ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅವೆನಿಸ್ 125 ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ಮಾದರಿಯಲ್ಲಿ ಇದೀಗ ಮತ್ತೊಂದು ಎಂಟ್ರಿ ಲೆವಲ್ ಆವೃತ್ತಿಯನ್ನು ಸೇರ್ಪಡೆಗೊಳಿಸಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಅವೆನಿಸ್ 125 ಮಾದರಿಯಲ್ಲಿ ಈ ಹಿಂದೆ ಕಂಪನಿಯು ರೈಡ್ ಕನೆಕ್ಟ್ ಎಡಿಷನ್ ಮತ್ತು ರೇಸ್ ಎಡಿಷನ್ ರೂಪಾಂತರಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದೀಗ ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕನೆಕ್ಟೆಡ್ ಸೌಲಭ್ಯ ರಹಿತ ಸ್ಟ್ಯಾಂಡರ್ಡ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ರೂಪಾಂತರವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 86,500 ಬೆಲೆ ಹೊಂದಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸ್ಟ್ಯಾಂಡರ್ಡ್ ಮಾದರಿಯಲ್ಲಿ ಬೆಲೆ ಇಳಿಕೆಗಾಗಿ ಕೆಲವು ಕನೆಕ್ಟೆಡ್ ಫೀಚರ್ಸ್‌ಗಳನ್ನು ತೆಗೆದುಹಾಕಿರುವ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಪ್ರಮುಖ 125 ಸ್ಕೂಟರ್ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಕನೆಕ್ಟೆಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಹೊಸ ರೂಪಾಂತರವು ರೈಡ್ ಕನೆಕ್ಟ್ ಎಡಿಷನ್‌ನಲ್ಲಿರುವ ಇನ್ನುಳಿದ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಸ್ಕೂಟರ್ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸ್ಟ್ಯಾಂಡರ್ಡ್ ಮಾದರಿಯನ್ನು ಹೊರತುಪಡಿಸಿ ರೈಡ್ ಕನೆಕ್ಟ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ರೂ. 86,700 ಮತ್ತು ರೇಸ್ ಎಡಿಷನ್ ಮಾದರಿಯು 88,300 ಬೆಲೆ ಹೊಂದಿದ್ದು, ಸುಜುಕಿ ಕಂಪನಿಯು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ರೇಸ್ ಎಡಿಷನ್ ಬಿಡುಗಡೆ ಮಾಡಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಹೊಸ ಸ್ಕೂಟರ್ ಮಾದರಿಯಲ್ಲಿ ಕಂಪನಿಯು ಆಕ್ಸೆಸ್ 125 ಮಾದರಿಯಲ್ಲಿರುವಂತೆ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಜೋಡಣೆ ಮಾಡಿದ್ದು, ಇದು 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸ್ಪೋರ್ಟಿ ಡಿಸೈನ್‌ನೊಂದಿಗೆ ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಸ್ಕೂಟರ್ ಲೊ ಮೌಂಟೆಡ್ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿಯಾಗಿರುವ ಫ್ರಂಟ್ ಆಪ್ರಾನ್, ಶಾರ್ಪ್ ಲೈನ್ ಹೊಂದಿರುವ ಟರ್ನ್ ಇಂಡಿಕೇಟರ್ ಸೇರಿದಂತೆ ಸ್ಪೋರ್ಟಿ ಲುಕ್ ಹೊಂದಿರುವ ಫ್ಲೈ ಸ್ಕೀನ್ ಪಡೆದುಕೊಂಡಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಹೊಸ ಸ್ಕೂಟರಿನ ವಿನ್ಯಾಸಕ್ಕೆ ಮತ್ತುಷ್ಟು ಸ್ಪೋರ್ಟಿ ಲುಕ್ ನೀಡಲು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಫ್ಲಶ್ ಫಿಟ್ ಫುಟ್‌ರೆಸ್ಟ್, ಹೊಸ ಮಾದರಿಯ ಸ್ಪೋರ್ಟಿ ಎಕ್ಸಾಸ್ಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಬೈಕ್‌ಗಳ ಮಾದರಿಯಲ್ಲಿರುವ ಟರ್ನ್ ಇಂಡಿಕೇಟರ್ ಮತ್ತು ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್ ಆಯ್ಕೆ ಉತ್ತಮವಾಗಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಇನ್ನು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರಿನಲ್ಲಿರುವ ಫುಲ್ ಡಿಜಿಟಲ್ ಡಿಸ್‌ಪ್ಲೇ ಗ್ರಾಹಕರನ್ನು ಆಕರ್ಷಿಸಲಿದೆ. ಸುಜುಕಿ ಕನೆಕ್ಟ್ ಆ್ಯಪ್ ಮೂಲಕ ಡಿಜಿಟಲ್ ಡಿಸ್‌ಪ್ಲೇ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಟ್ಸ್‌ಅಪ್ ಮೆಸೇಜ್ ಅಲರ್ಟ್, ಎಸ್ಎಂಎಸ್ ಮತ್ತು ಕಾಲರ್ ಐಡಿ ಸೇವೆಗಳನ್ನು ಬಳಕೆ ಮಾಡಬಹುದಾಗಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಆದರೆ ಸುಜುಕಿ ಕನೆಕ್ಟ್ ಸೌಲಭ್ಯವು ರೈಡ್ ಕನೆಕ್ಟ್ ಎಡಿಷನ್‌ ಮತ್ತು ರೇಸ್ ಎಡಿಷನ್ ಮಾದರಿಗಳಲ್ಲಿ ಮಾತ್ರ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿ ಈ ಸೌಲಭ್ಯಗಳಿಲ್ಲ. ಬೆಲೆ ಇಳಿಕೆಗಾಗಿ ಈ ಬದಲಾವಣೆ ಮಾಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ರೂಪಾಂತರಗಳನ್ನು ಆಯ್ಕೆ ಮಾಡಬಹುದಾಗಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಹಾಗೆಯೇ ಹೊಸ ಸ್ಕೂಟರಿನಲ್ಲಿ ಹೆಚ್ಚಿನ ಗಾತ್ರದ ಸ್ಟೋರೇಜ್ ಸೌಲಭ್ಯದೊಂದಿಗೆ ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಒಂದು ಫುಲ್ ಸೈಜ್ ಗಾತ್ರದ ಅಂಡರ್ ಸೀಟರ್ ಸ್ಟೋರೇಜ್, ಎಂಜಿನ್ ಕಿಲ್ ಸ್ವಿಚ್ ಮತ್ತು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ನೀಡಲಾಗಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸೈಡ್ ಸ್ಟ್ಯಾಂಡ್ ತೆಗೆಯುವುದನ್ನು ಮರೆತು ದ್ವಿಚಕ್ರ ವಾಹನ ಓಡಿಸುವಾಗ ಹಂಪ್‌ಗಳಲ್ಲಿ ಸ್ಟ್ಯಾಂಡ್ ತಾಗುವುದರಿಂದ ಹಲವಾರು ಅನಾಹುತಗಳಿಗೆ ಕಾರಣವಾಗುತ್ತಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಪ್ರತಿ ದ್ವಿಚಕ್ರ ಮಾದರಿಯಲ್ಲೂ ಈ ಫೀಚರ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಇದೀಗ ಅವೆನಿಸ್ ಮಾದರಿಯಲ್ಲೂ ಹಲವಾರು ಹೊಸ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳನ್ನು ನೀಡಲಾಗಿದ್ದು, ಹೊಸ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಬ್ಲ್ಯೂ, ಗ್ರಿನ್, ಆರೇಂಜ್, ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ಸ್ಕೂಟರ್ ಖರೀದಿಗೆ ಲಭ್ಯವಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ 125 ಸಿಸಿ ವಿಭಾಗದಲ್ಲಿ ಬರ್ಗಮನ್ ಸ್ಟ್ರೀಟ್ ಮತ್ತು ಆಕ್ಸೆಸ್ 125 ಸ್ಕೂಟರ್ ಮಾರಾಟ ಹೊಂದಿದ್ದರೂ ಇದೀಗ ಹೊಸದಾಗಿ ಅವೆನಿಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ಲುಕ್‌ನೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಅವೆನಿಸ್ 125 ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಸುಜುಕಿ ಮೋಟಾರ್‌ಸೈಕಲ್

ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ಜೆಡ್ಆರ್ ಮಾದರಿಗಳಿಗೆ ನೇರ ಪೈಪೋಟಿ ನೀಡಲಿರುವ ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಂತೆ ಸ್ಪೋರ್ಟಿ ಪ್ರೊಫೈಲ್, ಶಾರ್ಪ್ ಡಿಸೈನ್, ಸ್ಟೈಲಿಶ್ ಬಿಟ್‌ಗಳು ಮತ್ತು ಸ್ಕೈಲಿಶ್ ಬಾಡಿ ಪ್ಯಾನಲ್‌ಗಳನ್ನು ಹೊಂದಿದೆ.

Most Read Articles

Kannada
English summary
Suzuki avenis 125 standard edition launched at rs rs 86 500 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X