ಹೀರೋ ದ್ವಿಚಕ್ರ ವಾಹನಗಳ ಮಾರಾಟ ಭಾರೀ ಕುಸಿತ.. ಹೋಂಡಾ, ಟಿವಿಎಸ್, ಬಜಾಜ್ ಕಥೆಯೇನು?

ಭಾರತದ ಮಾರುಕಟ್ಟೆಯಲ್ಲಿ ಬಹುತೇಕ ದ್ವಿಚಕ್ರ ವಾಹನ ತಯಾರಿಕ ಕಂಪನಿಗಳು ನವೆಂಬರ್ ಮಾರಾಟದಲ್ಲಿ ತೀವ್ರ ಕುಸಿತವನ್ನು ದಾಖಲಿಸಿವೆ. ಅತಿ ದೊಡ್ಡ ತಯಾರಕರಾಗಿರುವ ಹೀರೋ ಮೋಟೋಕಾರ್ಪ್ ಮಾರಾಟ ಪ್ರಮಾಣವು ಗಮನಾರ್ಹ ಅಂತರದಿಂದ ಕಡಿಮೆಯಾಗಿದೆ. ಹೋಂಡಾ ಟಿವಿಎಸ್ ಸೇರಿದಂತೆ ಇತರೆ ಕಂಪನಿಗಳು ಎಷ್ಟು ವಾಹನಗಳನ್ನು ಮಾರಾಟ ಮಾಡಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಹೀರೋ (3,79,839 ಯುನಿಟ್‌ಗಳು):
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಆದರೆ, ಕಂಪನಿಯ ಅಂಕಿಅಂಶಗಳಲ್ಲಿ ಮಾರಾಟ ಪ್ರಮಾಣವು ನವೆಂಬರ್ 2022ರಲ್ಲಿ 3,79,839 ಯುನಿಟ್‌ಗಳಿಗೆ ಕುಸಿದಿದೆ. ಹಬ್ಬದ ಸೀಸನ್ ಇದ್ದ ಕಾರಣ, ಅಕ್ಟೋಬರ್ ತಿಂಗಳಲ್ಲಿ ಕಂಪನಿಯು 4,42,825 ಯುನಿಟ್‌ ಮಾರಾಟ ಮಾಡಲು ಯಶಸ್ವಿಯಾಗಿತ್ತು. ತಿಂಗಳಿನಿಂದ ತಿಂಗಳಿಗೆ ಶೇಕಡ 14ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿದೆ. ಆದಾಗ್ಯೂ, ವರ್ಷದಿಂದ ವರ್ಷದ ಮಾರಾಟ ಅಂಕಿಅಂಶಗಳು ಶೇಕಡ 15ಕ್ಕಿಂತ ಹೆಚ್ಚು ಸುಧಾರಿಸಿದೆ.

ಹೀರೋ ದ್ವಿಚಕ್ರ ವಾಹನಗಳ ಮಾರಾಟ ಭಾರೀ ಕುಸಿತ.. ಹೋಂಡಾ, ಟಿವಿಎಸ್, ಬಜಾಜ್ ಕಥೆಯೇನು?

ಹೋಂಡಾ (3,53,540 ಯುನಿಟ್‌ಗಳು):
ದ್ವಿಚಕ್ರ ವಾಹನ ಮಾರಾಟ ಪ್ರಮಾಣದಲ್ಲಿ ಹೋಂಡಾ ಕಂಪನಿಯು ಎರಡನೇ ಸ್ಥಾನದಲ್ಲಿದ್ದು, ಶೀಘ್ರದಲ್ಲೇ ಹೀರೋ ಮೋಟೋಕಾರ್ಪ್ ಅನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಒಟ್ಟಾರೆ ಮಾಸಿಕ ಮಾರಾಟ ಅಂಕಿಅಂಶಗಳಲ್ಲಿ 17 ಪ್ರತಿಶತದಷ್ಟು ಕುಸಿತ ದಾಖಲಿಸಿದೆ. ಆದರೆ, ವರ್ಷದಿಂದ ವರ್ಷಕ್ಕೆ ಕಂಪನಿಯು ಶೇಕಡ 38ಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸಿರುವ ಕಾರಣ, ಅದರ ಮಾರಾಟವು ಉತ್ತಮವಾಗಿಯೇ ಇದೆ.

