Just In
- 7 min ago
ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
- 1 hr ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 2 hrs ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
Don't Miss!
- Movies
ಸುನೇತ್ರಾ ಪಂಡಿತ್: ಆಕ್ಸಿಡೆಂಟ್ ಬಳಿಕ ನಟನೆಗೆ ಮರಳಿದ ಸುನೇತ್ರಾ ಪಂಡಿತ್
- News
ಗ್ರಾಮೀಣ ರಸ್ತೆ ದುರಸ್ತಿ; ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಗೋಪಾಲಯ್ಯ ಗರಂ
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Sports
Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಈ ತಿಂಗಳಾಂತ್ಯಕ್ಕೆ ಗ್ರಾಹಕರ ಕೈಸೇರಲಿವೆ ಟಾರ್ಕ್ ಮೋಟಾರ್ಸ್ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್
ಟಾರ್ಕ್ ಮೋಟಾರ್ಸ್(Tork Motors) ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಬೈಕ್ ಮಾದರಿಗಳಾದ ಕ್ರಾಟೋಸ್(Kratos) ಮತ್ತು ಕ್ರಾಟೋಸ್ ಆರ್(Kratos R) ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಈ ತಿಂಗಳಾಂತ್ಯಕ್ಕೆ ವಿತರಣೆ ಆರಂಭಿಸುವ ಸಿದ್ದತೆ ನಡೆಸಿದೆ.

ಟಾರ್ಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಗಳು ಪುಣೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.22 ಲಕ್ಷ ಬೆಲೆ ಹೊಂದಿವೆ.

ಹೊಸ ಇವಿ ಬೈಕ್‌ಗಳ ಬೆಲೆಗಳು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಸಬ್ಸಡಿ ಯೋಜನೆಗಳಿಂದ ಕೆಲವು ರಾಜ್ಯಗಳಲ್ಲಿನ ಇವಿ ಬೆಲೆಗಳಲ್ಲಿ ಏರಿಳಿತವಾಗಲಿದ್ದು, ಹೊಸ ಬೈಕ್ ಅನ್ನು ನಮ್ಮ ಬೆಂಗಳೂರಿನಲ್ಲಿ ಖರೀದಿ ಮಾಡುವುದಾದರೆ ಆರಂಭಿಕವಾಗಿ ರೂ. 1.32 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 1.47 ಲಕ್ಷ ಪಾವತಿಸಬೇಕಾಗುತ್ತದೆ.

ಟಾರ್ಕ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ 2015ರಿಂದ ಇವಿ ವಾಹನಗಳ ಅಭಿವೃದ್ದಿಯಲ್ಲಿ ತೊಡಗಿಕೊಂಡಿದ್ದು, ಸತತ 6 ವರ್ಷಗಳ ಸಂಶೋಧನೆ, ಅಭಿವೃದ್ದಿ ಮತ್ತು ತಂತ್ರಜ್ಞಾನ ಸುಧಾರಣೆ ಆಧರಿಸಿ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳು ರೇಸಿಂಗ್ ತಂತ್ರಜ್ಞಾನವನ್ನು ಆಧರಿಸಿ ಮಾರುಕಟ್ಟೆ ಪ್ರವೇಶಿಸಿದ್ದು, ಕೃತಕ ಬುದ್ದಿ ಮತ್ತೆ ಬಳಸಿ ವಾಹನ ಚಲಾಯಿಸುವ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿಐಆರ್‍ಒಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.

