Just In
- 36 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 39 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Sports
ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಸೆಲ್ಫ್ ಚಾರ್ಜಿಂಗ್ ತಂತ್ರಜ್ಞಾನದ ಹೊಸ ಹೈಬ್ರಿಡ್ ಎಸ್‌ಯುವಿ ಬಿಡುಗಡೆಗೆ ಸಜ್ಜಾದ ಟೊಯೊಟಾ
ಜಪಾನಿಸ್ ಕಾರ್ ಬ್ರ್ಯಾಂಡ್ ಹೋಂಡಾ ಇತ್ತೀಚೆಗೆ ತನ್ನ ಸಿಟಿ ಹೈಬ್ರಿಡ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಜಪಾನಿನ ಮತ್ತೊಂದು ಕಾರು ಕಂಪನಿ ಟೊಯೊಟಾ ಕೂಡ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ನಿಟ್ಟಿನಲ್ಲಿ ಟೊಯೊಟಾ ಇಂಡಿಯಾ ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಟೀಸರ್‌ನಲ್ಲಿ ಕಂಪನಿಯು ತನ್ನ ಸೆಲ್ಫ್ ಚಾರ್ಜಿಂಗ್ ಕಾರುಗಳ ಪ್ರಚಾರಕ್ಕಾಗಿ 'ಹಮ್ ಹೈ ಹೈಬ್ರಿಡ್' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ, ಟೀಸರ್ ವೀಡಿಯೊವನ್ನು ಸಹ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಭಾರತ ಸರ್ಕಾರವು ಪರಿಸರ ಸ್ನೇಹಿ ವಾಹನ ಉದ್ಯಮವನ್ನು ಉತ್ತೇಜಿಸುತ್ತಿರುವುದರಿಂದ, ತಯಾರಕರು ಪರಿಸರ ಸ್ನೇಹಿ ವಾಹನಗಳನ್ನು ತಯಾರಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಟೊಯೊಟಾ ಸಹ ಈ ವಿಭಾಗದ ಪ್ರಯೋಜನಗಳಿಂದ ಲಾಭ ಗಳಿಸಲು ಸಜ್ಜಾಗಿದೆ. ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಟೊಯೊಟಾದ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಸೂಚಿಸುತ್ತದೆ. ಕಂಪನಿಯು ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಡಿ 22 ಎಂಬ ಕೋಡ್ ನೇಮ್ ನೊಂದಿಗೆ ಅಭಿವೃದ್ಧಿಪಡಿಸುತ್ತಿದೆ.

ಟೊಯೊಟಾದ ಇತ್ತೀಚಿನ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಈ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಎಂಜಿ ಆಸ್ಟರ್ ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಮಾಹಿತಿಯ ಪ್ರಕಾರ, ಇದು 2022 ರ ಮಧ್ಯಾರ್ದದ ವೇಳೆಗೆ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಡುವಿನ ಪಾಲುದಾರಿಕೆಯ ಭಾಗವಾಗಿ, ಮಾರುತಿ ಸುಜುಕಿ ಈ ಹೊಸ ಟೊಯೊಟಾ ಎಸ್‌ಯುವಿಯನ್ನು ಆಧರವಾಗಿಟ್ಟುಕೊಂಡು ಈ ವಿಭಾಗದಲ್ಲಿ ಒಂದು ಮಾದರಿಯನ್ನು (ವಿಟಾರಾ ಬ್ರೆಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಯಲ್ಲಿ) ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಟೊಯೊಟಾದ ಮುಂಬರಲಿರುವ ಡಿ 22 ಎಸ್‌ಯುವಿ ಬಗೆಗಿನ ವಿವರಗಳು ತುಂಬಾ ಸೀಮಿತವಾಗಿವೆ. ಟೀಸರ್ ಅನ್ನು ನೋಡಿದರೆ, ಇದು ಪ್ಲಗ್ ಇನ್ ಮಾಡದೆ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಕಾರು ಎಂದು ತೋರುತ್ತದೆ. ಬಹುಶಃ ಭಾರತದಲ್ಲಿ ಇಂತಹ ಪವರ್ ಟ್ರೇನ್ ಆಯ್ಕೆಯೊಂದಿಗೆ ಬಂದ ಮೊದಲ ಕಾರು ಇದಾಗಿದೆ.

ಈ ಕಾರಿನ ವಿಶೇಷತೆಗಳ ಬಗ್ಗೆಯೂ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಟೊಯೊಟಾ ಕಾರಿನಲ್ಲಿ ಹೊಸ 1.5-ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಅನ್ನು ಬಳಸುತ್ತಿದೆ ಎನ್ನಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೊಯೊಟಾ ಮಾರಾಟ ಮಾಡುವ ಯಾರಿಸ್ ಹ್ಯಾಚ್‌ಬ್ಯಾಕ್ ಮತ್ತು ಯಾರಿಸ್ ಕ್ರಾಸ್ ಮಾದರಿಗಳಲ್ಲಿ ಪರಿಚಯಿಸಲಾಗಿದೆ.

ಈ ಎಂಜಿನ್ ಮಾತ್ರ ಗರಿಷ್ಠ 80 ಬಿಹೆಚ್ ಪವರ್ ಅನ್ನು ಉತ್ಪಾದಿಸುತ್ತದೆ. ಅದೇ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಗಳನ್ನು ಸಂಯೋಜಿಸಿದರೆ, 115 ಬಿಹೆಚ್ ಪವರ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ಪೆಟ್ರೋಲ್ ರೂಪದಲ್ಲಿ 120 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸಿದರೆ, ಎಲೆಕ್ಟ್ರಿಕ್ ಮೋಟರ್ 141 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟೊಯೋಟಾದಿಂದ ಮುಂಬರಲಿರುವ ಈ ಕಾರಿನಲ್ಲಿ ಅದೇ ಎಂಜಿನ್ ಅನ್ನು ಬಳಸಲಾಗುತ್ತದೆ ಎಂದು ಊಹಿಸಲು ಮತ್ತೊಂದು ಕಾರಣವೆಂದರೆ ಇತ್ತೀಚೆಗೆ ಟೊಯೊಟಾ ಭಾರತೀಯ ರಸ್ತೆಗಳಲ್ಲಿ ತಮ್ಮ ಯಾರಿಸ್ ಕ್ರಾಸ್ ಅನ್ನು ಪರೀಕ್ಷಿಸುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವು ವರದಿಗಳ ಪ್ರಕಾರ, ಟೊಯೊಟಾದಿಂದ ಬರುವ ಹೊಸ ಎಸ್‌ಯುವಿ, ಈ ಜಪಾನಿನ ಕಾರು ಬ್ರ್ಯಾಂಡ್‌ನ ಟಿಎನ್‌ಜಿಎ ಪ್ಲಾಟ್‌ಫಾರ್ಮ್ ಸ್ಥಳೀಯ ಆವೃತ್ತಿಯನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.

ಟೊಯೊಟಾದ ಹೊಸ ಎಸ್‌ಯುವಿ ಜೂನ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇಲ್ಲದಿದ್ದರೆ, ಇದು ಆಗಸ್ಟ್ 2022 ರಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಸ್ತುತ, ಕಾಂಪ್ಯಾಕ್ಟ್ / ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಹೆಚ್ಚಿದ ಸ್ಪರ್ಧೆಯ ಹಿನ್ನೆಲೆಯಲ್ಲಿ, ಟೊಯೊಟಾ ಈ ಹೊಸ ಎಸ್‌ಯುವಿಯನ್ನು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇದರ ಬೆಲೆಯು ಮಾರುತಿ ಸುಜುಕಿ ಕೌಂಟರ್ ಮಾದರಿಗಿಂತ ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ. ಟೊಯೊಟಾ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ನಂತರ, ಇದು ಈ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಫೋಕ್ಸ್ವ್ಯಾಗನ್ ಟಿಗಾನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

ಇನ್ನು ಟೊಯೊಟಾ ಇತ್ತೀಚೆಗೆ ಭಾರತ ಮಾರುಕಟ್ಟೆಯಲ್ಲಿ ಹೊಸ ಲೈಫ್ ಸ್ಟೈಲ್ ಪಿಕಪ್ ಟ್ರಕ್ ಟೊಯೊಟಾ ಹೈಲಕ್ ಬಿಡುಗಡೆ ಮಾಡಿತು. ಟೊಯೋಟಾ ಹೈಲಕ್ಸ್ ಬೆಲೆಯು ರೂ. 33.99 ಲಕ್ಷ (ಎಕ್ಸ್-ಶೋರೂಮ್) ನಿಂದ ಪ್ರಾರಂಭವಾಗುತ್ತದೆ. ಕಂಪನಿ ಈ ಪಿಕಪ್ ಟ್ರಕ್ ಅನ್ನು ಮೂರು ವೆರಿಯಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ.

ಇವುಗಳಲ್ಲಿ ಹೈಲಕ್ಸ್ ಮ್ಯಾನ್ಯುವಲ್ ಸ್ಟ್ಯಾಂಡರ್ಡ್ ವೆರಿಯಂಟ್ ಬೆಲೆ ರೂ.33.99 ಲಕ್ಷ, ಹೈಲಕ್ಸ್ ಮ್ಯಾನ್ಯುವಲ್ ಹೈ ವೆರಿಯಂಟ್ ಬೆಲೆ ರೂ.35.80 ಲಕ್ಷ ಮತ್ತು ಹೈಲಕ್ಸ್ ಆಟೋಮೆಟಿಕ್ ಹೈ ವೆರಿಯಂಟ್ ಬೆಲೆ ರೂ.36.80 ಲಕ್ಷ (ಎಕ್ಸ್-ಶೋರೂಮ್, ಇಂಡಿಯಾ) ಇದೆ. ಈ ಮೂರು ವೆರಿಯಂಟ್‌ಗಳು ಸಹ ಸ್ಟ್ಯಾಂಡರ್ಡ್ 4x4 (ಆಲ್-ವೀಲ್ ಡ್ರೈವ್ ಸಿಸ್ಟಂ)ನಲ್ಲಿ ಲಭ್ಯವಿದೆ.