ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುಪಯೋಗಿ ದೇಶೀಯ ನಿರ್ಮಿತ ರಿವರ್ ಇವಿ ಸ್ಕೂಟರ್

ರಿವರ್ ಎಂಬ ಹೊಸ ಸ್ಟಾರ್ಟ್‌ಅಪ್ ಕಂಪನಿ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆನ್‌-ರೋಡ್ ಟೆಸ್ಟಿಂಗ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇದು ಹೊಸ ಡಿಸೈನ್‌ನೊಂದಿಗೆ ಬರುತ್ತಿದ್ದು, ಬಿಡುಗಡೆ ಬಳಿಕ ರೇಂಜ್ ಮತ್ತು ಪವರ್ ವಿಷಯದಲ್ಲಿ ಪ್ರಸ್ತುತ ಖರೀದಿಗೆ ಲಭ್ಯವಿರುವ ಓಲಾ, ಎಥರ್ ನಂತಹ ಸ್ಕೂಟರ್‌ಗಳೊಂದಿಗೆ ಪೈಪೋಟಿ ಎದುರಿಸಲಿದೆ.

"ಮಲ್ಟಿ-ಯುಟಿಲಿಟಿ" ಉದ್ದೇಶಕ್ಕಾಗಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಡುಹಿಡಿದಿದ್ದು, ಇದಕ್ಕೆ RX-1 ಎಂಬ ಸಂಕೇತನಾಮವನ್ನು ಇಡಲಾಗಿದೆ. ಇದು ಹಲವು ಬ್ಯಾಟರಿ ಪ್ಯಾಕ್ ಗಾತ್ರಗಳಲ್ಲಿ ಲಭ್ಯವಿದೆ, ಬ್ಯಾಟರಿ ಗಾತ್ರಕ್ಕೆ ಅನುಗುಣವಾಗಿ 100 ಕಿ.ಮೀ ಮತ್ತು 180 ಕಿ.ಮೀ ನಡುವೆ ಚಲಾನಾ ವ್ಯಾಪ್ತಿ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 4 ಸೆಕೆಂಡುಗಳಲ್ಲಿ ಗಂಟೆಗೆ 40 ಕಿ.ಮೀಟರ್‌ (25 mph) ವೇಗವನ್ನು ತಲುಪಬಲ್ಲದು, ಜೊತೆಗೆ ಇದರ ಟಾಪ್ ಸ್ಪೀಡ್ 80 kmph (50 mph)ಇದೆ.

ಇದರ ಮುಖ್ಯ ಗಮನವು ಬಹು-ಉಪಯುಕ್ತ ವಾಹನವಾಗಿರುವುದರಿಂದ, ಇದು 200 ಕೆ.ಜಿ ಪೇಲೋಡ್ ಅನ್ನು ಹೊಂದಿದೆ. ಪ್ಯಾಕೇಜುಗಳನ್ನು ಸಾಗಿಸಲು ಸವಾರನಿಗೆ ಇದು ಸಾಕಾಗುತ್ತದೆ ಎಂದು ಕಂಪನಿ ಹೇಳಿದೆ. ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಸ್ಕೂಟರ್ ಬೆಲೆಯು 80,000 ರೂ. ನಿಂದ 100,000 ರೂ. ನಡುವೆ ಇರುತ್ತದೆ. ಈ ಬೆಲೆಯು ಸದ್ಯಕ್ಕಿರುವ ಇವಿ ಸ್ಕೂಟರ್‌ಗಳಿಗೆ ಸ್ಪರ್ಧಾತ್ಮಕವಾಗಿದೆ. ಆದರೆ ಗುಣಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸಿಕೊಂಡರೆ ಉತ್ತಮ ಬೇಡಿಕೆ ಪಡೆಯುವ ಸಾಧ್ಯತೆಯಿದೆ.

