ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಬಹುನಿರೀಕ್ಷಿತ ಡಬ್ಲ್ಯು175 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ನಡೆಸಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ. ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು ತನ್ನ ಡಬ್ಲ್ಯು175 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈ ಕವಾಸಕಿ ಡಬ್ಲ್ಯು175 ರೆಟ್ರೊ ಕ್ರೂಸರ್‌ಗಳನ್ನು ಒಳಗೊಂಡಿರುವ ಕವಾಸಕಿ 'W' ಕುಟುಂಬದ ಚಿಕ್ಕ ಸದಸ್ಯ. ವಾಸ್ತವವಾಗಿ, ಬಿಡುಗಡೆಯಾದ ನಂತರ, ಡಬ್ಲ್ಯು175 ದೇಶದಲ್ಲಿ ಕವಾಸಕಿಯ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿರುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು 1.5 ಲಕ್ಷ ಆಗಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಜಪಾನಿನ ತಯಾರಕರು ಈ ವರ್ಷ ಭಾರತದಲ್ಲಿ ಈ ಸರಣಿಯ ಡಬ್ಲ್ಯು175 ಎಂಬ ಅತ್ಯಂತ ಚಿಕ್ಕ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಇತ್ತೀಚೆಗೆ ಭಾರತದಲ್ಲಿ ಕವಾಸಕಿ ಡಬ್ಲ್ಯು 175 ಬೈಕ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿತು. ಈ ಕವಾಸಕಿ ಡಬ್ಲ್ಯು 175 ಬೈಕ್ ಈಗಾಗಲೇ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮಾರಾಟ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಬೈಕನ್ನು ಭಾರತಕ್ಕೆ ಸಿಕೆಡಿ ಮಾರ್ಗಗಳ ಮೂಲಕ ತರಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಭಾರತದಲ್ಲಿ ಬೈಕು ಜೋಡಿಸುವುದು ಕವಾಸಕಿ ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಲಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಕವಾಸಕಿ ಡಬ್ಲ್ಯು 175 ಬೈಕನ್ನು ಸ್ಪರ್ಧಾತ್ಮಕವಾಗಿ ಬೆಲೆಯಲ್ಲಿ ಬಿಡುಗಡೆಗೊಳಿಸಿದರೆ ಹೆಚ್ಚಿನ ರೆಟ್ರೋ ಶೈಲಿ ಬೈಕು ಪ್ರಿಯರನ್ನು ಸೆಳಯಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿನಲ್ಲಿ 177ಸಿಸಿ, ಏರ್-ಕೂಲ್ಡ್, ಎಸ್‌ಒಹೆಚ್‌ಸಿ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 12.9 ಬಿಹೆಚ್‍ಪಿ ಪವರ್ ಮತ್ತು 13.2 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪವರ್ ಅಂಕಿಅಂಶಗಳು ಹೆಚ್ಚು ಪ್ರಭಾವಶಾಲಿಯಾಗಿಲ್ಲ, ಆದರೆ ಈ ಬೈಕ್ ಸಾಕಷ್ಟು ಹಗುರವಾಗಿರುತ್ತದೆ ಮತ್ತು ಆಕರ್ಷಕವಾಗಿದೆ. ಈ ಡಬ್ಲ್ಯು175 ಬೈಕ್ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರಿಸಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಕವಾಸಕಿ ಡಬ್ಲ್ಯು 175 ಬೈಕ್ ಅತ್ಯಂತ ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ವೈರ್-ಸ್ಪೋಕ್ ವ್ಹೀಲ್ಸ್ ಮತ್ತು ಪಿ-ಶೂಟರ್ ಎಕ್ಸಾಸ್ಟ್ ಹೊಂದಿದೆ. ಹೊಸ ಕವಾಸಕಿ ಡಬ್ಲ್ಯು175 ಬೈಕ್ ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪೀಡೋ, ಓಡೋಮೀಟರ್ ಮತ್ತು ಟ್ರಿಪ್‌ಮೀಟರ್ ಜೊತೆಗೆ ಟೆಲ್-ಟೇಲ್ ಲ್ಯಾಂಪ್ ಅನ್ನು ಒಳಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿರುತ್ತದೆ, ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ. ಏಕೆಂದರೆ ಭಾರತದಲ್ಲಿ ಮಾರಾಟವಾಗುವ ರೆಟ್ರೊ-ಶೈಲಿಯ ಬೈಕ್‌ಗಳು 250 ಸಿಸಿಗಿಂತ ಹೆಚ್ಚಾಗಿರುತ್ತದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಈ ಕವಾಸಕಿ ಡಬ್ಲ್ಯು 175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಎಫ್‌ಜೆಡ್-ಎಕ್ಸ್ ಮತ್ತು ಟಿವಿಎಸ್ ರೋನಿನ್ 225 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಕವಾಸಕಿ ಕಂಪನಿಯು 'ಡಬ್ಲ್ಯು' ಸರಣಿಯ ಸುಂದರವಾದ ರೆಟ್ರೊ-ಶೈಲಿಯ ಬೈಕ್ ಗಳನ್ನು ಒಳಗೊಂಡಿವೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಇದನ್ನು 2020 ರಲ್ಲಿ ಭಾರತದಲ್ಲಿ ಹಲವಾರು ಬಾರಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಯೋಜನೆಗಳು ವಿಳಂಬವಾಗಿದ್ದವು. ಕವಾಸಕಿ ಪ್ರಸ್ತುತ ಭಾರತದಲ್ಲಿ ಡ್ಯುಯಲ್-ಸಿಲಿಂಡರ್ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದ್ದರೂ, ಬಜಾಜ್ ಜೊತೆಗೆ ಭಾರತದಲ್ಲಿ ಬಾಕ್ಸರ್‌ನಂತಹ ಬಜೆಟ್ ಬೈಕ್‌ಗಳನ್ನು ಮಾರಾಟ ಮಾಡಿರುವ ಇತಿಹಾಸ ಕೂಡ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಇಂಡೋನೇಷ್ಯಾದಂತಹ ದೇಶಗಳಲ್ಲಿ ಇದು ಲಭ್ಯವಿರುವುದರಿಂದ, ಕವಾಸಕಿಯು ಅಲ್ಲಿ ಮಾಡಿದ ಅದೇ ತಂತ್ರಗಳನ್ನು ಇಲ್ಲಿಯೂ ಬಳಸಲಿದೆ ಎಂದು ಹೇಳಲಾಗುತ್ತಿದೆ. ಈ ಕವಾಸಕಿ ಡಬ್ಲ್ಯು175 ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಟಿಆರ್, ಟಿಆರ್ಎಸ್ಇ ಮತ್ತು ಕೆಫೆ ರೇಸರ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲ ಟಿಆರ್ ಆವೃತ್ತಿಯು ಸ್ಕ್ರ್ಯಾಂಬ್ಲರ್ ಆಗಿದ್ದರೆ, ಟಿಆರ್‌ಎಸ್‌ಇ ರೋಡ್‌ಸ್ಟರ್ ಶೈಲಿಯನ್ನು ಅಳವಡಿಸಿಕೊಂಡಿದೆ. ಇನ್ನು ಕೆಫೆ ರೇಸರ್ ನಿಖರವಾಗಿ ಹೆಸರೇ ಸೂಚಿಸುವಂತೆ ಇದು ರೇಸಿಂಗ್ ಮಾದರಿ ಆಗಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಇನ್ನು ಕವಾಸಕಿ, ಇತ್ತೀಚಿಗೆ ತಾನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿ ಸುದ್ದಿಯಲ್ಲಿದೆ. ಜಪಾನ್ ಮೂಲದ ಈ ಕಂಪನಿಯು 2035ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಆಧಾರಿತ ವಾಹನಗಳನ್ನು ಹೊಂದಲು ಯೋಜಿಸಿದೆ. ಇದರ ಭಾಗವಾಗಿ, ಕವಾಸಕಿ ಇತ್ತೀಚೆಗೆ ಝಡ್250 ಪ್ರೀಮಿಯಂ ಮಾದರಿಯನ್ನು ಹೋಲುವ ಸಂಪೂರ್ಣ ಎಲೆಕ್ಟ್ರಿಕ್ ಮೂಲಮಾದರಿಯನ್ನು ಮತ್ತು ನಿಂಜಾ 250 ಆವೃತ್ತಿಯನ್ನು ಹೋಲುವ ಹೈಬ್ರಿಡ್ ಮಾದರಿಯನ್ನು ಪ್ರದರ್ಶಿಸಿದೆ.

ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕಡಿಮೆ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ ಕವಾಸಕಿ

ಹೊಸ ಕವಾಸಕಿ ಡಬ್ಲ್ಯು175 ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.2 ಲಕ್ಷಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಜಪಾನಿನ ತಯಾರಕರಿಂದ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಲಿದೆ ಭಾರತ-ಸ್ಪೆಕ್ ಆವೃತ್ತಿಯು ಎಫ್ಐ ತಂತ್ರಜ್ಞಾನವನ್ನು ಹೊಂದಿರಲಿದೆ. ಇದು ಬಾಕ್ಸ್ ಮಾದರಿಯ ಸ್ವಿಂಗರ್ಮ್‌ನೊಂದಿಗೆ ಈ ಬೈಕ್ ಸೆಮಿ ಡಬಲ್-ಕ್ರೇಡಲ್ ಚಾಸಿಸ್‌ ಆಗಿರುತ್ತದೆ.

Most Read Articles

Kannada
English summary
The much awaited kawasaki w175 retro bike to be launched in india this week details
Story first published: Wednesday, September 21, 2022, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X