rpm ನಲ್ಲಿ 10.4 hp ಮತ್ತು 5,500 rpm ನಲ್ಲಿ 10.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಕಂಪನಿಯು ಈ ವಿಶೇಷ ಆವೃತ್ತಿಯ ವೆಸ್ಪಾವನ್ನು ವಿವಿಧ ಪರಿಕರಗಳೊಂದಿಗೆ ಲಭ್ಯವಾಗುವಂತೆ ಮಾಡುತ್ತದೆ. ವಿಶೇಷ ಕವರ್‌ಗಳು, ಗ್ಲೌಸ್‌ಗಳು ಮತ್ತು ಬಿಳಿ ಹೆಲ್ಮೆಟ್‌ ಸೇರಿದಂತೆ ವ್ಯಾಪಕ ಶ್ರೇಣಿಯ ವಸ್ತ್ರ ಪರಿಕರಗಳೊಂದಿಗೆ ಇದನ್ನು ನೀಡುತ್ತದೆ. ಕಂಪನಿಯು ಜಸ್ಟಿನ್ ಬೈಬರ್ ಆವೃತ್ತಿ ವೆಸ್ಪಾವನ್ನು ಏಪ್ರಿಲ್ 18, 2022 ರಿಂದ ಪ್ರೀ ಬುಕಿಂಗ್‌ ಮಾಡಲು ಪ್ರಾರಂಭಿಸಲಿದೆ. ಈ ಸ್ಕೂಟರ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಕಂಪನಿಯು ಇದನ್ನು ಭಾರತದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕಾದ ಸಂಗತಿ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ವೆಸ್ಪಾ ಬಗ್ಗೆ ಮಾತನಾಡಿದ ಜಸ್ಟಿನ್ ಬೈಬರ್, "ನಾನು ಮೊದಲ ಬಾರಿಗೆ ವೆಸ್ಪಾವನ್ನು ಓಡಿಸಿದ್ದು ಯುರೋಪ್‌ನಲ್ಲಿ, ಬಹುಶಃ ಲಂಡನ್ ಅಥವಾ ಪ್ಯಾರಿಸ್‌ನಲ್ಲಿಯು ಇರಬಹುದು. ನಾನು ವೆಸ್ಪಾವನ್ನು ನೋಡಿದ ಕೂಡಲೆ ಅದನ್ನು ಒಂದು ಬಾರಿ ಓಡಿಸುವ ಕುತೂಹಲ ಹೆಚ್ಚಾಯಿತು ಎಂದು ಅವರು, ನಾನು ಅದರಲ್ಲಿ ಸಂಚರಿಸಿದ ಸಮಯವನ್ನು ಎಂದೂ ಮರಿಯುವುದಿಲ್ಲ, ಪ್ರಯಾಣದ ವೇಳೆ ಗಾಳಿಯು ನನ್ನ ಕೂದಲಿನ ಮೂಲಕ ಹಾರುತ್ತಿದ್ದಾಗ ಸ್ವಾತಂತ್ರ್ಯ ಸಿಕ್ಕಂತಹ ಅನುಭವವಿತ್ತು ಎಂದರು.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಪಿಯಾಜಿಯೊ 2022ರ ಅಂತ್ಯದ ವೇಳೆಗೆ ಭಾರತದಲ್ಲಿ 450 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯಲಿದೆ. ಇದರಲ್ಲಿ ವೆಸ್ಪಾ, ಎಪ್ರಿಲಿಯಾ ಮತ್ತು ಪಿಯಾಜಿಯೊ ಅವರ ತ್ರಿಚಕ್ರ ವಾಹನಗಳಿಗಾಗಿ ಶೋರೂಂಗಳನ್ನು ತೆರೆಯಲಾಗುವುದು. ಪಿಯಾಜಿಯೊ, ವೆಸ್ಪಾ ಮತ್ತು ಎಪ್ರಿಲಿಯಾ ವಾಹನಗಳಿಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ. ಅಂಕಿಅಂಶಗಳ ಪ್ರಕಾರ, ಪಿಯಾಜಿಯೊದ ಶೇಕಡಾ 45 ರಷ್ಟು ವಾಹನಗಳು ಭಾರತದಲ್ಲಿ ಮಾರಾಟವಾಗಿವೆ. ಪಿಯಾಜಿಯೊ ಕಳೆದ ವರ್ಷ ಆಗಸ್ಟ್‌ನಲ್ಲಿ ವೆಸ್ಪಾ ಸ್ಕೂಟರ್‌ನ 75ನೇ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಬ್ರಾಂಡ್‌ನ 75ನೇ ವರ್ಷವನ್ನು ಆಚರಿಸಲು ಕಂಪನಿಯು ಇದನ್ನು ಪರಿಚಯಿಸಿದೆ. ಕಂಪನಿಯು ಹೊಸ ಸೀಮಿತ ಆವೃತ್ತಿಯ 125cc ವೆಸ್ಪಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.1.26 ಲಕ್ಷಕ್ಕೆ ಲಭ್ಯವಾಗುವಂತೆ ಮಾಡಿದೆ.

ಆಕರ್ಷಣೀಯ ವೈಶಿಷ್ಟ್ಯಗಳೊಂದಿಗೆ ಬಹಿರಂಗೊಂಡ ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿಯ ಸ್ಕೂಟರ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಳವಣಿಗೆಯ ಪ್ರವೃತ್ತಿಯನ್ನು ಪರಿಗಣಿಸಿ, ಅನೇಕ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿವೆ, ಸ್ಕೂಟರ್ ತಯಾರಿಕೆಯಲ್ಲಿ ಪ್ರವರ್ತಕ ವೆಸ್ಪಾ, ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತರುವಲ್ಲಿ ಹಿಂದುಳಿಯಲು ಬಯಸುವುದಿಲ್ಲ. ಹಾಗಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಳವಣಿಗೆಯ ಪ್ರವೃತ್ತಿಯನ್ನು ಪರಿಗಣಿಸಿ, ವೆಸ್ಪಾ ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಭಾರತೀಯ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಶೇಷವಾಗಿ ತಯಾರಿಸಲಾಗುವುದು. ಮಾಹಿತಿಯ ಪ್ರಕಾರ, ಕಂಪನಿಯು ಪ್ರಸ್ತುತ ತನ್ನ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಲ್ಲಿ ಕೆಲಸ ಮಾಡುತ್ತಿದೆ.

Most Read Articles

Kannada
Read more on ವೆಸ್ಪಾ vespa
English summary
Piaggio vespa justin bieber edition unveiled features details
Story first published: Wednesday, April 13, 2022, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X