ಸದ್ಯ ಓಲಾ ಎಲೆಕ್ಟ್ರಿಕ್, ಬೌನ್ಸ್ ಮತ್ತು ಎಥರ್ ಎನರ್ಜಿ ಮತ್ತು ಡಜನ್‌ಗಟ್ಟಲೇ ಸಣ್ಣ ಎಲೆಕ್ಟ್ರಿಕ್ ಪ್ರತಿಸ್ಪರ್ಧಿಗಳ ವಿರುದ್ಧ ರಿವರ್ ಕಂಪನಿ ಸ್ಪರ್ಧಿಸುತ್ತಿದೆ. ಹಾಗಾಗಿ ಇವೆಲ್ಲದರ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಲು ಕಂಪನಿಯು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮತ್ತು ಚಂದಾದಾರಿಕೆ ಸೇವೆಗಳ ಸೂಟ್ ಮತ್ತು ಬಿಡಿಭಾಗಗಳ ಶ್ರೇಣಿಯನ್ನು ನೀಡಲು ಯೋಜಿಸಿದೆ. ಈ ಮೂಲಕ ಮಾಲೀಕರು ತಮ್ಮ ಸ್ಕೂಟರ್‌ಗಳನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. 2022 ರ ದ್ವಿತೀಯಾರ್ಧದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಚಂದಾದಾರಿಕೆಗಳ ಮೂಲಕ ನೀಡಲಾಗುವ ಗಾತ್ರ, ನಿರ್ವಹಣೆ ಮತ್ತು ಸಂಪರ್ಕದ ಪ್ಯಾಕೇಜ್‌ಗಳಲ್ಲಿ ಚಾರ್ಜಿಂಗ್, ಬ್ಯಾಟರಿ ಪ್ಯಾಕ್‌ಗಳನ್ನು ನೀಡಲು ಕಂಪನಿಯು ಯೋಜಿಸಿದೆ. ಮೂಲಸೌಕರ್ಯಗಳನ್ನು ವಿಧಿಸುವ ವೆಚ್ಚದ ಕೆಲಸವನ್ನು ರಿವರ್ ಕಂಪನಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಕಂಪನಿಯು ಚಾರ್ಜಿಂಗ್ ಫ್ರ್ಯಾಂಚೈಸ್ ಸಿಸ್ಟಮ್ ಅನ್ನು ನಿರ್ವಹಿಸಲು ಯೋಜಿಸಿದೆ. ಈಗಾಗಲೇ ವಾಹನಗಳು ಮತ್ತು ಚಾರ್ಜರ್‌ಗಳನ್ನು ಖರೀದಿಸುವ ಮತ್ತು ಸಾರ್ವಜನಿಕ ಬಳಕೆಗಾಗಿ ಚಾರ್ಜಿಂಗ್ ಸ್ಟೇಷನ್‌ ತೆರೆಯುವ ಸಣ್ಣ ವ್ಯವಹಾರಗಳ ಸೆಟ್‌ನಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದೆ.

ಸದ್ಯ ಫ್ಲಿಪ್‌ಕಾರ್ಟ್, ಸ್ವಿಗ್ಗಿ ಮತ್ತು ಜೊಮಾಟೊ ಸೇರಿದಂತೆ ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳು ತಮ್ಮ ಫ್ಲೀಟ್‌ಗಳನ್ನು ವಿದ್ಯುದ್ದೀಕರಿಸುತ್ತಿವೆ. ದಶಕದ ಅಂತ್ಯದ ವೇಳೆಗೆ EV ಗಳನ್ನು ಮಾತ್ರ ತಮ್ಮ ಫ್ಲೀಟ್‌ನಲ್ಲಿ ಹೊಂದಲು Zomato ಯೋಜಿಸಿದೆ. ಸ್ಟಾರ್ಟ್ಅಪ್ ಸ್ವಿಗ್ಗಿ 2025 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮೂಲಕ 8,00,000 ಕಿಲೋಮೀಟರ್ ಕ್ರಮಿಸುವುದಾಗಿ ಘೋಷಿಸಿದೆ. ಫೆಬ್ರವರಿಯಲ್ಲಿ, ವಾಲ್‌ಮಾರ್ಟ್ ಮಾಲೀಕತ್ವದ ಫ್ಲಿಪ್‌ಕಾರ್ಟ್ 2030ರ ವೇಳೆಗೆ ತನ್ನ ಪೂರೈಕೆ ಸರಪಳಿಯಲ್ಲಿ 25,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸುವುದಾಗಿ ಹೇಳಿದೆ.

ಈ ನಿಟ್ಟಿನಲ್ಲಿ ರಿವರ್ ತನ್ನ ಸ್ಕೂಟರ್‌ಗಳನ್ನು ನೇರವಾಗಿ ರೆಸ್ಟೋರೆಂಟ್‌ಗಳಂತಹ ವ್ಯವಹಾರಗಳಿಗೆ ಮಾರಾಟ ಮಾಡಲು ಬಯಸುತ್ತಿದೆ. ಕಂಪನಿಯು ಯಶಸ್ವಿಯಾದರೆ, ಭಾರತದಾದ್ಯಂತ ಇನ್ನು ಹಲವಾರು ಸೌಲಭ್ಯಗಳನ್ನು ಸೃಷ್ಟಿಸಲು ಬಯಸುತ್ತಿದೆ. ರಿವರ್ ತನ್ನ ಬ್ಯಾಟರಿ ಪ್ಯಾಕ್‌ಗಳನ್ನು ಸಹ-ಅಭಿವೃದ್ಧಿ ಮತ್ತು ಜೋಡಣೆ ಸೇರಿದಂತೆ ಹಲವಾರು ಪೂರೈಕೆದಾರರೊಂದಿಗೆ ಆರಂಭಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರ ಜೊತೆಗೆ ಇದು ದೇಶೀಯ ನಿರ್ಮಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಹೆಚ್ಚಿನ ಸಬ್ಸಿಡಿ ದೊರೆಯುವುದರಿಂದ ಸ್ಕೂಟರ್ ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಕಂಪನಿಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The multi purpose river ev scooter that appeared during the testing
Story first published: Wednesday, November 30, 2022, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X