ಟಾರ್ಕ್ ಮೋಟಾರ್ಸ್ ಸದ್ಯ ಪುಣೆಯಲ್ಲಿರುವ ತನ್ನ ಹೊಸ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಕಾರ್ಯಾಚರಣೆ ಆರಂಭಿಸಿದ್ದು, ಕಂಪನಿಯು ಮೊದಲ ಹಂತದಲ್ಲಿ ಪುಣೆ, ಬೆಂಗಳೂರು, ದೆಹಲಿ, ಹೈದ್ರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಟಾರ್ಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಮಾದರಿಗಳನ್ನು ಪರಿಚಯಿಸಿದ್ದು, ಕ್ರಾಟೋಸ್ ಆರ್ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಟಾರ್ಕ್ ಮೋಟಾರ್ಸ್ ಕಂಪನಿಯು ಹೊಸ ಬೈಕ್ ಮಾದರಿಗಳಲ್ಲಿ IP67 ಅನುಮೋದಿತ 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಕ್ರಾಟೋಸ್ ಮಾದರಿಯು 7.5kW ಎಲೆಕ್ಟ್ರಿಕ್ ಮೋಟಾರ್ ಮೂಲಕ 28 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಕ್ರಾಟೋಸ್ ಆರ್ ಮಾದರಿಯು 9kW ಎಲೆಕ್ಟ್ರಿಕ್ ಮೋಟಾರ್ ಮೂಲಕ 38 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಸ್ಪ್ಲೀಟ್ ಟೆಲ್ಲಿಸ್ ಫ್ರೆಮ್ ಮೇಲೆ ನಿರ್ಮಾಣವಾಗಿರುವ ಹೊಸ ಕ್ರಾಟೋಸ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ನೀಡಿದರೆ ಕ್ರಾಟೋಸ್ ಆರ್ ಮಾದರಿಯು 120 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಇವಿ ಬೈಕ್‌ಗಳಲ್ಲಿ ತಾಂತ್ರಿಕ ವೈಶಿಷ್ಟ್ಯತೆ ಬಗೆಗೆ ಹೇಳುವುದಾದರೇ ಕ್ರಾಟೋಸ್ ಮಾದರಿಗಿಂತಲೂ ಕ್ರಾಟೋಸ್ ಆರ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಪಡೆದುಕೊಂಡಿದ್ದು, 4ಜಿ ಟೆಲಿಮೆಟ್ರಿ ಜೋಡಣೆಯೊಂದಿಗೆ ಜಿಪಿಎಸ್, ಕ್ಲೌಡ್ ಕನೆಕ್ಟಿವಿಟಿ, ಕ್ರ್ಯಾಶ್ ಅಲರ್ಟ್, ಪವರ್ ಮ್ಯಾನೇಜ್‌ಮೆಂಟ್, ಪ್ರತಿ ದಿನದ ರೈಡ್ ಹಿಸ್ಟರಿ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

ಕ್ರಾಟೋಸ್ ಆರ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಜಿಯೋ-ಫೆನ್ಸಿಂಗ್, ಫೈಂಡ್ ಮೈ ವೆಹಿಕಲ್, ಟ್ರ್ಯಾಕ್ ಮೋಡ್ ಮತ್ತು ಅನಾಲಿಟಿಕ್ಸ್ ಮತ್ತು ಇನ್ನೂ ಕೆಲವು ನಿಫ್ಟಿ ವೈಶಿಷ್ಟ್ಯಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳಿಂದ ಕೂಡಿದ್ದು, ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್, ಸಂಪೂರ್ಣ ಡಿಜಿಟಲ್ ಡಿಸ್‌ಪ್ಲೇ, ವಿವಿಧ ರೈಡ್ ಮೋಡ್‌ಗಳು, ಯುಟಿಲಿಟಿ ಸ್ಟೋರೇಜ್, ಮತ್ತು ಫೋನ್ ಚಾರ್ಜ್ ಸಾಕೆಟ್ ಗಮನಸೆಳೆಯುತ್ತವೆ.

ಜೊತೆಗೆ ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ಟಾರ್ಕ್ ಮೋಟಾರ್ಸ್ ಕಂಪನಿಯು ಹೊಸ ಇವಿ ಉತ್ಪಾದನೆಯಲ್ಲಿ ಆರ್ & ಡಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೆಚ್ಚಿಸಲು 50ಕ್ಕೂ ಹೆಚ್ಚು ಪೇಟೆಂಟ್ ಮತ್ತು ವಿನ್ಯಾಸಗಳ ಮೇಲೆ ಹಕ್ಕು ಹೊಂದಿದೆ.

ಇನ್ನು ಇಂಧನ ಚಾಲಿತ ವಾಹನಗಳಿಗೆ ಪೈಪೋಟಿಯಾಗಿ ವಿವಿಧ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವಿ ವಾಹನಗಳ ವಿಭಾಗದಲ್ಲಿ ಸ್ಟಾರ್ಟ್ಅಪ್ ಕಂಪನಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿವೆ.

ಇದೀಗ ಟಾರ್ಕ್ ಮೋಟಾರ್ಸ್ ಕೂಡಾ ತನ್ನ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಮಾದರಿಗಳನ್ನು ಬಿಡುಗಡೆಯ ಮೂಲಕ ಇವಿ ಬೈಕ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಂಪನಿಯು ಹೊಸ ಇವಿ ಬೈಕ್ ಖರೀದಿಗಾಗಿ ರೂ.999 ಮುಂಗಡ ಪಾವತಿಯೊಂದಿಗೆ ಅಧಿಕೃತ ಬುಕಿಂಗ್ ಸ್ವಿಕರಿಸುತ್ತಿದೆ.