ಟಿವಿಎಸ್ (1,91,730 ಯುನಿಟ್‌ಗಳು):
ಟಿವಿಎಸ್ ತನ್ನ ದ್ವಿಚಕ್ರ ವಾಹನಗಳ 1,91,730 ಯೂನಿಟ್‌ಗಳನ್ನು ನವೆಂಬರ್ ತಿಂಗಳಲ್ಲಿ ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿಯೇ ಮುಂದುವರಿದ್ದು, ಬಜಾಜ್ ಮೋಟಾರ್‌ಸೈಕಲ್ಸ್ ಅನ್ನು ಮತ್ತೊಮ್ಮೆ ಹಿಂದೆ ತಳ್ಳಿದೆ. ಕಂಪನಿಯು ಒಟ್ಟು 1,91,730 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ ತಿಂಗಳಲ್ಲಿ ಮಾರಾಟ ಮಾಡಲು ಹಾಕಿಕೊಂಡಿದ್ದ ಗುರಿಗಿಂತ ಶೇಕಡ 9 ರಷ್ಟು ಹೆಚ್ಚು. ಆದಾಗ್ಯೂ, ಕಂಪನಿಯು ಹಿಂದಿನ ತಿಂಗಳಲ್ಲಿ 2.75 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ತಿಂಗಳಿನಿಂದ ತಿಂಗಳ ಮಾರಾಟವು ಶೇಕಡ 30ಕ್ಕಿಂತ ಕಡಿಮೆಯಾಗಿದೆ.

ಹೀರೋ ದ್ವಿಚಕ್ರ ವಾಹನಗಳ ಮಾರಾಟ ಭಾರೀ ಕುಸಿತ.. ಹೋಂಡಾ, ಟಿವಿಎಸ್, ಬಜಾಜ್ ಕಥೆಯೇನು?

ಬಜಾಜ್ (1,23,490 ಯುನಿಟ್‌ಗಳು):
ಟಿವಿಎಸ್ ಮೋಟಾರ್ಸ್‌ನಿಂದ ಮೂರನೇ ಸ್ಥಾನವನ್ನು ಮರಳಿ ಪಡೆಯಲು ಬಜಾಜ್ ಹೆಣಗಾಡುತ್ತಿದೆ. ಇದಕ್ಕೆ ಕಾರಣ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಸ್ಕೂಟರ್‌ಗಳ ಕೊರತೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೆ, ಬಜಾಜ್, ವರ್ಷದಿಂದ ವರ್ಷಕ್ಕೆ 15 ಪ್ರತಿಶತದಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸಿರುವ ಏಕೈಕ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಯು 2.06 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ, ತಿಂಗಳ ಮಾರಾಟದ ಅಂಕಿಅಂಶಗಳು ಶೇಕಡ 40ಕ್ಕಿಂತ ಕಡಿಮೆಯಾಗಿದೆ.

