ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ನಿಮ್ಮ ಬೈಕ್ ಕಳುವಾಗಬಹುದು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್‌ ಮೋಟಾರ್ಸ್‌ ತನ್ನ ಬೈಕ್‌ಗಳಿಗೆ ಎಂಜಿನ್ ನಿಂದ ಹಿಡಿದು ಹೆಡ್‌ಲೈಟ್‌ ವರೆಗೆ ಅತ್ಯುತ್ತಮ ವಿನ್ಯಾಸ ನೀಡಲು ಗುಣಮಟ್ಟದ ಭಾಗಗಳನ್ನು ಒದುಗಿಸುತ್ತಿದೆ. ಆದರೆ ಭದ್ರತೆ ವಿಷಯದಲ್ಲಿ ಮಾತ್ರ ಮತ್ತಷ್ಟು ಗಮನಹರಿಸುವ ಅಗತ್ಯವಿದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಹೌದು. ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬ ಕೆವಲ ಒಂದೇ ನಿಮಿಷದಲ್ಲಿ ರಾಯಲ್ ಎನ್ ಫೀಲ್ಡ್ ಮೋಟಾರ್ ಸೈಕಲ್‌ಗಳನ್ನು ಕದ್ದಿದ್ದನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಬಿಡುಗಡೆಯಾದ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಭಾರತದ ಪ್ರಮುಖ ಮೋಟಾರ್‌ಸೈಕಲ್ ತಯಾರಕ ರಾಯಲ್ ಎನ್‌ಫೀಲ್ಡ್, ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್‌ನ ಉತ್ಪನ್ನಗಳು ಹೊಸ ಕ್ಲಾಸಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಬಳಸಿದ ಬೈಕ್‌ಗಳ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ರಾಯಲ್ ಎನ್‌ಫೀಲ್ಡ್ ಒಂದು ಕಡೆ ಹಳೆಯ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವುದು ಮತ್ತು ಕಂಪನಿಯು ಬೈಕ್‌ಗಳ ಭದ್ರತೆಯ ವಿಷಯದಲ್ಲಿ ಹೆಚ್ಚು ಕಾಳಜಿ ವಹಸುವುದರಿಂದ ಈ ಉತ್ಪನ್ನದ ಬಗ್ಗೆ ಮಾಲೀಕರಿಗೆ ಯಾವುದೇ ಗೊಂದಲ್ಲವಿಲ್ಲ ಹಾಗೂ ಈ ಬೈಕ್‌ಗಳನ್ನು ಕದಿಯುವುದು ಸುಲಭವಲ್ಲ ಎಂಬ ನಂಬಿಕೆ ಇದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಆದರೆ ಕಳ್ಳನೊಬ್ಬ ಕೇವಲ 60 ಸೆಕೆಂಡ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಸುಲಭವಾಗಿ ಅನ್‌ಲಾಕ್ ಮಾಡಿದ್ದಾನೆ. ಈಗಾಗಲೇ ಸಿಕ್ಕಿಬಿದ್ದಿರುವ ಈ ಕದೀಮ ಪೊಲೀಸರ ಮುಂದೆ ಬೈಕ್‌ ಅನ್‌ಲಾಕ್‌ ಮಾಡುವ ವಿಧಾನವನ್ನು ತೋರಿಸಿದ್ದಾನೆ. 2009ರಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಅನ್ನು ಮಾರುಕಟ್ಟೆಗೆ ಪರಿಚಯಿಸಿದಾಗ, ಕಾಲೇಜು ವಿದ್ಯಾರ್ಥಿಗಳು, ಪೊಲೀಸರು ಮತ್ತು ಮಿಲಿಟರಿಯವರು ಹೆಚ್ಚಾಗಿ ಖರೀದಿಸಿದ್ದರು. ಮೆಟಿಯರ್ 350 & ಹಿಮಾಲಯನ್‌ನಂತಹ ವಿವಿಧ ಮಾದರಿಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಕ್ಲಾಸಿಕ್ 350 ಅನ್ನು ಖರೀದಿಸಲು ಪ್ರತ್ಯೇಕ ಜನಸಮೂಹವಿದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಇದೇ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಈ ಮಾದರಿಯನ್ನು ಕಾಲಕಾಲಕ್ಕೆ ನವೀಕರಿಸುತ್ತಿದೆ. ಆದ್ದರಿಂದ ಕ್ಲಾಸಿಕ್ 350 ಬೈಕ್‌ಗಳ ಗುಣಮಟ್ಟವು ಅತ್ಯುತ್ತಮವಾಗಿದೆ ಮತ್ತು ಬಳಸಿದ ಬೈಕ್‌ಗಳ ಮಾರುಕಟ್ಟೆಯಲ್ಲೂ ಇದು ಉತ್ತಮ ಮೌಲ್ಯವನ್ನು ಪಡೆದುಕೊಂಡಿದೆ. ಹಾಗಾಗಿಯೇ ಕ್ಲಾಸಿಕ್ 350 ಇತರರಂತೆಯೇ ಕಳ್ಳರನ್ನು ಆಕರ್ಷಿಸುತ್ತದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಏಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ಕಳ್ಳತನವಾಗುತ್ತಿರುವ ಕ್ಲಾಸಿಕ್ 350 ಬೈಕ್‌ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಕಳ್ಳರ ಪೈಕಿ ಒಬ್ಬ ಬೈಕ್ ಕದಿಯುವುದನ್ನು ತೋರಿಸಿಕೊಟ್ಟಿದ್ದು, ಮೊದಲು ತನ್ನ ಕಾಲುಗಳಿಂದ ಬೈಕ್‌ನ ಹ್ಯಾಂಡಲ್ ಬಾರ್ ಅನ್ನು ಒದ್ದು ಲಾಕ್‌ ಮುರಿಯುತ್ತಾನೆ. ಇದಕ್ಕಾಗಿ ವಾಹನದ ಹಿಂಬದಿಯ ತುದಿಯಲ್ಲಿ ಒದಗಿಸಲಾದ ಕ್ರಾಪ್ ರೈಲಿನಿಂದ ಸಂಪೂರ್ಣ ಸೀಟ್ ಅನ್ನು ಬಳಸುತ್ತಾನೆ. ಹಾಗಾಗಿ ರಸ್ತೆಯಲ್ಲಿ ಯಾರಾದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದರೆ ಬೈಕ್‌ ಕದಿಯಲು ಯತ್ನಿಸುತ್ತಿದ್ದಾರೆ ಎಂದರ್ಥ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಬಳಿಕ ತನ್ನ ಹಲ್ಲಿನಿಂದ ಇಗ್ನಿಷನ್ ವೈರ್ ಮತ್ತು ಬ್ಯಾಟರಿಗೆ ಜೋಡಿಸಲಾದ ಫ್ಯೂಸ್ ಕನೆಕ್ಟರ್ ಅನ್ನು ಕತ್ತರಿಸಿ ತಂತಿಗಳನ್ನು ಸೇರಿಸಲಾಗುತ್ತದೆ. ನಂತರ ಎಲೆಕ್ಟ್ರಿಕ್ ಸ್ಟಾರ್ಟರ್ ಅನ್ನು ಅನ್ವಯಿಸಿದಾಗ ಬೈಕ್‌ನ ಎಂಜಿನ್ ಪ್ರಾರಂಭವಾಗುತ್ತದೆ. ಮೆಕ್ಯಾನಿಕ್ ಕೂಡ ಈ ಎಲ್ಲಾ ಕೆಲಸಗಳನ್ನು ನಿಮಿಷಗಳಲ್ಲಿ ಮಾಡುತ್ತಾನೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಆದರೆ ಈ ಕಳ್ಳ ಅದನ್ನು ಬಹಳ ಸುಲಭವಾಗಿ ಮಾಡುತ್ತಿರುವುದರಿಂದ ಈತ ಮೆಕ್ಯಾನಿಕ್‌ ಕೂಡ ಆಗಿರಬಹುದು ಎಂದು ಅನುಮಾನಿಸಲಾಗಿದೆ. ಇದನ್ನು ಕಂಡ ಪೊಲೀಸರು ಆಶ್ಚರ್ಯ ಚಕಿತರಾಗಿದ್ದಾರೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗೆ ಒಂದೇ ಬದಿಯ ಹ್ಯಾಂಡಲ್‌ಬಾರ್ ಲಾಕ್ ಅನ್ನು ಮಾತ್ರ ನೀಡಲಾಗಿದೆ.

ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರೇ ಎಚ್ಚರ!..ಒಂದೇ ನಿಮಿಷದಲ್ಲಿ ಬೈಕ್ ಕಳುವಾಗಬಹುದು

ಇದಲ್ಲದೇ ಬೈಕ್ ಲಾಕ್ ಮಾಡಬಹುದಾದ ಇಗ್ನಿಷನ್ ಕೀ, ಬ್ಲೂಟೂತ್ ಅಪ್‌ಗ್ರೇಡ್ ಟ್ರ್ಯಾಕಿಂಗ್ ಸಿಸ್ಟಮ್ ಅಥವಾ ಕಳ್ಳತನದ ಎಚ್ಚರಿಕೆ ಸೇರಿದಂತೆ ಯಾವುದೇ ಆಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ನೀಡಿಲ್ಲ. ಹಾಗಾಗಿ ಕ್ಲಾಸಿಕ್ 350 ಬೈಕ್ ಹೊಂದಿರುವವರಿಗೆ ಹೆಚ್ಚುವರಿ ರಕ್ಷಣೆಯ ಅಗತ್ಯವಿದೆ. ಹ್ಯಾಂಡಲ್ ಬಾರ್ ಹೊರತುಪಡಿಸಿ, ಬ್ರೇಕ್ ಡಿಸ್ಕ್ ಲಾಕ್ ಮತ್ತು ಫ್ರಂಟ್ ಫೋರ್ಕ್ ಲಾಕ್‌ನಂತಹ ಇತರ ಯಾಂತ್ರಿಕ ಭಾಗಗಳಿಗೆ ಲಾಕ್‌ಗಳನ್ನು ಖರೀದಿಸಿ ಫಿಟ್ ಮಾಡಬಹುದು. ಕಳ್ಳತನ ಮತ್ತು ವಾಹನ ಟ್ರ್ಯಾಕರ್ ಸಂದರ್ಭದಲ್ಲಿ ಎಂಜಿನ್ ಪ್ರಾರಂಭವಾಗುವುದನ್ನು ತಡೆಯುವ ಎಂಬೋಲೈಜರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇವುಗಳನ್ನು ಪ್ರಯತ್ನಿಸಬಹುದು.

Most Read Articles

Kannada
English summary
Thief gives demo how to stole a motorcycle in just 30 seconds
Story first published: Friday, March 18, 2022, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X