Just In
Don't Miss!
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- News
Breaking; ತುರ್ತಾಗಿ ಬನ್ನಿ, ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಕರೆ
- Sports
ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಶೀಘ್ರದಲ್ಲೇ ಕೈಗೆಟುಕುವ ಬೆಲೆಗೆ ಲಭ್ಯವಾಗಲಿದೆ ಸಿಂಪಲ್ ಎನರ್ಜಿಯ ಇವಿ ಸ್ಕೂಟರ್
ಕಳೆದ ವರ್ಷ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹತ್ತಿರವಾದ ಎಲೆಕ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಸಿಂಪಲ್ ಎನರ್ಜಿ, ಈ ವರ್ಷದ ಮಧ್ಯಾರ್ಧದಲ್ಲಿ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಇತ್ತೀಚೆಗೆ ಮಾದ್ಯಮವೊಂದರ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಸಿಂಪಲ್ ಎನರ್ಜಿಯ ಸಿಇಒ ಸುಹಾಸ್ ರಾಜ್‌ಕುಮಾರ್, ಕಂಪನಿಯ ಮುಂದಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಜೂನ್‌ನಲ್ಲಿ ಅನಾವರಣಗೊಳಿಸಲಾಗುವುದು ಎಂದು ಬಹಿರಂಗಪಡಿಸಿದರು. ಇದು ಕಂಪನಿಯ ಅಸ್ತಿತ್ವದಲ್ಲಿರುವ ಸಿಂಪಲ್ ಒನ್ ಇ-ಸ್ಕೂಟರ್‌ಗಿಂತ ಅಗ್ಗವಾಗಿರಲಿದೆ ಎಂದು ತಿಳಿಸಿದರು.

ಮುಂದಿನ ಸ್ಕೂಟರ್ ಸಂಪೂರ್ಣವಾಗಿ ಹೊಸ ಉತ್ಪನ್ನವಾಗಿದೆ. ಇದು ಸಿಂಪಲ್ ಒನ್‌ನ ಅಪ್‌ಗ್ರೇಡ್ ವರ್ಷನ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಕಂಪನಿಯು ಇದನ್ನು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸುತ್ತಿದ್ದು, ಸಿಂಪಲ್ ಒನ್‌ಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಇದರಲ್ಲಿ ಬಳಸಲಾಗಿದೆ ಎಂದರು.

ಇದು ಮಧ್ಯಮ ಹಾಗೂ ಬಡ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ತರಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ತೀರ್ವ ಪೈಪೋಟಿ ನೀಡಲಿದೆ ಎಂದು ವಿಶ್ವಾಸ ವಕ್ತಪಡಿಸಿದ ಅವರು, ಕೆಲವು ಕಾರಣಾಂತರಗಳಿಂದ ಸ್ಕೂಟರ್ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ.

ಹೆಚ್ಚಿನ ಗ್ರಾಹಕರು ಕಾರ್ಯಕ್ಷಮತೆ ಆಧಾರಿತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೊಳ್ಳಲು ಬಯಸುವುದಿಲ್ಲ. ಬದಲಿಗೆ ಮಾರುಕಟ್ಟೆಯಲ್ಲಿ ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನೇ ಕೊಳ್ಳಲು ಬಯಸುತ್ತಾರೆ. ಹಾಗಾಗಿ ಕಡಿಮೆ ಬಜೆಟ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.

ಆದ್ದರಿಂದ, ಕಡಿಮೆ ಬಜೆಟ್ ಗ್ರಾಹಕರಿಗೆ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತರಲು ಕಂಪನಿಯು ಗಮನಹರಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಸ್ಕೂಟರ್ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದಾಗಿ ತಿಳಿಸಿದರು.

ಸಿಂಪಲ್ ಎನರ್ಜಿ ಲಿಥಿಯಂ-ಐಯಾನ್ ಬ್ಯಾಟರಿ ತಯಾರಕ ಕಂಪನಿಯಾದ C4V ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಅದರ ಅಡಿಯಲ್ಲಿ ಎರಡೂ ಕಂಪನಿಗಳು ದೇಶದಲ್ಲಿ ಲಿಥಿಯಂ-ಐಯಾನ್ ಪರಿಸರ ವ್ಯವಸ್ಥೆಯನ್ನು ರಚಿಸಲು ಕೆಲಸ ಮಾಡುತ್ತವೆ.

ಸಿಂಪಲ್ ಎನರ್ಜಿ ತನ್ನ ಮೊದಲ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ಅನ್ನು ಭಾರತದಲ್ಲಿ ಆಗಸ್ಟ್ 15, 2021 ರಂದು ಬಿಡುಗಡೆ ಮಾಡಿತ್ತು. ಈ ಸ್ಕೂಟರ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವುದಲ್ಲದೇ, ಕೇವಲ ಮೂರು ದಿನಗಳಲ್ಲಿ 30,000 ಯುನಿಟ್‌ಗಳು ಬುಕ್ಕಿಂಗ್ ಪಡೆದುಕೊಂಡಿದ್ದವು.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟೈಲಿಶ್ ಲುಕ್‌ನೊಂದಿಗೆ ಇವಿ ವಿಭಾಗದಲ್ಲಿ ಹೆಚ್ಚು ಶ್ರೇಣಿ ಮತ್ತು ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 6 ಕೆ.ಜಿ ತೂಕದ 4.8 kWh ಪೋರ್ಟಬಲ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆದುಕೊಂಡಿದೆ.

ಈ ಬ್ಯಾಟರಿಯನ್ನು ಸ್ಕೂಟರ್‌ನಿಂದ ಬೇರ್ಪಡಿಸುವ ಮೂಲಕ ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಬಹುದು. ಸರಳವಾದ ಲೂಪ್ ಚಾರ್ಜರ್‌ನೊಂದಿಗೆ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳಲ್ಲಿ 2.5 ಕಿಲೋಮೀಟರ್ ಓಡಿಸಲು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಸಿಂಪಲ್ ಒನ್ ಇ-ಸ್ಕೂಟರ್ ಅನ್ನು ಇಕೋ ಮೋಡ್‌ನಲ್ಲಿ 203 ಕಿಮೀ ಮತ್ತು ಇಂಡಿಯನ್ ಡ್ರೈವ್ ಸೈಕಲ್ (ಐಡಿಸಿ) ಪರಿಸ್ಥಿತಿಗಳಲ್ಲಿ 236 ಕಿಮೀಗಳವರೆಗೆ ಒಂದೇ ಪೂರ್ಣ ಚಾರ್ಜ್‌ನಲ್ಲಿ ಓಡಿಸಬಹುದು. ಇದು 105 kmph ನ ಗರಿಷ್ಠ ವೇಗವನ್ನು ಹೊಂದಿದ್ದು, ಕೇವಲ 3.6 ಸೆಕೆಂಡುಗಳಲ್ಲಿ 50 kmph ವೇಗವನ್ನು ತಲುಪುತ್ತದೆ. ಈ ಸ್ಕೂಟರ್ 4.5 kW ಪವರ್ ಔಟ್‌ಪುಟ್ ಮತ್ತು 72 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಸಾಕಷ್ಟು ಆಧುನಿಕ ಮತ್ತು ಸುಧಾರಿತವಾಗಿದೆ. ಇದು 30-ಲೀಟರ್ ಬೂಟ್ ಸಾಮರ್ಥ್ಯ, 12-ಇಂಚಿನ ಮಿಶ್ರಲೋಹದ ಚಕ್ರಗಳು, 7-ಇಂಚಿನ ಕಸ್ಟಮೈಸ್ ಮಾಡಿದ ಡಿಜಿಟಲ್ ಡ್ಯಾಶ್‌ಬೋರ್ಡ್, ಆನ್-ಬೋರ್ಡ್ ನ್ಯಾವಿಗೇಷನ್, ಜಿಯೋ-ಫೆನ್ಸಿಂಗ್, SOS ಸಂದೇಶಗಳು, ಡಾಕ್ಯುಮೆಂಟ್ ಸಂಗ್ರಹಣೆ, ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿದೆ.

ಸಿಂಪಲ್ ಒನ್ ಇ-ಸ್ಕೂಟರ್ ಕೆಂಪು, ಬಿಳಿ, ಕಪ್ಪು ಮತ್ತು ನೀಲಿ ಸೇರಿ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಸಿಂಪಲ್ ಒನ್ ಇ-ಸ್ಕೂಟರ್ ಬೆಲೆಯನ್ನು 1.10 ಲಕ್ಷ ರೂ.ಗೆ (ಎಕ್ಸ್ ಶೋ ರೂಂ) ನಿಗದಿಪಡಿಸಿದೆ. ಇ-ಸ್ಕೂಟರ್‌ನ ಬೆಲೆ FAME-2 ಸಬ್ಸಿಡಿ ನಂತರ ಸ್ಕೂಟರ್‌ನ ನೈಜ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಬಹುದು.

ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಿಡಿ ನೀಡಲಾಗುತ್ತಿರುವ ರಾಜ್ಯಗಳಲ್ಲಿ ಈ ಸ್ಕೂಟರ್ 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ದೊರೆಯಲಿದೆ. ಕಂಪನಿಯು ಈಗಾಗಲೇ ಸ್ಕೂಟರ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಜೂನ್ 2022ರ ವೇಳೆಗೆ ವಿತರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ.