Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 7 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಜುಕಿ V-Strom 250 ಹಾಗೂ KTM 250 ಅಡ್ವೆಂಚರ್‌ನ ವಿನ್ಯಾಸ, ವೈಶಿಷ್ಟ್ಯಗಳ ನಡುವಿನ ವ್ಯತ್ಯಾಸ!
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸುಜುಕಿ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಹೊಸ ವಿ-ಸ್ಟ್ರೋಮ್ ಎಸ್ಎಕ್ಸ್ 250ಸಿಸಿ ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ವಿ-ಸ್ಟ್ರೋಮ್ ಎಸ್ಎಕ್ಸ್ 250 ಅನ್ನು KTM 250 ಅಡ್ವೆಂಚರ್‌ಗೆ ಹೋಲಿಸಿದರೆ ವಿ-ಸ್ಟ್ರೋಮ್ ಗಮನಾರ್ಹ ಬೆಲೆಯನ್ನು ಪಡೆದುಕೊಂಡಿದೆ.

ಈ ಎರಡೂ ಮೋಟಾರ್‌ಸೈಕಲ್‌ಗಳ ವಿನ್ಯಾಸ, ಪವರ್‌ಟ್ರೇನ್, ವೈಶಿಷ್ಟ್ಯಗಳು, ಹಾರ್ಡ್‌ವೇರ್ ಮತ್ತು ಬೆಲೆಯನ್ನು ಹೋಲಿಸಿದರೆ, ಯಾವ ಮಾದರಿ ಒಂದಕ್ಕಿಂತ ಮತ್ತೊಂದು ಯಾವೆಲ್ಲಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂಬುದನ್ನು ಇಲ್ಲಿ ನೋಡಬಹುದು.

ವಿನ್ಯಾಸ
ಸುಜುಕಿ ಮೋಟಾರ್‌ಸೈಕಲ್‌ನ ವಿ-ಸ್ಟ್ರೋಮ್ ಎಸ್ಎಕ್ಸ್ 250ಸಿಸಿ ಅಡ್ವೆಂಚರ್ ಹಾಗೂ KTM 250 ಬೈಕ್ ಮಾದರಿಗಳೆರಡೂ ಇತರ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ತಮ್ಮದೇ ಆದ ವಿಶಿಷ್ಟ ಮತ್ತು ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಬರುತ್ತವೆ.

ಹೊಸದಾಗಿ ಬಿಡುಗಡೆಯಾದ ಸುಜುಕಿ ವಿ-ಸ್ಟ್ರೋಮ್ SX 250 ಸಾಕಷ್ಟು ರಸ್ತೆ ಉಪಸ್ಥಿತಿಯೊಂದಿಗೆ ಬರುತ್ತದೆ. ಅಲ್ಲದೆ, ಬೀಕ್ಡ್ ನೋಸ್ ಮತ್ತು ಆಕ್ಟಾಂಗಲ್ LED ಹೆಡ್‌ಲ್ಯಾಂಪ್‌ಗಳು ಮೋಟಾರ್‌ಸೈಕಲ್‌ಗೆ ಆಕರ್ಷಣೀಯ ನೋಟವನ್ನು ನೀಡುತ್ತವೆ. ಮತ್ತೊಂದೆಡೆ, KTM 250 ಅಡ್ವೆಂಚರ್ ಅತ್ಯಂತ ತೀಕ್ಷ್ಣವಾದ ವಿನ್ಯಾಸದೊಂದಿಗೆ ಬರುತ್ತದೆ, ಇದು ಭಾಗಶಃ ಒಪನ್ಡ್ ಟ್ರೆಲ್ಲಿಸ್ ಫ್ರೇಮ್ ಮೋಟಾರ್ಸೈಕಲ್‌ಗೆ ಹೆಚ್ಚು ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ.

ವೈಶಿಷ್ಟ್ಯಗಳು
ವೈಶಿಷ್ಟ್ಯಗಳ ವಿಷಯದಲ್ಲಿ ಸುಜುಕಿ ವಿ-ಸ್ಟ್ರೋಮ್ SX 250 ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಅಲಾಯ್ ವೀಲ್‌ಗಳು, ಸುಜುಕಿ ರೈಡ್‌ನೊಂದಿಗೆ ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಜೊತಗೆ ಕನೆಕ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇನ್‌ಕಮಿಂಗ್ ಚಾಲ ಅಲರ್ಟ್, SMS ಅಲರ್ಟ್, WhatsApp ಅಲರ್ಟ್, ಮಿಸ್ಡ್ ಕಾಲ್ ಅಲರ್ಟ್, ವೇಗವನ್ನು ಮೀರಿದ ಎಚ್ಚರಿಕೆ, ಫೋನ್ ಬ್ಯಾಟರಿ ಮಟ್ಟದ ಸೂಚಕ, ಆಗಮನದ ಅಂದಾಜು ಸಮಯ ಸೇರಿದಂತೆ ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.

KTM 250 ಅಡ್ವೆಂಚರ್ ವಿಷಯಕ್ಕೆ ಬಂದರೆ ಇದು ಹಳೆಯ ಮೋಟಾರ್‌ಸೈಕಲ್ ಆಗಿರುವುದರಿಂದ ಸುಜುಕಿ ವಿ-ಸ್ಟ್ರೋಮ್ SX 250 ನೀಡುವ ಬ್ಲೂಟೂತ್ ಕನೆಕ್ಟಿವಿಟಿ ವೈಶಿಷ್ಟ್ಯವನ್ನು ಹೊಂದಿಲ್ಲ. ಇದರ ಹೊರತಾಗಿ, KTM 250 ಅಡ್ವೆಂಚರ್ ಪೂರ್ಣ-ಬಣ್ಣದ LCD ಡಿಸ್ಪ್ಲೇಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. LED ಟೈಲ್‌ಲ್ಯಾಂಪ್‌ಗಳು, ಡ್ಯುಯಲ್-ಚಾನೆಲ್ ABS, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಅಲಾಯ್ ವ್ಹೀಲ್ ಸೇರಿದಂತೆ ಇನ್ನೂ ಕೆಲವು ವೈಶಿಷ್ಟಗಳನ್ನು ಪಡೆದುಕೊಂಡಿದೆ.

ಹಾರ್ಡ್‌ವೇರ್
ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಸುಜುಕಿ ಮೋಟಾರ್‌ಸೈಕಲ್ ಮುಂಭಾಗದಲ್ಲಿ ಹೆಚ್ಚು ಆಫ್-ರೋಡ್ ಸ್ನೇಹಿಯಾದ 19-ಇಂಚಿನ ಚಕ್ರಗಳು ಮತ್ತು ಹಿಂಭಾಗದಲ್ಲಿ 17-ಇಂಚಿನ ಚಕ್ರಗಳನ್ನೊಳಗೊಂಡ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹಾಗೂ 7-ಹಂತದ ಪೂರ್ವ-ಲೋಡ್ ಹೊಂದಾಣಿಕೆಯ ಹಿಂದಿನ ಮೊನೊಶಾಕ್, 12-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಇನ್ನು KTM ಹೆಚ್ಚು ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಉತ್ತಮ ಹಾರ್ಡ್‌ವೇರ್‌ನೊಂದಿಗೆ 43mm WP ಅಪೆಕ್ಸ್ USD ಒಳಗೊಂಡ ಮುಂಭಾಗದ ಫೋರ್ಕ್‌ಗಳು, ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ WP ಅಪೆಕ್ಸ್ ಮೊನೊಶಾಕ್, ಗಟ್ಟಿಯಾದ ಟ್ರೆಲ್ಲಿಸ್ ಫ್ರೇಮ್ ಜೊತೆಗೆ ದೊಡ್ಡದಾದ 14-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಪವರ್‌ಟ್ರೇನ್
ಸುಜುಕಿ ವಿ-ಸ್ಟ್ರೋಮ್ 250 (ಸುಜುಕಿ DL250 AL ಮತ್ತು ಸುಜುಕಿ DL250 AM) ಮಾದರಿಯು Suzuki Inazuma 250 ನಿಂದ ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, 24bhp ಶಕ್ತಿ ಮತ್ತು 22Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸದಾಗಿ ಬಿಡುಗಡೆಯಾದ ಸುಜುಕಿ ವಿ-ಸ್ಟ್ರೋಮ್ 250, ಸುಜುಕಿ Gixxer 250 ನಿಂದ ಅದೇ 249cc ಸಿಂಗಲ್-ಸಿಲಿಂಡರ್, SOHC ಎಂಜಿನ್ ಅನ್ನು ಬಳಸಿಕೊಂಡಿದೆ. ಈ ಎಂಜಿನ್ ಆರೋಗ್ಯಕರ 26.5bhp ಪವರ್ ಮತ್ತು 22.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ, ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್ಮಿಷನ್‌ಗೆ ಜೋಡಿಸಲಾಗಿದೆ.