ರಾಯಲ್ ಎನ್‌ಫೀಲ್ಡ್ (65,760 ಯುನಿಟ್‌ಗಳು):
ಹಂಟರ್ 350 ಮೋಟಾರ್‌ಸೈಕಲ್‌ನ ಬಿಡುಗಡೆಯು ರಾಯಲ್ ಎನ್‌ಫೀಲ್ಡ್‌ ಬೆಳವಣಿಗೆಗೆ ಸ್ಪಷ್ಟವಾಗಿ ಸಹಾಯ ಮಾಡಿದೆ ಎಂದು ಹೇಳಬಹುದು. ಏಕೆಂದರೆ, ಕಂಪನಿಯು ಮತ್ತೊಮ್ಮೆ ಸುಜುಕಿಯನ್ನು ಹಿಂದಿಕ್ಕಿ ಭಾರತದಲ್ಲಿ 5ನೇ ಅತಿ ದೊಡ್ಡ ದ್ವಿಚಕ್ರ ವಾಹನ ಎನಿಸಿಕೊಂಡಿದೆ. ನವೆಂಬರ್ 2022ರಲ್ಲಿ, ರಾಯಲ್ ಎನ್‌ಫೀಲ್ಡ್ ತನ್ನ 65,760 ಯೂನಿಟ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ವರ್ಷದಿಂದ ವರ್ಷದ ಮಾರಾಟದ ಅಂಕಿಅಂಶಗಳಲ್ಲಿ ಸುಮಾರು 47 ಪ್ರತಿಶತ ಹೆಚ್ಚಳ ದಾಖಲಿಸಿದೆ. ಆದಾಗ್ಯೂ, ತಿಂಗಳ ಮಾರಾಟ ಅಂಕಿಅಂಶಗಳು ಶೇಕಡ 14 ರಷ್ಟು ಕಡಿಮೆಯಾಗಿದೆ.

ಸುಜುಕಿ (63,156 ಯುನಿಟ್‌ಗಳು):

ಸುಜುಕಿ ಮೋಟಾರ್‌ಸೈಕಲ್‌ಗಳ ಮಾರಾಟ ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿ, ದ್ವಿಚಕ್ರ ವಾಹನ ಮಾರಾಟದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ಈಗಲೂ ಕಡೆ ಸ್ಥಾನದಲ್ಲಿಯೇ ಮುಂದುವರಿದಿದೆ. ನವೆಂಬರ್ 2022ರಲ್ಲಿ, ಸುಜುಕಿ ಕೇವಲ 63,156 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಆದರೂ ಅದು ಶೇಕಡ 13.4 ಬೆಳವಣಿಗೆ ಸಾಧಿಸಿದೆ ಇದಲ್ಲದೆ, ಮಾಸಿಕ ಮಾರಾಟ ಅಂಕಿಅಂಶಗಳು ಶೇಕಡ 9.3ರಷ್ಟು ಕಡಿಮೆಯಾಗಿದೆ.

ನವೆಂಬರ್‌ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣದಲ್ಲಿ ವಾಹನ ತಯಾರಕರು ಕುಸಿತ ದಾಖಲಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯವಾಗಿ ದಸರಾ, ದೀಪಾವಳಿ ಹಬ್ಬಗಳು ಬರಲಿದ್ದು, ಆ ವೇಳೆ ಗ್ರಾಹಕರು ಹೆಚ್ಚಿನ ವಾಹನ ಖರೀದಿಸುವುದರಿಂದ ಕಂಪನಿಗಳು ಸಹ ಮಾರಾಟ ಪ್ರಮಾಣವನ್ನು ಅಧಿಕಗೊಳಿಸುತ್ತವೆ. ಆದಾಗ್ಯೂ, ಬಜಾಜ್‌ ಕಂಪನಿಯ ವಾರ್ಷಿಕ ಮತ್ತು ಮಾಸಿಕ ಮಾರಾಟದ ಅಂಕಿಅಂಶಗಳು ಕಡಿಮೆಯಾಗುತ್ತಿದ್ದು, ಕಂಪನಿಯು ಮಾರುಕಟ್ಟೆಯಲ್ಲಿ ಬಲವಾಗಲು ತನ್ನ ವ್ಯವಹಾರ ತಂತ್ರಗಾರಿಕೆಯನ್ನು ಮರುಪರಿಶೀಲಿಸಬೇಕಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Most Read Articles

Kannada
English summary
Sales of hero two wheelers have fallen sharply what is the story of honda tvs bajaj
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X