Just In
Don't Miss!
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- News
ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಮಾರ್ಚ್ ತಿಂಗಳ ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ21 ರಷ್ಟು ಕುಸಿತ!
ಭಾರತದಲ್ಲಿ ಒಂದೆಡೆ ಕೊರೊನಾ ಎರಡನೇ ಅಲೆಯ ಪರಿಣಾಮದಿಂದಾಗಿ ದ್ವಿಚಕ್ರ ವಾಹನಗಳ ಮಾರಾಟ ಕುಸಿದರೆ, ಮತ್ತೊಂದೆಡೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ದ್ವಿಚಕ್ರ ವಾಹನಗಳ ಬೆಲೆಗಳು ವಾಹನ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಎಲ್ಲಾ ಅಡೆತೆಡೆಗಳ ನಡುವೆಯೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಐದು ದ್ವಿಚಕ್ರ ವಾಹನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ದೇಶದ ಎಲ್ಲಾ ಪ್ರಮುಖ ಮೋಟಾರ್‌ಸೈಕಲ್ ತಯಾರಕರಾದ ಹೀರೋ ಮೋಟೋಕಾರ್ಪ್, ಹೋಂಡಾ ಮೋಟಾರ್‌ಸೈಕಲ್, ಟಿವಿಎಸ್, ಬಜಾಜ್, ರಾಯಲ್ ಎನ್‌ಫೀಲ್ಡ್ ಮತ್ತು ಸುಜುಕಿ ಕಂಪನಿಯು ಮಾರಾಟದಲ್ಲಿ ಕುಸಿತವನ್ನು ವರದಿ ಮಾಡಿವೆ. ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 11,38,561 ಯುನಿಟ್ ದ್ವಿಚಕ್ರ ವಾಹನಗಳ ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 14,43,320 ಯುನಿಟ್‌ಗಳು ಮಾರಾಟವಾಗಿದ್ದವು. ಈ ಅಂಕಿ ಅಂಶಗಳ ಪ್ರಕಾರ ನೋಡುವುದಾದರೆ ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 21 ರಷ್ಟು ಕುಸಿದಿದೆ.

ಹೀರೋ ಮೋಟೋಕಾರ್ಪ್‌ನಿಂದ ಹೆಚ್ಚು ಮಾರಾಟ
ಹೀರೋ ಮೋಟೋಕಾರ್ಪ್ ಕಳೆದ ತಿಂಗಳು 4,15,764 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಅಗ್ರಸ್ಥಾನದಲ್ಲಿದೆ, ಮಾರ್ಚ್ 2021 ರಲ್ಲಿ ಮಾರಾಟವಾದ 5,44,340 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 23.62 ರಷ್ಟು ಇಳಿಕೆ ಕಂಡಿದೆ. ಮತ್ತೊಂದೆಡೆ, ಕಂಪನಿಯು ತಿಂಗಳ ಆಧಾರದ ಮೇಲೆ 23.62 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಬೈಕು ತಯಾರಕರು ಫೆಬ್ರವರಿ 2022 ರಲ್ಲಿ 3,31,462 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. Hero MotoCorp ಹೊಸ ಡೆಸ್ಟಿನಿ Xtec ಅನ್ನು ಸಹ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರೊಂದಿಗೆ ಕಂಪನಿಯು ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಲ್ಲದೇ Hero ನ ಹೊಸ Xpulse 300 ಸಹ ಅಭಿವೃದ್ಧಿ ಹಂತದಲ್ಲಿದೆ, ಇದು ಮುಂಬರುವ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು.

ಹೋಂಡಾ ದ್ವಿಚಕ್ರ ವಾಹನಗಳು ಮಾರಾಟದ ವಿಷಯದಲ್ಲಿ ಹೀರೋ ಮೋಟೋಕಾರ್ಪ್‌ಗೆ ಹತ್ತಿರವಿರುವ ಏಕೈಕ ಕಂಪನಿಯಾಗಿದೆ. ಕಳೆದ ತಿಂಗಳು ಹೋಂಡಾ ದ್ವಿಚಕ್ರ ವಾಹನಗಳು ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 3,09,549 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಮಾರ್ಚ್ 2021 ರಲ್ಲಿ ಮಾರಾಟವಾದ 3,95,037 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯು ಶೇಕಡಾ 21.64 ರಷ್ಟು ಕುಸಿತವನ್ನು ದಾಖಲಿಸಿದೆ.

ಅದೇ ಸಮಯದಲ್ಲಿ, ಫೆಬ್ರವರಿ 2022ಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 8.36 ರಷ್ಟು ಹೆಚ್ಚಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಹೋಂಡಾ ದ್ವಿಚಕ್ರ ವಾಹನಗಳ ಮಾರುಕಟ್ಟೆ ಪಾಲು ಶೇಕಡಾ 28.64 ರಿಂದ ಶೇಕಡಾ 27.19ಕ್ಕೆ ಇಳಿದಿದೆ.