ಇನ್ನು KTM 250 ಅಡ್ವೆಂಚರ್ ವಿಷಯಕ್ಕೆ ಬಂದರೆ ಹೆಚ್ಚು ಶಕ್ತಿಯುತ ಮತ್ತು ಹೆಚ್ಚು ಸುಧಾರಿತ 249cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC ಎಂಜಿನ್ ಜೊತೆಗೆ 29.63 bhp ಶಕ್ತಿ ಮತ್ತು 24Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ KTM 250 ಅಡ್ವೆಂಚರ್ ಸುಗಮವಾದ ಡೌನ್‌ಶಿಫ್ಟ್‌ಗಳಿಗಾಗಿ 6-ಸ್ಪೀಡ್ ಟ್ರಾನ್ಸ್‌ಮಿಷನ್ ಸ್ಲಿಪ್ಪರ್ ಕ್ಲಚ್ ಅನ್ನು ಸಹ ಒಳಗೊಂಡಿದೆ.

ಬೆಲೆ
ಸುಜುಕಿ ವಿ-ಸ್ಟ್ರೋಮ್ 250 ಬೆಲೆ ರೂ. 2.11 ಲಕ್ಷ (ಎಕ್ಸ್ ಶೋ ರೂಂ, ಭಾರತ) ಇದ್ದರೆ, KTM 250 ಅಡ್ವೆಂಚರ್ ಬೆಲೆ ರೂ. 2.35 ಲಕ್ಷ (ಎಕ್ಸ್ ಶೋ ರೂಂ, ಭಾರತ)ಇದೆ. ಈ ಎರಡರಲ್ಲಿ KTM 25,000 ಹೆಚ್ಚಿನ ಬೆಲೆ ಪಡೆದುಕೊಂಡಿದ್ದರೂ ಉತ್ತಮವಾದ ಹಾರ್ಡ್‌ವೇರ್ ಅನ್ನು ನೀಡುವುದರ ಜೊತೆಗೆ ಹೆಚ್ಚಿನ ಪಂಚ್‌ನಲ್ಲಿ ಪ್ಯಾಕ್ ಮಾಡಲಾಗಿದೆ. ಸುಜುಕಿ ಮೋಟಾರ್‌ಸೈಕಲ್‌ಗೆ ಸ್ವಲ್ಪ ಹೆಚ್ಚು ಬೆಲೆ ನೀಡಿ, ಆಕ್ರಮಣಕಾರಿ ದಕ್ಷತೆ ಹಾಗೂ ಪವರ್ ನೀಡಿದ್ದರೆ ಸುಜುಕಿ ವಿ-ಸ್ಟ್ರೋಮ್ ಕೂಡ ಉತ್ತಮ ಅಡ್ವೆಂಚರ್ ಮೋಟಾರ್‌ಸೈಕಲ್ ಆಗಿರಬಹುದಿತ್ತು