Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ ದಿನಾಂಕ ಬಹಿರಂಗ
ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನುಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಟ್ರಯಂಫ್ ಕಂಪನಿಯು ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದೆ.

ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660(Triumph Tiger Sport 660) ಬೈಕ್ 2022ರ ಮಾರ್ಚ್ 29 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಅಡ್ವೆಂಚರ್ ಟೂರರ್ ಬೈಕಿನ ಬೆಲೆಯು ಅಂದಾಜು ರೂ. 8-9 ಲಕ್ಷವಾಗಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಕಂಪನಿಯ ಸಾಲಿನಲ್ಲಿ ಹೊಸ ಎಂಟ್ರಿ ಲೆವೆಲ್ ಟೈಗರ್ ಆಗಿದ್ದು, ಅವರ ಅತ್ಯಂತ ಕೈಗೆಟುಕುವ ಟೈಗರ್ ಆಗಿದೆ. ಟೈಗರ್ ಸ್ಪೋರ್ಟ್ 660 ಬ್ರ್ಯಾಂಡ್‌ನ ಇತ್ತೀಚಿನ ನೇಕೆಡ್ ಸ್ಟ್ರೀಟ್‌ಫೈಟರ್-ಟ್ರಿಡೆಂಟ್ 660 ನ ಅದೇ ಫ್ರೇಮ್ ಅನ್ನು ಆಧರಿಸಿದೆ.

ಭಾರತವು ಕಂಪನಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ, ಈ ಹೊಸ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಟ್ರಯಂಫ್ ಇಂಡಿಯಾ ಕಂಪನಿಯು ಟೈಗರ್ ಸ್ಪೋರ್ಟ್ 660 ಬೈಕ್ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಈಗಾಗಲೇ ಸ್ವೀಕರಿಸಲು ಪ್ರಾರಂಭಿಸಿದೆ.

ಈ ಹೊಸ ಅಡ್ವೆಂಚರ್ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಆಫ್-ರೋಡ್ ಅಧಾರಿತ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ.

ಇದು ಟ್ರೈಡೆಂಟ್ 660 ಮಾದರಿಯನ್ನು ಆಧರಿಸಿದ್ದರೂ, ಇದು ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ. ಇದರಲ್ಲಿ ಕೆಲವು ವ್ಯತ್ಯಾಸಗಳನ್ನು ಪಡೆಯಲಿದೆ. ಈ ಸ್ಪೋರ್ಟಿಯಾಗಿ ಕಾಣುವ ಅರ್ಧ-ಫೇರಿಂಗ್, ನೇರವಾದ ರೈಡಿಂಗ್ ಪೋಷಿಸನ್, ಹೆಚ್ಚು ಸಸ್ಪೆಂಕ್ಷನ್ ಟ್ರ್ಯಾವೆಲ್, ಎತ್ತರದ ಸೀಟ್ ಮತ್ತು ಉತ್ತಮ ಟ್ರ್ಯಾವೆಲ್ ಸಾಮರ್ಥ್ಯಕ್ಕಾಗಿ ಲಗೇಜ್ ಫ್ರೇಮ ಅನ್ನು ಕೂಡ ಇದು ಹೊಂದಿದೆ.

ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ವಿನ್ಯಾಸವು ಖಂಡಿತವಾಗಿಯೂ ಆಕರ್ಷಕವಾಗಿದೆ, ಆದರೆ ಇದು ದೊಡ್ಡ ಟೈಗರ್ 900 ಬೈಕಿಗೆ ಹೋಲುವಂತಿಲ್ಲ, ಈ ಹೊಸ ಬೈಕಿನಲ್ಲಿ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎತ್ತರ-ಹೊಂದಿಸಬಹುದಾದ ವಿಂಡ್‌ಶೀಲ್ಡ್ ಅನ್ನು ಒಳಗೊಂಡಿದೆ.