ಟಿವಿಎಸ್ ಮೋಟಾರ್ ಬಗ್ಗೆ ಮಾತನಾಡುವುದಾದರೆ, ಕಂಪನಿಯು ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 1,96,956 ದ್ವಿಚಕ್ರ ವಾಹನಗಳ ಮಾರಾಟವನ್ನು ನೋಂದಾಯಿಸಿದೆ. ಇದು ಮಾರ್ಚ್ 2021ರಲ್ಲಿ ಮಾರಾಟವಾಗಿದ್ದ 2,02,155 ಯುನಿಟ್‌ಗಳಿಗೆ ಹೋಲಿಸಿಕೊಂಡೆ ಶೇ2.57 ಕಡಿಮೆಯಾಗಿದೆ. ಫೆಬ್ರವರಿ 2022 ರಲ್ಲಿ ಮಾರಾಟವಾದ 1,73,198 ಯುನಿಟ್‌ಗಳಿಗೆ ಹೋಲಿಸಿದರೆ ಮಾರ್ಚ್ 2022ರ ಮಾರಾಟದಲ್ಲಿ ಶೇಕಡಾ 13.72 ರಷ್ಟು ಸುಧಾರಣೆ ಕಂಡುಬಂದಿದೆ. ಟಿವಿಎಸ್ ಮೋಟರ್‌ನ ಮಾರುಕಟ್ಟೆ ಪಾಲು ಶೇಕಡಾ 17.36 ರಷ್ಟಿದೆ.

ರಾಯಲ್ ಎನ್‌ಫೀಲ್ಡ್ ಬಗ್ಗೆ ಹೇಳುವುದಾದರೆ, ರಾಯಲ್ ಎನ್‌ಫೀಲ್ಡ್ ಮಾರಾಟವು 2021ರ ಮಾರ್ಚ್‌ನಲ್ಲಿ ಮಾರಾಟವಾದ 60,173 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 2.82 ರಷ್ಟು ಕುಸಿದು 58,477 ಯುನಿಟ್‌ಗಳಿಗೆ ತಲುಪಿದೆ. ಫೆಬ್ರವರಿ 2022 ರಲ್ಲಿ ಮಾರಾಟವಾದ 52,135 ಯುನಿಟ್‌ಗಳಿಗೆ ಹೋಲಿಸಿದರೆ ಮಾರ್ಚ್ 2022 ರಲ್ಲಿ ಮಾರಾಟವು 12.16 ಶೇಕಡಾ ಹೆಚ್ಚಾಗಿದೆ.

ರಫ್ತಿನಲ್ಲಿ ಉತ್ತಮ ಪ್ರಗತಿ
ದೇಶೀಯ ಮಾರಾಟದಲ್ಲಿ ಮಂದಗತಿಯಿದ್ದರೂ, ದ್ವಿಚಕ್ರ ವಾಹನ ತಯಾರಕರು ರಫ್ತು ವಿಷಯದಲ್ಲಿ ಉತ್ತಮ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಬಜಾಜ್, ಹೀರೋ ಮೋಟೋಕಾರ್ಪ್, ಸುಜುಕಿ ಮತ್ತು ರಾಯಲ್ ಎನ್‌ಫೀಲ್ಡ್ ರಫ್ತುಗಳಲ್ಲಿ ಏರಿಕೆ ದಾಖಲಿಸಿದರೆ, ಟಿವಿಎಸ್ ಮತ್ತು ಹೋಂಡಾ ರಫ್ತುಗಳು ವರ್ಷದಿಂದ ವರ್ಷಕ್ಕೆ ಕುಸಿತವನ್ನು ಮುಂದುವರೆಸಿವೆ.

ಹಿಂದಿನ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನ ರಫ್ತು 3,15,890 ಯುನಿಟ್‌ಗಳಾಗಿದ್ದು, ಮಾರ್ಚ್ 2021 ರಲ್ಲಿ ರಫ್ತಾದ 3,18,204 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 0.73 ರಷ್ಟು ಕಡಿಮೆಯಾಗಿದೆ. ಫೆಬ್ರವರಿ 2022 ರಲ್ಲಿ 3,51,599 ಯುನಿಟ್‌ಗಳಿಗೆ ಹೋಲಿಸಿದರೆ ರಫ್ತು ಶೇಕಡಾ 10.16 ರಷ್ಟು ಕಡಿಮೆಯಾಗಿದೆ.

ಬಜಾಜ್ ಆಟೋ ಮಾರ್ಚ್ 2022 ರಲ್ಲಿ ದ್ವಿಚಕ್ರ ವಾಹನಗಳ ಅತಿ ದೊಡ್ಡ ರಫ್ತುದಾರ ಎನ್ನಲಾಗಿದೆ. ಕಂಪನಿಯು ಮಾರ್ಚ್ 2022 ರಲ್ಲಿ 1,49,243 ಘಟಕಗಳನ್ನು ರಫ್ತು ಮಾಡಿದೆ. ಇದು ಮಾರ್ಚ್ 2021 ರಲ್ಲಿ ರಫ್ತು ಮಾಡಲಾದ 1,48,740 ಯುನಿಟ್‌ಗಳಿಗಿಂತ 0.34 ಶೇಕಡಾ ಹೆಚ್ಚಾಗಿದೆ.

ಹೀರೋ ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ 7.09 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಆದರೆ ಸುಜುಕಿ ದ್ವಿಚಕ್ರ ವಾಹನಗಳು 14,761 ಯುನಿಟ್‌ಗಳ ಮೂಲಕ ಶೇಕಡಾ 51.86 ರಷ್ಟು ಮತ್ತು ರಾಯಲ್ ಎನ್‌ಫೀಲ್ಡ್ 9,200 ಯುನಿಟ್‌ಗಳ ರಫ್ತಿನ ಮೂಲಕ ಶೇಕಡಾ ವರ್ಷದಿಂದ ವರ್ಷಕ್ಕೆ ಶೇ56.33 ನಷ್ಟು ಏರಿಕೆ ಕಂಡಿವೆ.