Just In
- 9 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 12 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 13 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- Movies
ಅಮ್ಮನಿಂದಲೇ ಮಗಳಿಗೆ ಮಹಾ ಮೋಸ!
- News
ಮಹಾ ಬಂಡಾಯ: ಸುಪ್ರೀಂಕೋರ್ಟ್ ಅಂಗಳಕ್ಕೆ 16 ಶಾಸಕರ ಅನರ್ಹತೆ ಚೆಂಡು!
- Sports
ಭಾರತ ತಂಡದ ಭವಿಷ್ಯದ ನಾಯಕ ನಿಶ್ಚಿತವಾಗಿಯೂ ಈತನೇ ಎಂದ ದಿಲೀಪ್ ವೆಂಗ್ಸರ್ಕಾರ್
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಹೊಸ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಮುಂಬರುವ ಹೊಸ ಬೈಕ್ ಗಾಗಿ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಟೀಸರ್ ಚಿತ್ರವನ್ನು ನೋಡಿದರೆ ಸುಜುಕಿಯ ಈ ಹೊಸ ಬೈಕ್ ಅಡ್ವೆಂಚರ್ ಮಾದರಿಯಾಗಿರಬಹುದು.

ಬಹುಶಃ ಇದು ವಿ-ಸ್ಟ್ರೋಮ್ ಅಥವಾ ವಿ-ಸ್ಟ್ರೋಮ್ 1050 ಆಗಿರಬಹುದು. ಸುಜುಕಿ ಬೈಕ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲ್ಲಿ ಜಿಕ್ಸರ್ ಮತ್ತು truder ಕ್ರೂಸರ್‌ನ ಸಂಪೂರ್ಣ-ಫೇರ್ಡ್ ಮತ್ತು ಸ್ಟ್ರೀಟ್‌ಫೈಟರ್ ಆವೃತ್ತಿಗಳನ್ನು ನೀಡುತ್ತದೆ. ಸುಜುಕಿ ಕಂಪನಿಯು ವಿ-ಸ್ಟ್ರೋಮ್ 650 ಎಕ್ಸ್‌ಟಿ ಅನ್ನು ಮಾರಾಟ ಮಾಡುತ್ತಿರುವಾಗ, ಅದರ ಮಾದರಿ ಸರಣಿಯಲ್ಲಿ ಎಂಟ್ರಿ ಲೆವೆಲ್ ಅಡ್ವೆಂಚರ್ ಅನ್ನು ಹೊಂದಿಲ್ಲ. ಹೊಸ ವಿ-ಸ್ಟ್ರೋಮ್ 250 ಈ ಅಂತರವನ್ನು ತುಂಬಬಹುದು.

ಎಂಟ್ರಿ ಲೆವೆಲ್ ವಿ-ಸ್ಟ್ರೋಮ್ 250 ಬೈಕಿನಲ್ಲಿ 249 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26 ಬಿಹೆಚ್‍ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, 250cc ಆವೃತ್ತಿಯು 650XT ಯಿಂದ ವಿನ್ಯಾಸದ ಸೂಚನೆಗಳನ್ನು ಎರವಲು ಪಡೆಯುತ್ತದೆ. ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, 250ಸಿಸಿ ಆವೃತ್ತಿಯು 650 ಎಕ್ಸ್‌ಟಿ ಯಿಂದ ವಿನ್ಯಾಸದ ಅಂಶಗಳನ್ನು ಎರವಲು ಪಡೆಯುತ್ತದೆ. ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕಿನ ಫ್ಯೂಯಲ್ ಟ್ಯಾಂಕ್‌ನಲ್ಲಿ ಬ್ಲೂ ಅಸ್ಸೆಂಟ್ ಗಳೊಂದಿಗೆ ಯೆಲ್ಲೋ ಬಣ್ಣವನ್ನು ಒಳಗೊಂಡಿದೆ.

ವಿ-ಸ್ಟ್ರೋಮ್ 250 ಬೈಕ್ ಕೂಡ ಇದೇ ಮಾದರಿಯಲ್ಲಿ ಇರಬಹುದು. ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕ್ ತನ್ನ ಸರಣಿಯ ಐಕಾನಿಕ್ ಡಿಆರ್-ಬಿಗ್ ರ್ಯಾಲಿ ಬೈಕಿನಿಂದ ಸ್ಫೂರ್ತಿ ಪಡೆದಿದೆ. ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್ ಭಾರತದಲ್ಲಿ ಮಾರಾಟವಾಗುವ ವಿ-ಸ್ಟ್ರೋಮ್ 650 ಎಕ್ಸ್‌ಟಿ ಆಧಾರಿತ ಟಾಪ್-ಆಫ್-ಲೈನ್ ರೂಪಾಂತರವಾಗಿದೆ.