ಇನ್ನು ಈ ಥೀಮ್‌ಗೆ ಅನುಸಾರವಾಗಿ, ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಟ್ರಯಂಫ್ ಟ್ರೈಡೆಂಟ್ 660 ಬೈಕಿನ 14-ಲೀಟರ್ ಇಂಧನ ಟ್ಯಾಂಕ್‌ಗೆ ಹೋಲಿಸಿದರೆ ಹೊಸ ಬೈಕಿನಲ್ಲಿ 17 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ. ಹೊಸ ಟೈಗರ್ ಸ್ಪೋರ್ಟ್ 660 ಹೊಸ ಕಾಕ್‌ಪಿಟ್ ಅನ್ನು ಪಡೆಯುತ್ತದೆ, ಜೊತೆಗೆ ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ವಿಭಿನ್ನ ಏರೋಗಾಮಿಕ್ಸ್ ಮತ್ತು ಹೆಚ್ಚು ನೇರವಾದ ರೈಡಿಂಗ್ ಫೋಷಿಸನ್ ಅನ್ನು ಒಳಗೊಂಡಿದೆ.

ಇನ್ನು ಫೀಚರ್ಸ್ ಗಳ ಪಟ್ಟಿಯಲ್ಲಿ, ಟೈಗರ್ ಸ್ಪೋರ್ಟ್ 660 ಬೈಕ್ ರೋಡ್ ಮತ್ತು ರೌನ್ ಎಂಬ ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ಈ ಬೈಕಿನಲ್ಲಿ ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿರಲಿದೆ ಈ ಹೊಸ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಲುಸೆರ್ನ್ ಬ್ಲೂ ಮತ್ತು ಸೆಫರಿನ್ ಬ್ಲ್ಯಾಕ್, ಕೊರೊಸಿ ರೆಡ್ ಮತ್ತು ಗ್ರ್ಯಾಫೈಟ್, ಮತ್ತು ಮೂರನೆಯದು, ಗ್ರ್ಯಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಒಂದು ಟಿಎಫ್ಟಿ ಡಿಸ್ ಪ್ಲೇಯೊಂದಿಗೆ ಬರುತ್ತದೆ ಮತ್ತು ಆಕ್ಸೆಸರಿ-ಫಿಟ್ ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಂಗೆ ಸಿದ್ಧವಾಗಿದೆ. ಈ ಬೈಕ್ 835 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 206 ಕೆಜಿ ಕರ್ಬ್ ತೂಕವನ್ನು ಹೊಂದಿದೆ. ಇನ್ನು ಈ ಹೊಸ 22.2 ಕಿ,ಮೀ ಮೈಲೇಜ್ ನೀಡುತ್ತದೆ ಎಂದು ಹೇಳಾಗುತ್ತಿದೆ.

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಆಫ್-ರೋಡ್ ಆಧಾರಿತ ಬೈಕ್ ಆಗಿರುವುದರಿಂದ ಸ್ಪೋರ್ಟ್ ಮೋನಿಕರ್ ಟಾರ್ಮ್ಯಾಕ್ ಅಡ್ವೆಂಚರ್ ಆಗಿದೆ. ಈ ಬೈಕಿನಲ್ಲಿ ಟ್ರೈಡೆಂಟ್ 660 ಮಾದರಿಯಂತೆ 17 ಇಂಚಿನ ವ್ಹೀಲ್ ಗಳು ಮತ್ತು ಮೈಕೆಲಿನ್ ರೋಡ್ ಟೈರ್‌ಗಳನ್ನು ಒಳಗೊಂಡಿರುತ್ತದೆ.

ಹೊಸ ಟೈಗರ್ ಸ್ಪೋರ್ಟ್ 660 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಎರಡೂ ಕಡೆಗಳಲ್ಲಿ 150 ಎಂಎಂ ಟ್ರಾವೆಲ್ ನೊಂದಿಗೆ ಸಸ್ಪೆಂಕ್ಷನ್ ಟ್ರಾವೆಲ್ ಹೆಚ್ಚಿಸಲಾಗಿದೆ. ಇದರ ಮುಂಭಾಗದಲ್ಲಿ ಶೋವಾ 41 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ರಿಮೋಟ್ ಪ್ರಿಲೋಡ್ ಹೊಂದಾಣಿಕೆಯನ್ನು ಪಡೆಯುತ್ತದೆ. ಇನ್ನು ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ನಿಸ್ಸಿನ್ ಬ್ರೇಕ್‌ಗಳನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ, ಎರಡು-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್‌ಗಳು 310 ಎಂಎಂ ಟ್ವಿನ್ ಫ್ರಂಟ್ ಡಿಸ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ.

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನಲ್ಲಿ 660 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಎಂಜಿನ್ 79 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳಿನಲ್ಲಿ ಪ್ರವೇಶಿಸಲಿದೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 650 ಮತ್ತು ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ ಟಿ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.