ನವೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು: ಆಕ್ಟಿವಾವೇ ಬೆಸ್ಟ್

ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿವೆ. ಅವುಗಳನ್ನು ಗ್ರಾಹಕರು ಸಹ ಇಷ್ಟಪಟ್ಟೇ ಖರೀದಿಸುತ್ತಾರೆ. ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಬರೋಬ್ಬರಿ 3,69,526 ಸ್ಕೂಟರ್‌ ಮಾರಾಟವಾಗಿರುವುದು ಗಮನಾರ್ಹ ಅಂಶವಾಗಿದೆ. ಟಾಪ್ 10 ಸ್ಕೂಟರ್‌ ಪಟ್ಟಿ ಇಲ್ಲಿದ್ದು, ಎಂದಿನಂತೆ ಹೋಂಡಾ ಆಕ್ಟಿವಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಹೋಂಡಾ ಆಕ್ಟಿವಾ (1,75,084 ಯುನಿಟ್‌ಗಳು):
ಈ ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‌ ಪ್ರಥಮ ಸ್ಥಾನದಲ್ಲಿದೆ. ಹೋಂಡಾ ಕಳೆದ ತಿಂಗಳು 1,75,084 ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2021ರಲ್ಲಿ ಮಾರಾಟವಾದ 1,24,082 ಸ್ಕೂಟರ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 41.1% (51,002 ಯುನಿಟ್‌ಗಳು) ಏರಿಕೆಯಾಗಿದೆ. ಹೋಂಡಾ ಆಕ್ಟಿವಾಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಬೇರೆ ಬ್ರ್ಯಾಂಡ್ ನ ಯಾವುದೇ ಸ್ಕೂಟರ್‌ಗಳಿಗೆ ಇದರ ಸಮೀಪ ಸುಳಿಯಲು ಸಾಧ್ಯವಾಗಿಲ್ಲ ಎಂದು ಹೇಳಬಹುದು.

ಸುಜುಕಿ Access (48,113 ಯುನಿಟ್‌ಗಳು) & (TVS ಜುಪಿಟರ್ 47,422 ಯುನಿಟ್‌ಗಳು):
ಜಪಾನ್ ವಾಹನ ತಯಾರಕ ಕಂಪನಿ ಸುಜುಕಿ ನವೆಂಬರ್‌ನಲ್ಲಿ 48,113 ಯುನಿಟ್ ಆಕ್ಸೆಸ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಜುಪಿಟರ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. 2021ರ ನವೆಂಬರ್ ತಿಂಗಳಲ್ಲಿ ಮಾರಾಟವಾದ 42,481 ಯುನಿಟ್‌ಗಳಿಗೆ ಹೋಲಿಸಿದರೆ ಆಕ್ಸೆಸ್‌ನ ವಾರ್ಷಿಕ ಮಾರಾಟ 13.26% ಏರಿಕೆಯಾಗಿದೆ. ಆದರೆ, ಟಿವಿಎಸ್ ನವೆಂಬರ್ 2022ರಲ್ಲಿ ಜುಪಿಟರ್‌ ಸ್ಕೂಟರ್‌ನ 47,422 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದರೂ ನವೆಂಬರ್ 2021ರಲ್ಲಿ ಮಾರಾಟವಾದ 44,139 ಯುನಿಟ್‌ಗಳಿಗೆ ಹೋಲಿಸಿದರೆ 7.44% ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗಿದೆ.

ಹೀರೋ ಪ್ಲೆಷರ್ (19,739 ಯುನಿಟ್‌ಗಳು):
ಸ್ಕೂಟರ್‌ ವಿಭಾಗದ ಟಾಪ್ 10 ಪಟ್ಟಿಯಲ್ಲಿ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಹೀರೋ ಕಂಪನಿ ಮೊದಲ ಬಾರಿಗೆ ಪ್ರವೇಶಿಸಿದ್ದು, ಕಳೆದ ತಿಂಗಳು ಪ್ಲೆಷರ್ ಸ್ಕೂಟರ್‌ನ 19,739 ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ ಎಂದು ಹೇಳಬಹುದು. ನವೆಂಬರ್ 2021 ರಲ್ಲಿ ಮಾರಾಟವಾದ 11,136 ಯುನಿಟ್‌ಗಳಿಗೆ ಹೋಲಿಸಿದರೆ ಪ್ಲೆಷರ್ ಸ್ಕೂಟರ್‌ನ ವರ್ಷದಿಂದ ವರ್ಷದ ಮಾರಾಟವು 8,603 ಯುನಿಟ್‌ಗಳು ಅಥವಾ ಶೇಕಡ 77.25 ರಷ್ಟು ಏರಿಕೆಯಾಗಿದೆ.