ದೊಡ್ಡ ಕ್ರ್ಯಾಶ್ ಗಾರ್ಡ್, ಒಂದು ಜೋಡಿ ಅಲ್ಯೂಮಿನಿಯಂ ಪ್ಯಾನಿಯರ್‌ಗಳು, ಹ್ಯಾಂಡಲ್‌ಬಾರ್ ಬ್ರೇಸ್, ಮಿರರ್ ವಿಸ್ತರಣೆಗಳು ಮತ್ತು ಸೆಂಟರ್ ಸ್ಟ್ಯಾಂಡ್ ನಡುವೆ ಕೆಲವು ವ್ಯತ್ಯಾಸಗಳು ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಈ ಕೆಲವು ಅಂಶಗಳನ್ನು ವಿ-ಸ್ಟ್ರೋಮ್ 250 ಎರವಲು ಪಡೆಯಬಹುದು.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಚಾಂಪಿಯನ್ ಯೆಲ್ಲೋ ಮತ್ತು ಪರ್ಲ್ ಗ್ಲೇಸಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇನ್ನು ಈ ಅಡ್ವೆಂಚರ್-ಟೂರಿಂಗ್ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದರಲ್ಲಿ ಗೇರ್ ಪೋಷಿಸನ್,ಟ್ಯಾಕೋಮೀಟರ್ ಮತ್ತು ಡಿಜಿಟಲ್ ರೀಡ್ ಔಟ್ ಗಳನ್ನು ಒಳಗೊಂಡಿದೆ. ಇದನ್ನು ವಿ-ಸ್ಟ್ರೋಮ್ 250 ಬೈಕಿನಲ್ಲಿಯು ಕೂಡ ನೀಡಬಹುದು.

ಕೆಳಗಿನ ಡಿಜಿಟಲ್ ವಿಭಾಗವು ಓಡೋಮೀಟರ್, ಟ್ವಿನ್-ಟ್ರಿಪ್ ಮೀಟರ್, ಕಾಲ್, ಫ್ಯೂಯಲ್ ಲೆವೆಲ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಮೋಡ್ ಗಳನ್ನು ಪ್ರದರ್ಶಿಸುತ್ತದೆ. ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾದರಿಯು ಸುಜುಕಿ ಮೋಟಾರ್‌ಸೈಕಲ್ ಸರಣಿಯಲ್ಲಿ ಅತ್ಯುತ್ತಮ ಅಡ್ವೆಂಚರ್ ಬೈಕುಗಳಲ್ಲಿ ಒಂದಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಈ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್‌ಗಳು, ಎಂಜಿನ್ ಪ್ರೊಟೆಕ್ಟರ್ ಸ್ಪೋಕ್ ವ್ಹೀಲ್ಸ್ ಮತ್ತು ಮೆತ್ತನೆಯ ಸಿಂಗಲ್-ಪೀಸ್ ಸೀಟ್ ಅನ್ನು ಕೂಡ ಹೊಂದಿದೆ.

ಇನ್ನು ಮ್ಯಾಕನಿಕಲ್ ಅಂಶಗಳಲ್ಲಿ ಬದಲಾವಣೆಗಳನ್ನು ಹೊಂದಿರುತ್ತದೆ. ಈ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಈ ಅಡ್ವೆಂಚರ್-ಟೂರಿಂಗ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 310 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಅಗಿ ಜೋಡಿಸಲಾಗಿದೆ.

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅವೆನಿಸ್ 125 ಮಾದರಿಯನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಹೊಸ ಸ್ಕೂಟರ್ ಮಾದರಿಯಲ್ಲಿ ಇತ್ತೀಚೆಗೆ ಮತ್ತೊಂದು ಎಂಟ್ರಿ ಲೆವಲ್ ಆವೃತ್ತಿಯನ್ನು ಸೇರ್ಪಡೆಗೊಳಿಸಿದೆ. ಅವೆನಿಸ್ 125 ಮಾದರಿಯಲ್ಲಿ ಈ ಹಿಂದೆ ಕಂಪನಿಯು ರೈಡ್ ಕನೆಕ್ಟ್ ಎಡಿಷನ್ ಮತ್ತು ರೇಸ್ ಎಡಿಷನ್ ರೂಪಾಂತರಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದೀಗ ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕನೆಕ್ಟೆಡ್ ಸೌಲಭ್ಯ ರಹಿತ ಸ್ಟ್ಯಾಂಡರ್ಡ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ರೂಪಾಂತರದ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.86,500 ವಾಗಿದೆ.

ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಮಾದರಿಗಳಲ್ಲಿ ಸುಜುಕಿ ವಿ-ಸ್ಟ್ರೋಮ್ 250 ಕೂಡ ಒಳಗೊಂಡಿದೆ. ಇದರಿಂದ ಸುಜುಕಿ ಕಂಪನಿಯು ಸುಜುಕಿ ವಿ-ಸ್ಟ್ರೋಮ್ 250 ಬೈಕ್ ಗಾಗಿ ಟೀಸರ್ ಅನ್ನು ಬಿಡುಗಡೆಗೊಳಿಸಬಹುದು. ಹೊಸ ಸುಜುಕಿ ವಿ-ಸ್ಟ್ರೋಮ್ 250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 250 ಅಡ್ವೆಂಚರ್ ಮತ್ತು ಬೆನೆಲ್ಲಿ TRK 251 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.