ಟಿವಿಎಸ್ Ntorq (17,003 ಯುನಿಟ್‌ಗಳು) & ಹೋಂಡಾ ಡಿಯೊ (16,102 ಯುನಿಟ್‌ಗಳು):
2022ರ ನವೆಂಬರ್‌ನಲ್ಲಿ ಚೆನ್ನೈ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್, Ntorq ಸ್ಕೂಟರ್‌ನ 17,003 ಯುನಿಟ್‌ಗಳನ್ನು ಮಾರಾಟ ಮಾರಾಟ ಮಾಡಿದೆ. ನವೆಂಬರ್ 2021ರಲ್ಲಿ 19,157 ಯುನಿಟ್‌ಗಳು ಮಾರಾಟ ಮಾಡಿತ್ತು. ಇನ್ನು, ಹೋಂಡಾ ಕಂಪನಿ ಕಳೆದ ತಿಂಗಳು ಡಿಯೊ ಸ್ಕೂಟರ್‌ನ 16,102 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಉತ್ತಮವಾದ ಪ್ರಗತಿ ಸಾಧಿಸಿದೆ ಎಂದು ಹೇಳಬಹುದು.

ಹೀರೋ ಡೆಸ್ಟಿನಿ (15,411 ಯುನಿಟ್‌ಗಳು):
ಟಾಪ್ ಹತ್ತು ಅತಿಹೆಚ್ಚು ಮಾರಾಟವಾಗಿರುವ ಸ್ಕೂಟರ್‌ ಪಟ್ಟಿಯಲ್ಲಿ ಹೀರೋನ ಎರಡನೇ ಸ್ಕೂಟರ್‌ ಡೆಸ್ಟಿನಿ ಸಹ ಇದೆ. ಹೀರೋ ಕಳೆದ ತಿಂಗಳು ಡೆಸ್ಟಿನಿಯ 15,411 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಅದೇ ಅವಧಿಯಲ್ಲಿ ಬರೋಬ್ಬರಿ ಶೇಕಡ 372.15% (12,147 ಯುನಿಟ್‌ಗಳು) ಏರಿಕೆಯಾಗಿದೆ. ನವೆಂಬರ್ 2021 ರಲ್ಲಿ ಡೆಸ್ಟಿನಿಯ 3,264 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲು ಹೀರೋ ಕಂಪನಿ ಯಶಸ್ವಿಯಾಗಿತ್ತು.

ಯಮಹಾ RayZR (10,795 ಯುನಿಟ್‌ಗಳು) & ಟಿವಿಎಸ್ iQube (10,056 ಯುನಿಟ್‌ಗಳು):
ಕಳೆದ ತಿಂಗಳು ಯಮಹಾ ಕಂಪನಿಯು RayZR ಸ್ಕೂಟರ್‌ನ 10,795 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದಾಗ್ಯೂ, ನವೆಂಬರ್ 2021ರಲ್ಲಿ ಮಾರಾಟವಾದ 12,344 ಯೂನಿಟ್‌ಗಳಿಗೆ ಹೋಲಿಸಿದರೆ RayZR ನ ಮಾರಾಟವು 12.55% ಕಡಿಮೆಯಾಗಿದೆ. ಇನ್ನು, ಈ ಪಟ್ಟಿಯಲ್ಲಿರುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ iQube ಆಗಿದ್ದು, ಕಳೆದ ತಿಂಗಳು ಟಿವಿಎಸ್ ಕಂಪನಿಯು 10,056 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನವೆಂಬರ್ 2021ರಲ್ಲಿ ಮಾರಾಟವಾದ 699 ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 1,338.63% ಏರಿಕೆಯಾಗಿದೆ.

ಯಮಹಾ Fascino (9,801 ಯುನಿಟ್‌ಗಳು):
ಈ ಪಟ್ಟಿಯಲ್ಲಿ ಯಮಹಾ Fascino ಕೊನೆಯ ಸ್ಥಾನದಲ್ಲಿದ್ದು, ನವೆಂಬರ್ 2022ರಲ್ಲಿ 9,801 ಯುನಿಟ್‌ಗಳು ಮಾರಾಟವಾಗಿದೆ. ನವೆಂಬರ್ 2021ರಲ್ಲಿ ಮಾರಾಟವಾದ 8,202 ಯುನಿಟ್‌ಗಳಿಗೆ ಹೋಲಿಸಿದರೆ ಫ್ಯಾಸಿನೊದ ವರ್ಷದಿಂದ ವರ್ಷದ ಮಾರಾಟವು ಶೇಕಡ 19.5% ಹೆಚ್ಚಾಗಿದೆ. ಹೋಂಡಾ ಆಕ್ಟಿವಾ ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಮತ್ತೊಂದೆಡೆ ಟಿವಿಎಸ್ iQube ಮಾರಾಟದಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹೆಚ್ಚುತ್ತಿರುವ ಜನಪ್ರಿಯತೆ ಬಗ್ಗೆ ತಿಳಿಯುತ್ತಿದೆ.

Most Read Articles

Kannada
English summary
Top 10 scooters sold in november
Story first published: Tuesday, December 20, 2022, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X